ರಾಜಸ್ಥಾನ್ ತೊರೆಯೋದು ಪಕ್ಕಾ.. ಸಂಜುಗೆ ಫ್ರಾಂಚೈಸಿ ಮೇಲೆ ಬಂದಿರುವ ಸಿಟ್ಟು ರಿವೀಲ್..!

ಕೇರಳದ ಸಂಜು ಸ್ಯಾಮ್ಸನ್​ ರಾಜಸ್ಥಾನದ ಮನೆಮಗ ಅನಿಸಿಬಿಟ್ಟಿದ್ದಾರೆ. ಇಂತಹ ಸಂಜು ಸ್ಯಾಮ್ಸನ್​​ ಇದೀಗ ರಾಜಸ್ಥಾನ್​ ತಂಡವನ್ನ ತೊರೆಯೋಕೆ ಮುಂದಾಗಿದ್ದಾರೆ. ಇಷ್ಟು ದಿನ ಇದಕ್ಕೆ ಕಾರಣ ಏನು ಅನ್ನೋದು ಯಾರಿಗೂ ಗೊತ್ತಾಗಿರಲಿಲ್ಲ. ಇದೀಗ ರೀಸನ್​ ರಿವೀಲ್​ ಆಗಿದೆ.

author-image
Ganesh Kerekuli
Sanju Samson

ಸಂಜು ಸ್ಯಾಮ್ಸನ್

Advertisment

ಒಂದಲ್ಲ, ಎರಡಲ್ಲ ಸುದೀರ್ಘ 11 ವರ್ಷಗಳ ಪ್ರಯಾಣ. ಸಂಜು ಸ್ಯಾಮ್ಸನ್​ ಅಂದ್ರೆ ರಾಜಸ್ಥಾನ್​ ರಾಯಲ್ಸ್​, ರಾಜಸ್ಥಾನ್​ ರಾಯಲ್ಸ್​ ಅಂದ್ರೆ ಸಂಜು ಸ್ಯಾಮ್ಸನ್​ ಎಂದೇ ಕ್ರಿಕೆಟ್​ ಲೋಕ ಗುರುತಿಸಿದೆ. ಕೇರಳದ ಸಂಜು ಸ್ಯಾಮ್ಸನ್​ ರಾಜಸ್ಥಾನದ ಮನೆ ಮಗ ಅನಿಸಿಬಿಟ್ಟಿದ್ದಾರೆ. ಇಂತಹ ಸಂಜು ಸ್ಯಾಮ್ಸನ್​​ ಇದೀಗ ರಾಜಸ್ಥಾನ್​ ತಂಡವನ್ನ ತೊರೆಯೋಕೆ ಮುಂದಾಗಿದ್ದಾರೆ. ಇಷ್ಟು ದಿನ ಇದಕ್ಕೆ ಕಾರಣ ಏನು ಅನ್ನೋದು ಯಾರಿಗೂ ಗೊತ್ತಾಗಿರಲಿಲ್ಲ. ಇದೀಗ ರೀಸನ್​ ರಿವೀಲ್​ ಆಗಿದೆ.

