/newsfirstlive-kannada/media/media_files/2025/08/10/kohli_power-2025-08-10-13-55-50.jpg)
ವಿರಾಟ್ ಕೊಹ್ಲಿ ಭವಿಷ್ಯ ಮುಂದೇನು ಎಂಬ ಗೊಂದಲದಲ್ಲಿದ್ದ ಫ್ಯಾನ್ಸ್ಗೆ ಗುಡ್ನ್ಯೂಸ್ ಸಿಕ್ಕಿದೆ. ವಿರಾಟ್ ಗುಡ್ ಬೈ ಹೇಳ್ತಾರಾ, 2027ರ ಏಕದಿನ ವಿಶ್ವಕಪ್ ಆಡಲ್ವಾ? ಇಂಥದ್ದೆಲ್ಲ ಪ್ರಶ್ನೆ ಹಾಗೂ ಗೊಂದಲಗಳಿಗೆ ಉತ್ತರ ಇಲ್ಲಿದೆ.
ವಿಶ್ವ ಕ್ರಿಕೆಟ್ ಲೋಕದ ಹಾಟ್ & ಟ್ರೆಂಡಿಂಗ್ ಟಾಪಿಕ್. ವಿರಾಟ್ ಕೊಹ್ಲಿ ಭವಿಷ್ಯ ದಿನದಿಂದ ದಿನಕ್ಕೆ ವಿರಾಟ್ ಕೊಹ್ಲಿಯ ಮುಂದಿನ ಭವಿಷ್ಯ ಏನು ಎಂಬ ಪ್ರಶ್ನೆ ಗಿರಕಿ ಹೋಡೀತಾನೆ ಇದೆ. ಇದೀಗ ಇದಕ್ಕೆ ವಿರಾಟ್, ಒನ್ ಪಿಕ್ ಅನ್ಸರ್ ನೀಡಿದ್ದಾರೆ. ಅಷ್ಟೇ ಅಲ್ಲ, ಮುಂದೇನು ಎಂಬ ಗೊಂದಲದಲ್ಲಿದ್ದ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಲಂಡನ್ನಲ್ಲಿ ಅಭ್ಯಾಸದ ಅಖಾಡಕ್ಕಿಳಿದ ವಿರಾಟ್ ಕೊಹ್ಲಿ..!
ಸೀಸನ್-18ರ ಐಪಿಎಲ್ ಮುಕ್ತಾಯಗೊಂಡಿದ್ದೆ ತಡ. ಕಿಂಗ್ ಕೊಹ್ಲಿ ಲಂಡನ್ಗೆ ಹಾರಿದ್ದರು. ವಿಂಬಲ್ಡನ್ ಹಾಗೂ youwecan ಚಾರೀಟಿ ಕಾರ್ಯಕ್ರಮದಲ್ಲಿ ಬಿಟ್ರೆ, ಕಾಣಿಸಿಕೊಂಡಿದ್ದೇ ಇಲ್ಲ. ಕಾಣಿಸಿಕೊಂಡಿದ್ದಿರಲಿ, ಒಂದೇ ಒಂದು ಫೋಟೋ ಸಹ ರಿವೀಲ್ ಆಗಿರಲಿಲ್ಲ. ಆದ್ರೆ, ಲಂಡನ್ನಲ್ಲಿ ಅಜ್ಞಾತವಾಸದಲ್ಲಿದ್ದ ವಿರಾಟ್, ಈಗ ಅಭ್ಯಾಸದ ಅಖಾಡಕ್ಕೆ ಧುಮುಕಿಸಿದ್ದಾರೆ.
ಲಂಡನ್ನಲ್ಲಿ ಗುಜರಾತ್ ಟೈಟನ್ಸ್ ಅಸಿಸ್ಟೆಂಟ್ ಕೋಚ್ ನಯೀಮ್ ಅಮಿನ್, ಅಂಡರ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿರುವ ವಿರಾಟ್ ಕೊಹ್ಲಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಬ್ಯಾಟಿಂಗ್ ಅಭ್ಯಾಸಕ್ಕೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ಆದ್ರೆ, ಈ ಒಂದೇ ಒಂದು ಪೋಸ್ಟ್, ಕೇವಲ ಫೋಸ್ಟ್ ಆಗಿರಲಿಲ್ಲ. ವಿಶ್ವ ಕ್ರಿಕೆಟ್ ಲೋಕಕ್ಕೆ ವಿರಾಟ್ ನೀಡಿದ ಸಂದೇಶವೇ ಆಗಿತ್ತು. ರಿಟೈರ್ಮೆಂಟ್ ಕಥೆಗಳಿಗೆ ನೀಡಿದ ಕ್ಲಾರಿಟಿಯಾಗಿತ್ತು.
