/newsfirstlive-kannada/media/media_files/2025/08/07/team-india-test-series-2025-08-07-21-56-57.jpg)
ಟೀಂ ಇಂಡಿಯಾ Photograph: (ಬಿಸಿಸಿಐ)
ಇಂಡೋ-ಇಂಗ್ಲೆಂಡ್ ಟೆಸ್ಟ್ ಸರಣಿ ಅಂತ್ಯ ಕಂಡಿದ್ದಾಗಿದೆ. ಟೀಮ್ ಇಂಡಿಯಾದ ಪ್ರದರ್ಶನಕ್ಕೆ ಬಿಸಿಸಿಐ ಮಾತ್ರವಲ್ಲ. ದಿಗ್ಗಜ ಆಟಗಾರರ ಫುಲ್ ಖುಷ್ ಆಗಿದ್ದಾರೆ. ಆಟಗಾರರ ಆಟದ ಬಗ್ಗೆ ಇಡೀ ಕ್ರಿಕೆಟ್ ಲೋಕವೇ ಮೆಚ್ಚುಗೆ ವ್ಯಕ್ತಪಡಿಸ್ತಿದೆ. ಇಂಗ್ಲೆಂಡ್ ಸರಣಿಯನ್ನು ಯಶಸ್ವಿಯಾಗಿ ಮುಗಿಸಿರುವ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ಬಿಗ್ಬಾಸ್ಗಳು ಬಿಗ್ ಶಾಕ್ ನೀಡಲು ಮುಂದಾಗಿದ್ದಾರೆ.
ಬಿಸಿಸಿಐ ಮಹತ್ವದ ಹೆಜ್ಜೆ
ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಜಸ್ಪ್ರೀತ್ ಬೂಮ್ರಾ 5 ಪಂದ್ಯಗಳ ಪೈಕಿ ಆಡಿದ್ದು ಕೇವಲ 3 ಮ್ಯಾಚ್. 2 ಮ್ಯಾಚ್ ರೆಸ್ಟ್! ಬೇಕಾದ ಪಂದ್ಯಗಳನ್ನಷ್ಟೇ ಆಡಿದ ಬೂಮ್ರಾ, ಮಹತ್ವದ ಪಂದ್ಯಗಳಿಗೆ ಗೈರಾದ್ರು. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಎಂಬ ಕಾರಣಕ್ಕೆ ತನ್ನಿಷ್ಟದಂತೆ ಆಡಲು ಮ್ಯಾನೇಜ್ಮೆಂಟ್ ಅವಕಾಶ ನೀಡಿತ್ತು. ಆಟಗಾರರ ಅನುಕೂಲಕ್ಕೆ ತಕ್ಕಂತೆ ಆಡುವ ಪರಿಪಾಠಕ್ಕೆ ಬ್ರೇಕ್ ಹಾಕಲು ಬಿಸಿಸಿಐ ಮುಂದಾಗಿದೆ.
ಇದನ್ನೂ ಓದಿ:IPLನಲ್ಲಿ ಈ ಬ್ಯಾಟರ್ಗೆ ಭಾರೀ ಬೇಡಿಕೆ.. ಯಂಗ್ ವಿಕೆಟ್ ಕೀಪರ್ಗಾಗಿ ಬಿಗ್ ಡೀಲ್ ನಡೆಯುತ್ತಾ?
