/newsfirstlive-kannada/media/media_files/2025/08/12/gautam-gambhir-2025-08-12-15-35-21.jpg)
ಗೌತಮ್ ಗಂಭೀರ್, ಟೀಂ ಇಂಡಿಯಾದ ಮುಖ್ಯಕೋಚ್
ಕ್ಯಾಪ್ಟನ್ಸ್ ಟೀಮ್ ಇಂಡಿಯಾದ ಶಕ್ತಿ ಅನಿಸಿದ್ದ ಕಾಲವೊಂದಿತ್ತು. ಆದ್ರೀಗ ಕ್ಯಾಪ್ಟನ್ಸ್ ಪವರ್ ಕಟ್ ಆಗಿದೆ. ಈಗ ಹೆಡ್ ಕೋಚ್ ಟೀಮ್ ಇಂಡಿಯಾದ ರಿಯಲ್ ಬಾಸ್. ಗೌತಮ್ ಗಂಭೀರ್ ಹೇಳಿದ್ದೇ ವೇದವಾಕ್ಯ. ಈ ಹಿಂದೆ ರವಿ ಶಾಸ್ತ್ರಿ, ರಾಹುಲ್ ದ್ರಾವಿಡ್ರಂತ ದಿಗ್ಗಜರೇ ಟೀಮ್ ಇಂಡಿಯಾದ ಕೋಚ್ಗಳಾಗಿ ಬಂದು ಹೋದರು. ಯಾರಿಗೂ ಬದಲಾವಣೆ ತರೋಕೆ ಆಗಲಿಲ್ಲ. ಗಂಭೀರ್ ಎಲ್ಲವನ್ನ ಬದಲಾಯಿಸಿದ್ದಾರೆ.
ಗ್ಯಾರಿ ಕ್ರಿಸ್ಟನ್, ರವಿ ಶಾಸ್ತ್ರಿ, ರಾಹುಲ್ ದ್ರಾವಿಡ್. ಕಳೆದ 2 ದಶಕಗಳಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ದಿಗ್ಗಜರೇ ಪಾಠ ಮಾಡಿದ್ದಾರೆ. ಇವ್ರ ಅಧಿಕಾರ ಅವಧಿಯಲ್ಲಿ ಹಲವು ಆಟಗಾರರು ಬಂದು, ಹೋಗಿದ್ದಾರೆ. ಭಾರತೀಯ ಕ್ರಿಕೆಟ್ನಲ್ಲಿ ಹಲವು ಬದಲಾವಣೆ ತಂದಿದ್ದಾರೆ. ಒಂದು ವಿಚಾರದಲ್ಲಿ ಮಾತ್ರ ಇವ್ರೆಲ್ಲ ಪ್ರಯತ್ನ ಮಾಡಿ ಮಾಡಿ ಫೇಲ್ ಆದರು. ಎಷ್ಟೇ ಪ್ರಯತ್ನ ಪಟ್ರೂ ಆ ಒಂದು ಬದಲಾವಣೆ ತರೋಕೆ ಆಗಲಿಲ್ಲ. ಹೆಡ್ಕೋಚ್ ಪಟ್ಟವೇರಿದ ಒಂದು ವರ್ಷದ ಅವಧಿಯಲ್ಲೇ 2 ದಶಕಗಳಿಂದ ಆಗದ ಕೆಲಸವನ್ನ ಗೌತಮ್ ಗಂಭೀರ್ ಮಾಡಿದ್ದಾರೆ.
ಗೌತಮ್ ಗಂಭೀರ್ ಟೀಮ್ ಇಂಡಿಯಾದ ‘ರಿಯಲ್ ಬಾಸ್’
ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಟೀಮ್ ಇಂಡಿಯಾದ ರಿಯಲ್ ಬಾಸ್. ಈ ಹಿಂದೆ ಮಹೇಂದ್ರ ಸಿಂಗ್ ಧೋನಿ, ಆ ಬಳಿಕ ವಿರಾಟ್ ಕೊಹ್ಲಿ, ಆ ನಂತರದಲ್ಲಿ ರೋಹಿತ್ ಶರ್ಮಾ.. ನಾಯಕರೇ ಟೀಮ್ ಇಂಡಿಯಾದ ಡಿಸಿಷನ್ ಮೇಕರ್ಸ್ ಆಗಿದ್ದರು. ಒಂದರ್ಥದಲ್ಲಿ ಕ್ಯಾಪ್ಟನ್ ನಿಜವಾದ ರೂಲರ್ ಅನಿಸಿದ್ರು. ಟೀಮ್ ಸೆಲೆಕ್ಷನ್, ಪ್ಲೇಯಿಂಗ್ ಇಲೆವೆನ್ ಸೆಲೆಕ್ಷನ್ನಿಂದ ಹಿಡಿದು ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ನಾಯಕರೇ ಡಿಸಿಷನ್ ಮೇಕರ್ಸ್ ಆಗಿದ್ರು. ಟೀಮ್ ಶೀಟ್ ಮೇಲೆ ಮಾತ್ರ ಕೋಚ್ ಸೈನ್ ಇರುತ್ತಿತ್ತು. ಆದ್ರೀಗ ಎಲ್ಲಾ ಬದಲಾಗಿದೆ.
