/newsfirstlive-kannada/media/media_files/2025/08/04/ramalingareddy-2025-08-04-19-09-18.jpg)
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: 14 ತಿಂಗಳ ವೇತನ ಕೊಡುತ್ತೇವೆ. ಇದಕ್ಕೆ 700 ಕೋಟಿ ರೂಪಾಯಿಗೂ ಹೆಚ್ಚು ಹಣ ಬೇಕಾಗುತ್ತದೆ. ಆದಷ್ಟು ಬೇಗ ಚುನಾವಣೆ ನಡೆಸುತ್ತೇವೆ. ಸಮಾನ ವೇತನಕ್ಕೆ ಇನ್ನು ಸಮಯ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಸಾರಿಗೆ ಇಲಾಖೆಗಳಲ್ಲಿ ಎರಡು ಬಣಗಳಿವೆ. ಒಟ್ಟು ಹದಿನಾಲ್ಕು ಸಂಘ ಸಂಸ್ಥೆಗಳಿವೆ. ಜಂಟಿ ಕ್ರಿಯಾ ಸಮಿತಿ ಹಾಗೂ ಒಕ್ಕೂಟದವರ ಜೊತೆ ಇಂದು ಸಭೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಇದರ ಅಧ್ಯಕ್ಷತೆ ವಹಿಸಿದ್ದರು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.
ಸಭೆಯಲ್ಲಿ 38 ತಿಂಗಳ ಪರಿಷ್ಕೃತ ವೇತನ ಕೊಡಬೇಕು ಎನ್ನುವುದು ಅವರ ಬೇಡಿಕೆ ಆಗಿದೆ. ಏಕ ಸದಸ್ಯರ ಸಮಿತಿಯೊಂದನ್ನ ಈ ಹಿಂದೆ ಪ್ರಧಾನ ಕಾರ್ಯದರ್ಶಿ ಆಗಿದ್ದ ಶ್ರೀನಿವಾಸ್ ಮೂರ್ತಿ ಅವರು ಮಾಡಿದ್ದರು. 2023ರ ಮಾರ್ಚ್ ಇಂದ ಪರಿಷ್ಕರಣೆ ಆಗಬೇಕು ಎಂದು ಆವಾಗ ನಮ್ಮ ಸರ್ಕಾರ ಮಾಡಿತ್ತು. ಕೋವಿಡ್ಸಮಯದಲ್ಲಿ ಕೊಡುವುದು ಸೂಕ್ತವಲ್ಲ. 2022ರ ಜನವರಿಯಿಂದ 14 ತಿಂಗಳ ವೇತನ ಕೊಡಿ ಎಂದು ಅವರು ಹೇಳಿದ್ದರು. ಇದಕ್ಕೆ 700ಕ್ಕೂ ಅಧಿಕ ಕೋಟಿ ಹಣ ಬೇಕಾಗುತ್ತದೆ. ಇದನ್ನು ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ:ಸಾರಿಗೆ ಮುಷ್ಕರ ಮಾಡುತ್ತೇವೆ, ನಮಗೆ ಕೋರ್ಟ್ನಿಂದ ನಿರ್ದೇಶನ ಬಂದಿಲ್ಲ; ಅನಂತ ಸುಬ್ಬರಾವ್
ಆದರೆ ಸಂಘಟನೆಗಳು ನಮಗೆ 38 ತಿಂಗಳದು ವೇತನ ಕೊಡಬೇಕು. ಜೊತೆಗೆ 2024ರ ವೇತನ ಪರಿಷ್ಕರಣೆ ಆಗಬೇಕು ಎನ್ನುತ್ತಿದ್ದಾರೆ. ಇನ್ನೊಂದು ಒಕ್ಕೂಟದ ಬೇಡಿಕೆ ಎಂದರೆ ಚುನಾವಣೆ ಮಾಡಿ ಎಂದು ಹೇಳುತ್ತಿದ್ದಾರೆ. 1996ರಲ್ಲಿ ಚುನಾವಣೆ ಮಾಡಲಾಗಿದೆ. ಹೀಗಾಗಿ ಬೇಗ ಎಲೆಕ್ಷನ್ ಮಾಡಿ ಎನ್ನುವುದು ಒಕ್ಕೂಟದ ಪ್ರಬಲ ಬೇಡಿಕೆ ಆಗಿದೆ. ಇನ್ನೊಂದು ಸಮಾನ ವೇತನ ಕೊಡಿ ಎನ್ನುವುದು ಬೇಡಿಕೆ ಆಗಿದೆ. 4 ವರ್ಷಕ್ಕೊಮ್ಮೆ ಈ ಜಂಜಾಟ ಬೇಡ, ಸರ್ಕಾರಿ ನೌಕರರಿಗೆ ಏನು ಸಂಬಳ ಕೊಡುತ್ತಿರೋ ಅದೇ ರೀತಿ ನಮಗೂ ಸಂಬಳ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.
