ರೋಹಿತ್​ ಶರ್ಮಾರ ಮನೆಗೆ ಹೊಸ ಅತಿಥಿ ಎಂಟ್ರಿ.. ಕಣ್ಣುಕುಕ್ಕಿದ ನಂಬರ್​​ ಪ್ಲೇಟ್..!

ಟೀಮ್​ ಇಂಡಿಯಾ ಒನ್​ ಡೇ ಕ್ಯಾಪ್ಟನ್​ ರೋಹಿತ್​ ಶರ್ಮಾ ಕ್ರಿಕೆಟ್​ ಭವಿಷ್ಯ ಸದ್ಯ ತೀವ್ರ ಚರ್ಚೆಯಲ್ಲಿದೆ. ಇದ್ರ ನಡುವೆ ಹಿಟ್​ಮ್ಯಾನ್​ ಮನೆಗೆ ಇಬ್ರು ಹೊಸ ಗೆಸ್ಟ್​​ ಬಂದಿದ್ದಾರೆ. ಹೊಸ ಗೆಸ್ಟ್​ ಎಂಟ್ರಿಯೇ ಕ್ರಿಕೆಟ್​ ಲೋಕ ಹುಬ್ಬೇರುವಂತೆ ಮಾಡಿದೆ.

author-image
Ganesh
Rohit sharma car (2)
Advertisment
  • ಐಷಾರಾಮಿ ಲ್ಯಾಂಬೋರ್ಗಿನಿ ಖರೀದಿಸಿದ ರೋಹಿತ್​
  • 7 ಡ್ರೈವಿಂಗ್​ ಮೂಡ್​, ಗಂಟೆಗೆ 305 ಕಿ.ಮೀ ಟಾಪ್​​ ಸ್ಪೀಡ್​​
  • ರೋಹಿತ್​​ ಶರ್ಮಾ ಹೊಸ ಕಾರಿನ ವೈಶಿಷ್ಟ್ಯಗಳೇನು.?

ಟೀಮ್​ ಇಂಡಿಯಾ ಒನ್​ ಡೇ ಕ್ಯಾಪ್ಟನ್​ ರೋಹಿತ್​ ಶರ್ಮಾ ಕ್ರಿಕೆಟ್​ ಭವಿಷ್ಯ ಸದ್ಯ ತೀವ್ರ ಚರ್ಚೆಯಲ್ಲಿದೆ. ಇದ್ರ ನಡುವೆ ಹಿಟ್​ಮ್ಯಾನ್​ ಮನೆಗೆ ಇಬ್ರು ಹೊಸ ಗೆಸ್ಟ್​​ ಬಂದಿದ್ದಾರೆ. ಹೊಸ ಗೆಸ್ಟ್​ ಎಂಟ್ರಿಯೇ ಕ್ರಿಕೆಟ್​ ಲೋಕ ಹುಬ್ಬೇರುವಂತೆ ಮಾಡಿದೆ. ಆ ಗೆಸ್ಟ್​ ಯಾರು? ಕ್ರಿಕೆಟ್​ ಲೋಕದ ಗಮನ ಸೆಳೆದಿರೋದ್ಯಾಕೆ? ಈ ಸ್ಟೋರಿಯಲ್ಲಿದೆ ನೋಡಿ ಡಿಟೇಲ್ಸ್​​!

