newsfirstkannada.com

WATCH: ‘ಭಾರತ ರತ್ನ’ ನನ್ನ ಜೀವನದ ಆದರ್ಶಕ್ಕೆ ಸಿಕ್ಕ ಗೌರವ.. ಎಲ್‌.ಕೆ ಅಡ್ವಾಣಿ ಭಾವುಕ; ಹೇಳಿದ್ದೇನು?

Share :

Published February 3, 2024 at 5:07pm

Update February 3, 2024 at 5:08pm

  ನನ್ನ ಜೀವಮಾನದ ಆದರ್ಶಗಳಿಗೆ ಭಾರತ ರತ್ನ ಗೌರವ ಸಿಕ್ಕಿದೆ

  ಅತ್ಯಂತ ನಮ್ರತೆ, ಕೃತಜ್ಞತಾ ಭಾವದಲ್ಲಿ ಭಾರತ ರತ್ನ ಸ್ವೀಕರಿಸುತ್ತೇನೆ

  ಪಂಡಿತ್ ದೀನದಯಾಳ್, ಅಟಲ್ ಬಿಹಾರಿ ವಾಜಪೇಯಿಗೆ ಧನ್ಯವಾದ

ನವದೆಹಲಿ: ಭಾರತ ರತ್ನ ಪ್ರಶಸ್ತಿಗೆ ಆಯ್ಕೆಯಾದ ಬಿಜೆಪಿ ಭೀಷ್ಮ, ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಅವರು ಧನ್ಯವಾದ ತಿಳಿಸಿದ್ದಾರೆ. ನನ್ನ ಜೀವಮಾನದ ಆದರ್ಶಗಳಿಗೆ ಭಾರತ ರತ್ನ ಗೌರವ ತಂದಿದೆ. ಈ ವಿಶೇಷ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಎಂದಿದ್ದಾರೆ.

ದೆಹಲಿಯ ನಿವಾಸದಲ್ಲಿ ಮಗಳು ಪ್ರತಿಭಾ ಜೊತೆ ಎಲ್‌.ಕೆ ಅಡ್ವಾಣಿ ವಾಸವಿದ್ದಾರೆ. ಭಾರತ ರತ್ನ ಪ್ರಶಸ್ತಿ ಘೋಷಣೆ ಬಳಿಕ ಎಲ್.ಕೆ ಅಡ್ವಾಣಿ ಅವರು ಕೈ‌ ಮುಗಿದು ಧನ್ಯವಾದ ಅರ್ಪಿಸಿದರು. ಇದೇ ವೇಳೆ ಮಾತನಾಡಿರುವ ಹಿರಿಯ ರಾಜಕೀಯ ಮುತ್ಸದ್ಧಿ, ನನ್ನ ಆದರ್ಶ ಮತ್ತು ಸಿದ್ಧಾಂತಗಳಿಗೆ ಸಿಕ್ಕಿರುವ ಗೌರವ ಇದಾಗಿದೆ. ಅತ್ಯಂತ ನಮ್ರತೆ ಮತ್ತು ಕೃತಜ್ಞತಾ ಭಾವದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ ಎಂದು ಅಡ್ವಾಣಿ ಹೇಳಿದರು.

ಇದನ್ನೂ ಓದಿ: ಬಿಜೆಪಿಯ ಯಶಸ್ವಿ ನಾಯಕ ಅಡ್ವಾಣಿಗೆ ಪ್ರಧಾನಿ ಹುದ್ದೆ ದೂರವಾಗಿದ್ದು ಹೇಗೆ? ರಾಜಕೀಯ ಜೀವನ ಹೇಗಿತ್ತು?

ನಾನು 14 ವರ್ಷದವನಾಗಿದ್ದಾಗ ರಾಷ್ಟ್ರೀಯ ಸ್ವಯಂಸೇವಾ ಸಂಘವನ್ನು ಸೇರಿಕೊಂಡೆ. ಜೀವನದಲ್ಲಿ ನನಗೆ ನಿಯೋಜಿಸಲಾದ ಯಾವುದೇ ಕಾರ್ಯವನ್ನು ದೇಶಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದೇನೆ. ಭಾರತ ರತ್ನ ಕೇವಲ ಒಬ್ಬ ವ್ಯಕ್ತಿಗೆ ಕೊಡುವ ಗೌರವವಲ್ಲ. ನನ್ನ ಜೀವನದುದ್ದಕ್ಕೂ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ನಾನು ಶ್ರಮಿಸಿದ ಆದರ್ಶಗಳು ಮತ್ತು ತತ್ವಗಳಿಗೆ ಸಿಕ್ಕ ಗೌರವವಾಗಿದೆ. ನನ್ನ ಕುಟುಂಬ ಸದಸ್ಯರು ಮತ್ತು ನನ್ನ ಧರ್ಮಪತ್ನಿ ಕಮಲಾ ನನ್ನ ಜೀವನದುದ್ದಕ್ಕೂ ನನ್ನ ಶಕ್ತಿಯಾಗಿದ್ದರು. ಅವರಿಗೂ ಪ್ರೀತಿಯ ಧನ್ಯವಾದಗಳು. ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಅಡ್ವಾಣಿ ಧನ್ಯವಾದ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ‘ಭಾರತ ರತ್ನ’ ನನ್ನ ಜೀವನದ ಆದರ್ಶಕ್ಕೆ ಸಿಕ್ಕ ಗೌರವ.. ಎಲ್‌.ಕೆ ಅಡ್ವಾಣಿ ಭಾವುಕ; ಹೇಳಿದ್ದೇನು?

https://newsfirstlive.com/wp-content/uploads/2024/02/LK-Advani-Bharat-Ratna.jpg

Load More