/newsfirstlive-kannada/media/media_files/2025/08/05/raksha-bandhan-2025-08-05-14-34-25.jpg)
​ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಕ್ಷಾ ಬಂಧನ ಬರುತ್ತಿದೆ. ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ರಕ್ಷಾ ಬಂಧನ ಅಥವಾ ರಾಖಿ ಹಬ್ಬ ಕೂಡ ಒಂದಾಗಿದೆ. ಈ ಬಾರಿ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಆಚರಣೆ ಮಾಡಲಾಗುತ್ತಿದೆ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ; ಈ ಕುರಿತು ಸಭೆ ಬಳಿಕ ಸಚಿವ ರಾಮಲಿಂಗಾರೆಡ್ಡಿ ಏನೇನು ಹೇಳಿದರು?
/newsfirstlive-kannada/media/post_attachments/wp-content/uploads/2024/08/RAKHI_AP_2.jpg)
ರಕ್ಷಾ ಬಂಧನ ನಿಮಿತ್ತ ಈಗಾಗಲೇ ಮಾರುಕಟ್ಟೆಗೆ ಭಿನ್ನ ವಿಭಿನ್ನವಾದ ರಾಖಿಗಳು ಬಂದಿವೆ. ಅದರಲ್ಲೂ ಮಕ್ಕಳಿಗಾಗಿಯೇ ವಿಶೇಷವಾದ ರಾಖಿಗಳು ಬಂದಿದೆ. ಸಹೋದರರಿಗೆ ರಾಖಿ ಕಟ್ಟುವ ಮೊದಲು ಸಹೋದರಿಯರು ರಕ್ಷಾ ಬಂಧನದ ಮಹತ್ವವನ್ನು ತಿಳಿದುಕೊಳ್ಳಬೇಕು.
ಹೌದು, ಸುಖಾ ಸುಮ್ಮನೆ ರಾಖಿಯನ್ನು ಯಾರ್ಯಾರಿಗೋ ಕಟ್ಟುವಂತಿಲ್ಲ. ರಾಖಿಯೂ ತನ್ನದೇಯಾದ ಮಹತ್ವವನ್ನು ಪಡೆದುಕೊಂಡಿದೆ. ಕಳೆದ ವರ್ಷ ರಕ್ಷಾಬಂಧನ ಆಗಸ್ಟ್ 19ಕ್ಕೆ ಬಂದಿತ್ತು. ಆದ್ರೆ ಈ ಬಾರಿ ಒಂಬತ್ತು ದಿನಗಳ ಮುಂಚಿತವಾಗಿ ಬಂದಿದೆ. ಈ ಬಾರಿ ಆಗಸ್ಟ್ 9ರಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/08/RAKHI_AP.jpg)
ರಕ್ಷಾ ಬಂಧನವು ಹಿಂದೂ ಸಂಪ್ರದಾಯದಲ್ಲಿ ಒಂದು ಮುಖ್ಯವಾದ ಹಬ್ಬವಾಗಿದೆ. ಅದರಲ್ಲೂ ಇದು ರಕ್ಷಾ ಬಂಧನವು ಭಾರತೀಯ ಸಂಸ್ಕೃತಿ ಮತ್ತು ಪದ್ಧತಿಯ ಅಂಗವಾಗಿದೆ. ಇದು ಸಹೋದರ ಮತ್ತು ಸಹೋದರಿಯರ ನಡುವಿನ ಬಂಧವನ್ನು ಆಚರಿಸುತ್ತದೆ. ಸಹೋದರಿಯು ತನ್ನ ಸಹೋದರನ ಕೈಗೆ ರಾಖಿ ಕಟ್ಟುವ ಮೂಲಕ ಅವನ ರಕ್ಷಣೆಯನ್ನು ಕೋರುತ್ತಾಳೆ. ಇದು ಸಹೋದರನಿಗೆ ತನ್ನ ಸಹೋದರಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ನೀಡುತ್ತದೆ. ಜೊತೆಗೆ ಸಹೋದರ ಮತ್ತು ಸಹೋದರಿಯರ ನಡುವಿನ ಬಂಧವನ್ನು ಬಲಪಡಿಸುತ್ತದೆ.
