ಮುಂಬೈ ತಂಡದ ಬಲಿಷ್ಠ ಬ್ಯಾಟರ್ ಮೇಲೆ ಕಣ್ಣಿಟ್ಟ ಆರ್​ಸಿಬಿ.. ಡೀಲ್​​ಗಾಗಿ ಫ್ರಾಂಚೈಸಿ ಮಾತುಕತೆ..?

ಸೀಸನ್​​-18ರ ಐಪಿಎಲ್​ ಮುಗಿದು ಜಸ್ಟ್​ 2 ತಿಂಗಳಾಗ್ತಿದೆ. ಸೀಸನ್​​-19ರ ಆರಂಭಕ್ಕೆ 8 ತಿಂಗಳಿದೆ. ಮಿನಿ ಹರಾಜು ನಡೆಯಲು 4 ತಿಂಗಳು ಬಾಕಿಯಿದೆ. ಸೀಸನ್​​-19ಕ್ಕೆ ಬಲಾಢ್ಯ ತಂಡಗಳ ಕಟ್ಟುವ ಫ್ರಾಂಚೈಸಿಗಳ ಕಾರ್ಯ ಮಾತ್ರ ಈಗಾಗಲೇ ಆರಂಭಗೊಂಡಿವೆ.

author-image
Ganesh
Rajat patidar

ರಜತ್ ಪಾಟೀದಾರ್, ಆರ್​ಸಿಬಿ ಕ್ಯಾಪ್ಟನ್ Photograph: (ಆರ್​ಸಿಬಿ ಟ್ವಿಟರ್)

Advertisment

ಸೀಸನ್​​-18ರ ಐಪಿಎಲ್​ ಮುಗಿದು ಜಸ್ಟ್​ 2 ತಿಂಗಳಾಗ್ತಿದೆ. ಸೀಸನ್​​-19ರ ಆರಂಭಕ್ಕೆ 8 ತಿಂಗಳಿದೆ. ಮಿನಿ ಹರಾಜು ನಡೆಯಲು 4 ತಿಂಗಳು ಬಾಕಿಯಿದೆ. ಸೀಸನ್​​-19ಕ್ಕೆ ಬಲಾಢ್ಯ ತಂಡಗಳ ಕಟ್ಟುವ ಫ್ರಾಂಚೈಸಿಗಳ ಕಾರ್ಯ ಮಾತ್ರ ಈಗಾಗಲೇ ಆರಂಭಗೊಂಡಿವೆ.   ಟ್ರೇಡಿಂಗ್ ವಿಂಡೋ ಮೂಲಕ ನೆಚ್ಚಿನ ಆಟಗಾರನ ತಂಡಕ್ಕೆ ಕರೆತರಲು ತೆರೆ ಹಿಂದೆ ನಾನಾ ಕಸರತ್ತುಗಳು ನಡೀತಿವೆ.

ಆರ್​ಸಿಬಿಗೆ ತಿಲಕ್ ವರ್ಮಾ..!

ತಿಲಕ್ ವರ್ಮ, ಮುಂಬೈ ಇಂಡಿಯನ್ಸ್​ ಪಾಕೆಟ್ ಡೈನಾಮೆಟ್. ಈತ ಸಿಡಿದ್ರೆ ಎದುರಾಳಿ ಖಲ್ಲಾಸ್ ಆಗ್ತಾನೆ. ಮುಂಬೈನ ನಂಬಿಕಸ್ಥ ಬ್ಯಾಟರ್​​ಗಳಲ್ಲಿ ಈತನೂ ಒಬ್ಬ. ಆದ್ರೆ, ಮುಂಬೈ ಇಂಡಿಯನ್ಸ್ ತಂಡದ ಈ ಎರಡಗೈ ಬಂಟ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಸೇರ್ತಾರೆ ಎನ್ನಲಾಗ್ತಿದೆ. 

ಇದನ್ನೂ ಓದಿ:RCB ಕ್ಯಾಪ್ಟನ್​ ಮಿಸ್ಟೇಕ್​.. ದಿನಸಿ ಅಂಗಡಿ ಯುವಕರಿಗೆ ಟಾರ್ಚರ್​ ಕೊಟ್ಟ ಕೊಹ್ಲಿ, ಎಬಿಡಿ

Tilak varma
ತಿಲಕ್ ವರ್ಮಾ

ಇದಕ್ಕೆ ಕಾರಣ ನಂಬರ್​​ 3 ಸ್ಲಾಟ್​! ಯಾಕಂದ್ರೆ ಕಳೆದ ಸೀಸನ್​​ನಲ್ಲಿ ಚಾಂಪಿಯನ್ ಆರ್​ಸಿಬಿ ಕೊಂಚ ಹಿನ್ನಡೆ ಎದುರಾಗಿದ್ದು 3ನೇ ಕ್ರಮಾಂಕದ ಬ್ಯಾಟಿಂಗ್. ಹೀಗಾಗಿ ಈತನ ಟ್ರೇಡ್​ ಮಾಡಿದ್ರೆ, ಆರ್​ಸಿಬಿಯ ಟಾಪ್ ಆರ್ಡರ್​ ಮತ್ತಷ್ಟು ಸಾಲಿಡ್ ಆಗುತ್ತೆ ಅನ್ನೋದು ಆರ್​ಸಿಬಿ ಲೆಕ್ಕಾಚಾರ!

ಸೀಸನ್​​-19ಕ್ಕೆ ಬರೋಬ್ಬರಿ 9 ತಿಂಗಳು ಬಾಕಿಯಿದೆ. 9 ತಿಂಗಳು ಮುನ್ನವೇ ಬಲಾಢ್ಯ ತಂಡಗಳ ಕಟ್ಟುವ ಕಸರತ್ತಿನಲ್ಲಿ ಎಲ್ಲಾ ಟೀಮ್ಸ್​ ರೆಡಿಯಾಗಿವೆ. ಇದಕ್ಕಾಗಿ ವಿಂಡೋ ಟ್ರೇಡಿಂಗ್ ಮೂಲಕ ಸ್ಟಾರ್ ಆಟಗಾರರ ಮೇಲೆ ಕಣ್ಣಿಡ್ತಿದೆ. 

ಇದನ್ನೂ ಓದಿ: ಕ್ರಿಕೆಟ್​ ಫ್ಯಾನ್ಸ್​ಗೆ ಶಾಕಿಂಗ್ ನ್ಯೂಸ್​.. ಕಿಂಗ್ ಕೊಹ್ಲಿ, ರೋಹಿತ್​ ಶರ್ಮಾಗೆ ಮುಹೂರ್ತ ಇಟ್ರಾ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Tilak Varma Tilak Varma RCB
Advertisment