/newsfirstlive-kannada/media/media_files/2025/08/07/dharmastala-1-2025-08-07-14-34-39.jpg)
ಮಂಗಳೂರು: ಧರ್ಮಸ್ಥಳದಲ್ಲಿ ಮಹಿಳೆಯರು, ಯುವತಿಯರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್​ಐಟಿ)ವನ್ನು ರಚನೆ ಮಾಡಿತ್ತು. ಸದ್ಯ ಇದೀಗ ಈ ಎಸ್​ಐಟಿಯನ್ನು ಪೊಲೀಸ್ ಠಾಣೆ ಎಂದು ಘೋಷಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಆರೋಪದಡಿ ತನಿಖೆಗೆ ರಚನೆಯಾಗಿದ್ದ ಎಸ್ಐಟಿಗೆ ಪೊಲೀಸ್​ ಠಾಣೆ ಮಾನ್ಯತೆಯನ್ನ ಸರ್ಕಾರ ನೀಡಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್​ಎಸ್​​ಎಸ್​) ಕಲಂ 2 (1)(ಯು) ಅಡಿಯಲ್ಲಿ ನೀಡಿರುವ ಅಧಿಕಾರವನ್ನು ಚಲಾಯಿಸಿದ ಸರ್ಕಾರದ ಆದೇಶದಂತೆ 2025 ಜುಲೈ 19 ರಂದು ರಚನೆ ಮಾಡಲಾದ ಎಸ್​ಐಟಿಯನ್ನು ಪೊಲೀಸ್ ಠಾಣೆ ಎಂದು ಅನೌನ್ಸ್ ಮಾಡಲಾಗಿದೆ.
ಇದನ್ನೂ ಓದಿ:ವರಮಹಾಲಕ್ಷ್ಮಿ ಹಬ್ಬದ ದಿನವೇ ಅರ್ಚಕನ ಮನೆಗೆ ಕನ್ನ.. ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿ
/filters:format(webp)/newsfirstlive-kannada/media/media_files/2025/08/05/dharmasthala-case-2025-08-05-14-49-49.jpg)
ಎಸ್​ಐಟಿಗೆ ನೇಮಕ ಮಾಡಲಾದ ಪೊಲೀಸ್ ನಿರೀಕ್ಷಕರ ದರ್ಜೆಯ/ಮೇಲ್ಪಟ್ಟ ದರ್ಜೆಯ ಅಧಿಕಾರಿಯನ್ನು ಬಿಎನ್​ಎಸ್​​ಎಸ್ ಅಡಿ ಠಾಣಾ ಅಧಿಕಾರಿ ಎಂದು ಘೋಷಣೆ ಮಾಡಲಾಗಿದೆ. ಎಸ್​ಐಟಿ ಬಿಎನ್​ಎಸ್​​ಎಸ್ ಅಡಿ ತನಿಖಾ ಕ್ರಮಗಳನ್ನು ಅನುಸರಿಸಿ ರಚಿಸಿರುವ ಸಂಬಂಧಪಟ್ಟ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಕೆ ಮಾಡುವಂತಹ ಅಧಿಕಾರವನ್ನು ಸರ್ಕಾರ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us