Advertisment

RCB ಕ್ಯಾಪ್ಟನ್​ ಮಿಸ್ಟೇಕ್​.. ದಿನಸಿ ಅಂಗಡಿ ಯುವಕರಿಗೆ ಟಾರ್ಚರ್​ ಕೊಟ್ಟ ಕೊಹ್ಲಿ, ಎಬಿಡಿ! ​

ಕೊಹ್ಲಿ, ಎಬಿಡಿ ಇವರಿಗೆ ನಿಜವಾಗಿಯೂ ಕರೆ ಮಾಡಿದ್ದರು. ಆದ್ರೆ, ಇದನ್ನ ಸೀರಿಯಸ್ ಆಗಿ ತೆಗೆದುಕೊಳ್ಳದ ಇವರು, ಫ್ರಾಂಕ್ ಕಾಲ್ ಅಂತಾ ಸುಮ್ಮನಾಗಿದ್ದರು. ಕರೆಗಳನ್ನ ಸ್ವೀಕರಿಸಿ ಯುವಕರಿಗೆ ಕಿರಿಕಿರಿ ಶುರುವಾಗಿತ್ತು.

author-image
Bhimappa
ABD_VIRAT_KOHLI
Advertisment

ಕಾಮನ್​ ಆಗಿ ನಾವು, ನೀವು ನಮ್ ಫ್ರೆಂಡ್ಸ್​ಗೆ ಫ್ರಾಂಕ್ ಕಾಲ್ ಮಾಡುತ್ತಿರುತ್ತೇವೆ. ಹೊಸ ನಂಬರ್ ತಗೊಂಡ ಮೇಲೆ ಕೆಲ ಸ್ನೇಹಿತರು ಸುಖಾಸುಮ್ಮನೆ ಕಾಟ ಕೊಡ್ತಾರೆ. ಮಿಮಿಕ್ರಿ ಮಾಡುತ್ತಾ ಕಾಲ್ ಎಳೆಯುತ್ತಾರೆ. ಹೀಗೆ ಹೊಸ ಸಿಮ್ ತಗೊಂಡ ಒಬ್ಬರಿಗೆ ವಿರಾಟ್ ಕೊಹ್ಲಿ, ಎಬಿಡಿ ಪೋನ್ ಮಾಡಿದ್ರೆ ಏನ್​ ಆಗಬೇಡ. ಹೀಗೆ ಯಾಕೆ ಹೇಳ್ತಿದ್ದೀವಿ ಅಂತೀರಾ?. 

Advertisment

ಇವರ ಹೆಸರು ಮನೀಶ್ ಹಾಗೂ ಖೇಮರಾಜ್. ಛತ್ತೀಸ್‌ಗಢದ ಗರಿಯಾಬಂದ್​​ನ ದಿನಸಿ ಅಂಗಡಿ ಮಾಲೀಕರು. ಅವರಾಯಿತು, ಅವರ ವ್ಯಾಪಾರ ಆಯ್ತು ಅಂತ ಇದ್ದವರು. ಇಂಥಹವರಿಗೆ ಕಿಂಗ್​ ವಿರಾಟ್​ ಕೊಹ್ಲಿ, ಸೌತ್ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್​ ಕಾಲ್ ಮಾಡ್ತಾರೆ ಅಂದ್ರೆ ನಂಬ್ತಿರಾ?, ಇಲ್ಲ ಅಲ್ವಾ?. ಆದ್ರೆ, ಇವರಿಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಪೋನ್ ಮಾಡಿದ್ದು ನಿಜ. 

ABD_VIRAT

ಕೊಹ್ಲಿ, ಎಬಿಡಿ ಇವರಿಗೆ ನಿಜವಾಗಿಯೂ ಕರೆ ಮಾಡಿದ್ದರು. ಆದ್ರೆ, ಇದನ್ನ ಸೀರಿಯಸ್ ಆಗಿ ತೆಗೆದುಕೊಳ್ಳದ ಇವರು, ಫ್ರಾಂಕ್ ಕಾಲ್ ಅಂತಾ ಸುಮ್ಮನಾಗಿದ್ದರು. ಕರೆಗಳನ್ನ ಸ್ವೀಕರಿಸಿ ಯುವಕರಿಗೆ ಕಿರಿಕಿರಿ ಶುರುವಾಗಿತ್ತು. ಆದ್ರೀಗ ಇವರು, ಈಗ ಖುಷಿಯಲ್ಲಿ ತೇಲಾಡ್ತಿದ್ದಾರೆ. ಯಾಕಂದ್ರೆ ನಮಗೆ ಕರೆ ಮಾಡಿದ್ದು, ನಿಜವಾದ ವಿರಾಟ್​ ಕೊಹ್ಲಿ, ಮಿಸ್ಟರ್​ 360 ಎಬಿಡಿ ಅನ್ನೋದು ಇವ್ರಿಗೆ ಈಗ ಗೊತ್ತಾಗಿದೆ.