ಕಳೆದ ಸೀಸನ್​ನ ಐಪಿಎಲ್​ ಟೂರ್ನಿ ಅಂತ್ಯವಾದ ಬೆನ್ನಲ್ಲೇ ರಾಜಸ್ಥಾನ್​ ರಾಯಲ್ಸ್​ ಫ್ರಾಂಚೈಸಿಗೆ ಸಂಜು ಸ್ಯಾಮ್ಸನ್​ ತಂಡವನ್ನ ತೊರೆಯೋದಾಗಿ ತಿಳಿಸಿದ್ರಂತೆ. ಅದಾದ ಜೂನ್​ನಲ್ಲಿ ಸೀಸನ್​​ನ ರಿವ್ಯೂ ಮೀಟಿಂಗ್​ನಲ್ಲಿ ಮ್ಯಾನೇಜ್​ಮೆಂಟ್​ ಈ ಬಗ್ಗೆ ಚರ್ಚೆ ನಡೆಸಿದೆ. ಫೈನಲ್​ ನಿರ್ಧಾರ ತಳೆದಿಲ್ಲ. ಬದಲಾಗಿ ಹೆಡ್​ಕೋಚ್​ ರಾಹುಲ್​ ದ್ರಾವಿಡ್​ಗೆ ಸಂಧಾನದ ಹೊರೆ ಹೊರಿಸಿತ್ತು. ಸಂಜು ಸ್ಯಾಮ್ಸನ್​ ರಾಜಿಯಾಗೋಕೆ ರೆಡಿಯಿಲ್ಲ. ಮತ್ತೊಮ್ಮೆ ತಮ್ಮನ್ನ ರಿಲೀಸ್​ ಮಾಡಿ ಅಥವಾ ಟ್ರೇಡ್​ ಮಾಡಿ ಎಂದು ಫ್ರಾಂಚೈಸಿಗೆ ತಿಳಿಸಿದ್ದಾರೆ. ಸಂಜುಗೆ ಈ ಪರಿ ಸಿಟ್ಟು ಬಂದಿರೋದಕ್ಕೆ ಕಾರಣ ಏನ್​ ಗೊತ್ತಾ? ರಿಯಾನ್​ ಪರಾಗ್​.

ಇದನ್ನೂ ಓದಿ: ರೋಹಿತ್​ ಶರ್ಮಾರ ಮನೆಗೆ ಹೊಸ ಅತಿಥಿ ಎಂಟ್ರಿ.. ಕಣ್ಣುಕುಕ್ಕಿದ ನಂಬರ್​​ ಪ್ಲೇಟ್..!

Sanju Samson (1)

ಸಂಜು ಸ್ಯಾಮ್ಸನ್​ ಸಿಟ್ಟಿನ ಸೀಕ್ರೆಟ್​​ ರಿವೀಲ್​

ಕಳೆದ ಸೀಸನ್​ನಲ್ಲಿ ಇಂಜುರಿಗೆ ತುತ್ತಾಗಿದ್ದ ಸಂಜು ಸ್ಯಾಮ್ಸನ್​​ ಕೆಲ ಪಂದ್ಯಗಳಿಂದ ದೂರ ಉಳಿದಿದ್ರು. ಈ ವೇಳೆ ಹಂಗಾಮಿ ನಾಯಕನಾಗಿ ರಿಯಾನ್​ ಪರಾಗ್​ ನಾಯಕತ್ವವನ್ನ ನಿಭಾಯಿಸಿದ್ರು. ರಿಯಾನ್​ ಪರಾಗ್​ ಕ್ಯಾಪ್ಟೆನ್ಸಿ ಅಂತಹ ಅದ್ಭುತವಾಗಿರಲಿಲ್ಲ. ಫ್ರಾಂಚೈಸಿಗೆ ರಿಯಾನ್​ ಪರಾಗ್​ ನಾಯಕತ್ವ ಇಷ್ಟವಾಗಿದ್ಯಂತೆ. ತನ್ನನ್ನ ಸೈಡ್​​ಲೈನ್​​ ಮಾಡಿ, ಪರಾಗ್​ಗೆ ಫ್ರಾಂಚೈಸಿ​ ಹೆಚ್ಚು ಮನ್ನಣೆ ನೀಡಿದ್ದು ಸಂಜು ಸಿಟ್ಟಿಗೆ ಕಾರಣವಾಗಿದೆ. ನಾವಲ್ಲ.. ಮಾಜಿ ಕ್ರಿಕೆಟಿಗ ಎಸ್​, ಬದ್ರಿನಾಥ್​​ ರಿವೀಲ್​ ಮಾಡಿರೋ ಸತ್ಯವಿದು. 

