/newsfirstlive-kannada/media/media_files/2025/08/04/kl-rahul-delhi-capitals-2025-08-04-09-53-03.jpg)
ಕೆ.ಎಲ್.ರಾಹುಲ್
ಸೀಸನ್-19ಕ್ಕೆ ಬರೋಬ್ಬರಿ 9 ತಿಂಗಳು ಬಾಕಿಯಿದೆ. ಆದ್ರೆ 9 ತಿಂಗಳು ಮುನ್ನವೇ ಬಲಾಢ್ಯ ತಂಡಗಳ ಕಟ್ಟುವ ಕಸರತ್ತಿನಲ್ಲಿ ಎಲ್ಲಾ ಟೀಮ್ಸ್ ರೆಡಿಯಾಗಿವೆ. ಇದಕ್ಕಾಗಿ ವಿಂಡೋ ಟ್ರೇಡಿಂಗ್ ಮೂಲಕ ಸ್ಟಾರ್ ಆಟಗಾರರ ಮೇಲೆ ಕಣ್ಣಿಡ್ತಿದೆ. ಯಾರ ಕಣ್ಣು ಯಾರ ಮೇಲಿದೆ. ಐಪಿಎಲ್ ಅಂಗಳದಲ್ಲಿ ಏನೆಲ್ಲಾ ರೂಮರ್ಸ್ ಹರಿದಾಡ್ತಿದೆ ಅನ್ನೋ ವಿವರ ಇಲ್ಲಿದೆ.
ಒಂದ್ಕಡೆ ಸಂಜು ಸ್ಯಾಮ್ಸನ್, ಆರ್ಆರ್ ತೊರೆಯುವ ಸುದ್ದಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಈ ಸುದ್ದಿಯ ನಡುವೆಯೇ ಇನ್ನಿತರ ಆಟಗಾರರ ವಿಂಡೋ ಟ್ರೇಡಿಂಗ್ಗಳ ರೂಮರ್ಸ್ ಭಾರೀ ಸದ್ದು ಮಾಡ್ತಿವೆ. ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿರುವ ಟೀಮ್ಗಳು, ಮ್ಯಾಚ್ ವಿನ್ನರ್ಗಳನ್ನೇ ತಂಡಕ್ಕೆ ಸೆಳೆಯುವ ಯತ್ನದಲ್ಲಿವೆ.
KL ರಾಹುಲ್ ಮೇಲೆ ಕೊಲ್ಕತ್ತಾ ಆಸಕ್ತಿ
ಐಪಿಎಲ್ನ ಹಾಟ್ ರೂಮರ್ಗಳಲ್ಲಿ ಕೆ.ಎಲ್.ರಾಹುಲ್, ಟ್ರೇಡಿಂಗ್ ಒಂದಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ನಲ್ಲಿರುವ ಕನ್ನಡಿಗನ ಮೇಲೆ ಭಾರೀ ಒಲವು ಹೊಂದಿರುವ ಕೊಲ್ಕತ್ತಾ, ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್ ಮೂಲಕ ತಂಡಕ್ಕೆ ಕರೆತರುವ ಯತ್ನದಲ್ಲಿದೆ. ಇದಕ್ಕಾಗಿ ಕೆ.ಎಲ್.ರಾಹುಲ್ಗೆ ನಾಯಕತ್ವದ ಆಫರ್ ನೀಡಿದೆ ಎನ್ನಲಾಗ್ತಿದೆ. ಆ ಮೂಲಕ ವಿಕೆಟ್ ಕೀಪರ್, ಓಪನರ್, ಕ್ಯಾಪ್ಟನ್ಸಿ ಸ್ಥಾನಕ್ಕೆ ರಿಪ್ಲೇಸ್ಮೆಂಟ್ ಮಾಡಿಕೊಳ್ಳುವ ಲೆಕ್ಕಚಾರ ಹೊಂದಿರುವ ಕೆಕೆಆರ್, ಒಂದೇ ಕಲ್ಲಲಿ ಮೂರು ಪ್ರಾಬ್ಮ್ಸ್ಗೆ ಮದ್ದು ಮಾಡಿಕೊಳ್ಳುವ ಕನಸಿನಲ್ಲಿದೆ.
ಇದನ್ನೂ ಓದಿ: ಕೊಹ್ಲಿ, ರೋಹಿತ್ಗೆ ಬಿಸಿಸಿಐ ಶಾಕ್.. ದಿಗ್ಗಜರ ODI ವಿಶ್ವಕಪ್ ಆಡುವ ಕನಸು ಭಗ್ನ..?
ಅದೇ ರೀತಿ ರಾಜಸ್ತಾನ್ ರಾಯಲ್ಸ್ ತಂಡದ ನಿತಿಶ್ ರಾಣಾ, ಮತ್ತೆ ಕೆಕೆಆರ್ ಸೇರ್ತಾರಾ..? ಕೆಕೆಆರ್ನ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್ ಕ್ವಿಂಟನ್ ಡಿಕಾಕ್, ಆರ್ಆರ್ ಸೇರ್ತಾರಾ..? ಇಂಥದ್ದೊಂದು ಪ್ರಶ್ನೆಯೂ ಐಪಿಎಲ್ ವಲಯದಲ್ಲಿ ಓಡಾಡ್ತಿದೆ. ಹಲವು ವರ್ಷಗಳಿಂದ ಕೊಲ್ಕತ್ತಾದಲ್ಲೇ ಇದ್ದ ನಿತಿಶ್ ರಾಣಾ, ಕನ್ಸಿಸ್ಟೆನ್ಸಿ ಪ್ರದರ್ಶನ ನೀಡಿದ್ರು. ಆದ್ರೆ, ನಿತಿಶ್ ರಾಣಾ ಅಲಭ್ಯತೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಕೆಕೆಆರ್, ಮರಳಿ ತಂಡಕ್ಕೆ ಸೆಳೆಯುವ ಯತ್ನದಲ್ಲಿದೆ.
ಇದಕ್ಕಾಗಿ ಕ್ವಿಂಟನ್ ಡಿಕಾಕ್ ಎಂಬ ಗಾಳ ಹಾಕ್ತಿದ್ಯಂತೆ.. ಯಾಕಂದ್ರೆ, ಸಂಜು ಸ್ಯಾಮ್ಸನ್ ಆರ್ಆರ್ ತೊರೆಯಲು ಮುಂದಾಗ್ತಿದ್ದಾರೆ. ಹೀಗಾಗಿ ಕ್ವಿಂಟನ್ ಡಿಕಾಕ್ ಅಸ್ತ್ರದೊಂದಿಗೆ ಪ್ರಯೋಗಿಸಲು ಮುಂದಾಗಿದ್ದು, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದು ಕಾದುನೋಡಬೇಕಿದೆ.
ಇದನ್ನೂ ಓದಿ: ಕಿಂಗ್ ಕೊಹ್ಲಿ ಫ್ಯಾನ್ಸ್ಗೆ ಗುಡ್ನ್ಯೂಸ್.. ವರ್ಲ್ಡ್ಕಪ್ ಟೂರ್ನಿವರೆಗೆ ವಿರಾಟ್ ದರ್ಶನ ಗ್ಯಾರಂಟಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