ಪ್ಲೇಯರ್ಸ್ ಚಾಯ್ಸ್ಗೆ ಬ್ರೇಕ್
ಕೇಂದ್ರ ಗುತ್ತಿಗೆಯಲ್ಲಿರುವ ಆಟಗಾರರಿಗೆ ಈ ಕುರಿತು ತಿಳಿಸಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ವಿಶೇಷವಾಗಿ 3 ಫಾರ್ಮೆಟ್ನಲ್ಲಿ ಆಡುವ ಆಟಗಾರರಿಗೆ ಈ ವಿಚಾರ ತಿಳಿಸಲಾಗಿದೆ. ಆಟಗಾರರೇ ತಮಗೆ ಬೇಕಾದ ಪಂದ್ಯಗಳನ್ನು ಮಾತ್ರ ಆಡಲು ನಿರ್ಧರಿಸುವ ಪರಿಪಾಠಕ್ಕೆ ಕೊನೆ ಹಾಡಲು ತೀರ್ಮಾನಿಸಲಾಗಿದೆ. ವರ್ಕ್ಲೋಡ್ ತೆಗೆದು ಹಾಕುವುದಿಲ್ಲ. ವೇಗದ ಬೌಲರ್‌ಗಳ ವರ್ಕ್ಲೋಡ್ ಮುಖ್ಯ. ಇದರಿಂದ ಆಟಗಾರರು ಮಹತ್ವದ ಪಂದ್ಯಗಳನ್ನ ತಪ್ಪಿಸಿಕೊಳ್ಳುವಂತಾಗುತ್ತಿದೆ
-ಬಿಸಿಸಿಐ ಅಧಿಕಾರಿ
‘ಸಮಾನ ಸಂಸ್ಕೃತಿ’ ಬೆಳೆಸಲು ಬಿಸಿಸಿಐ ತೀರ್ಮಾನ
ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ತಾಳಕ್ಕೆ ತಕ್ಕಂತೆ ಕುಣಿಯುವುದು ಮೊದಲಿನಿಂದಲೂ ಇದೆ. ಈ ವಿಚಾರವಾಗಿ ಮಹತ್ವದ ಹೆಜ್ಜೆ ಇಡ್ತಿರುವ ಬಿಸಿಸಿಐ ಬಾಸ್ಗಳು, ಸ್ಟಾರ್ ಆಟಗಾರರು ತಾವು ಯಾವ ಪಂದ್ಯಗಳು ಆಡಬೇಕು? ಯಾವ ಸರಣಿಗಳಲ್ಲಿ ಆಡಬಾರದು? ಎಂದು ನಿರ್ಧರಿಸುವ ಸ್ವಾತಂತ್ರ್ಯಕ್ಕೆ ಅಂತ್ಯವಾಡ್ತಿದೆ. ಸ್ಟಾರ್ ಪರಿಪಾಠದ ಬದಲಾಗಿ ಸಮಾನ ಸಂಸ್ಕೃತಿ ನೆಲೆಗೊಳಿಸುವ ಉದ್ದೇಶಕ್ಕೆ ಕೈಹಾಕಿದೆ. ಆ ಮೂಲಕ ಟೀಮ್ ಇಂಡಿಯಾದ ಆಟಗಾರರೆಲ್ಲಾ ಒಂದೇ ಎಂಬ ಪರಿಪಾಠ ಬೆಳೆಸುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಇದನ್ನೂ ಓದಿ: ಕೋಟಿ, ಕೋಟಿ ಹಣ ಇದ್ದರೂ ಅದೊಂದು ಕೊರಗು; ‘ನನ್ನ ಮಗನೂ ಇದ್ದಿದ್ದರೆ’ ಅಂತಾ ಧವನ್ ಕಣ್ಣೀರು ಇಟ್ಟಿದ್ದೇಕೆ..?
ಗವಾಸ್ಕರ್ ಕಿಡಿ..!
ಒಂದೆಡೆ ಪ್ಲೇಯರ್ಸ್ ಚಾಯ್ಸ್ ಗೇಮ್ ಬಗ್ಗೆ ಬಿಸಿಸಿಐ ವಿರೋಧ ವ್ಯಕ್ತಪಡಿಸ್ತಿದ್ರೆ, ಇತ್ತ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್, ವರ್ಕ್ಲೋಡ್ ಅಳಿಸಿ ಹೋಗಬೇಕು ಎಂದಿದ್ದಾರೆ.
ಇದನ್ನೂ ಓದಿ:ಐಪಿಎಲ್ಗೂ ಮೊದಲೇ ನನ್ನನ್ನ ತಂಡದಿಂದ ಬಿಟ್ಟುಬಿಡಿ.. CSK ಆಲ್ರೌಂಡರ್ ಹೀಗೆ ಹೇಳಿದ್ದು ಯಾಕೆ?
ವರ್ಕ್ಲೋಡ್ ಕಿತ್ತೆಸೆಯಿರಿ..!
