ಚಿನ್ನಸ್ವಾಮಿ ಕೈತಪ್ಪಿದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು

ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್​ ಸಿಕ್ಕಿದೆ. ಮಹಿಳಾ ಏಕದಿನ ವಿಶ್ವಕಪ್ (Women World Cup-2025) ಪಂದ್ಯಗಳನ್ನ ಬೆಂಗಳೂರಿನಲ್ಲಿ ನಡೆಸಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ಮಹಾರಾಜ್ ಟ್ರೋಫಿ ಪಂದ್ಯಗಳು ಬಳಿಕ ವಿಶ್ವಕಪ್ ಪಂದ್ಯಗಳು ಕೂಡ ಬೇರೆಡೆಗೆ ಸ್ಥಳಾಂತರಗೊಂಡಿವೆ.

author-image
Ganesh
team india world cup
Advertisment

ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್​ ಸಿಕ್ಕಿದೆ. ಮಹಿಳಾ ಏಕದಿನ ವಿಶ್ವಕಪ್  (Women World Cup-2025) ಪಂದ್ಯಗಳನ್ನ ಬೆಂಗಳೂರಿನಲ್ಲಿ ನಡೆಸಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ಕೆಎಸ್​​ಸಿಎ ಮಹಾರಾಜ ಟಿ-20 ಟ್ರೋಫಿ ಪಂದ್ಯಗಳು ಬಳಿಕ ವಿಶ್ವಕಪ್ ಪಂದ್ಯಗಳು ಕೂಡ ಬೇರೆಡೆಗೆ ಸ್ಥಳಾಂತರಗೊಂಡಿವೆ.  

ಹೀಗಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಎಲ್ಲಾ ಪಂದ್ಯಗಳು ಬೇರೆಡೆಗೆ ಶಿಫ್ಟ್​ ಆಗಲಿವೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinnaswamy Stadium) ಒಟ್ಟು 4 ಪಂದ್ಯಗಳನ್ನ ನಡೆಸಲು ನಿರ್ಧರಿಸಲಾಗಿತ್ತು. ಲೀಗ್ ಹಂತದಲ್ಲಿ ಮೂರು ಪಂದ್ಯಗಳು ಹಾಗೂ ಒಂದು ಸೆಮಿ ಫೈನಲ್ (Semi Final) ಪಂದ್ಯ ನಡೆಯಬೇಕಿತ್ತು. ಸೆಪ್ಟೆಂಬರ್ 30, ಅಕ್ಟೋಬರ್ 3, 26 ಹಾಗೂ 30 ರಂದು ಪಂದ್ಯಗಳು ಆಯೋಜನೆಗೊಂಡಿದ್ದವು.

ಇದನ್ನೂ ಓದಿ:ಪಾಟೀದಾರ್ ಮಾಡಿದ ಒಂದೇ ಒಂದು ಯಡವಟ್ಟು.. ದಿನಸಿ ಅಂಗಡಿ ಮಾಲೀಕರಿಗೆ ಕೊಹ್ಲಿ, ಎಬಿಡಿ ಕರೆ..!

ಯಾಕೆ ಅನುಮತಿ ಸಿಕ್ಕಿಲ್ಲ..?

ರಾಜ್ಯ ಸರ್ಕಾರ (State Govt) ಅನುಮತಿ ನೀಡಲು ನಿರಾಕರಿಸಿರೋದು ಆರ್​ಸಿಬಿ ಕಾಲ್ತುಳಿತ (RCB Stampede) ಪ್ರಕರಣ. ಈ ವರ್ಷ ಆರ್​ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತ್ತು. ಟ್ರೋಫಿ ಗೆದ್ದ ಖುಷಿಯಲ್ಲಿ ಆರ್​ಸಿಬಿ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಇಟ್ಕೊಂಡಿತ್ತು. ಈ ವೇಳೆ ನೂಕು-ನುಗ್ಗಲು ಸಂಭವಿಸಿ ಭೀಕರ ಕಾಲ್ತುಳಿತ ಸಂಭವಿಸಿತ್ತು.

ಜೂನ್ 4 ರಂದು ನಡೆದ ಘೋರ ದುರಂತದಲ್ಲಿ ಒಟ್ಟು 11 ಆರ್​ಸಿಬಿ ಅಭಿಮಾನಿಗಳು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಪ್ರಕರಣವು ತನಿಖಾ ಹಂತದಲ್ಲಿದೆ. ಅಲ್ಲದೇ ಸರ್ಕಾರ, ಇಂಥ ದುರ್ಘಟನೆಗೆ ಆರ್​ಸಿಬಿ ನೇರ ಹೊಣೆ ಎಂದು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಟಿ-20 ವಿಶ್ವಕಪ್ ಪಂದ್ಯಗಳನ್ನ ನಡೆಸಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಯು ಸೆಪ್ಟೆಂಬರ್ 30 ರಿಂದ ಆರಂಭವಾಗಲಿದೆ. ವಿಶ್ವಕಪ್ ಉದ್ಘಾಟನೆಯು ಬೆಂಗಳೂರಿನಲ್ಲಿ ನಡೆಯಬೇಕಿತ್ತು.  

ಇದನ್ನೂ ಓದಿ:ಮುಂಬೈ ತಂಡದ ಬಲಿಷ್ಠ ಬ್ಯಾಟರ್ ಮೇಲೆ ಕಣ್ಣಿಟ್ಟ ಆರ್​ಸಿಬಿ.. ಡೀಲ್​​ಗಾಗಿ ಫ್ರಾಂಚೈಸಿ ಮಾತುಕತೆ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Women’s ODI World Cup 2025 Women's World Cup
Advertisment