/newsfirstlive-kannada/media/media_files/2025/08/08/raksha-bandhan-1-2025-08-08-21-09-42.jpg)
ಪ್ರತಿ ವರ್ಷ ಶ್ರಾವಣ ಹುಣ್ಣಿಮೆಯಂದು ರಾಖಿ ಹಬ್ಬವನ್ನು (Raksha Bandhan-2025) ಬಹಳ ಪ್ರೀತಿ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಹಬ್ಬವು ಸಹೋದರರ, ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾಗಿದೆ. ದೇಶದಲ್ಲಿ ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ರಾಖಿ ಹಬ್ಬ ಆಚರಿಸಲಾಗುತ್ತದೆ..
ಇಲ್ಲಿ ಸಹೋದರಿ ಸಹೋದರನ ಕೈಗೆ ರಾಖಿ ಕಟ್ಟುತ್ತಾಳೆ. ಇಲ್ಲಿ ಸಹೋದರಿಯು ಅಣ್ಣ ಮತ್ತು ತಮ್ಮನ ಶಾಶ್ವತ ಸಂತೋಷ ಮತ್ತು ಸಂಪೂರ್ಣ ಆರೋಗ್ಯವನ್ನು ಬಯಸುತ್ತಾರೆ. ರಾಖಿ ಕಟ್ಟಿದ ಪ್ರತಿಫಲವಾಗಿ ಸಹೋದರರು ಸಹೋದರಿಯರಿಗೆ ಉಡುಗೊರೆಗಳನ್ನು ನೀಡ್ತಾರೆ. ಒಡಹುಟ್ಟಿದವರು ರಾಖಿ ಕಟ್ಟುವಾಗ ಎಷ್ಟು ಗಂಟುಗಳನ್ನು ಕಟ್ಟಬೇಕೆಂದು ತಿಳಿದಿರಬೇಕು. ಧಾರ್ಮಿಕ ನಂಬಿಕೆ ಪ್ರಕಾರ, ರಾಖಿ ಕಟ್ಟುವುದು ಪ್ರೀತಿ ಮತ್ತು ರಕ್ಷಣೆಯನ್ನು ಸಂಕೇತಿಸುತ್ತದೆ.
ಇದನ್ನೂ ಓದಿ: ರಾಖಿ ಕಟ್ಟೋ ಮುನ್ನ ಸಹೋದರಿಯರು ಓದಲೇಬೇಕಾದ ಪ್ರಮುಖ ವಿಚಾರ ಇಲ್ಲಿದೆ..!
ಈ ಬಾರಿ ಆಗಸ್ಟ್ 9 ರಂದು ರಾಖಿ ಹಬ್ಬ ಬಂದಿದೆ. ಅಂದರೆ ಇವತ್ತು. ತಜ್ಞರು ಹೇಳುವಂತೆ ರಾಖಿ ಹಬ್ಬವನ್ನು ಸೂರ್ಯೋದಯದಿಂದಲೇ ಪ್ರಾರಂಭಿಸಬಹುದು. ರಾಖಿ ಕಟ್ಟಲು, ಸಹೋದರಿ.. ತನ್ನ ಸಹೋದರನ ಮಣಿಕಟ್ಟಿನ ಮೇಲೆ ಪ್ರೀತಿಯ ರಾಖಿ ಕಟ್ಟಬೇಕು. ರಾಖಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕಬೇಕು. ಮೊದಲ ಗಂಟು ಸಹೋದರನಿಗೆ ದೀರ್ಘಾಯುಷ್ಯ ನೀಡುತ್ತದೆ. ಎರಡನೇ ಗಂಟು ಅದನ್ನು ಕಟ್ಟುವ ಸಹೋದರಿಯರಿಗೆ ದೀರ್ಘಾಯುಷ್ಯ ನೀಡುತ್ತದೆ ಮತ್ತು ಮೂರನೇ ಗಂಟು ಅವರ ಸಂಬಂಧದಲ್ಲಿ ಮಾಧುರ್ಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಹೀಗಾಗಿ ರಾಖಿಯನ್ನು ಮೂರು ಗಂಟುಗಳಿಂದ ಕಟ್ಟಬೇಕು ಎಂದು ಹೇಳಲಾಗುತ್ತದೆ.
ರಾಕಿ ಕಟ್ಟುವ ಮೊದಲು ಏನು ಮಾಡ್ಬೇಕು..?
ಮೊದಲು ಸಹೋದರನ ಹಣೆಯ ಮೇಲೆ ಒಂದು ಚುಕ್ಕೆ ಇಡಬೇಕು. ತಜ್ಞರು ಹೇಳುವಂತೆ.. ಉಂಗುರದ ಬೆರಳಿನಿಂದ ಅದನ್ನು ಹಚ್ಚಿಕೊಳ್ಳುವುದು ಉತ್ತಮ. ಆ ಚುಕ್ಕೆಯ ಮೇಲೆ ಅಕ್ಕಿ ಕಾಳುಗಳನ್ನು ಹಚ್ಚಿ ಸಹೋದರನ ದೀರ್ಘಾಯುಷ್ಯಕ್ಕಾಗಿ ಹಾರೈಸಬೇಕು. ರಾಖಿ ಕಟ್ಟಿದ ನಂತರ ಸಿಹಿತಿಂಡಿಗಳನ್ನು ತಿನ್ನಿಸಬೇಕು. ಹೀಗೆ ಮಾಡೋದ್ರಿಂದ ಇಬ್ಬರ ಜೀವನದ ಸಿಹಿ ಕ್ಷಣಗಳು ಮತ್ತು ಸಂತೋಷಗಳು ದ್ವಿಗುಣಗೊಳ್ಳುತ್ತವೆ ಎಂದು ನಂಬಲಾಗಿದೆ.
ಇದನ್ನೂ ಓದಿ: ನಿರಂತರವಾಗಿ ನಿಮ್ಮ ಕಣ್ಣು ಅದರುತ್ತಾ ಇದ್ಯಾ? ಅದು ಶಕುನವಲ್ಲ, ಮತ್ತೇನು ಸೂಚಿಸುತ್ತಿದೆ?
ರಾಖಿ ಕಟ್ಟುವಾಗ ಸರಿಯಾದ ದಿಕ್ಕಿನತ್ತಲೂ ಗಮನ ಹರಿಸಬೇಕು. ರಕ್ಷಾ ಬಂಧನದ ದಿನದಂದು ಸಹೋದರಿ ಪಶ್ಚಿಮಕ್ಕೆ ಮತ್ತು ಸಹೋದರ ಈಶಾನ್ಯಕ್ಕೆ ಮುಖ ಮಾಡುವುದು ಉತ್ತಮ. ಆ ದಿಕ್ಕಿನಲ್ಲಿ ಕುಳಿತು ಬಲಗೈಯ ಮಣಿಕಟ್ಟಿಗೆ ರಾಖಿ ಕಟ್ಟಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಈ ಸುದ್ದಿಯಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