ಟೀಮ್ ಇಂಡಿಯಾದಲ್ಲಿ ವರ್ಕ್ಲೋಡ್ ಎಂಬ ಪದ ಅಳಿಸಿಹೋಗಬೇಕು. ಇದನ್ನು ನಾನು ಬಹಳ ವರ್ಷಗಳಿಂದ ಹೇಳ್ತಿದ್ದೇನೆ. ವರ್ಕ್ಲೋಡ್ ಅನ್ನೋದು ನಮ್ಮ ಮನಸ್ಥಿತಿಯಷ್ಟೇ ಎಂಬುದನ್ನು ಅರಿಯಬೇಕು. ದೇಶಕ್ಕಾಗಿ ಆಡುವಾಗ ನೋವು, ಸಂಕಟಗಳನ್ನು ಮರೆತುಬಿಡಬೇಕು. ಗಡಿಯಲ್ಲಿರುವ ಸೈನಿಕರು ವಿಪರೀತ ಚಳಿಯ ಬಗ್ಗೆ ಯಾವತ್ತಾದರೂ ದೂರಿದ್ದಾರೆಯೇ? ರಿಷಭ್ ಪಂತ್ ತೋರಿದ ಮಾದರಿ ಎಂತಹದು? ತಮ್ಮ ಮೂಳೆ ಮುರಿದಿದ್ದರೂ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದರು. ಎಲ್ಲ ಆಟಗಾರರಿಂದಲೂ ಇಂತಹ ನಿರೀಕ್ಷೆಯು ಅಪೇಕ್ಷಿತ. ಭಾರತಕ್ಕಾಗಿ ಕ್ರಿಕೆಟ್ ಆಡುವುದು ಗೌರವದ ಸಂಗತಿ.
140 ಕೋಟಿ ಜನಸಂಖ್ಯೆಯ ದೇಶವನ್ನ ನೀವು ಪ್ರತಿನಿಧಿಸುತ್ತಿದ್ದೀರಿ. ಸಿರಾಜ್ ಗಟ್ಟಿ ಗುಂಡಿಗೆಯ ಬೌಲರ್. ಸಿರಾಜ್ ಇಡೀ ಸರಣಿಯಲ್ಲಿ ದಿಟ್ಟ ಬೌಲಿಂಗ್ ಮಾಡಿದರು. ಸತತ ಎಲ್ಲ ಪಂದ್ಯಗಳಲ್ಲಿ ಆಡುವುದರೊಂದಿಗೆ ವರ್ಕ್ಲೋಡ್ ಮ್ಯಾನೇಜ್ಮೆಂಟ್ ಪೊಳ್ಳು ಎಂಬುದನ್ನು ತೋರಿಸಿಕೊಟ್ಟರು. 7–8 ಓವರ್‌ಗಳ ಸ್ಪೆಲ್ ಸತತವಾಗಿ ಮಾಡುತ್ತಿದ್ದರು.
ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟರ್
ಬೂಮ್ರಾಗೆ ಢವಢವ
ಇಂಗ್ಲೆಂಡ್ ಸರಣಿಯಲ್ಲಿ ಅನುಕೂಲಕ್ಕೆ ತಕ್ಕಂತೆ ಆಟವಾಡಿದ ಬೂಮ್ರಾ ಚರ್ಚೆಯ ಕೇಂದ್ರ ಬಿಂದು. ಬೂಮ್ರಾ ನಡೆಯ ಬಗ್ಗೆ ಪ್ರಶ್ನೆಗಳ ಜೊತೆಗೆ ಟೀಕೆಗಳು ವ್ಯಕ್ತವಾಗಿವೆ. ಬೆಂಗಳೂರಿನಲ್ಲಿರುವ ಎನ್ಸಿಎ ಕಾರ್ಯ ನಿರ್ವಹಣೆಯ ಬಗ್ಗೆಯೂ ಟೀಕೆಗಳು ವ್ಯಕ್ತವಾಗ್ತಿದೆ. ಪ್ಲೇಯರ್ಸ್ ಚಾಯ್ಸ್ ಗೇಮ್ಗೆ ಬಿಸಿಸಿಐ ಬ್ರೇಕ್ ಹಾಕಲು ಮುಂದಾಗಿದೆ. ಇದು ಸಹಜವಾಗೇ ಲೋವರ್ ಬ್ಯಾಕ್ ಇಂಜುರಿಗೆ ತುತ್ತಾಗಿದ್ದ ಜಸ್ಪ್ರೀತ್ ಬೂಮ್ರಾರನ್ನ ಇಕ್ಕಟ್ಟಿಗೆ ಸಿಲುಕಿಸಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಹೊಸ ಲುಕ್.. ಈ ಫೋಟೋ ಹೇಳ್ತಿದೆ ಒಂದು ಕತೆ.. ಕಣ್ಣಲ್ಲಿ ಕಣ್ಣಿಟ್ಟು ನೋಡಿ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