ಮತ್ತೊಂದು ಕ್ಷೇತ್ರಕ್ಕೆ ಹೆಜ್ಜೆಯಿಟ್ಟ ಧೋನಿ.. ಈ ಬಾರಿ MSD ಟಾರ್ಗೆಟ್ ಏನು..?

ಕ್ರಿಕೆಟರ್ಸ್​ ಬ್ಯುಸಿನೆಸ್ ಮ್ಯಾನ್​ಗಳಾಗಿ ಬದಲಾಗಿದ್ದಾರೆ. ಯಶಸ್ಸನ್ನು ಕಾಣ್ತಿದ್ದಾರೆ. ಕೋಟಿ ಕೋಟಿ ಸಂಪಾದನೆ ಮಾಡ್ತಿದ್ದಾರೆ. ಈ ಪೈಕಿ ಮಹೇಂದ್ರ ಸಿಂಗ್ ಧೋನಿ ಕೂಡ ಒಬ್ಬರು. ಇದೀಗ ಇದೇ ಮಾಹಿ, ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ

author-image
Ganesh
ms dhoni house of biriyani
Advertisment

ಮಹೇಂದ್ರ ಸಿಂಗ್ ಧೋನಿ, ಟೀಮ್ ಇಂಡಿಯಾದ ಗ್ರೇಟ್ ಕ್ಯಾಪ್ಟನ್. ದಿ ಗ್ರೇಟ್​ ಲೀಡರ್​  ಆ್ಯಂಡ್ ಬ್ಯುಸಿನೆಸ್ ಮ್ಯಾನ್​. ಕ್ರಿಕೆಟ್​ ಹೊರತಾಗಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಫ್ಯಾಷನ್, ಫಿಟ್ನೆಸ್, ಟೆಕ್ನಾಲಜಿ, ಆರೋಗ್ಯ, ಶಾಲಾ, ಕಾಲೇಜು ಸೇರಿದಂತೆ ಕ್ರಿಕೆಟ್ ಅಕಾಡೆಮಿಗಳಲ್ಲಿ ತೊಡಗಿಸಿಕೊಂಡಿರುವ ಮಾಹಿ, ಮತೊಂದ್ಕಡೆ  ಸಿನಿಮಾ ಕ್ಷೇತ್ರದಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ಇದೇ ಮಾಹಿ ಹೊಸ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ರೆಡಿಯಾಗಿದ್ದಾರೆ. 

ಎರಡು ದಿನಗಳ ಹಿಂದಷ್ಟೇ, ಚೆನ್ನೈನಲ್ಲಿ ಸೆವೆನ್​ ಪಡೆಲ್ ಅಕಾಡಮಿ ಓಪನ್ ಮಾಡಿದ್ದ ಮಾಹಿ, ಹೊಸ ಕ್ರೀಡೆಯತ್ತ ಮುಖಮಾಡಿದ್ದಾರೆ. ಟೆನಿಸ್ ಹಾಗೂ ಸ್ಕ್ವಾಷ್‌ ಮಿಶ್ರಿತ ಈ ಕ್ರೀಡೆ ಭಾರತದಲ್ಲಿ ಪಾಪುಲರ್ ಆಗದಿದ್ದರೂ ಯುನೆಟೆಡ್ ಕಿಂಗ್​ಡಮ್​ನಲ್ಲಿ ಮೋಸ್ಟ್ ಪಾಪ್ಯೂಲರ್​ ಕ್ರೀಡೆಯಾಗಿದೆ. ಇದೀಗ ಚೆನ್ನೈನಲ್ಲಿ ಸೆವೆನ್​ ಪಡೆಲ್ ಅಕಾಡಮಿ ಮೂಲಕ ಹೊಸ ಕ್ರಾಂತಿ ಮಾಡಲು ಮಹತ್ವದ ಹೆಜ್ಜೆ ಇಟ್ಟಿರುವ ಮಾಹಿ, ಮತ್ತೊಂದು ಕ್ಷೇತ್ರದಲ್ಲೂ ಮುಖ ಮಾಡಿದ್ದಾರೆ.

