/newsfirstlive-kannada/media/media_files/2025/08/10/siraj_zanai_bhosle_new-2025-08-10-09-56-29.jpg)
ರಕ್ಷಾ ಬಂಧನ ಸಹೋದರ- ಸಹೋದರಿಯರ ಸಂಬಂಧ ಬೆಸೆಯುವಂತಹ ಪವಿತ್ರವಾದ ಹಬ್ಬವಾಗಿದೆ. ಸಹೋದರಿಯೂ ತನ್ನ ಸಹೋದರನಿಗೆ ಆಯಸ್ಸು, ಆರೋಗ್ಯ, ಸಮೃದ್ಧಿ ಎಲ್ಲವೂ ಸಿಗಲಿ ಎಂದು ಹಾರೈಸುವುದು ಆಗಿದೆ. ರಕ್ಷಾ ಬಂಧನದ ಹಿನ್ನೆಲೆ ಕ್ರಿಕೆಟರ್ಸ್, ಸೆಲೆಬ್ರಿಟಿಗಳು ತಮ್ಮ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ಖುಷಿ ಪಟ್ಟಿದ್ದಾರೆ. ಅದರಂತೆ ಸ್ಟಾರ್ ಕ್ರಿಕೆಟರ್ ಮೊಹಮ್ಮದ್ ಸಿರಾಜ್ ಕೂಡ ರಾಖಿ ಕಟ್ಟಿಕೊಳ್ಳುವ ಮೂಲಕ ಆ ವದಂತಿಗಳಿಗೆ ಅಂತಿಮ ತೆರೆ ಎಳೆದಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟ್, ಪೇಸ್ ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್ ಅವರಿಗೆ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಅವರು ರಾಖಿ ಕಟ್ಟಿ, ಸಿಹಿ ತಿನಿಸಿದ್ದಾರೆ. ಜನೈ ಭೋಸ್ಲೆ ಅವರು ಸಿರಾಜ್ ಅವರ ಕೈಗೆ ರಾಖಿ ಕಟ್ಟಿ, ಸಿಹಿ ತಿನಿಸಿರುವ ವಿಡಿಯೋ, ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಜನೈ ಭೋಸ್ಲೆ ವಿಶೇಷವಾದ ಟ್ಯಾಗ್ಲೈನ್ ಬರೆದಿದ್ದಾರೆ.
ಇದನ್ನೂ ಓದಿ:ಹಳದಿ ಮಾರ್ಗದ ಮೆಟ್ರೋ ಟ್ರೈನ್ ದರ ಹೇಗಿದೆ.. ಎಲ್ಲಿಂದ ಎಲ್ಲಿವರೆಗೆ ಎಷ್ಟು ರೂಪಾಯಿ ಕೊಡಬೇಕು?
ಉತ್ತಮವಾದದ್ದನ್ನ ಕೇಳಲು ಆಗಲಿಲ್ಲ ಎಂದು ಜನೈ ಭೋಸ್ಲೆ ವಿಡಿಯೋಗೆ ಟ್ಯಾಗ್ಲೈನ್ ಬರೆದಿದ್ದಾರೆ. ಅವರು ಈ ರೀತಿಯಾದ ಟ್ಯಾಗ್ಲೈನ್ ಬರೆಯಲು ಬಲವಾದ ಕಾರಣವಿದೆ. ಕಳೆದ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಜನೈ ಭೋಸ್ಲೆ ಹಾಗೂ ಸಿರಾಜ್ ಬಗ್ಗೆ ಬೇರೆಯೇ ಅರ್ಥದಲ್ಲಿ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ ಇಬ್ಬರು ರಕ್ಷಾ ಬಂಧನ ಹಬ್ಬ ಆಚರಣೆ ಮಾಡುವ ಮೂಲಕ ಅದಕ್ಕೆ ತೆರೆ ಎಳೆಯಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಯಾವುದು ಸುಳ್ಳು, ಯಾವುದು ನಿಜ ಎನ್ನುವುದನ್ನು ನಂಬೋಕೆ ಆಗಲ್ಲ. ಏಕೆಂದರೆ ಆಶಾ ಬೋಸ್ಲೆ ಅವರ ಮೊಮ್ಮಗಳಾದ ಜನೈ ಭೋಸ್ಲೆ ಹಾಗೂ ಸಿರಾಜ್ ನಡುವೆ ಲವ್ ಇದೆ ಎಂದು ವದಂತಿ ಹಬ್ಬಿಸಲಾಗಿತ್ತು. ಇಬ್ಬರು ಯಾವುದೋ ಒಂದು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ವೈರಲ್ ಮಾಡಲಾಗುತ್ತಿತ್ತು. ಇದರಿಂದ ಬೇಸತ್ತಿದ್ದ ಅವರು ಅಂತಿಮವಾಗಿ ಸ್ಪಷ್ಟನೆಯನ್ನು ರಕ್ಷಾ ಬಂಧನದ ಮೂಲಕ ನೀಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