WATCH: ಅರಿಶಿನಗುಂಡಿಯಲ್ಲಿ ಜಾರಿದ ಶರತ್ ಮೃತದೇಹ ಸಿಕ್ಕಿದ್ಹೇಗೆ?; 7 ದಿನದ ಕಾರ್ಯಾಚರಣೆಯಲ್ಲಿ ಎದುರಾದ ಸವಾಲುಗಳೇನು?

author-image
Bheemappa
Updated On
WATCH: ಅರಿಶಿನಗುಂಡಿಯಲ್ಲಿ ಜಾರಿದ ಶರತ್ ಮೃತದೇಹ ಸಿಕ್ಕಿದ್ಹೇಗೆ?; 7 ದಿನದ ಕಾರ್ಯಾಚರಣೆಯಲ್ಲಿ ಎದುರಾದ ಸವಾಲುಗಳೇನು?
Advertisment
  • ಅರಿಶಿನಗುಂಡಿ ಫಾಲ್ಸ್​ನಲ್ಲಿ ಶರತ್ ಕಾಲು ಜಾರಿ ಬಿದ್ದ ಪ್ರಕರಣ
  • ಒಂದು ವಾರದಿಂದ ಸತತವಾಗಿ ಕಾರ್ಯಾಚರಣೆ ನಡೆಯುತ್ತಿತ್ತು
  • ಇಂದು ಸಿಗುತ್ತೆ ಎಂಬ ಆತ್ಮವಿಶ್ವಾಸದಲ್ಲಿ ಹುಡುಕಲು ಇಳಿದೆವು

ಉಡುಪಿ: ಕೊಲ್ಲೂರು ಬಳಿಯ ಅರಿಶಿನಗುಂಡಿ ಫಾಲ್ಸ್​ನಲ್ಲಿ ಬಿದ್ದು ನಾಪತ್ತೆಯಾಗಿದ್ದ ಯುವಕ ಶರತ್ ಕುಮಾರ್ ಮೃತದೇಹ ಕೊನೆಗೂ ಪತ್ತೆಯಾಗಿದೆ. ಸತತ ಒಂದು ವಾರಗಳ ಕಾಲ ಶರತ್‌ಗಾಗಿ ಹುಡುಕಾಟ ನಡೆಸಿದ್ದು, ಕಾರ್ಯಾಚರಣೆಗಿಳಿದ ತಂಡದ ಸದಸ್ಯರು ರೋಚಕ ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ಭಾನುವಾರದಂದು ಭದ್ರಾವತಿಯ ಶರತ್ ಎಂಬ ಯುವಕ ಫಾಲ್ಸ್‌ನ ಬಂಡೆ ಮೇಲೆ ನಿಂತಿದ್ದಾಗ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದನು. ಹೀಗಾಗಿ ಆತನ ಹುಡುಕುವ ಬಗ್ಗೆ ಕಾರ್ಯಾಚರಣೆ ಸತತವಾಗಿ ನಡೆಯುತ್ತಿತ್ತು. ಇವತ್ತು ಸ್ವಲ್ಪ ಮಳೆ ಕಡಿಮೆ ಆಗಿದ್ದರಿಂದ ಸಿಗಬಹುದು ಎಂದು ಆತ್ಮವಿಶ್ವಾಸದಿಂದ ಹುಡುಕಲು ಪ್ರಾರಂಭಿಸಿದೆವು ಎನ್ನಲಾಗಿದೆ.

ಯುವಕ ಬಿದ್ದ ಸ್ಥಳದಿಂದ 200 ಮೀಟರ್​ವರೆಗೆ ಹುಡುಕೋಣ. ಎಲ್ಲಿಯಾದ್ರೂ ಆಸುಪಾಸಲ್ಲಿ ಸಿಲುಕಿರಬಹುದು ಎಂಬ ವಿಶ್ವಾಸದಲ್ಲಿ ಇವತ್ತು ನೀರಿಗೆ ಇಳಿದೆವು. ನಮಗೆ ಸಮೀಪದ ಊರಿನವರು ಹಾಗೂ ಅರಣ್ಯ ಇಲಾಖೆಯವರು ಸಹಕರಿಸಿದರು. ಇದೇ ವೇಳೆ ಶರತ್ ಮೃತದೇಹ ನೀರಿನಲ್ಲಿರುವ ಮರದ ಪೊಟರೆ ಒಳಗೆ ಸಿಕ್ಕಿಕೊಂಡಿತ್ತು. ಸದ್ಯ ಮೃತದೇಹ ಸಿಕ್ಕಿದೆ. ಆದರೆ ಆ ಮರವನ್ನು ತೆಗೆಯುವಂತಹ ಕೆಲಸವಾಗಬೇಕು. ಒಂದು ವೇಳೆ ಆ ಮರದಿಂದ ಬಿಡಿಸಿಕೊಂಡರೇ ಇನ್ನು ಕೆಳಗಡೆ ಹೋಗುವ ಸ್ಥಿತಿ ಇದೆ. ಹಾಗಾಗಿ ಅದನ್ನು ತುಂಬಾ ಹುಷಾರ್​ ಆಗಿ ತೆರವು ಮಾಡುವಂತ ಕೆಲಸವಾಗಬೇಕು ಎಂದು ಹೇಳಿದ್ದಾರೆ.

[caption id="attachment_10635" align="aligncenter" width="800"]publive-image ಶರತ್ ಕುಮಾರ್ ಫಾಲ್ಸ್​ಗೆ ಬೀಳುತ್ತಿರುವ ಕ್ಷಣ[/caption]

ಜುಲೈ 23 ರಂದು ಶರತ್ ಕುಮಾರ್ ಅರಿಶಿನಗುಂಡಿ ಫಾಲ್ಸ್​ಗೆ ಪ್ರವಾಸಕ್ಕೆಂದು ತೆರಳಿದ್ದನು. ಆಗ ರೀಲ್ಸ್​ ಮಾಡಲೆಂದು ಜಲಪಾತದ ಸಮೀಪಕ್ಕೆ ಹೋಗಿ ಆಕಸ್ಮಿಕವಾಗಿ ಕಾಲು ಜಾಲು ಜಾರಿ ನೀರಿಗೆ ಬಿದ್ದಿದ್ದನು.‌

ನಾಪತ್ತೆಯಾಗಿದ್ದ ಶರತ್ ಕುಮಾರ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕೆ ಎಚ್ ನಗರದ ನಿವಾಸಿಯಾಗಿದ್ದನು. ಮುನಿಸ್ವಾಮಿ ಮತ್ತು ರಾಧಾ ದಂಪತಿಯ ಏಕೈಕ ಪುತ್ರನಾಗಿದ್ದು ಕುಟುಂಬಕ್ಕೆ ಆಸರೆಯಾಗಿದ್ದನು. ಆದರೆ ಈ ದುರ್ಘಟನೆಯಿಂದ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment