ವಿರಾಟ್ ಕೊಹ್ಲಿ ಹೊಸ ಲುಕ್.. ಈ ಫೋಟೋ ಹೇಳ್ತಿದೆ ಒಂದು ಕತೆ.. ಕಣ್ಣಲ್ಲಿ ಕಣ್ಣಿಟ್ಟು ನೋಡಿ..

ಕೊಹ್ಲಿ ಅಂದ್ರೆ ಒಂದು ಎನರ್ಜಿ. ಆತನ ತೀಷ್ಣ ನೋಟ. ಆತನ ಬಿಯರ್ಡ್​. ಎಂಥವನನ್ನೂ ತನ್ನತ್ತ ಸೆಳೆಯುವಂತೆ ಮಾಡುತ್ತೆ. ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಎರಡು ಫೋಟೋಗಳು. ವಿರಾಟ್​​ಗೆ ವಯಸ್ಸಾಯ್ತೋ ಎಂಬ ಪ್ರಶ್ನೆಯ ಹುಟ್ಟಿಗೆ ಕಾರಣವಾಗಿದೆ.

author-image
Ganesh Kerekuli
Virat kohli new look

ವಿರಾಟ್ ಕೊಹ್ಲಿ ಹೊಸ ಫೋಟೊ

Advertisment

ಕೊಹ್ಲಿ ಅಂದ್ರೆ ಒಂದು ಎನರ್ಜಿ. ಆತನ ತೀಷ್ಣ ನೋಟ. ಆತನ ಬಿಯರ್ಡ್​. ಎಂಥವನನ್ನೂ ತನ್ನತ್ತ ಸೆಳೆಯುವಂತೆ ಮಾಡುತ್ತೆ. ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಎರಡು ಫೋಟೋಗಳು. ವಿರಾಟ್​​ಗೆ ವಯಸ್ಸಾಯ್ತೋ ಎಂಬ ಪ್ರಶ್ನೆಯ ಹುಟ್ಟಿಗೆ ಕಾರಣವಾಗಿದೆ. ಶೀಘ್ರವೇ ಏಕದಿನ ಕ್ರಿಕೆಟ್​ಗೆ ಗುಡ್ ಬೈಹೇಳಿ ಬಿಡ್ತಾರಾ ಎಂಬ ಅನುಮಾನ ಹುಟ್ಟಿಸಿದೆ. 

ಕೊಹ್ಲಿ ಮಾಡ್ರನ್ ಡೇ ಕ್ರಿಕೆಟ್​ನ ಲೆಜೆಂಡ್. ದಿ ಚೇಸ್ ಮಾಸ್ಟರ್​. ಟಿ20, ಟೆಸ್ಟ್​ನಿಂದ ದೂರವಾದರು. ಕಿಂಗ್ ಕೊಹ್ಲಿಯ ಆರಾಧನೆ ಮಾತ್ರ ವಿಶ್ವ ಕ್ರಿಕೆಟ್​​​ ಲೋಕದಲ್ಲಿ ನಿಂತಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರ್ತಾರೆ. ಕೊಹ್ಲಿಯ ಒಂದು ಹೊಸ ಪಿಕ್ ಕಾಣಿಸಿಕೊಂಡ್ರೆ ಸಾಕು. ಆ ದಿನ ಸೋಶಿಯಲ್ ಮೀಡಿಯಾ ಶೇಕ್ ಆಗುತ್ತದೆ. ಟ್ರೆಂಡ್ ಆಗುತ್ತೆ, ಇದೀಗ ಅಂಥದ್ದೇ ಒಂದು ಪಿಕ್​ ಫ್ಯಾನ್ಸ್​ಗೆ ಶಾಕ್​​ಗೆ ದೂಡಿದೆ. ಕಿಂಗ್ ಕೊಹ್ಲಿಗೆ ವಯಸ್ಸಾಯ್ತಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕುವಂತೆ ಮಾಡಿದೆ. ಅದಕ್ಕೆ ಕಾರಣ ಈ ಎರಡು ಪಿಕ್.

ಇದನ್ನೂ ಓದಿ:IPL​ನಲ್ಲಿ ಈ ಬ್ಯಾಟರ್​​ಗೆ ಭಾರೀ ಬೇಡಿಕೆ.. ಯಂಗ್ ವಿಕೆಟ್​ ಕೀಪರ್​ಗಾಗಿ ಬಿಗ್ ಡೀಲ್ ನಡೆಯುತ್ತಾ?

ಕ್ರಿಕೆಟ್​ ಲೋಕದ ಕಿಂಗ್ ಕೊಹ್ಲಿಗೆ ವಯಸ್ಸಾಯ್ತಾ?