ಅಸಲಿಗೆ ನಡೆದಿದ್ದೇನು..? ರಜತ್ ನಂಬರ್ ಸಿಕ್ಕಿದ್ದೇಗೆ..?

ಅರೇ ಒಬ್ಬ ದಿನಸಿ ಅಂಗಡಿ ವ್ಯಾಪಾರಿಗೆ ಕೊಹ್ಲಿ, ಎಬಿಡಿ ಕರೆ ಯಾಕ್ ಮಾಡಿದರು ಅನ್ನೋ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಇದಕ್ಕೆಲ್ಲಾ ಮೂಲಕ ಕಾರಣವೇ ಆರ್​ಸಿಬಿ ನಾಯಕ ರಜತ್​ ಪಟಿದಾರ್​. ಆರ್​​​ಸಿಬಿ ಕ್ಯಾಪ್ಟನ್​​ ರಜತ್ ಪಾಟಿದಾರ್ ಮಾಡಿದ ಒಂದೇ ಒಂದು ಯಡವಟ್ಟು, ಈ ಯುವಕರಿಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​ ಫೋನ್ ಬರುವಂತೆ ಮಾಡಿತು. 

Advertisment

ವ್ಯಾಲಿಡಿಟಿ ಮುಗಿದ 90 ದಿನಗಳ ಕಾಲ ಯಾವುದೇ ನಂಬರ್​ಗೆ ರಿಚಾರ್ಜ್ ಮಾಡದಿದ್ರೆ, TRAI Act ಪ್ರಕಾರ ನೆಟ್​ ವರ್ಕ್​ ಸೇವೆ ನಿಲ್ಲಿಸುವ ಕಂಪನಿ, ಆ ಸಿಮ್ ಯಾರಿಗಾದರೂ ನೀಡುತ್ತೆ. ಆರ್​​ಸಿಬಿ ನಾಯಕ ರಜತ್​ ಪಾಟಿದಾರ್​ ಕೂಡ ಅಷ್ಟೇ ತಮ್ಮ ಹಳೆ ನಂಬರ್​ಗೆ ರೀಚಾರ್ಜ್​ ಮಾಡೋದನ್ನ ಮರೆತಿದ್ದರು. ಹೀಗಾಗಿ ಕಂಪನಿ ಆ ನಂಬರ್​ನ ಬೇರೆಯವರಿಗೆ ನೀಡಿತ್ತು. ಆ ಸಿಮ್​ ಖರೀದಿಸಿದ್ದೇ ಈ ಯುವಕರು.

ರಜತ್​ ಪಾಟಿದಾರ್​​​ಗೆ ನಾನು ಧೋನಿ ಎಂದಿದ್ದ ಯುವಕ​..!

ಹೊಸ ಸಿಮ್ ತೆಗೆದುಕೊಂಡ ಮೇಲೆ ಸುಮ್ಮನಿರ್ತೀವಾ..? ಅದಕ್ಕೊಂದು ವಾಟ್ಸಾಪ್ ಕ್ರಿಯೇಟ್ ಮಾಡ್ತೀವಿ. ಅದೇ ರೀತಿ ಇವ್ರು ಕೂಡ ವಾಟ್ಸಾಪ್ ಆಕ್ಟೀವೆಟ್ ಮಾಡಿಕೊಂಡಿದ್ದರು. ಆಗ ರಜತ್ ಪಾಟಿದಾರ್ ಪೋಟೋ ಸಹ ಕಂಡು ಬಂದಿತ್ತು. ಇಲ್ಲಿಂದಲೇ ಸಮಸ್ಯೆ ಶುರುವಾಯ್ತು. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​ರಂಥಹ ದಿಗ್ಗಜ ಆಟಗಾರರ ಕರೆಗಳು ಬಂದ್ವು. ಕಾಲ್ ಮಾಡಿದವರೆಲ್ಲ ರಜತ್ ಎಂತಾನೇ ಕರೆಯುತ್ತಿದ್ದರು. ಆದ್ರೆ, ಇವ್ರು ಇದು ಸ್ನೇಹಿತರೇ ಬೇಕಂತಲೇ ಮಾಡ್ತಿರೋ ಕೆಲಸ ಎಂದು ಸುಮ್ಮನಾಗಿದ್ದವರು.

