/newsfirstlive-kannada/media/media_files/2025/08/09/ctr_house_theft-2025-08-09-06-50-58.jpg)
ಚಿತ್ರದುರ್ಗ: ವರಮಹಾಲಕ್ಷ್ಮಿ ಹಬ್ಬದ ದಿನವೇ ಅರ್ಚಕರೊಬ್ಬರ ಮನೆಯಲ್ಲಿ ಹೊಂಚು ಹಾಕಿ ಚಿನ್ನಾಭರಣ ದೋಚಿರುವ ಘಟನೆ ಚಿತ್ರದುರ್ಗ ನಗರದ ವಾಸವಿ ಶಾಲೆ ಬಳಿಯ ಮನೆಯಲ್ಲಿ ನಡೆದಿದೆ.
ನಗರದ ವಾಸವಿ ಶಾಲೆ ಬಳಿ ಇರುವ ಅರ್ಚಕ ರಾಜರಾವ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಇವರ ಮನೆಯ ಬೀರುವಿನಲ್ಲಿದ್ದಂತಹ 170 ಗ್ರಾಂ ಚಿನ್ನ ಹಾಗೂ 3 ಕೆ.ಜಿ ಬೆಳ್ಳಿ ಕದ್ದು ಖದೀಮರು ಪರಾರಿಯಾಗಿದ್ದಾರೆ. ಇದು ಸುಮಾರು ಅಂದಾಜು 20 ಲಕ್ಷ ಮೌಲ್ಯದ ಚಿನ್ನಾಭರಣವಾಗಿದೆ ಎಂದು ಗೊತ್ತಾಗಿದೆ.
ಇದನ್ನೂ ಓದಿ:ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು..? ಪ್ರತಿಯೊಂದು ಗಂಟಿಗೂ ವಿಭಿನ್ನ ಅರ್ಥ ಇದೆ..!
ಅರ್ಚಕ ಹೊರ ಹೋಗುವುದನ್ನೇ ಕಾಯುತ್ತಿದ್ದಂತಹ ಖದೀಮರು ಹೊಂಚು ಹಾಕಿದ್ದಾರೆ. ಅದರಂತೆ ನಿನ್ನೆ ವರಮಹಾಲಕ್ಷ್ಮಿ ಹಬ್ಬದಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಮನೆಯಲ್ಲಿ ಹುಡುಕಾಡಿ, ಬೀರುವಿನಲ್ಲಿದ್ದಂತಹ 170 ಗ್ರಾಂ ಚಿನ್ನ ಹಾಗೂ 3 ಕೆ.ಜಿ ಬೆಳ್ಳಿ ಕಳ್ಳತನ ಮಾಡಿ, ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಸದ್ಯ ಇದೆಲ್ಲಾ ಚಿನ್ನಾಭರಣದ ಮೊತ್ತ 20 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಇನ್ನು ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಭೇಟಿ ನೀಡಿದ್ದಾರೆ. ಬಳಿಕ ಮನೆಯಲ್ಲಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಚಿತ್ರದುರ್ಗ ನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