ಏಕದಿನ ನಿವೃತ್ತಿಯ ಕಥೆಗಳಿಗೆ ವಿರಾಟ್ ಕೊಹ್ಲಿ ನೀಡಿದ್ರಾ ಉತ್ತರ..?
ಬಹು ದಿನಗಳಿಂದ ವಿರಾಟ್ ಏಕದಿನ ಕ್ರಿಕೆಟ್ಗೆ ನಿವೃತ್ತಿ ಹೇಳ್ತಾರಾ ಎಂಬ ಪ್ರಶ್ನೆ ಅರಿದಾಡುತ್ತಲೇ ಇತ್ತು. ಬಿಸಿಸಿಐ ಮೂಲಗಳಿಂದಲೇ 36ರ ವಿರಾಟ್ ಕೊಹ್ಲಿಗೆ ಆಫ್ರಿಕಾ ಟಿಕೆಟ್ ಡೌಟ್ ಎನ್ನಲಾಗಿತ್ತು. ಅಷ್ಟೇ ಅಲ್ಲ, ಈ ನಿಟ್ಟಿನಲ್ಲೇ ಮುಂಬರುವ ಆಸ್ಟ್ರೇಲಿಯಾ ಪ್ರವಾಸದಿಂದ ಹೊಸ ಟೀಮ್ ಕಟ್ಟುವ ಚಿಂತನೆ ನಡೆಸಿದೆ. ಹೀಗಾಗಿ ವಿರಾಟ್, ಆಸ್ಟ್ರೇಲಿಯಾ ಪ್ರವಾಸ ಆಡುವ ಕುರಿತೇ ಅನುಮಾನ ಕಾಡಿತ್ತು. ಇದೀಗ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಭ್ಯಾಸಕ್ಕಿಳಿಯುವ ಮೂಲಕ ನಿವೃತ್ತಿಯ ಊಹಾಪೋಹದ ಕಥೆಗಳಿಗೆ ಉತ್ತರ ನೀಡಿದ್ದಾರೆ. ಗೊಂದಲದಲ್ಲಿದ್ದ ಅಭಿಮಾನಿಗಳಿಗೂ ಗುಡ್ ನ್ಯೂಸ್ ನೀಡಿದ್ದಾರೆ.
ಡೋಂಟ್ವರಿ ವಿರಾಟ್ ಆಡ್ತಾರೆ 2027ರ ಏಕದಿನ ವಿಶ್ವಕಪ್..!
ಹೌದು! 36 ವರ್ಷದ ವಿರಾಟ್, 2027ರ ಏಕದಿನ ವಿಶ್ವಕಪ್ ಆಡುವುದು ಅನುಮಾನ ಎನ್ನಲಾಗಿತ್ತು. ವಯಸ್ಸಿನ ಕಾರಣಕ್ಕೆ ವಿರಾಟ್, ಏಕದಿನ ಕ್ರಿಕೆಟ್ ಭವಿಷ್ಯದ ಮೇಲೆ ತೂಗುಗತ್ತಿ ನೇತಾಡಿತ್ತು. ಆದ್ರೆ, ಈಗ ಏಕದಿನ ವಿಶ್ವಕಪ್ ಟೂರ್ನಿಯನ್ನಾಡಲು ಪಣ ತೊಟ್ಟಿರುವ ವಿರಾಟ್, ಮತ್ತೆ ಫಿಟ್ನೆಸ್ನತ್ತ ದೃಷ್ಟಿ ನೆಟ್ಟಿದ್ದಾರೆ. ಬ್ಯಾಟಿಂಗ್ನತ್ತ ದೃಷ್ಟಿನೆಟ್ಟಿದ್ದಾರೆ. ಆ ಮೂಲಕ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಲು ಸಜ್ಜಾಗಿರುವ ವಿರಾಟ್, ಆಸ್ಟ್ರೇಲಿಯಾ ಪ್ರವಾಸದ ಅಗ್ನಿಪರೀಕ್ಷೆಯಲ್ಲಿ ಎಲ್ಲಕ್ಕೂ ಬ್ಯಾಟ್ನಿಂದ ಉತ್ತರ ನೀಡುವ ಲೆಕ್ಕಾಚಾರದಲ್ಲಿದ್ದಾರೆ.
