/newsfirstlive-kannada/media/media_files/2025/08/11/kl_rahul_rohit_kohli-2025-08-11-14-35-03.jpg)
ರೋಹಿತ್ ಶರ್ಮಾ ಆ್ಯಂಡ್ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಜೋಡೆತ್ತು. ಜೊತೆಯಾಗಿ ಕ್ರಿಕೆಟ್ ಕರಿಯರ್ ಆರಂಭಿಸದಿದ್ರೂ, ಟಿ20, ಟೆಸ್ಟ್ ಕ್ರಿಕೆಟ್ ಕರಿಯರ್ಗೆ ಅಂತ್ಯವಾಡಿದ್ದು ಜೊತೆಯಾಗಿಯೇ. ಇದೀಗ ಏಕದಿನಕ್ಕೂ ಜೊತೆಯಾಗೇ ಗುಡ್ ಬೈ ಹೇಳ್ತಾರೆ ಎಂಬ ಅನುಮಾನ ಹುಟ್ಟಿದೆ. ಯಾಕಂದ್ರೆ, ಬಿಸಿಸಿಐ ಟೈಮ್ ಬಾಂಬ್ ಫಿಕ್ಸ್ ಮಾಡಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಮೋಸ್ಟ್ ಸಕ್ಸಸ್ಫುಲ್ ಬ್ಯಾಟ್ಸ್ಮನ್ಸ್ ಮಾತ್ರವಲ್ಲ. ಸಕ್ಸಸ್ಫುಲ್ ನಾಯಕರು. ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್‌ನ ಹಿಟ್ಮ್ಯಾನ್ ಆಗಿ ಗುರುತಿಸಿಕೊಂಡ್ರೆ. ವಿರಾಟ್, ವಿಶ್ವ ಕ್ರಿಕೆಟ್‌ನ ಕಿಂಗ್ ಆಗಿ ಮಿಂಚಿದ್ದಾರೆ. ಲೆಕ್ಕವಿಲ್ಲದಷ್ಟು ಮ್ಯಾಚ್ಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಇದೀಗ ಇವರ ಕ್ರಿಕೆಟ್ ಕರಿಯರ್ ಅಂತ್ಯಕ್ಕೆ ಬಂದು ನಿಂತಿದೆ.
/filters:format(webp)/newsfirstlive-kannada/media/media_files/2025/08/07/virat-kohli-rohit-sharma-2-2025-08-07-18-26-21.jpg)
ರೋಹಿತ್-ಕೊಹ್ಲಿ ಯುಗಾಂತ್ಯಕ್ಕೆ ಟೈಮ್ಬಾಂಬ್ ಫಿಕ್ಸ್..!
ದಿನದಿಂದ ದಿನಕ್ಕೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಭವಿಷ್ಯದ ಚರ್ಚೆಗಳೂ ಜೋರಾಗ್ತಿದೆ. ರೋಹಿತ್, ವಿರಾಟ್, 2027 ಏಕದಿನ ವಿಶ್ವಕಪ್ ತನಕ ಆಡ್ತಾರಾ..? ಇಲ್ವಾ ಎಂಬ ಟೆನ್ಶನ್ ಅಭಿಮಾನಿಗಳಲ್ಲಿ ಮನೆ ಮಾಡ್ತಾನೇ ಇದೆ. ಇಂಥಹ ಟೈಮ್ನಲ್ಲೇ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕಿವಿಗಪ್ಪಳಿಸಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕ್ರಿಕೆಟರ್ ಕರಿಯರ್ನ ಯುಗಾಂತ್ಯಕ್ಕೆ ಟೈಮ್ಬಾಂಬ್ ಫಿಕ್ಸಾಗಿದೆ. ಆಸ್ಟ್ರೇಲಿಯಾ ಸರಣಿ ಬೆನ್ನಲ್ಲೇ ಟೀಮ್ ಇಂಡಿಯಾದಿಂದ RO-KO ಔಟ್ ಆಗುವ ಎಲ್ಲಾ ಸಾಧ್ಯಗಳಿವೆ.
ಯುಗಾಂತ್ಯಕ್ಕೆ ಕೌಂಟ್ಡೌನ್ ಶುರು, ಆಸಿಸ್ ಸರಣಿಯೇ ಕೊನೆ..?
ಸದ್ಯ ಟಿ20, ಟೆಸ್ಟ್ನಿಂದ ದೂರ ಉಳಿದಿರುವ ವಿರಾಟ್, ರೋಹಿತ್, ಏಕದಿನ ತಂಡದಿಂದ ದೂರ ಉಳಿಯುವ ಸಮಯ ದೂರವೇನಿಲ್ಲ. ಯಾಕಂದ್ರೆ, 36 ವರ್ಷದ ವಿರಾಟ್ ಕೊಹ್ಲಿ, 38 ವರ್ಷದ ರೋಹಿತ್ ಸಂಧ್ಯಾಕಾಲದ ಹೊಸ್ತಿಲ್ಲಿಲ್ಲಿದ್ದಾರೆ. 2027ರ ಏಕದಿನ ವಿಶ್ವಕಪ್ ವೇಳೆಗೆ 40 ವರ್ಷ ವಯಸ್ಸಾಗಿರುತ್ತೆ. ಈ ಕಾರಣಕ್ಕೆ ಬಿಸಿಸಿಐ, ಭವಿಷ್ಯ ಹೊಸ ಟೀಮ್ ಕಟ್ಟುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಅಕ್ಟೋಬರ್ 19ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಇಂಪ್ಯಾಕ್ಟ್ ಫುಲ್ ಪರ್ಫಾಮೆನ್ಸ್ ನೀಡಬೇಕಿದೆ. ಇಲ್ಲ ಆಸಿಸ್ ಪ್ರವಾಸದ ಏಕದಿನ ಸರಣಿಯೇ ವಿರಾಟ್ ಹಾಗೂ ರೋಹಿತ್ ಶರ್ಮಾ ಪಾಲಿಗೆ ಕೊನೆಯಾದರು ಅಚ್ಚರಿ ಇಲ್ಲ.