ಟೀಮ್ ಇಂಡಿಯಾ ಆಟಗಾರರು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರು ಅನ್ನೋದು ರಹಸ್ಯವಾಗಿ ಏನು ಉಳಿದಿಲ್ಲ. ಇಂಡಿಯನ್​​ ಕ್ರಿಕೆಟರ್ಸ್​ ಆಟ ಹೇಗೆ ರಾಯಲ್​ ಆಗಿರುತ್ತೋ ಇವ್ರ ಜೀವನ ಕೂಡ ಅಷ್ಟೇ ಫುಲ್ ಐಷಾರಾಮಿ. ಬಳಸೋ ವಸ್ತುಗಳ ಬೆಲೆ ಕೋಟಿ ಕೋಟಿ ಲೆಕ್ಕದಲ್ಲಿದೆ. ದುಬಾರಿ ವಾಚ್​ಗಳವರೆಗೆ ಯಾವುದ್ರಲ್ಲೂ ಕಡಿಮೆಯಿಲ್ಲ. ಇಂಥಾ ಲಕ್ಸುರಿ ಜೀವನ ನಡೆಸೋವ್ರಲ್ಲಿ ಒನ್​ ಡೇ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೂಡ ಒಬ್ರು. 

ರೋಹಿತ್​ ಶರ್ಮಾ ಮನೆಗೆ ಹೊಸ ‘ಅತಿಥಿ’ ಎಂಟ್ರಿ

IPL ಬಳಿಕ ಫುಲ್​ ರಿಲ್ಯಾಕ್ಸ್​ ಮೂಡ್​​ನಲ್ಲಿರೋ ಟೀಮ್​ ಇಂಡಿಯಾ ಒನ್​ ಡೇ ಕ್ಯಾಪ್ಟನ್​ ರೋಹಿತ್​ ಶರ್ಮಾ ಫ್ಯಾಮಿಲಿಗೆ ಸಮಯ ಮೀಸಲಿಟ್ಟಿದ್ರು. ಪತ್ನಿ, ಮಕ್ಕಳ ಜೊತೆಗೆ ವಿದೇಶ ಪ್ರವಾಸಕ್ಕೆ ತೆರಳಿದ್ರು. ಇಂಗ್ಲೆಂಡ್​ ಕೆಲ ವಾರಗಳನ್ನ ಕಳೆದ ರೋಹಿತ್​ ಶರ್ಮಾ ಕುಟುಂಬ ಸಮೇತ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ರೋಹಿತ್​ ಮನೆಗೆ ಬಂದ ಬೆನ್ನಲ್ಲೇ ಹೊಸ ‘ಅತಿಥಿ’ಯೂ ಬಂದಿದೆ. ಅಂದ್ಹಾಗೆ ಆ ಹೊಸ ಗೆಸ್ಟೇ ಐಷಾರಾಮಿ ಲ್ಯಾಂಬೋರ್ಗಿನಿ ಉರುಸ್​.

ಇದನ್ನೂ ಓದಿ:ಬೆಂಗಳೂರು ಜನರಿಗೆ ಗುಡ್​ನ್ಯೂಸ್​.. ಉದ್ಯಾನ ನಗರಿಯಲ್ಲಿ ತಲೆ ಎತ್ತಲಿದೆ ಬೃಹತ್ ಸ್ಟೇಡಿಯಂ

Rohit sharma car (1)