ಇದನ್ನೂ ಓದಿ:ವಿಶ್ವದ ನಂ- 1 ಶ್ರೀಮಂತ ಕ್ರಿಕೆಟರ್ ಯಾರು..? ಭಾರತೀಯರೇ, ಆದ್ರೆ ಕೊಹ್ಲಿ, ಧೋನಿ ಅಲ್ಲವೇ ಅಲ್ಲ!
/filters:format(webp)/newsfirstlive-kannada/media/media_files/2025/08/07/virat-kohli-rohit-sharma-2025-08-07-18-20-17.jpg)
ವಿರಾಟ್ ಪಾಲಿಗೆ ಆಸ್ಟ್ರೇಲಿಯಾ ಪ್ರವಾಸ ಕ್ರೂಶಿಯಲ್..!
ಕೊಹ್ಲಿ ಲೆಜೆಂಡರಿ ಬ್ಯಾಟರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ, ಬರೋಬ್ಬರಿ 7 ತಿಂಗಳ ಬಳಿಕ ವಿರಾಟ್, ಏಕದಿನ ಅಖಾಡಕ್ಕಿಳಿಯಲಿದ್ದಾರೆ. ಐಪಿಎಲ್ ಬಿಟ್ರೆ, ಇನ್ಯಾವ ಸರಣಿಗಳನ್ನಾಡದ ವಿರಾಟ್, ಏಕಾಏಕಿ ಆಸ್ಟ್ರೇಲಿಯಾ ಕಂಡೀಷನ್ಸ್ನಲ್ಲಿ ಆಡೋದು ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿಯೇ ಅಕ್ಟೋಬರ್ 19ರಿಂದ ಆರಂಭವಾಗಲಿರುವ ಮಹತ್ವದ ಸರಣಿಗೆ ಈಗಿನಿಂದಲೇ ಸಜ್ಜಾಗ್ತಿದ್ದಾರೆ. ವಯಸ್ಸಾಗಿದೆ ಎಂಬ ಪ್ರಶ್ನೆಗೆ ಏಜ್ ಇಸ್ ಜಸ್ಟ್ ಎ ನಂಬರ್ ಎಂಬ ಸಂದೇಶ ನೀಡಲು ಪಣತೊಟ್ಟಿದ್ದಾರೆ. ವಿರಾಟ್ ಲಾಂಗ್ ರನ್ಗೆ ಈ ಸರಣಿಯೇ ಮೋಸ್ಟ್ ಇಂಪಾರ್ಟೆಂಟ್. ಹೀಗಾಗಿ ಆಸಿಸ್ ಪ್ರವಾಸದಲ್ಲಿ ರನ್ ಗಳಿಸಬೇಕಾದ ಅಗತ್ಯತೆ ಕೊಹ್ಲಿಗೆ ಇದೆ. ಇಲ್ಲ ಸಂಕಷ್ಟ ಎದುರುವಾಗುವುದು ಫಿಕ್ಸ್.
ವಿರಾಟ್ ಆಡ್ತಾರಾ..? ಇಲ್ವಾ ಎಂಬ ಊಹಾಪೋಹಗಳಿಗೆ ಅಭ್ಯಾಸದ ಅಖಾಡಕ್ಕಿಳಿದು ಅನ್ಸರ್ ಕೊಟ್ಟಿರುವ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಪ್ರವಾಸದಲ್ಲಿ ರೌದ್ರವತಾರಾ ಪ್ರದರ್ಶಿಸಲಿ, ಆ ಮೂಲಕ ಭವಿಷ್ಯದ ಪ್ರಶ್ನೆ ಎತ್ತಿದವರ ಬಾಯಿ ಮುಚ್ಚಿಸಲಿ ಅನ್ನೋದೆ ಕೋಟ್ಯಾಂತರ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