ಒಂದೇ ಒಂದು ನಿಮಿಷ. ಇದಕ್ಕೆ ಕಾರಣ ರಿಯಾನ್​ ಪರಾಗ್​. ನೀವು ಆತನನ್ನ ನಾಯಕತ್ವಕ್ಕೆ ಪರಿಗಣಿಸಿದ್ರೆ ಯಾರು ಹೇಗೆ ಇರೋಕೆ ಸಾಧ್ಯ. ಸಂಜು ಸ್ಯಾಮ್ಸನ್​ ದೊಡ್ಡ ಆಟಗಾರ. ಒಳ್ಳೆಯ ಆಟಗಾರ 
ಬದ್ರಿನಾಥ್, ಮಾಜಿ ಕ್ರಿಕೆಟಿಗ

ಗುರುವಿನ ಮೇಲೂ ಸಂಜು ಸ್ಯಾಮ್ಸನ್​ಗೆ ಸಿಟ್ಟು

ಹೆಡ್​ಕೋಚ್​, ಗುರು ರಾಹುಲ್​ ದ್ರಾವಿಡ್​ ಸಂಜು ಸ್ಯಾಮ್ಸನ್​​ ಸಿಟ್ಟಾಗಿದ್ದಾರೆ. ಕಳೆದ ಐಪಿಎಲ್​ನಲ್ಲಾದ ಘಟನೆಗಳು ಇದಕ್ಕೆ ಕಾರಣ. ಕಳೆದ ಸೀಸನ್​ನಲ್ಲಿ ರಾಜಸ್ಥಾನ್​ ರಾಯಲ್ಸ್​ vs ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಪಂದ್ಯ ಟೈ ಆಗಿದ್ದು ನಿಮಗೆ ಇದ್ಯಾ? ಆ ಪಂದ್ಯ ಟೈ ಆದ ಬಳಿಕ ರಾಜಸ್ಥಾನ್​ ರಾಯಲ್ಸ್​ ಡಗೌಟ್​ ಬಳಿ ಒಂದು ಮೀಟಿಂಗ್​ ನಡೀತು. ಆ ಮೀಟಿಂಗ್​ನ ಮಾಡಿದ್ದು ರಾಹುಲ್​ ದ್ರಾವಿಡ್​. ಈ ಸಭೆಯ ವೇಳೆ ಸಂಜು ಸ್ಯಾಮ್ಸನ್​ನ ಕಡೆಗಣಿಸಲಾಗಿಯ್ತು. 

ಇದನ್ನೂ ಓದಿ: ಫಿಲ್ ಸಾಲ್ಟ್​​​ರನ್ನ ಬಿಟ್ಟುಕೊಡುತ್ತಾ RCB? ಕೆಕೆಆರ್​ ಜೊತೆ ಆರ್​ಸಿಬಿ ಬಿಗ್ ಡೀಲ್..?

ಮೀಟಿಂಗ್​ ವೇಳೆ ಪಕ್ಕದಲ್ಲೇ ಓಡಾಡ್ತಿದ್ದ ನಾಯಕ ಸಂಜು ಸ್ಯಾಮ್ಸನ್​ ನೋಡಿಯೂ ನೋಡದಂತೆ ಅಲ್ಲೆ ಓಡಾಡ್ತಿದ್ರು. ಆ ವೇಳೆ ತಂಡದ ಸಹ ಆಟಗಾರ ಯಧುವೀರ್ ಸಿಂಗ್, ಟೀಮ್​​​​​ ಮೀಟಿಂಗ್​ಗೆ ಬರುವಂತೆ ಸಂಜುಗೆ ಸನ್ನೆ ಮಾಡಿದ್ರು. ಇದಕ್ಕೆ ಸನ್ನೆಯಲ್ಲೇ ಉತ್ತರ ನೀಡಿದ್ದ ಸಂಜು, ಮೀಟಿಂಗ್​ನಿಂದ ದೂರ ಉಳಿದಿದ್ರು. ದ್ರಾವಿಡ್​​-ಸಂಜುವಿನ ನಡುವೆ ಈತರ ಹಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ವು ಎನ್ನಲಾಗ್ತಿದೆ. 