ಆದರೆ ಸಿಎಂ ಸಿದ್ದರಾಮಯ್ಯ ಅವರು 01- 01- 2022 ರಿಂದ 14 ತಿಂಗಳವರೆಗೆ ಕೊಡಲು ಒಪ್ಪಿದ್ದಾರೆ. ಚುನಾವಣೆ ನಡೆಸುವುದರ ಬಗ್ಗೆಯೂ ಆದಷ್ಟು ಬೇಗ ನಡೆಸುವುದಾಗಿ ಸಿಎಂ ಹೇಳಿದ್ದಾರೆ. ಸಮಾನ ವೇತನ ಕೂಡ ನಮ್ಮ ಪ್ರಣಾಳಿಕೆಯಲ್ಲಿತ್ತು. ಇದಕ್ಕೆ ಇನ್ನು ಸಮಯ ಇದೆ. ಹಾಗಾಗಿ ಇನ್ನು ನೋಡೋಣ. 700 ಕೋಟಿ ರೂಪಾಯಿ ಕೊಡುತ್ತೇವೆ. ಮುಂದೆ ಬಂದು ಎಲ್ಲರು ಮಾತನಾಡೋಣ. ನಾವು ಒಂದು ಹೆಜ್ಜೆ ಮುಂದೆ ಬಂದಿದ್ದೇವೆ. ನೀವು ಒಂದು ಹೆಜ್ಜೆ ಮುಂದೆ ಬನ್ನಿ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಎರಡನೇ ಬಣದವರು ಧರಣಿ ಕುಳಿತುಕೊಂಡಿದ್ದಾರೆ. ಅವರು ಮುಷ್ಕರದಲ್ಲಿ ಪಾಲ್ಗೊಂಡಿಲ್ಲ. ಪಿಐಎಲ್ ಹಾಕಿದ್ದನ್ನ ನಮ್ಮ ಗಮನಕ್ಕೆ ತಂದಿದ್ದಾರೆ. ಎರಡು ದಿನದ ಬಳಿಕ ವಿಚಾರಣೆ ನಡೆಯುತ್ತದೆ. ಎಸ್ಮಾ ಈ ಹಿಂದೆ ನಾನು ಸಾರಿಗೆ ಸಚಿವ ಆದಗಿನಿಂದಲೂ ಇದೆ. ಕೋರ್ಟ್ ಹೇಳಿದ ಮೇಲೆ ಮುಷ್ಕರ ಮಾಡೋಕೆ ಆಗಲ್ಲ. ಮುಂದಕ್ಕೆ ಹಾಕಿ ಎಂದು ನ್ಯಾಯಾಲಯ ಹೇಳಿದೆ. ಒಂದು ದಿನ ಸಮಯ ಇದೆ. ಹೀಗಾಗಿ ಕಾದು ನೋಡೋಣ ಎಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