ಈ ಒಂದು ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ವೈರಲ್ ಆಗಿತ್ತು. ಗುರುತು ಹಿಡಿಯಲು ಅಸಾಧ್ಯವಾದ ಫೋಟೋ ನೋಡಿದ ಹಲವರು ಇದು ಕೊಹ್ಲಿನಾ ಎಂಬ ಪ್ರಶ್ನಾರ್ಥಕದಲ್ಲೇ ಫೋಟೋ ವೀಕ್ಷಿಸಿದ್ದರು. ಆದ್ರೆ ಯಾವಾಗ ಇದು ಕೊಹ್ಲಿ ಅಂತ ಕನ್ಫರ್ಮ್ ಆಯ್ತೋ. ಆಗ ನಿಜಕ್ಕೂ ಫ್ಯಾನ್ಸ್​ಗೆ ಬೇಸರ ತರಿಸಿತ್ತು. ಕೊಹ್ಲಿ ಕಣ್ಣಲ್ಲಿ ಈ ಹಿಂದೆ ಕಾಣ್ತಿದ್ದ ಆ ಪ್ರಖರತೆ ಮಾಯವಾಗಿತ್ತು.

ಇದನ್ನೂ ಓದಿ: ಐಪಿಎಲ್​ಗೂ ಮೊದಲೇ ನನ್ನನ್ನ ತಂಡದಿಂದ ಬಿಟ್ಟುಬಿಡಿ..

ವಿರಾಟ್​ ಕೊಹ್ಲಿಯ ಈ ಹೊಸ ಅವತಾರ ನೋಡಿದ ಕೆಲ ಫ್ಯಾನ್ಸ್​, ಕೊಹ್ಲಿಗೆ ವಯಸ್ಸಾಯ್ತಾ? ಎಂದು ಕಾಲೆಳೆದಿದ್ದುಂಟು. ಇದೇ ವಿಚಾರವನ್ನ ವಿರಾಟ್, ಯುವರಾಜ್ ಸಿಂಗ್​​ ಲಂಡನ್​ನಲ್ಲಿ YouWeCan ಚಾರಿಟಿ ಫಂಡ್​ ರೈಸಿಂಗ್ ಕಾರ್ಯಕ್ರಮದಲ್ಲೇ ರಿವೀಲ್​ ಮಾಡಿದ್ದರು.

ನಾನು ಎರಡು ದಿನದ ಹಿಂದಷ್ಟೇ ನನ್ನ ಗಡ್ಡಕ್ಕೆ  ಬಣ್ಣ ಹಚ್ಚಿದ್ದೇನೆ. ನಿಮಗೆ ಗೊತ್ತಾ? ಇದು ನಾಲ್ಕು ದಿನಕ್ಕೊಮ್ಮೆ ಬಣ್ಣ ಹಚ್ಚುವ ಸಮಯ-ವಿರಾಟ್ ಕೊಹ್ಲಿ

ಅವತ್ತು ವಿರಾಟ್​ ಕೊಹ್ಲಿ, YouWeCan ಕಾರ್ಯಕ್ರಮದಲ್ಲಿ ಗಡ್ಡದ ಬಗ್ಗೆ ಮಾತನಾಡಿದ್ರು. ಅಂದು ಇದನ್ನ ಕೇವಲ ಜೋಕ್ ಆಗಿ ಸ್ವೀಕರಿಸಿದ್ರು. ಇವತ್ತು ಕೊಹ್ಲಿ ಫೋಟೋ ನೋಡಿದ್ಮೇಲೆ ಸತ್ಯವೆಂದು ಅರಿವಾಗ್ತಿದೆ. ಫ್ಯಾನ್ಸ್​ ಮನದಲ್ಲಿ ಹೊಸ ವೇದನೆಯೂ ಶುರುವಾಗಿದೆ.

ಇದನ್ನೂ ಓದಿ:ಲೆಜೆಂಡರಿ ಬ್ಯಾಟಿಂಗ್ ನೋಡಬೇಕು ಎನ್ನುವ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಬಿಗ್ ಮೆಸೇಜ್ ಕೊಟ್ಟ ಕಿಂಗ್ ಕೊಹ್ಲಿ!

ಕಾಮಿಡಿ ಟು ಸಿರೀಯಸ್.. ಏಕದಿನಕ್ಕೆ ವಿರಾಟ್ ಗುಡ್​ಬೈ?

ಕೊಹ್ಲಿಯ ಬಿಳಿಯ ಗಡ್ಡ ನೋಡಿ ಕಾಮಿಡಿ ಮಾಡಿದ ಫ್ಯಾನ್ಸ್​ಗೆ, ಮತ್ತೊಂದು ಆತಂಕವೂ ಶುರುವಾಗಿದೆ. ಈಗಾಗಲೇ ಟಿ20, ಟೆಸ್ಟ್​ನಿಂದ ದೂರವಾಗಿರುವ ವಿರಾಟ್​, 2027ರ ವಿಶ್ವಕಪ್ ಆಡೋದು ಕಷ್ಟ ಸಾಧ್ಯ ಅಂತಿದ್ದಾರೆ. ಇಂಥ ವೇಳೆಯಲ್ಲೇ ವಿರಾಟ್ ಕೊಹ್ಲಿ ಬಿಳಿ ಗಡ್ಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಹಜವಾಗೇ ಅಭಿಮಾನಿಗಳ ಮನದಲ್ಲಿ ಏಕದಿನ ಕ್ರಿಕೆಟ್​ಗೂ ವಿರಾಟ್ ಗುಡ್ ಬೈ ಹೇಳಿ ಬಿಡ್ತಾರಾ ಎಂಬ ಹೊಸ ಅನುಮಾನ ಹುಟ್ಟಿಹಾಕಿದೆ.