ಗಂಭೀರ್ಗೆ ಪರಮಾಧಿಕಾರ.. ಕ್ಯಾಪ್ಟನ್ಸ್ ‘ಪವರ್ಕಟ್’.!
ಜುಲೈ 9, 2024.. ಒಂದು ವರ್ಷದ ಹಿಂದೆ ಟೀಮ್ ಇಂಡಿಯಾ ಹೆಡ್ಕೋಚ್ ಆಗಿ ಗಂಭೀರ್ ಎಂಟ್ರಿಕೊಟ್ರು. ಅಂದಿನ ಸೆಕ್ರೆಟರಿ ಜಯ್ ಶಾ ಹೆಡ್ಕೋಚ್ ಹುದ್ದೆಯ ಆಫರ್ ಮಾಡಿದಾಗಲೇ ಷರತ್ತು ವಿಧಿಸಿದ್ದ ಗಂಭೀರ್ ಫ್ರಿ ಹ್ಯಾಂಡ್ ನೀಡುವಂತೆ ಹೇಳಿದ್ದರು. ಅದರಂತೆ ಬಿಸಿಸಿಐ ಬಾಸ್ಗಳು ಪರಮಾಧಿಕಾರ ನೀಡಿದ್ದರು. ಆ ಬಳಿಕ ಟೀಮ್ ಇಂಡಿಯಾದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಅನ್ನೋದೆ ಗಂಭೀರ್ ಪವರ್ಹೌಸ್ ಅನ್ನೋದನ್ನ ನಿರೂಪಿಸಿದೆ.
ಇದನ್ನೂ ಓದಿ: ಪಾಟೀದಾರ್ ಮಾಡಿದ ಒಂದೇ ಒಂದು ಯಡವಟ್ಟು.. ದಿನಸಿ ಅಂಗಡಿ ಮಾಲೀಕರಿಗೆ ಕೊಹ್ಲಿ, ಎಬಿಡಿ ಕರೆ..!
3 ಫಾರ್ಮೆಟ್.. ಮೂರು ಕ್ಯಾಪ್ಟನ್ಸ್.. ಗಂಭೀರ್ ‘ಬಾಸ್’
ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲೇ ಒಂದೊಂದು ಮಾದರಿಗೆ ಒಬ್ಬೊಬ್ಬ ಕ್ಯಾಪ್ಟನ್ ಆಗಿರಲಿಲ್ಲ. ಹಲವು ಬಾರಿ ಈ ಬಗ್ಗೆ ಪ್ರಸ್ತಾಪ ಆಗಿತ್ತಾದ್ರೂ ಇದನ್ನ ಜಾರಿಗೆ ಮಾಡೋಕೆ ಸಾಧ್ಯನೇ ಆಗಿರಲಿಲ್ಲ. ಗೌತಮ್ ಗಂಭೀರ್ ಅದನ್ನ ಸಾಧ್ಯವಾಗಿಸಿದ್ದಾರೆ. ಟೆಸ್ಟ್ಗೆ ಶುಭ್ಮನ್ ಗಿಲ್, ಏಕದಿನಕ್ಕೆ ರೋಹಿತ್ ಶರ್ಮಾ, ಟಿ20ಗೆ ಸೂರ್ಯಕುಮಾರ್ ಯಾದವ್.. ಮೂರು ಮಾದರಿಗೆ ಮೂವರು ನಾಯಕರನ್ನ ನೇಮಿಸಿ ಪವರ್ ಶೇರ್ ಮಾಡಿರೋ ಗಂಭೀರ್, ತಾನು ರಿಯಲ್ ಬಾಸ್ ಹುದ್ದೆಯನ್ನ ಅಲಂಕರಿಸಿದ್ದಾರೆ. ಟೀಮ್ ಸೆಲೆಕ್ಷನ್, ಪ್ಲೇಯಿಂಗ್ ಇಲೆವೆನ್ ಎಲ್ಲರದಲ್ಲೂ ಈಗ ಗಂಭೀರ್ ಹೇಳಿದ್ದೇ ವೇದವಾಕ್ಯ.
