newsfirstkannada.com

ಮದುವೆಯಾದ್ರೂ ಲಿವಿಂಗ್​ ಟುಗೆದರ್​ನಲ್ಲಿದ್ದ ಜೋಡಿ.. ಅನುಮಾನದಿಂದ ಆ್ಯಸಿಡ್ ದಾಳಿ ಮಾಡೇ ಬಿಟ್ಟ ಕಿರಾತಕ

Share :

Published May 29, 2024 at 7:46am

  ಮಹಿಳೆ ಮಗುವಿನ ಮೇಲೆ ಆ್ಯಸಿಡ್ ದಾಳಿ ಮಾಡಿದ ಆರೋಪಿ

  8 ವರ್ಷದ ಮಗಳ ಮುಖಕ್ಕೂ ಅಲ್ಪ ಪ್ರಮಾಣದಲ್ಲಿ ಸಿಡಿದ ಆ್ಯಸಿಡ್

  ಇಬ್ಬರು ಪ್ರತ್ಯೇಕವಾಗಿ ಬೇರೆ ಬೇರೆಯವರನ್ನು ಮದುವೆ ಆಗಿದ್ದರು

ಬಾಗಲಕೋಟೆ: ವಿವಾಹಿತ ಪ್ರಿಯತಮೆ ಮನೆ ಬಾಗಿಲು ತೆರೆಯದ ಕಾರಣ ಪ್ರಿಯಕರ ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ಎರಚಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ.

ಗದ್ದನಕೇರಿ ಕ್ರಾಸ್​ನ ಒಂದೇ ಮನೆಯಲ್ಲಿ ಲಿವಿಂಗ್ ಟುಗೆದರ್ ಇದ್ದ ಲಕ್ಷ್ಮಿ ಬಡಿಗೇರ (33) ಎಂಬ ವಿವಾಹಿತ ಮಹಿಳೆ ಮೇಲೆ ಮೌನೇಶ್ ಪತ್ತಾರ ಎನ್ನುವ ವ್ಯಕ್ತಿ ಆ್ಯಸಿಡ್ ಎರಚಿದ್ದಾನೆ. ಪರಿಣಾಮ ಮಹಿಳೆಯ ಎಡಗಣ್ಣು ಹಾಗೂ ಮುಖದ ಮೇಲೆ ಸುಟ್ಟ ಗಾಯಗಳಾಗಿವೆ. ಮಹಿಳೆಯ 8 ವರ್ಷದ ಮಗಳ ಮೇಲೆಯೂ ಆ್ಯಸಿಡ್ ಬಿದ್ದ ಕಾರಣ ಗಾಯಗಳು ಆಗಿವೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟ ಆಡ್ತಿದ್ಯಾ ರಾಜ್ಯ ಸರ್ಕಾರ? ಎಲ್ಲರೂ ಓದಲೇಬೇಕಾದ ಸ್ಟೋರಿ!

ಇಬ್ಬರು ವಿಜಯಪುರ ನಗರದ ಮೂರನಕೇರಿ ಮೂಲದವರಾಗಿದ್ದು ಇಬ್ಬರು ಪ್ರತ್ಯೇಕವಾಗಿ ಬೇರೆ ಬೇರೆಯವರನ್ನು ಮದುವೆಯಾಗಿದ್ದರು. ಆರೋಪಿ ಮೂರ್ತಿ ತಯಾರಿಸುವ ಕೆಲಸ‌ ಮಾಡುತ್ತಾನೆ. ಯಾವುದೇ ಡಿವೋರ್ಸ್ ಪಡೆಯದೆ ಲಿವಿಂಗ್ ಟುಗೆದರ್​​ನಲ್ಲಿದ್ದರು. ಒಂದೂವರೆ ತಿಂಗಳಿಂದ ಗದ್ದನಕೇರಿ ಕ್ರಾಸ್​ನ ಮನೆಯೊಂದರಲ್ಲಿ ಇಬ್ಬರು ವಾಸವಿದ್ದರು.

ವ್ಯಕ್ತಿ ಮಹಿಳೆ ಮೇಲೆ ಪದೆ ಪದೇ ಸಂಶಯಪಡುತ್ತಿದ್ದ. ಇದರಿಂದ‌‌ ಮೇಲಿಂದ ಮೇಲೆ‌ ಜಗಳವಾಗುತ್ತಿತ್ತು. ಇದೇ ಕಾರಣದಿಂದ 1 ವಾರದಿಂದ ಮೌನೇಶ್ ‌ಮನೆ ಬಿಟ್ಟು ಹೋಗಿದ್ದ. ಇತ್ತ ಮಹಿಳೆ ಆತನ‌ ನಂಬರ್ ಬ್ಲಾಕ್ ಮಾಡಿದ್ದಳು. ನಿನ್ನೆ ರಾತ್ರಿ‌ ಮನೆಗೆ ವಾಪಸ್ ಬಂದಿದ್ದ. ಆದರೆ ಲಕ್ಷ್ಮಿ ಬಾಗಿಲು ತೆರೆದಿಲ್ಲ. ಇದರಿಂದ‌ ಕೋಪಗೊಂಡು ಮನೆಯ ಕಿಟಕಿಯಿಂದ ಆ್ಯಸಿಡ್ ದಾಳಿ ನಡೆಸಿದ್ದಾನೆ. ಈ ಸಂಬಂಧ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೌನೇಶ್ ಪತ್ತಾರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಯಾದ್ರೂ ಲಿವಿಂಗ್​ ಟುಗೆದರ್​ನಲ್ಲಿದ್ದ ಜೋಡಿ.. ಅನುಮಾನದಿಂದ ಆ್ಯಸಿಡ್ ದಾಳಿ ಮಾಡೇ ಬಿಟ್ಟ ಕಿರಾತಕ

https://newsfirstlive.com/wp-content/uploads/2024/05/BGK_ASID.jpg

Load More