ವಯಸ್ಸಿನಾ ಕಾರಣಕ್ಕೆ ಟಿ20, ಟೆಸ್ಟ್​ಗೆ ಹೇಳಿದ್ರಾ ಗುಡ್ ಬೈ?

ಏಕದಿನ ಕ್ರಿಕೆಟ್ ಭವಿಷ್ಯದ ಪ್ರಶ್ನೆ ಮಾತ್ರವಲ್ಲ. ಟಿ20, ಟೆಸ್ಟ್​ ಕ್ರಿಕೆಟ್​ಗೆ ವಿರಾಟ್​, ಗುಡ್​ ಬೈ ಹೇಳಲು ವಯಸ್ಸೇ ಕಾರಣವಾಯ್ತಾ ಎಂಬ ಪ್ರಶ್ನೆ ಹುಟ್ಟಿದೆ. ಟೆಸ್ಟ್ ಕ್ರಿಕೆಟ್ ಆಡುವಷ್ಟು ಫಿಟ್ನೆಸ್ ಹೊಂದಿದ್ರು. ಇನ್ನೆರಡು ವರ್ಷಗಳ ಕಾಲ ರೆಡ್ ಬಾಲ್ ಆಡುವ ತಾಕತ್ತು ಕೊಹ್ಲಿಗೆ ಇತ್ತು. ಇದು ಆನ್​​ಫೀಲ್ಡ್​ನಲ್ಲಿ ವಿರಾಟ್​ ಕೊಹ್ಲಿ ತೋರುತ್ತಿದ್ದ ಎನರ್ಜಿಯೇ ಹೇಳ್ತಿತ್ತು. ಈ ಬಿಳಿ ಗಡ್ಡದ ಫೋಟೋ ವಯಸ್ಸಿನ ಕಾರಣಕ್ಕೆ ವಿರಾಟ್ ಟೆಸ್ಟ್​ನಿಂದ ದೂರವಾದ್ರಾ ಎಂಬ ಅನುಮಾನ ಶುರುವಾಗುವಂತೆ ಮಾಡಿರೋದು ಸುಳ್ಳಲ್ಲ.

ಲಂಡನ್​ನಲ್ಲೇ ಇದ್ರೂ ಟೆಸ್ಟ್​ ವೀಕ್ಷಣೆಗೆ ಬರಲಿಲ್ಲ ಕೊಹ್ಲಿ

ಟೆಸ್ಟ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಕೊಹ್ಲಿ ಅತಿಥಿ ಸತ್ಕಾರ ಮಾಡಿದ್ರು. ಲಂಡನ್​ನಲ್ಲೇ ಇದ್ದ ಮನೆಗೆ ಕರೆದು ಉಪಹಾರದ ವ್ಯವಸ್ಥೆ ಮಾಡಿದ್ರು. ಲಂಡನ್​ನಲ್ಲೇ ನಡೀತಿದ್ದ ವಿಂಬಲ್ಡನ್ ವೀಕ್ಷಿಸಿದ್ದ ವಿರಾಟ್​, 100 ಪರ್ಸೆಟ್ ಟೀಮ್ ಇಂಡಿಯಾ ಟೆಸ್ಟ್​ ನೋಡಲು ಬಂದೇ ಬರ್ತಾರೆ ಅನ್ನೋ ಬೆಟ್ಟದಷ್ಟು ನಿರೀಕ್ಷೆ ಇತ್ತು. ಪ್ರವಾಸಕ್ಕೆ ತೆರೆಳಿದ್ದ ರೋಹಿತ್ ಬಂದ್ರೂ ವಿರಾಟ್ ಬರಲೇ ಇಲ್ಲ. ಇದು ವಿರಾಟ್​​ಗೆ ಕ್ರಿಕೆಟ್​​ನಿಂದ ದೂರವಾದ ಬೇಸರ ಕಾಡ್ತಿದೆಯಾ ಎಂಬ ಹೊಸ ಪ್ರಶ್ನೆ ಹುಟ್ಟಿಹಾಕಿದೆ.

ಇದನ್ನೂ ಓದಿ: ಕೋಟಿ, ಕೋಟಿ ಹಣ ಇದ್ದರೂ ಅದೊಂದು ಕೊರಗು; ‘ನನ್ನ ಮಗನೂ ಇದ್ದಿದ್ದರೆ’ ಅಂತಾ ಧವನ್ ಕಣ್ಣೀರು ಇಟ್ಟಿದ್ದೇಕೆ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Virat Kohli Rohit Sharma-Virat Kohli
Advertisment