ಇದನ್ನೂ ಓದಿ:ಧ್ರುವ ಸರ್ಜಾರಿಂದ ನನಗೆ ಮೆಂಟಲ್ ಟಾರ್ಚರ್​ ಬಂದಿದೆ- ನಿರ್ದೇಶಕ ರಾಘವೇಂದ್ರ ಹೆಗಡೆ

Advertisment

RAJATH_KOHLI

ಅಂತಿಮವಾಗಿ ಈ ಸುದ್ದಿ ರಜತ್ ಪಾಟಿದಾರ್ ಕಿವಿಗೆ ಬಿತ್ತು. ಆ ಬಳಿಕ ಎಚ್ಚೆತ್ತ ರಜತ್, ಮನೀಶ್​ಗೆ​ ಕರೆ ಮಾಡಿ ನಡೆದ ವಿಷಯ ತಿಳಿಸಿದ್ದಾರೆ. ಹಳೇ ನಂಬರ್ ಸಿಮ್ ಹಿಂತಿರುಗಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಫ್ರಾಂಕ್​ ಕಾಲ್​ ಅಂದುಕೊಂಡ ಮನೀಶ್​, ನಾನು ರಜತ್​​ ಎಂದ ಆರ್​​ಸಿಬಿ ನಾಯಕನಿಗೆ ನಾನು​ ಧೋನಿ ಎಂದು ಉತ್ತರ ನೀಡಿದ್ದ. 

ಸೈಬರ್ ಸೆಲ್​​ಗೆ ಕಂಪ್ಲೇಟ್​​.. ಅಖಾಡಕ್ಕಿಳಿದ ಪೋಲಿಸರು..!

ರಜತ್ ಪಾಟಿದಾರ್​ ಕರೆಯ ನಂತರವೂ ಇದ್ಯಾವುದೋ ಫ್ರಾಂಕ್ ಕಾಲ್ ಎಂದು ಮನೀಶ್, ಖೇಮರಾಜ್ ಸುಸ್ತಾಗಿದ್ದರು. ಬೇರೆ ದಾರಿ ಇಲ್ಲದೇ ರಜತ್ ಪಾಟಿದಾರ್​ ಮಧ್ಯಪ್ರದೇಶದ ಸೈಬರ್​​ ಸೆಲ್​​​ಗೆ ದೂರು ನೀಡಿದ್ದರು. ಆ ಬಳಿಕ ಗರಿಯಾಬಂದ್ ಪೊಲೀಸರು ಮನೀಶ್ ಮನೆಗೆ ಬಂದು ಘಟನೆ ಬಗ್ಗೆ ಮನದಟ್ಟು ಮಾಡಿದ ಪೋಲಿಸರು, ಸಿಮ್ ಪಡೆದು ಹಿಂತಿರುಗಿದ್ದಾರೆ. ಆ ಬಳಿಕವೇ ಯವಕರಿಗೆ ನಾವ್ ಮಾತನಾಡಿದ್ದು ಕೊಹ್ಲಿ, ಎಬಿಡಿ ಜೊತೆ ಎಂದು ಮನದಟ್ಟಾಗಿದೆ. ಸದ್ಯ ಖುಷಿಯಲ್ಲಿ ತೇಲಾಡಿದ್ದಾರೆ. ಕೊನೆಗೂ ರಜತ್​ ಪಾಟಿದಾರ್​ ಸಿಮ್​ ರಾಮಾಯಣ ಸುಖಾಂತ್ಯ ಕಂಡಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Rajat Patidar
Advertisment
Advertisment
Advertisment