ಇದನ್ನೂ ಓದಿ: ಸಿರಾಜ್​ಗೆ ರಾಖಿ ಕಟ್ಟಿದ ಖ್ಯಾತ ಗಾಯಕಿ ಆಶಾ ಭೋಸ್ಲೆ ಮೊಮ್ಮಗಳು.. ಇದಕ್ಕೆ ಬಲವಾದ ಕಾರಣವಿದೆ, ಏನದು

MS_DHONI_New


ಹೌಸ್ ಆಫ್ ಬಿರಿಯಾನಿ ಬ್ರ್ಯಾಂಡ್​​​ನಲ್ಲಿ ಹೂಡಿಕೆ

ಹೌಸ್ ಆಫ್ ಬಿರಿಯಾನಿ.. ಭಾರತದ ಫೇಮಸ್ ಫುಡ್ ಬ್ರ್ಯಾಂಡ್​​ನಲ್ಲಿ ಒಂದಾಗಿದೆ. ಭಾರತದಾದ್ಯಂತ ಅನೇಕ ನಗರಗಳಲ್ಲಿ ಹೌಸ್ ಆಫ್ ಬಿರಿಯಾನಿಯ ಹೋಟೆಲ್​ ಅಂಡ್ ರೆಸ್ಟೋರೆಂಟ್​ಗಳಿವೆ. ಮುಂಬೈನಲ್ಲೇ 20ಕ್ಕೂ ಹೆಚ್ಚು ಕಿಚನ್ ಹೊಂದಿರುವ ಹೌಸ್ ಆಫ್ ಬಿರಿಯಾನಿ, ದೆಹಲಿ, ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿದೆ. ಕೋಟ್ಯಾಂತರ ಬ್ಯುಸಿನೆಸ್ ಮಾಡುತ್ತೆ. ಇದೀಗ ಇದೇ ಹೌಸ್ ಆಫ್ ಬಿರಿಯಾನಿ ಬ್ಯುಸಿನೆಸ್​ನಲ್ಲಿ ಮಹೇಂದ್ರ ಸಿಂಗ್​​ ಧೋನಿ, ಹೂಡಿಕೆ ಮಾಡಿದ್ದಾರೆ. ಧೋನಿ ಈ ಹೂಡಿಕೆಯ ಹಿಂದೆ ಮೆಗಾ ಪ್ಲಾನ್ ಇದೆ. ಭಾರೀ ಲೆಕ್ಕಾಚಾರವೇ ಅಡಗಿದೆ.

HOB ಭಾಗವಾಗಿದ್ದು ಸಂತಸ

ನಾನು ಬಲವಾದ ವಿಶನ್​​​ ಹೊಂದಿರುವವರನ್ನು ಯಾವಾಗಲೂ ನಂಬುತ್ತೇನೆ. ಅವರನ್ನು ಬೆಂಬಲಿಸುತ್ತೇನೆ. ಅಂಥ ದೂರದೃಷ್ಟಿ  ಹೌಸ್ ಆಫ್ ಬಿರಿಯಾನಿ ತಂಡಕ್ಕಿದೆ. ಭಾರತೀಯ ಕ್ಲಾಸಿಕ್ ಅಡುಗೆ ವರ್ಲ್ಡ್​ ವೈಡ್​ ಕೊಂಡೊಯ್ಯಲು ಸಿದ್ಧರಾಗಿದ್ದಾರೆ. ಅವರ ಈ ಪ್ರಯಾಣದ ಭಾಗವಾಗಲು ನನಗೆ ಸಂತೋಷವಾಗಿದೆ.
ಧೋನಿ, ಮಾಜಿ ಕ್ರಿಕೆಟರ್

