IPL​ನಲ್ಲಿ ಈ ಬ್ಯಾಟರ್​​ಗೆ ಭಾರೀ ಬೇಡಿಕೆ.. ಯಂಗ್ ವಿಕೆಟ್​ ಕೀಪರ್​ಗಾಗಿ ಬಿಗ್ ಡೀಲ್ ನಡೆಯುತ್ತಾ?

ನಾಯಕನಾಗಿ ತನ್ನಿಷ್ಟದ ಬ್ಯಾಟಿಂಗ್ ಆರ್ಡರ್​​ನಲ್ಲಿ ಕಣಕ್ಕಿಳಿಯುವ ಫ್ರೀಡಂ ಇಲ್ಲ. ಪ್ರಮುಖವಾಗಿ ಟಿ20 ಕ್ರಿಕೆಟ್​​ನಲ್ಲಿ ಆರಂಭಿಕನಾಗಿ ಬ್ಯಾಟಿಂಗ್ ಮಾಡುತ್ತಿರುವ ಅವರು ಬೇರೆಯವರಿಗಾಗಿ ಸ್ಥಾನ ಬಿಟ್ಟು ಕೊಡಬೇಕಾಗಿದೆ.

author-image
Bhimappa
SANJU_SAMSON_New_1
Advertisment

ಸಂಜು ಸ್ಯಾಮ್ಸನ್​ ಸೀಸನ್​​-18ರ ಮಿಡ್ ಸೀಸನ್​​ನಿಂದ ಹಿಡಿದು, ಇವತ್ತಿನ ತನಕ ಟ್ರೇಡಿಂಗ್, ಟ್ರೆಂಡ್​ನಲ್ಲಿರುವ ಹೆಸರು. ಮತ್ತೊಂದು ಸೀಸನ್​ ಆರಂಭಕ್ಕೆ ಏಳೆಂಟು ತಿಂಗಳಿದ್ರೂ, ಸಂಜು ಸ್ಯಾಮ್ಸನ್​ ಆರ್​​ಆರ್​ನಲ್ಲೇ ಇರ್ತಾರಾ ಅಥವಾ ಆರ್​ಆರ್ ಸಂಜುನಾ ಬಿಡುತ್ತಾ ಅನ್ನೋದೆ ಪ್ರಶ್ನೆ. ಇದೀಗ ಅದಕ್ಕೆ ಕ್ಲಿಯರ್ ಕಟ್​ ಅನ್ಸರ್ ಸಿಕ್ಕಾಗಿದೆ.

ಸಂಜು ಸ್ಯಾಮ್ಸನ್ ವರ್ಸಸ್​ ರಾಜಸ್ಥಾನ್ ರಾಯಲ್ಸ್​. ಸೀಸನ್​​-18ರ ಐಪಿಎಲ್​ ಮಿಡ್​​​ ಸೀಸನ್​ನಿಂದ ಮೋಸ್ಟ್​ ಟ್ರೆಂಡಿಂಗ್ ಟಾಪಿಕ್. ಸೀಸನ್​​​-18ರ ಐಪಿಎಲ್​ ಅಂತ್ಯವಾಗಿದ್ದೆ ತಡ, ಸಂಜು ಸ್ಯಾಮ್ಸನ್, ರಾಜಸ್ಥಾನ್ ರಾಯಲ್ಸ್ ತೊರೆಯುತ್ತಾರೆ ಎಂಬ ಸುದ್ದು ಹಲ್​ಚಲ್​ ಎಬ್ಬಿಸಿತ್ತು. ಐಪಿಎಲ್ ಕ್ರಿಕೆಟ್ ಲೋಕದಲ್ಲಿ ಭಾರೀ ಸೆನ್ಸೇಷನ್ ಕ್ರಿಯೆಟ್ ಮಾಡಿತ್ತು. ರಾಜಸ್ಥಾನ್ ರಾಯಲ್ಸ್ ತಂಡದ ಪ್ರತಿರೂಪವಾಗಿದ್ದ ಸಂಜು ಸ್ಯಾಮ್ಸನ್, ಪಿಂಕ್ ಆರ್ಮಿಯನ್ನು ತೊರೆಯುವುದು ಅಸಾಧ್ಯದ ಮಾತು ಎನ್ನಲಾಗಿತ್ತು. ಇಷ್ಟು ದಿನ ಕೇವಲ ಅಂತೆ, ಕಂತೆಗಳಿಗೆ ಸೀಮಿತವಾಗಿದ್ದ ರಾಜಸ್ಥಾನ್ ರಾಯಲ್ಸ್ & ಸಂಜು ಸ್ಯಾಮ್ಸನ್ ವಿರಸ ಈಗ ಬಟಾಬಯಲಾಗಿದೆ. 