ಐಷಾರಾಮಿ ಲ್ಯಾಂಬೋರ್ಗಿನಿ ಖರೀದಿಸಿದ ರೋಹಿತ್​

ರೋಹಿತ್ ಶರ್ಮಾ​ ಹೊಸ ಲ್ಯಾಂಬೋರ್ಗಿನಿ ಉರುಸ್​​ ಕಾರನ್ನ ಖರೀದಿಸಿದ್ದಾರೆ. ​ಕೇಸರಿ ಬಣ್ಣದ ಕಾರನ್ನ ರೋಹಿತ್​ ಖರೀದಿಸಿದ್ದು, ಈ ಕಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನ ಹೊಂದಿದೆ. ಹೆಚ್ಚು ಪ್ರೀಮಿಯಂ ಫೀಚರ್ಸ್​ನ ಹೊಂದಿರುವ ಈ ಹೊಸ ವೆರಿಯಂಟ್​ 4.0 ಲೀಟರ್​​ನ ಟ್ವಿನ್​ ಟರ್ಬೋ ವಿ8 ಪೆಟ್ರೋಲ್​ ಇಂಜಿನ್ ಹೊಂದಿದೆ. 8 ಸ್ಪೀಡ್​ ಅಟೋಮ್ಯಾಟಿಕ್​ ಗೇರ್​ಬಾಕ್ಸ್​ ಜೊತೆಗೆ ಆಲ್​​ ವೀಲ್​ ಡ್ರೈವ್​ ಸಿಸ್ಟಂ ಹೊಂದಿದೆ. 657 ಹಾರ್ಸ್​​ ಪವರ್​ನ ಈ ಹೊಸ ಕಾರಿನಲ್ಲಿ ಒಟ್ಟು 7 ಡ್ರೈವಿಂಗ್​ ಮೂಡ್​ಗಳಿದ್ದು, ಗಂಟೆಗೆ 305 ಕಿ.ಮೀ ಇದ್ರ ಟಾಪ್​ ಸ್ಪೀಡ್​.!

ಎಲ್ಲರ ಕಣ್ಣುಕುಕ್ಕಿದ ಕಾರಿನ ನಂಬರ್​​ ಪ್ಲೇಟ್ 

ರೋಹಿತ್​ ಶರ್ಮಾ ಹೊಸ ಕಾರಿಗಿಂತ ಈ ಕಾರಿನ ನಂಬರ್​ ಪ್ಲೇಟ್​ ಸದ್ಯ ಸಖತ್​ ಸೌಂಡ್​ ಮಾಡ್ತಾಯಿದೆ. ಫ್ಯಾನ್ಸ್​ ಈ ಕಾರಿನ ನಂಬರ್​ 3015ನ ಹಿಂದೆ ಬಿದ್ದಿದ್ದಾರೆ. ಹೀಗೆ ಹುಡುಕಾಟ ನಡೆಸಿದವ್ರಿಗೆ ಇಂಟರೆಸ್ಟಿಂಗ್​ ಉತ್ತರ ಸಿಕ್ಕಿದೆ.  ರೋಹಿತ್‌ ಶರ್ಮಾ ಅವರ ಹೊಸ ಕಾರಿನ ಮೊದಲ ಎರಡು ಸಂಖ್ಯೆ ಮಗಳು ಹುಟ್ಟಿದ ದಿನಾಂಕ 30ನ್ನ ಸೂಚಿಸಿದ್ರೆ, ಕೊನೆಯ ಎರಡು ಸಂಖ್ಯೆ ಮಗ ಹುಟ್ಟಿದ ದಿನಾಂಕ 15 ಅನ್ನ ಸೂಚಿಸುತ್ತೆ.  ಈ 30 ಮತ್ತು 15ನ್ನ ಕೂಡಿಸಿದ್ರೆ 45 ಆಗುತ್ತೆ. ಇದು ರೋಹಿತ್‌ ಶರ್ಮಾ ಜೆರ್ಸಿ ನಂಬರ್. 

ಇದನ್ನೂ ಓದಿ: ಸಕ್ಸಸ್​​ ಕಂಡ​ ಗಿಲ್​ಗೆ ಬಂಪರ್​​ ಬಹುಮಾನ​.. ಸದ್ದಿಲ್ಲದೇ ಪಟ್ಟಾಭಿಷೇಕಕ್ಕೆ ಬಿಸಿಸಿಐ ಸಿದ್ಧತೆ..!