/newsfirstlive-kannada/media/post_attachments/wp-content/uploads/2024/08/raksha-bandana3.jpg)
ರಕ್ಷಾ ಬಂಧನದ ಮಹತ್ವ ಏನು?
ಸಂಸ್ಕೃತದಿಂದ ಹುಟ್ಟಿಕೊಂಡ ಈ ರಕ್ಷಾ ಬಂಧನ ಪದವು "ರಕ್ಷಣೆಯ ಬಂಧ" ಎಂದು ಸೂಚಿಸುತ್ತದೆ. ಹಿಂದೂ ಚಂದ್ರನ ಕ್ಯಾಲೆಂಡರ್‌ನಲ್ಲಿ 5ನೇ ತಿಂಗಳು ಶ್ರಾವಣ (ಜುಲೈ-ಆಗಸ್ಟ್) ಸಮಯದಲ್ಲಿ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯ ನಡುವಿನ ಪ್ರೀತಿಯನ್ನು ಆಚರಿಸುವ ಜನಪ್ರಿಯ ಹಿಂದೂ ಹಬ್ಬವಾಗಿದೆ. ರಕ್ಷ ದಿನದಂದು ಒಬ್ಬ ಸಹೋದರಿ ಅಣ್ಣ ಅಥವಾ ತಮ್ಮನಿಗೆ ದಾರದ ರೂಪದಲ್ಲಿರುವ ತಾಯಿತವನ್ನು ಆತನ ಬಲಗೈಗೆ ಕಟ್ಟುತ್ತಾಳೆ. ಈ ಮೂಲಕ ಅವರ ಸಂಬಂಧವನ್ನು ಹೆಚ್ಚಿಸುತ್ತದೆ. ಆ ರಾಖಿ ಕಟ್ಟಿಸಿಕೊಳ್ಳುವ ಮೂಲಕ ಸಹೋದರಿಯನ್ನು ತನ್ನ ಜೀವನದುದ್ದಕ್ಕೂ ರಕ್ಷಿಸುತ್ತೇನೆ ಅಂತ ಪ್ರತಿಜ್ಞೆಯ ಸಂಕೇತ.
/newsfirstlive-kannada/media/post_attachments/wp-content/uploads/2024/08/RAKSHABANDHAN.jpg)
ರಕ್ಷಾ ಬಂಧನ ಹೇಗೆ ಆಚರಣೆ ಮಾಡ್ತಾರೆ?
ಮೊದಲು ಸಹೋದರಿಯರು ತಮ್ಮ ತಮ್ಮ ಸಹೋದರರಿಗಾಗಿ ವಿಶೇಷವಾದ ರಾಖಿಯನ್ನು ತರುತ್ತಾರೆ. ಬಳಿಕ ಅವರನ್ನು ಒಂದು ಕಡೆ ಕುರಿಸಿ ಹಣೆಗೆ ಕುಂಕುಮವನ್ನು ಹಚ್ಚುತ್ತಾರೆ. ಬಳಿಕ ರಾಖಿಯನ್ನು ಅವರ ಬಲಗೈಗೆ ಕಟ್ಟುತ್ತಾರೆ. ಇದಾದ ಬಳಿಕ ಸಿಹಿ ತಿಂಡಿಯನ್ನು ತಿನ್ನುತ್ತಾರೆ. ನಂತರ ಸಹೋದರ ಆಕೆಗೆ ಉಡುಗೊರೆಯನ್ನು ನೀಡುತ್ತಾನೆ. ಅದು ಹಣದ ರೂಪದಲ್ಲಿಯೂ ಅಥವಾ ಬಟ್ಟೆಯ ರೂಪದಲ್ಲಿಯೂ ಇರಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us