ಫ್ರಾಂಚೈಸಿ ಮೇಲೂ ಸ್ಯಾಮ್ಸನ್​ಗೆ ಅಸಮಾಧಾನ

ಸುದೀರ್ಘ 11 ವರ್ಷಗಳ ಕಾಲ ರಾಜಸ್ಥಾನ್​ ರಾಯಲ್ಸ್​ ತಂಡವನ್ನ ಸಂಜು ಪ್ರತಿನಿಧಿಸಿದ್ದಾರೆ. ಇಂದು ಸಂಜು ಏನೇ ಆಗಿದ್ರೂ ಅದಕ್ಕೆ ಫ್ರಾಂಚೈಸಿ ನೀಡಿದ ಬೆಂಬಲ, ಸಹಕಾರದ್ದು ಪ್ರಮುಖ ಪಾತ್ರವಿದೆ. ಇಂತಹ ಫ್ರಾಂಚೈಸಿಯನ್ನ ಸಂಜು ಸ್ಯಾಮ್ಸನ್​ ತೊರೆಯಲು ಮುಂದಾಗಿರೋದಕ್ಕೆ ಆಂತರಿಕ ಭಿನ್ನಾಭಿಪ್ರಾಯವೂ ಒಂದು ಕಾರಣ ಎನ್ನಲಾಗ್ತಿದೆ. ಆಟಗಾರರ ಖರೀದಿ, ಪ್ಲೇಯಿಂಗ್​ ಇಲೆವೆನ್​ ಆಯ್ಕೆ, ಗೇಮ್​ಪ್ಲಾನ್​ ಈ ವಿಚಾರಗಳಲ್ಲಿ ಸಂಜು ಮಾತಿಗೆ ಹೆಚ್ಚಿನ ಮನ್ನಣೆ ಸಿಕ್ಕಿಲ್ಲ. ಇದೇ ಕಾರಣಕ್ಕೆ ಸಂಜು ತಂಡ ಬಿಡೋ ನಿರ್ಧಾರ ಮಾಡಿದ್ದಾರೆ ಅನ್ನೋ ಸುದ್ದಿಯಿದೆ. 

ಇದನ್ನೂ ಓದಿ: ಯಾರೋ ಮಾಡಿದ ತಪ್ಪಿಗೆ, ಇನ್ಯಾರಿಗೋ ಶಿಕ್ಷೆ.. ಬೆಂಗಳೂರಿಗೆ ಆಗ್ತಿರುವ ನಷ್ಟಗಳು ಏನೇನು..?

ಒಟ್ಟಿನಲ್ಲಿ ಹಲವು ಕಾರಣಗಳಿಂದ ಸಿಟ್ಟಾಗಿರೋ ಸಂಜು ಸ್ಯಾಮ್ಸನ್​ ಸುದೀರ್ಘ 11 ವರ್ಷಗಳ ಜರ್ನಿಗೆ ಫುಲ್​​​ಸ್ಟಾಪ್​ ಇಡೋಕೆ ಮುಂದಾಗಿದ್ದಾರೆ. ಸಂಜು ಸ್ಯಾಮ್ಸನ್​ ತಮ್ಮ ನಿರ್ಧಾರ ತಿಳಿಸಿದ್ದಾರೆ. ಕನ್ವಿನ್ಸ್​ ಮಾಡೋಕೆ ಫ್ರಾಂಚೈಸಿಗೆ ನವೆಂಬರ್​ ಅಂತ್ಯವರೆಗೆ ಟೈಮ್​ ಇದೆ. ಸಂಜುನ ಫ್ರಾಂಚೈಸಿ ಮನವೊಲಿಸಿ ತಂಡದಲ್ಲಿ ಉಳಿಸಿಕೊಳ್ಳುತ್ತಾ.? ಇಲ್ಲಾ ಅನಿವಾರ್ಯವಾಗಿ ರಿಲೀಸ್​ ಮಾಡುತ್ತಾ.? ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ:ಧೋನಿಯ 100 ಕೋಟಿ ಕೇಸ್​​ಗೆ 12 ವರ್ಷಗಳ ಬಳಿಕ ಬಿಗ್ ಟ್ವಿಸ್ಟ್​.. ಏನಿದು ಪ್ರಕರಣ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sanju Samson
Advertisment