Rohit sharma car

ರೋಹಿತ್​ ಶರ್ಮಾಗಿದೆ ಫ್ಯಾನ್ಸಿ ನಂಬರ್​​ ಶೋಕಿ 

ಅಂದ್ಹಾಗೆ ಇದಕ್ಕೂ ಮುನ್ನವೇ ರೋಹಿತ್​ ಶರ್ಮಾ ಲ್ಯಾಂಬೋರ್ಗಿನಿ ಕಾರನ್ನ ಹೊಂದಿದ್ರು. ಕಳೆದ ಮೇನಲ್ಲಿ ಆ ಕಾರನ್ನ ಸ್ಪರ್ಧೆಯೊಂದರ ವಿಜೇತರಿಗೆ ಬಹುಮಾನವಾಗಿ ನೀಡಿದ್ರು. ಆ ಕಾರ್​ನ ನಂಬರ್​ ಏನಿತ್ತು ಗೊತ್ತಾ.? 264.. 264 ಅಂದ್ರೆ ಗೊತ್ತಾಯ್ತಲ್ವಾ ರೋಹಿತ್​ ಶರ್ಮಾ ಏಕದಿನ ಮಾದರಿಯ ಹೈಯೆಸ್ಟ್​ ಸ್ಕೋರ್​​.. ರೋಹಿತ್​ ಬಳಿ ರೇಂಜ್​ರೋವರ್​ ಕಾರು ಕೂಡ ಇದೆ. ಅದ್ರ ನಂಬರ್​ 264. ಇನ್ನು ಬೆಂಜ್​ ಕಾರ್​​ನ 

ನಂಬರ್​ 4545.! 45 ರೋಹಿತ್​ರ ಜೆರ್ಸಿ ನಂಬರ್!

ರೋಹಿತ್​ ಶರ್ಮಾಗೆ ಕಾರು ಅಂದ್ರೆ ವಿಶೇಷವಾದ ಕ್ರೇಜ್​ ಇದೆ. ಈಗ ಮತ್ತೊಂದು ಲ್ಯಾಂಬೋರ್ಗಿನಿ ಉರುಸ್​ ಖರೀದಿಸಿರೋ ರೋಹಿತ್​ ಗ್ಯಾರೇಜ್​ನಲ್ಲಿ ಮರ್ಸಿಡಿಸ್ ಬೆನ್ಜ್ ಎಸ್ ಕ್ಲಾಸ್, ಮರ್ಸಿಡಿಸ್ ಜಿಎಲ್ಎಸ್ 400 ಡಿ, ಬಿಎಂಡಬ್ಲ್ಯೂ ಎಂ5, ರೇಂಜ್ ರೋವರ್ ಎಚ್‌ಎಸ್‌ಇ ಎಲ್‌ಡಬ್ಲ್ಯೂಬಿಯಂತಹ ಕಾರುಗಳೂ ಇವೆ. ಮೂಲಗಳ ಮಾಹಿತಿ ಪ್ರಕಾರ ರೋಹಿತ್​ ಶರ್ಮಾ ಎಲ್ಲಾ ಕಾರುಗಳ ಒಟ್ಟು ಮೌಲ್ಯ 30 ಕೋಟಿಗೂ ಅಧಿಕವಂತೆ. 

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಗಂಭೀರ್ ಕ್ರಾಂತಿಕಾರಿ ಹೆಜ್ಜೆ.. ಯಾರಿಗೂ ಮಾಡಲಾಗದ್ದನ್ನ ಸಾಧಿಸಿದ ಕೋಚ್..!

ಕೋಟಿ ಬೆಲೆ ಬಾಳುವ ಕಾರುಗಳು ಮಾತ್ರವಲ್ಲ.. ಕೋಟಿ ಕೋಟಿ ಬೆಲೆಯ ವಾಚ್​ಗಳು, ದುಬಾರಿ ಶೂಗಳು ಎಲ್ಲವನ್ನೂ ರೋಹಿತ್​ ಹೊಂದಿದ್ದಾರೆ. ಹಿಟ್​ಮ್ಯಾನ್​ ರಾಯಲ್​ ಜೀವನ ಹೇಗಿದೆ ಅನ್ನೋದಕ್ಕೆ ಇವೇ ಸಾಕ್ಷಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Rohith Sharma Rohit Sharma-Virat Kohli Rohit Sharma car
Advertisment