/newsfirstlive-kannada/media/media_files/2025/08/11/rajat-patidar-sim-card-2-2025-08-11-21-02-58.jpg)
ಕಾಮನ್ ಆಗಿ ನಾವು, ನೀವು ಫ್ರೆಂಡ್ಸ್ಗೆ ಫ್ರಾಂಕ್ ಕಾಲ್ ಮಾಡ್ತೀವಿ. ಹೊಸ ನಂಬರ್ ತಗೊಂಡ ಮೇಲೆ ಕೆಲ ಸ್ನೇಹಿತರು ಸುಖಾಸುಮ್ಮನೆ ಕಾಟ ಕೊಡ್ತಾರೆ. ಮಿಮಿಕ್ರಿ ಮಾಡುತ್ತ ಕಾಲ್ ಎಳೆಯುತ್ತಾರೆ. ಹೀಗೆ ಹೊಸ ಸಿಮ್ ತಗೊಂಡ ಒಬ್ಬರಿಗೆ ಕೊಹ್ಲಿ, ಎಬಿಡಿ ಫೋನ್ ಮಾಡಿದ್ರೆ ಏನ್ ಆಗಬೇಡ!
ಇದನ್ನೂ ಓದಿ:ಒಂದೇ ಕಲ್ಲಲ್ಲಿ 3 ಹಕ್ಕಿ ಹೊಡೆಯಲು KKR ಪ್ಲಾನ್.. ಕನ್ನಡಿಗ ರಾಹುಲ್ ಮನಸ್ಸು ಮಾಡಬೇಕಷ್ಟೇ..!
ಮನೀಶ್ ಹಾಗೂ ಖೇಮರಾಜ್. ಛತ್ತೀಸ್‌ಗಢದ ಗರಿಯಾಬಂದ್ನ ದಿನಸಿ ಅಂಗಡಿ ಮಾಲೀಕರು. ಅವರಾಯ್ತು, ಅವರ ವ್ಯಾಪಾರ ಆಯ್ತು ಅಂತ ಇದ್ದವರು. ಇಂತವರಿಗೆ ಕೊಹ್ಲಿ, ಸೌತ್ ಆಫ್ರಿಕಾದ ದಿಗ್ಗಜ ಎಬಿಡಿ ಕಾಲ್ ಮಾಡ್ತಾರೆ ಅಂದ್ರೆ ನಂಬ್ತಿರಾ? ಇಲ್ಲ ಅಲ್ವಾ? ಆದ್ರೆ ಇವರಿಗೆ ಕೊಹ್ಲಿ, ಎಬಿಡಿ ಫೋನ್ ಮಾಡಿದ್ದು ನಿಜ!
ಕೊಹ್ಲಿ, ಎಬಿಡಿ ಇವರಿಗೆ ನಿಜವಾಗಿಯೂ ಕರೆ ಮಾಡಿದ್ರು. ಸೀರಿಯಸ್ ಆಗಿ ತೆಗೆದುಕೊಳ್ಳದ ಇವರು, ಫ್ರಾಂಕ್ ಕಾಲ್ ಅಂತಾ ಸುಮ್ಮನಾಗಿದ್ರು. ಕರೆಗಳನ್ನ ಸ್ವೀಕರಿಸಿ ಯುವಕರಿಗೆ ಕಿರಿಕಿರಿ ಶುರುವಾಗಿತ್ತು. ಆದ್ರೀಗ ಇವರು ಈಗ ಖುಷಿಯಲ್ಲಿ ತೇಲಾಡ್ತಿದ್ದಾರೆ. ಯಾಕಂದ್ರೆ ನಮಗೆ ಕರೆ ಮಾಡಿದ್ದು, ನಿಜವಾದ ಕೊಹ್ಲಿ, ಮಿಸ್ಟರ್ 360 ಎಬಿಡಿ ಅನ್ನೋದು ಈಗ ಗೊತ್ತಾಗಿದೆ.