ಇದನ್ನೂ ಓದಿ:ಚಿನ್ನಸ್ವಾಮಿ ಕೈತಪ್ಪಿದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು
3 ಫಾರ್ಮೆಟ್ಗೆ ಮೂವರು ಕ್ಯಾಪ್ಟನ್ಸ್ ಮಾತ್ರವಲ್ಲ. ಕಳೆದೊಂದು ವರ್ಷದಿಂದ ಕೆಲವೇ ಕೆಲವು ಆಟಗಾರರು ಮಾತ್ರ ಮೂರು ಫಾರ್ಮೆಟ್ಗೆ ಸೀಮಿತವಾಗಿದ್ದಾರೆ. ಉಳಿದಂತೆ ಕೆಲವು ಆಟಗಾರರು ವೈಟ್ಬಾಲ್ ಫಾರ್ಮೆಟ್ನಲ್ಲಿ ಮಾತ್ರ ಗುರುತಿಸಿಕೊಂಡಿದ್ರೆ, ಇನ್ನು ಕೆಲವರು ರೆಡ್ ಬಾಲ್ ಫಾರ್ಮೆಟ್ನಲ್ಲಿ ಮಾತ್ರ ಆಡ್ತಿದ್ದಾರೆ. ಫಾರ್ಮೆಟ್ ತಕ್ಕಂತೆ ಆಟಗಾರರ ಆಯ್ಕೆಯ ಹಿಂದಿರೋದು ಕೂಡ ಗೌತಮ್ ಗಂಭೀರ್.
ಸ್ಟಾರ್ ಸಂಸ್ಕೃತಿಗೆ ಕೊಕ್ ಕೊಟ್ಟ ಗೌತಮ್ ಗಂಭೀರ್
ಟೀಮ್ ಇಂಡಿಯಾಗೆ ಹಲವು ವರ್ಷಗಳಿಂದ ಸ್ಟಾರ್ ಸಂಸ್ಕೃತಿ ಅನ್ನೋದು ಅಂಟಿಕೊಂಡಿತ್ತು. ನಾಯಕ, ನಾಯಕನ ಜೊತೆಗೆ ಕೆಲವೇ ಕೆಲವು ಆಟಗಾರರು ಸ್ಟಾರ್ಗಳಾಗಿ ಮೆರೆದಾಡ್ತಿದ್ರು. ಇವ್ರು ಪರ್ಫಾಮ್ ಮಾಡಲಿ, ಬಿಡಲಿ.. ತಂಡದಲ್ಲಿ ಇವ್ರಿಗೆ ಸ್ಥಾನ ಫಿಕ್ಸ್ ಆಗಿತ್ತು. ಗೌತಮ್ ಗಂಭೀರ್ ಈ ಸ್ಟಾರ್ ಸಂಸ್ಕೃತಿಗೆ ಕೊಕ್ ಕೊಟ್ಟಿದ್ದಾರೆ. ಕೊಹ್ಲಿ, ರೋಹಿತ್ ಟೆಸ್ಟ್ಗೆ ದಿಢೀರ್ ರಾಜೀನಾಮೆ ಕೊಡೋದಕ್ಕೆ ಗಂಭೀರ್ ನಿರ್ಧಾರಗಳೂ ಕೂಡ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಇದೀಗ ಕೊಹ್ಲಿ, ರೋಹಿತ್ ಒನ್ ಡೇ ಭವಿಷ್ಯ ಅಂತತ್ರಕ್ಕೆ ಸಿಲುಕಿರೋದಕ್ಕೂ ಗಂಭೀರ್ ದೃಢ ನಿರ್ಧಾರಗಳೇ ಕಾರಣ.
ಇದನ್ನೂ ಓದಿ:ಬೆಂಗಳೂರು ಜನರಿಗೆ ಗುಡ್ನ್ಯೂಸ್.. ಉದ್ಯಾನ ನಗರಿಯಲ್ಲಿ ತಲೆ ಎತ್ತಲಿದೆ ಬೃಹತ್ ಸ್ಟೇಡಿಯಂ
ಟೀಮ್ ಇಂಡಿಯಾ ಅಂದ್ರೆ ಕ್ಯಾಪ್ಟನ್ ಎಂಬಂತಿದ್ದ ಮಾತನ್ನ ಗೌತಮ್ ಗಂಭೀರ್ ಈಗ ಹೆಡ್ಕೋಚ್ ಎಂದು ಬದಲಾಯಿಸಿದ್ದಾರೆ. ಕೋಚ್ ಆಗಿ ಟೀಮ್ ಇಂಡಿಯಾದ ಅಸಲಿ ಪವರ್ಹೌಸ್ ಎನಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಂತಹ ಬಿಗ್ ಟೂರ್ನಿಯನ್ನ ಗೆಲ್ಲಿಸಿಕೊಟ್ಟು ಆನ್ಫೀಲ್ಡ್ ಪರೀಕ್ಷೆಯಲ್ಲೂ ಪಾಸ್ ಆಗಿದ್ದಾರೆ. ಗಂಭೀರ್ ಅಧಿಕಾರಾವಧಿ 2 ವರ್ಷಗಳ ಕಾಲ ಇದ್ದು, ಮುಂದೆ ಏನೆಲ್ಲಾ ಬದಲಾವಣೆಗಳಾಗಲಿವೆ ಕಾದು ನೋಡೋಣ.
ಇದನ್ನೂ ಓದಿ:ಶುಭ್ಮನ್ ಗಿಲ್ಗೆ ಆಫರ್ ಮೇಲೆ ಆಫರ್.. ಯುವರಾಜನಿಗೆ ಒಲಿಯುತ್ತಾ ಈ ಪಟ್ಟ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