newsfirstkannada.com

ರಾಗಿ ಬೆಳೆ ಕಟಾವು ಮಾಡುವಾಗ ಕಾಡಾನೆ ಭಯಾನಕ ದಾಳಿ; ಮೈಸೂರಿನ ರೈತ ಸ್ಥಳದಲ್ಲೇ ಸಾವು

Share :

Published February 3, 2024 at 5:20pm

Update February 3, 2024 at 5:21pm

  ಮೈಸೂರಲ್ಲಿ ಮುಂದುವರೆದ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ

  ನಿರಂತರ ಕಾಡು ಪ್ರಾಣಿಗಳ ಹಾವಳಿಯಿಂದ ಗ್ರಾಮದ ರೈತರಲ್ಲಿ ಆತಂಕ

  ಶಾಶ್ವತ ಪರಿಹಾರ ಒದಗಿಸಬೇಕೆಂದು ಇಲಾಖೆಗೆ ಗ್ರಾಮಸ್ಥರಿಂದ ಒತ್ತಾಯ

ಮೈಸೂರು: ಹೊಲದಲ್ಲಿ ರಾಗಿ ಬೆಳೆ ಕಟಾವು ಮಾಡುತ್ತಿರುವಾಗ ಒಂಟಿ ಸಲಗವೊಂದು ಅಟ್ಯಾಕ್ ಮಾಡಿ ರೈತನೋರ್ವನನ್ನ ಬಲಿ ಪಡೆದ ಘಟನೆ ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ನಡೆದಿದೆ.

ಮುದಗನೂರು ಗ್ರಾಮದ ಚಲುವಯ್ಯ (65) ಮೃತ ರೈತ. ತಮ್ಮ ಜಮೀನಿನಲ್ಲಿ ರಾಗಿ ಕಟಾವು ಮಾಡುತ್ತಿದ್ದಾಗ ಕಾಡಾನೆ ದಾಳಿ ಮಾಡಿದ್ದರಿಂದ ಸ್ಥಳದಲ್ಲೇ ರೈತನ ಸಾವನ್ನಪ್ಪಿದ್ದಾರೆ. ಗ್ರಾಮದ ಸುತ್ತ ನಿರಂತರ ಕಾಡು ಪ್ರಾಣಿಗಳ ಹಾವಳಿ ಇರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: WATCH: ‘ಭಾರತ ರತ್ನ’ ನನ್ನ ಜೀವನದ ಆದರ್ಶಕ್ಕೆ ಸಿಕ್ಕ ಗೌರವ.. ಎಲ್‌.ಕೆ ಅಡ್ವಾಣಿ ಭಾವುಕ; ಹೇಳಿದ್ದೇನು?

ಹೀಗಾಗಿ ಮನೆಯಿಂದ ಹೊರಗೆ ಬರಲು ಮಹಿಳೆಯರು, ಮಕ್ಕಳು ಹೆದರುತ್ತಿದ್ದಾರೆ. ನಮಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಹಾಗೂ ರೈತರು ಅರಣ್ಯ ಇಲಾಖೆಗೆ ಒತ್ತಾಯ ಮಾಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಗಿ ಬೆಳೆ ಕಟಾವು ಮಾಡುವಾಗ ಕಾಡಾನೆ ಭಯಾನಕ ದಾಳಿ; ಮೈಸೂರಿನ ರೈತ ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/02/MYS_ELEPHANT.jpg

Load More