ದಿನಸಿ ಅಂಗಡಿ ವ್ಯಾಪರಿ ಬಳಿ ಪಾಟೀದಾರ್ ನಂಬರ್
ಒಬ್ಬ ದಿನಸಿ ಅಂಗಡಿ ವ್ಯಾಪಾರಿಗೆ ಕೊಹ್ಲಿ, ಎಬಿಡಿ ಕರೆ ಯಾಕ್ ಮಾಡಿದ್ರು ಅನ್ನೋ ಪ್ರಶ್ನೆ ನಿಮ್ಮಲ್ಲಿರಬಹುದು. ಇದಕ್ಕೆಲ್ಲಾ ಮೂಲ ಕಾರಣವೇ ಆರ್ಸಿಬಿ ನಾಯಕ ರಜತ್ ಪಟಿದಾರ್. ಪಾಟೀದಾರ್ ಮಾಡಿದ ಒಂದೇ ಒಂದು ಯಡವಟ್ಟು ಯುವಕರಿಗೆ ಫೋನ್ ಬರುವಂತೆ ಮಾಡಿದೆ.
ಇದನ್ನೂ ಓದಿ: ಮತ್ತೊಂದು ಕ್ಷೇತ್ರಕ್ಕೆ ಹೆಜ್ಜೆಯಿಟ್ಟ ಧೋನಿ.. ಈ ಬಾರಿ MSD ಟಾರ್ಗೆಟ್ ಏನು..?
ವ್ಯಾಲಿಡಿಟಿ ಮುಗಿದ 90 ದಿನಗಳ ಕಾಲ ಯಾವುದೇ ನಂಬರ್ಗೆ ರಿಚಾರ್ಜ್ ಮಾಡದಿದ್ರೆ, TRAI Act ಪ್ರಕಾರ ನೆಟ್ ವರ್ಕ್ ಸೇವೆ ನಿಲ್ಲಿಸುವ ಕಂಪನಿ, ಆ ಸಿಮ್ ಯಾರಿಗಾದ್ರೂ ನೀಡುತ್ತೆ. ಆರ್ಸಿಬಿ ನಾಯಕ ರಜತ್ ಪಾಟಿದಾರ್ ಕೂಡ ಅಷ್ಟೇ ತಮ್ಮ ಹಳೆ ನಂಬರ್ಗೆ ರೀಚಾರ್ಜ್ ಮಾಡೋದನ್ನ ಮರೆತಿದ್ರು. ಹೀಗಾಗಿ ಕಂಪನಿ ಆ ನಂಬರ್ನ ಬೇರೆಯವರಿಗೆ ನೀಡಿತ್ತು. ಆ ಸಿಮ್ ಖರೀದಿಸಿದ್ದೇ ಈ ಯುವಕರು.
ಸಿಮ್ ಖರೀದಿಸಿದ ವ್ಯಾಪಾರಿಗೆ ಸಮಸ್ಯೆ
ಹೊಸ ಸಿಮ್ ತೆಗೆದುಕೊಂಡ ಮೇಲೆ ಸುಮ್ಮನಿರ್ತೀವಾ? ಅದಕ್ಕೊಂದು ವಾಟ್ಸಾಪ್ ಕ್ರಿಯೇಟ್ ಮಾಡ್ತೀವಿ. ಅದೇ ರೀತಿ ಇವ್ರು ಕೂಡ ವಾಟ್ಸಾಪ್ ಆಕ್ಟೀವೆಟ್ ಮಾಡಿಕೊಂಡಿದ್ರು. ಆಗ ರಜತ್ ಪಾಟೀದಾರ್ ಫೋಟೋ ಸಹ ಕಂಡು ಬಂದಿತ್ತು. ಇಲ್ಲಿಂದಲೇ ಸಮಸ್ಯೆ ಶುರುವಾಯ್ತು. ಕೊಹ್ಲಿ, ಎಬಿ ಡಿವಿಲಿಯರ್ಸ್ರಂಥಹ ದಿಗ್ಗಜ ಆಟಗಾರರ ಕರೆಗಳು ಬಂದ್ವು. ಕಾಲ್ ಮಾಡಿದವರೆಲ್ಲ ರಜತ್ ಎಂಥಾನೇ ಕರೆಯುತ್ತಿದ್ದರು. ಇವ್ರು ಇದು ಸ್ನೇಹಿತರೇ ಬೇಕಂತಲೇ ಮಾಡ್ತಿರೋ ಕೆಲಸ ಎಂದು ಸುಮ್ಮನಾಗಿದ್ದವರು.
