ಲೆಜೆಂಡರಿ ಬ್ಯಾಟಿಂಗ್ ನೋಡಬೇಕು ಎನ್ನುವ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಬಿಗ್ ಮೆಸೇಜ್ ಕೊಟ್ಟ ಕಿಂಗ್ ಕೊಹ್ಲಿ!

ಸದ್ಯ ಇದೀಗ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮುಗಿಸಿದ್ದು ಮತ್ತೊಂದು ಪ್ರವಾಸ ಕೈಗೊಳ್ಳಲಿದೆ. ಇದರ ನಡುವೆ ಸಹಾಯಕ ಕೋಚ್​ ಒಬ್ಬರ ಹೆಲ್ಪ್​ ಅನ್ನು ಲೆಜೆಂಡರಿ ಬ್ಯಾಟರ್​ ವಿರಾಟ್ ಕೊಹ್ಲಿ ಅವರು ತೆಗೆದುಕೊಂಡಿದ್ದಾರೆ.

author-image
Bhimappa
VIRAT_KOHLI_Batting
Advertisment

ವಿರಾಟ್ ಕೊಹ್ಲಿ ಅವರು ಟೆಸ್ಟ್​ ಕ್ರಿಕೆಟ್ ಹಾಗೂ ಟಿ20 ಕ್ರಿಕೆಟ್​ಗೆ ಈಗಾಗಲೇ ವಿದಾಯ ಹೇಳಿದ್ದು ಇನ್ನೇನಿದ್ದರೂ ಏಕದಿನ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಇದೀಗ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮುಗಿಸಿದ್ದು ಮತ್ತೊಂದು ಪ್ರವಾಸ ಕೈಗೊಳ್ಳಲಿದೆ. ಇದರ ನಡುವೆ ಸಹಾಯಕ ಕೋಚ್​ ಒಬ್ಬರ ಹೆಲ್ಪ್​ ಅನ್ನು ಲೆಜೆಂಡರಿ ಬ್ಯಾಟರ್​ ವಿರಾಟ್ ಕೊಹ್ಲಿ ಅವರು ತೆಗೆದುಕೊಂಡಿದ್ದಾರೆ. ಇಷ್ಟಕ್ಕೂ ಈ ಕೋಚ್ ಸಹಾಯವನ್ನು ವಿರಾಟ್ ಕೊಹ್ಲಿ ಅವರು ಪಡೆದಿರುವುದು ಏಕೆ?. 

ಲೆಜೆಂಡರಿ ಇಂಡಿಯನ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್​ ಲೀಗ್ (ಐಪಿಎಲ್​) ಫ್ರಾಂಚೈಸಿ ಆದ ಗುಜರಾತ್​ ಟೈಟನ್ಸ್​ ತಂಡದ ಸಹಾಯಕ ಕೋಚ್ ಒಬ್ಬರ ಹೆಲ್ಪ್ ಪಡೆದುಕೊಂಡಿದ್ದಾರೆ. ಕಿಂಗ್ ಕೊಹ್ಲಿ ಅವರು ಅಭ್ಯಾಸ ಮಾಡುವಾಗ ಗುಜರಾತ್​ ಟೈಟನ್ಸ್​ ತಂಡದ ಸಹಾಯಕ ಕೋಚ್ ಆಗಿರುವ ನಯೀಮ್ ಅಮೀನ್ ಅವರ ಸಹಾಯ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. 

ಇದನ್ನೂ ಓದಿ:ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ SIT ಅನ್ನು ಪೊಲೀಸ್ ಠಾಣೆ ಎಂದು ಘೋಷಿಸಿದ ಸರ್ಕಾರ

VIRAT_KOHLI (1)

ಇದಕ್ಕೆ ಸಾಕ್ಷಿ ಎಂಬಂತೆ ವಿರಾಟ್ ಕೊಹ್ಲಿ ಅವರು ತಮ್ಮ ಇನ್​ಸ್ಟಾದಲ್ಲಿ ಪೋಸ್ಟ್​ವೊಂದನ್ನು ಶೇರ್ ಮಾಡಿದ್ದಾರೆ. ಸಹಾಯಕ ಕೋಚ್ ನಯೀಮ್ ಅಮೀನ್ ಜೊತೆ ಇರುವ ಫೋಟೋ ಹಂಚಿಕೊಂಡಿದ್ದು ಇದಕ್ಕೆ ದೊಡ್ಡ ಶಾಟ್​​ಗಳನ್ನು ಬಾರಿಸಲು ಹೇಳಿಕೊಟ್ಟಿದ್ದಕ್ಕೆ ಥ್ಯಾಂಕ್ಸ್​ ಬ್ರದರ್​. ನಿಮ್ಮನ್ನು ಯಾವಾಗಲೂ ಮೀಟ್ ಮಾಡಿ ಮಾತನಾಡಿಸಲು ಸಂತೋಷವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಇದಕ್ಕೆ ಸಾಕಷ್ಟು ಕಮೆಂಟ್​ಗಳನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. 

ಕೊಹ್ಲಿ ಅವರ ಈ ಅಭ್ಯಾಸ ಯಾಕೆ ಎನ್ನುವುದು ನಿಮ್ಮ ಪ್ರಶ್ನೆ ಆಗಿರಬಹುದು. ಟೆಸ್ಟ್​, ಟಿ20 ಕ್ರಿಕೆಟ್​ನಿಂದ ದೂರ ಇರುವ ವಿರಾಟ್​ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ. ಅಕ್ಟೋಬರ್​ 19 ರಿಂದ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲ್ಲಿದೆ. ಈ ಟೂರ್ನಿಯಲ್ಲಿ ಮೂರು ಒಡಿಐ ಹಾಗೂ 5 ಟಿ20 ಪಂದ್ಯಗಳು ಇವೆ. ಈ ಹಿನ್ನೆಲೆಯಲ್ಲಿ ಕಿಂಗ್ ಕೊಹ್ಲಿ, ಅಭಿಮಾನಿಗಳಿಗೆ ಬಿಗ್ ಮೆಸೇಜ್ ಕೊಟ್ಟಿದ್ದಾರೆ.  

ಅಕ್ಟೋಬರ್ 19 ರಂದು ಪರ್ತ್​​ನಲ್ಲಿ ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಬ್ಯಾಟಿಂಗ್ ಅನ್ನು ಫ್ಯಾನ್ಸ್​ ಕಣ್ತುಂಬಿಕೊಳ್ಳಬಹುದು. ಇದಾದ ಮೇಲೆ ಅ. 23 ಹಾಗೂ 25 ರಂದು ಎರಡು ಪಂದ್ಯಗಳು ನಡೆಯಲಿವೆ. ಹೀಗಾಗಿ ಕಿಂಗ್ ಕೊಹ್ಲಿ ಈಗಿನಿಂದಲೇ ಅಭ್ಯಾಸ ನಡೆಸಿದ್ದಾರೆ ಎನ್ನಲಾಗಿದೆ.

ಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಮಿ’ ವೀಕ್ಷಿಸಿ 

England vs India Virat Kohli ENG vs IND Rohit Sharma-Virat Kohli
Advertisment