ಧೋನಿ ಹೌಸ್ ಆಫ್ ಬಿರಿಯಾನಿ ಭಾಗವಾಗಿದಕ್ಕೆ ಸಹ ಮಾಲೀಕ ಹಾಗೂ ಹೌಸ್​ ಆಫ್ ಬಿರಿಯಾನಿ ಸಿಇಓ ಮೊಹಮ್ಮದ್ ಭೋಲಾ ಸಂತಸ ವ್ಯಕ್ತಪಡಿಸಿದ್ದಾರೆ. ಜಗತ್ತು ಬಿರಿಯಾನಿ ನೋಡುವ ದೃಷ್ಟಿಕೋನ ಬದಲಿಸುತ್ತೇವೆ ಎಂದಿದ್ದಾರೆ. 

ಮರು ರೂಪ ನೀಡ್ತೇವೆ.

ಹೌಸ್​ ಆಫ್ ಬಿರಿಯಾನಿ ಕುಟುಂಬಕ್ಕೆ ಬಂದಿದಕ್ಕೆ ಧೋನಿ ಸ್ವಾಗತ. ಈ ಸ್ವಾಗತ ಕೇವಲ ಖ್ಯಾತಿಗೆ ಅಲ್ಲ. ನಾವು ಒಟ್ಟಾಗಿ ಕೇವಲ ಬ್ರ್ಯಾಂಡ್ ನಿರ್ಮಿಸುತ್ತಿಲ್ಲ. ನಾವು ಜಗತ್ತು ಬಿರಿಯಾನಿಯನ್ನ ನೋಡುವು ದೃಷ್ಟಿಗೆ ಮರು ರೂಪ ನೀಡಲಿದ್ದೇವೆ
ಮೊಹಮ್ಮದ್ ಭೋಲಾ, ಸಹ ಮಾಲೀಕ, ಹೌಸ್​ ಆಫ್ ಬಿರಿಯಾನಿ

ವಿಶ್ವದಾದ್ಯಂತ ಹೌಸ್ ಆಫ್ ಬಿರಿಯಾನಿ ವಿಸ್ತರಿಸಲು ಪ್ಲಾನ್

ಇಷ್ಟು ದಿನ ಕೇವಲ ಭಾರತಕ್ಕೆ ಸೀಮಿತವಾಗಿದ್ದ​​ ಹೌಸ್ ಆಫ್ ಬಿರಿಯಾನಿ, ಇನ್ಮುಂದೆ ವಿಶ್ವದಾದ್ಯಂತ ಸದ್ದು ಮಾಡಲಿದೆ. ಈ ಬಗ್ಗೆ ಪಕ್ಕಾ ಪ್ಲಾನ್ ಮಾಡಲಾಗಿದ್ದು, ವಿಶ್ವದಾದ್ಯಂತ ಲಾಂಚ್ ಮಾಡುವ ಕನಸು ಹೊಂತ್ತಿರುವ ಹೌಸ್ ಆಫ್ ಬಿರಿಯಾನಿ ಮಾಲೀಕರಿಗೆ ಮಾಜಿ ನಾಯಕ ಧೋನಿ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರಮುಖವಾಗಿ ಆಸ್ಟ್ರೇಲಿಯಾ, ಜಪಾನ್, ಇಂಗ್ಲೆಂಡ್​​​, ನಾರ್ಥ್ ಅಮೆರಿಕಾ ಸೇರಿದಂತೆ ಇನ್ನಿತರ ದೇಶಗಳಲ್ಲಿ ಹೌಸ್ ಆಫ್ ಬಿರಿಯಾನಿ ಕಿಚನ್​​ ಆರಂಭಿಸಲು ಮುಂದಾಗಿದ್ದಾರೆ. 

ಇದನ್ನೂ ಓದಿ:ವಿಶ್ವದ ನಂ​- 1 ಶ್ರೀಮಂತ ಕ್ರಿಕೆಟರ್ ಯಾರು..? ಭಾರತೀಯರೇ, ಆದ್ರೆ ಕೊಹ್ಲಿ, ಧೋನಿ ಅಲ್ಲವೇ ಅಲ್ಲ!