ರೋಹಿತ್, ವಿರಾಟ್ ಕೊಹ್ಲಿಗೆ ಬಿಸಿಸಿಐ ಬಾಸ್ಗಳ ಷರತ್ತು..!
ರೋಹಿತ್, ವಿರಾಟ್ 2027ರ ಏಕದಿನ ವಿಶ್ವಕಪ್ ಕನಸಿನಲ್ಲಿದ್ದಾರೆ ನಿಜ. ಆದ್ರೆ, ಈ ಆಸೆಗೆ ಬಿಸಿಸಿಐ ತಣ್ಣೀರು ಎರಚಲು ಮುಂದಾಗಿದೆ. ಆಸ್ಟ್ರೇಲಿಯಾ ಸರಣಿ ನಂತರ ಸೈಡ್ಲೈನ್ ಮಾಡುವ ಉದ್ದೇಶ ಹೊಂದಿರುವ ಬಿಸಿಸಿಐ, ವಿಜಯ ಹಜಾರೆ ಟ್ರೋಫಿಯನ್ನಾಡಲು ಸೂಚಿಸಿದೆ. ಮುಂದಿನ ಏಕದಿನ ಹಾಗೂ 2027ರ ಏಕದಿನ ವಿಶ್ವಕಪ್ಗೆ ಪರಿಗಣಿಸಬೇಕಾದ್ರೆ, ಡಿಸೆಂಬರ್ನಲ್ಲಿ ಆರಂಭವಾಗಲಿರುವ ವಿಜಯ್ ಹಜಾರೆಯಲ್ಲಿ ರನ್ಗಳಿಸೋದ್ರ ಜೊತೆಗೆ ಫಿಟ್‌ನೆಸ್, ಫಾರ್ಮ್ ಕಾಪಾಡಿಕೊಳ್ಳುವ ಷರತ್ತು ಹಾಕಿದೆ. ಹಾಗಾಗಿ, ಆಸ್ಟ್ರೇಲಿಯಾ ಪ್ರವಾಸದ ನಂತರ ರೋಹಿತ್, ವಿರಾಟ್ ಮತ್ತೆ ಏಕದಿನ ತಂಡಕ್ಕೆ ಕಮ್ಬ್ಯಾಕ್ ಮಾಡಬೇಕಾದ್ರೆ. ವಿಜಯ್ ಹಜಾರೆ ಅಗ್ನಿಪರೀಕ್ಷೆ ಗೆಲ್ಲಬೇಕಿದೆ.
ಇದನ್ನೂ ಓದಿ:Asia Cup 2025; ಟೀಮ್ ಇಂಡಿಯಾ ಓಪನರ್ ಸ್ಲಾಟ್ಗೆ ಕನ್ನಡಿಗ ಸೇರಿ 7 ಪ್ಲೇಯರ್ಸ್ ಪೈಪೋಟಿ.. ಯಾರಿಗೆ ಚಾನ್ಸ್?
/filters:format(webp)/newsfirstlive-kannada/media/media_files/2025/08/07/virat-kohli-rohit-sharma-2025-08-07-18-20-17.jpg)
ಅಪಮಾನಕ್ಕೆ ಶಾಕ್ ಕೊಡ್ತಾರಾ ರೋಹಿತ್, ವಿರಾಟ್ ಕೊಹ್ಲಿ..?
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮಾಡ್ರನ್ ಡೇ ಕ್ರಿಕೆಟ್‌ನ ಶ್ರೇಷ್ಠ ಆಟಗಾರರು. ಆದ್ರೆ, ಈ ಶ್ರೇಷ್ಠ ಆಟಗಾರರ ವಿಚಾರದಲ್ಲಿ ಬಿಸಿಸಿಐನ ಚದುರಂಗದ ಆಟ ಫ್ಯಾನ್ಸ್ಗೆ ಬೇಸರ ತರಿಸಿದೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾಕ್ಕಾಗಿ ಟನ್ ಗಟ್ಟಲೇ ರನ್ ಗಳಿಸಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ಗೆ ಪರೋಕ್ಷ ಅಪಮಾನ ಮಾಡ್ತಿದೆ. ಹೀಗಾಗಿ ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನ ಟೆಸ್ಟ್ ಸರಣಿಗೆ ಗುಡ್ ಬೈ ಹೇಳಿದಂತೆ, ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ಕ್ರಿಕೆಟ್ಗೆ ಗುಡ್ ಬೈ ಹೇಳಿ ಶಾಕ್ ಕೊಡ್ತಾರಾ ಎಂಬ ಅನುಮಾನವೂ ಇದ್ಧೇ ಇದೆ.
ರೋಹಿತ್-ವಿರಾಟ್ ಶ್ರೇಷ್ಠ ಆಟಗಾರರು ಅನ್ನೋದ್ರಲ್ಲಿ ಡೌಟಿಲ್ಲ. ಆದ್ರೆ, transaction ನೆಪದಲ್ಲಿ, ಭವಿಷ್ಯದ ತಂಡದ ಕಟ್ಟುವ ನೆಪದಲ್ಲಿ ದಿಗ್ಗಜರನ್ನು ಸೈಡ್ ಲೈನ್ ಮಾಡಲು ಮುಂದಾಗಿರುವುದು ನಿಜಕ್ಕೂ ಬೇಸರದ ಸಂಗತಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