ಕೊಹ್ಲಿ, ರೋಹಿತ್​​ಗೆ ಬಿಸಿಸಿಐ ಶಾಕ್.. ದಿಗ್ಗಜರ ODI ವಿಶ್ವಕಪ್ ಆಡುವ ​ಕನಸು ಭಗ್ನ..?

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್​ನಿಂದ ನಿವೃತ್ತಿಯಾಗುವ ಬಗ್ಗೆ ಭಾರೀ ಸುದ್ದಿ ಆಗ್ತಿದೆ. ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿಗೆ ಇನ್ನೂ 2 ತಿಂಗಳುಗಳು ಉಳಿದಿವೆ. ರೋಹಿತ್ ಮತ್ತು ವಿರಾಟ್ ಏಕದಿನ ವಿಶ್ವಕಪ್​​ವರೆಗೆ ಭಾರತೀಯ ತಂಡದಲ್ಲಿ ಉಳಿಯಲು ಸಾಧ್ಯವಾಗದಿರಬಹುದು.

author-image
Ganesh
Virat kohli Rohit sharma (1)

ರೋಹಿತ್, ಕೊಹ್ಲಿ Photograph: (ಬಿಸಿಸಿಐ)

Advertisment

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Virat Kohli and Rohit Sharma) ಏಕದಿನ ಕ್ರಿಕೆಟ್​ನಿಂದ ನಿವೃತ್ತಿಯಾಗುವ ಬಗ್ಗೆ ಭಾರೀ ಸುದ್ದಿ  ಆಗ್ತಿದೆ. ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿಗೆ ಇನ್ನೂ 2 ತಿಂಗಳುಗಳು ಉಳಿದಿವೆ. ರೋಹಿತ್ ಮತ್ತು ವಿರಾಟ್ 2027ರ ಏಕದಿನ ವಿಶ್ವಕಪ್​​ವರೆಗೆ ಭಾರತೀಯ ತಂಡದಲ್ಲಿ ಉಳಿಯಲು ಸಾಧ್ಯವಾಗದಿರಬಹುದು ಎಂದು ವರದಿಗಳು ಹೇಳಿವೆ. 


ಆಸ್ಟ್ರೇಲಿಯಾ ಸರಣಿಯು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಕೊನೆಯ ಪಂದ್ಯಗಳು ಆಗಬಹುದು. ವಾಸ್ತವವಾಗಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 2027ರ ವಿಶ್ವಕಪ್ ವರೆಗೆ ವೃತ್ತಿಜೀವನ ಮುಂದುವರಿಸಲು ಬಯಸಿದರೆ ದೇಶೀಯ ಕ್ರಿಕೆಟ್ ಆಡಲೇಬೇಕಿದೆ. ಒಂದು ವೇಳೆ ಬಿಸಿಸಿಐ ಷರತ್ತನ್ನು ವಿಧಿಸಿದ್ರೆ ಈ ವರ್ಷ ನಡೆಯಲಿರುವ 50 ಓವರ್‌ಗಳ ಟೂರ್ನಮೆಂಟ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಹಿರಿಯ ಕ್ರಿಕೆಟಿಗರು ಬ್ಯಾಟ್ ಬೀಸಬೇಕಿದೆ. 

ಲೆಕ್ಕಕ್ಕೇ ಇಟ್ಕೊಂಡಿಲ್ಲ ಬಿಸಿಸಿಐ..!

ಇದಕ್ಕೆ ಕಾರಣ ಆಯ್ಕೆದಾರರು ಆಟಗಾರರು ಏಕದಿನ ಮಾದರಿಯೊಂದಿಗೆ ಸಂಬಂಧ ಹೊಂದಿರಬೇಕೆಂದು ಬಯಸಿದ್ದಾರೆ. ಬಿಸಿಸಿಐ ಟೀಂ ಇಂಡಿಯಾ ಆಟಗಾರರಿಗೆ ದೇಸಿಯ ಕ್ರಿಕೆಟ್​ ಅನ್ನು ಕಡ್ಡಾಯಗೊಳಿಸಲು ನಿರ್ಧರಿಸಿರುವುದರಿಂದ ವಿರಾಟ್ ಮತ್ತು ರೋಹಿತ್ ಬೇಗನೆ ನಿವೃತ್ತರಾಗಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿಯು, ವಿಶ್ವಕಪ್ ಟೂರ್ನಿಗೆ ಕೊಹ್ಲಿ, ರೋಹಿತ್​ ಅವರನ್ನು ಪರಿಗಣಿಸಿಲ್ಲ. ಇದು ಟೀಂ ಇಂಡಿಯಾಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. 

ಇದನ್ನೂ ಓದಿ: ವಿಶ್ವದ ನಂ​- 1 ಶ್ರೀಮಂತ ಕ್ರಿಕೆಟರ್ ಯಾರು..? ಭಾರತೀಯರೇ, ಆದ್ರೆ ಕೊಹ್ಲಿ, ಧೋನಿ ಅಲ್ಲವೇ ಅಲ್ಲ!

ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ನಂತರ ಆಯ್ಕೆ ಸಮಿತಿಯು ಯುವ ತಂಡ ನಿರ್ಮಿಸುವತ್ತ ಹೆಜ್ಜೆಯನ್ನಿಟ್ಟಿದೆ. 2024ರ ಟಿ 20 ವಿಶ್ವಕಪ್ ನಂತರ ಟೀಂ ಇಂಡಿಯಾ ಯಾವುದೇ ಸರಣಿಯಲ್ಲೂ ಸೋಲನ್ನು ಕಂಡಿಲ್ಲ. ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತದ ಯುವ ತಂಡ ಇಂಗ್ಲೆಂಡ್‌ಗೆ ಹೋಗಿ ಟೆಸ್ಟ್ ಸರಣಿಯನ್ನು 2-2 ರಲ್ಲಿ ಡ್ರಾ ಮಾಡಿಕೊಂಡಿದೆ. ಈಗ ಆಯ್ಕೆದಾರರ ಗಮನ ಏಕದಿನ ಪಂದ್ಯಗಳ ಮೇಲೆ ನೆಟ್ಟಿದೆ. 

ಇದನ್ನೂ ಓದಿ:ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ದರ್ಶನ್ ಪತ್ನಿ.. ಮೂವರ ಬಗ್ಗೆ ಬರೆದುಕೊಂಡ ವಿಜಯಲಕ್ಷ್ಮೀ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Virat Kohli Rohit Sharma-Virat Kohli Virat Kohli beard
Advertisment