ಬರೋಬ್ಬರಿ 150 ಕಿಚನ್ ಲಾಂಚ್ ಮಾಡುವ ಉದ್ದೇಶ ಹೊಂದಿರುವ ಹೌಸ್ ಆಫ್ ಬಿರಿಯಾನಿ, ಮುಂದಿನ 3 ವರ್ಷಗಳಲ್ಲಿ 450 ಕೋಟಿಯಿಂದ 550 ಕೋಟಿ ಆದಾಯ ಕಾಣುವ ನಿರೀಕ್ಷೆ ಇದೆ. ಭಾರತದಲ್ಲಿ ಫೇವರಿಟ್ ಡಿಶ್ ಆಗಿರುವ ಬಿರಿಯಾನಿ, ವಿದೇಶದಲ್ಲೂ ಸಕ್ಸಸ್ ಆಗೋದ್ರಲ್ಲಿ ಡೌಟಿಲ್ಲ. ಹೌಸ್ ಆಫ್ ಬಿರಿಯಾನಿ ಕಿಚನ್ ಆರಂಭಿಸಲು ಮುಂದಾಗಿರುವ ಪ್ರತಿ ದೇಶದಲ್ಲಿ ಬಹು ಪ್ರಮಾಣದ ಭಾರತೀಯರಿದ್ದಾರೆ. ಭಾರತದ ಸಂಸ್ಕೃತಿ, ಖಾದ್ಯಗಳನ್ನು ಇಷ್ಟ ಪಡುವ ಜನರಿದ್ದಾರೆ. ಹೀಗಾಗಿ  ಹೌಸ್ ಆಫ್ ಬಿರಿಯಾನಿ ಆದಾಯಗಳಿಸುವುಲ್ಲಿ ಡೌಟೇ ಇಲ್ಲ ಅನ್ನೋದು ವಿಶ್ಲೇಷಕರ ಲೆಕ್ಕಾಚಾರ.

ಇದನ್ನೂ ಓದಿ:ಬಿಸಿಸಿಐ ಮಹತ್ವದ ಹೆಜ್ಜೆ.. ಇನ್ಮೇಲೆ ಸ್ಟಾರ್​​ಗಿರಿ ಆಟ ನಡೆಯಲ್ಲ..!

ಧೋನಿಗೆ ಇದು ಹೊಸ ಬ್ಯುಸಿನೆಸ್ ಅಲ್ಲ. ಸುಖಾಸುಮ್ಮನೆ ಹೂಡುವವರು ಅಲ್ಲ. ಹೋಟೆಲ್​ ಬ್ಯುಸಿನೆಸ್ ಮಾಡಿರುವ ಧೋನಿ, ಈ ಬಗ್ಗೆ ಲೆಕ್ಕಾಚಾರ ಹಾಕಿಯೇ ದುಡ್ಡು ಹೂಡಿರ್ತಾರೆ. ಇದೇ ಕಾರಣಕ್ಕೆ ಧೋನಿ ಸಕ್ಸಸ್​ಫುಲ್ ಕ್ರಿಕೆಟರ್​​​​​​ ಟು ಸಕ್ಸಸ್​ಫುಲ್ ಬ್ಯುಸಿನೆಸ್ ಮ್ಯಾನ್ ಆಗಿದಕ್ಕೆ ಕಾರಣ.

ಇದನ್ನೂ ಓದಿ: ಕಿಂಗ್ ಕೊಹ್ಲಿ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ವರ್ಲ್ಡ್​​ಕಪ್ ಟೂರ್ನಿವರೆಗೆ ವಿರಾಟ್​ ದರ್ಶನ ಗ್ಯಾರಂಟಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cricket news in Kannada MS Dhoni MS Dhoni investment
Advertisment