ಇದನ್ನೂ ಓದಿ:ಕ್ರಿಕೆಟ್ ಫ್ಯಾನ್ಸ್ಗೆ ಶಾಕಿಂಗ್ ನ್ಯೂಸ್.. ಕಿಂಗ್ ಕೊಹ್ಲಿ, ರೋಹಿತ್ ಶರ್ಮಾಗೆ ಮುಹೂರ್ತ ಇಟ್ರಾ?
/filters:format(webp)/newsfirstlive-kannada/media/media_files/2025/08/11/rajat-patidar-2025-08-11-18-42-24.jpg)
ಅಂತಿಮವಾಗಿ ಈ ಸುದ್ದಿ ರಜತ್ ಕಿವಿಗೆ ಬಿತ್ತು. ಆ ಬಳಿಕ ಎಚ್ಚೆತ್ತ ರಜತ್, ಮನೀಶ್ಗೆ ಕರೆ ಮಾಡಿ ನಡೆದ ವಿಷಯ ತಿಳಿಸಿದ್ದಾರೆ. ಹಳೇ ನಂಬರ್ ಸಿಮ್ ಹಿಂತಿರುಗಿಸುವಂತೆ ಮನವಿ ಮಾಡಿದ್ದಾರೆ. ಫ್ರಾಂಕ್ ಕಾಲ್ ಅಂದುಕೊಂಡ ಮನೀಶ್, ನಾನು ರಜತ್ ಎಂದ ಆರ್ಸಿಬಿ ನಾಯಕನಿಗೆ ನಾನು ಧೋನಿ ಎಂದು ಉತ್ತರ ನೀಡಿದ್ದ.
ಫ್ರಾಂಕ್ ಕಾಲ್ ಎಂದು ನಕ್ಕಿದ್ದವರಿಗೆ ಶಾಕ್!
ರಜತ್ ಪಾಟಿದಾರ್ ಕರೆಯ ನಂತರವೂ ಇದ್ಯಾವುದೋ ಫ್ರಾಂಕ್ ಕಾಲ್ ಎಂದು ಮನೀಶ್, ಖೇಮರಾಜ್ ಸುಸ್ತಾಗಿದ್ದರು. ಬೇರೆ ದಾರಿ ಇಲ್ಲದೇ ಪಾಟಿದಾರ್ ಮಧ್ಯಪ್ರದೇಶದ ಸೈಬರ್ ಸೆಲ್ಗೆ ದೂರು ನೀಡಿದ್ರು. ಆ ಬಳಿಕ ಗರಿಯಾಬಂದ್ ಪೊಲೀಸರು ಮನೀಶ್ ಮನೆಗೆ ಬಂದು ಘಟನೆ ಬಗ್ಗೆ ಮನದಟ್ಟು ಮಾಡಿದ ಪೋಲಿಸರು, ಸಿಮ್ ಪಡೆದು ಹಿಂತಿರುಗಿದ್ದಾರೆ. ಆ ಬಳಿಕವೇ ಯವಕರಿಗೆ ನಾವ್ ಮಾತನಾಡಿದ್ದು ಕೊಹ್ಲಿ, ಎಬಿಡಿ ಜೊತೆ ಎಂದು ಮನದಟ್ಟಾಗಿದೆ. ಸದ್ಯ ಖುಷಿಯಲ್ಲಿ ತೇಲಾಡಿದ್ದಾರೆ. ಕೊನೆಗೂ ರಜತ್ ಪಾಟಿದಾರ್ ಸಿಮ್ ರಾಮಾಯಣ ಸುಖಾಂತ್ಯ ಕಂಡಿದೆ.
ಇದನ್ನೂ ಓದಿ:ಮುಂಬೈ ತಂಡದ ಬಲಿಷ್ಠ ಬ್ಯಾಟರ್ ಮೇಲೆ ಕಣ್ಣಿಟ್ಟ ಆರ್ಸಿಬಿ.. ಡೀಲ್ಗಾಗಿ ಫ್ರಾಂಚೈಸಿ ಮಾತುಕತೆ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