SANJU_SAMSON (1)

ರಾಜಸ್ಥಾನ್ ರಾಯಲ್ಸ್​ ಜೊತೆ ಸಂಜು ಸ್ಯಾಮ್ಸನ್​​ಗೆ ಮನಸ್ತಾಪ..!

ಕೆಲ ತಿಂಗಳಿಂದ ರಾಜಸ್ಥಾನ್ ರಾಯಲ್ಸ್​, ಸಂಜು ಸ್ಯಾಮ್ಸನ್ ಮನಸ್ತಾಪದ ಸುದ್ದಿಯ ಜೊತೆಗೆ ಟ್ರೇಡಿಂಗ್ ವಿಷ್ಯ ಸಖತ್ ಸೌಂಡ್ ಮಾಡ್ತಿದೆ. ಸೀಸನ್​​-19ರಲ್ಲಿ ಬೇರೆ ತಂಡ ಸೇರ್ತಾರೆ ಅಂತಾನೇ ಹೇಳಲಾಗ್ತಿತ್ತು. ಇದೀಗ ಸ್ವತಃ ನಾಯಕ ಸಂಜು ಸ್ಯಾಮ್ಸನ್​​​​​, ರಾಜಸ್ಥಾನ್ ರಾಯಲ್ಸ್ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ, ಈ ಕುರಿತಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಜೊತೆ ನೇರ ಮಾತುಕತೆ ನಡೆಸಿರುವ ಸಂಜು ಸ್ಯಾಮ್ಸನ್, ಟ್ರೇಡ್​ ಮಾಡಿ. ಇಲ್ಲ ತಂಡದಿಂದ ರಿಲೀಸ್ ಮಾಡುವಂತೆ ಕೋರಿದ್ದಾರೆ.

ಇಕ್ಕಟ್ಟಿನಲ್ಲಿ ರಾಜಸ್ಥಾನ್ ರಾಯಲ್ಸ್​..! ನೀಡುತ್ತಾ ಗ್ರೀನ್ ಸಿಗ್ನಲ್..?

ಸಂಜು ಸ್ಯಾಮ್ಸನ್ ನಿರ್ಧಾರ ರಾಜಸ್ಥಾನ್ ರಾಯಲ್ಸ್​ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಂಜು ಸ್ಯಾಮ್ಸನ್ ರಿಲೀಸ್​ಗೆ ಇಷ್ಟ ಪಡೆದ ಮ್ಯಾನೇಜ್​ಮೆಂಟ್, ಮುಂದೇನು ಮಾಡಬೇಕು ಎಂಬ ಗೊಂದಲಕ್ಕೆ ಸಿಲುಕಿದೆ. 

ಆರ್​​ಆರ್​ ಗೊಂದಲ ಯಾಕೆ?

  • ಆಟಗಾರನ ರಿಲೀಸ್ ಫ್ರಾಂಚೈಸಿಗೆ ಬಿಟ್ಟ ನಿರ್ಧಾರ
  • RR ಜೊತೆ ಸಂಜು ಒಪ್ಪಂದ 2027 ತನಕ ಇದೆ
  • ಒತ್ತಾಯದಿಂದ ಉಳಿಸಿಕೊಂಡ್ರೆ ವಾತಾವರಣ ಹದಗೆಡುತ್ತದೆ
  • ರಿಲೀಸ್ ಮಾಡಿದ್ರೆ ತಂಡಕ್ಕೆ ಭಾರೀ ನಷ್ಟವಾಗುತ್ತದೆ
  • ಹ್ಯಾಪಿ ಡ್ರೆಸ್ಸಿಂಗ್ ರೂಮ್ ನಿರ್ಮಿಸುವುದು ಮುಖ್ಯ
  • ಮುಂದೇನು ಮಾಡುವುದೆಂಬ ಗೊಂದಲದಲ್ಲಿ ಆರ್​ಆರ್​

ಸಂಜು ಅಸಮಾಧಾನಕ್ಕೆ ಕಾರಣವಾಯ್ತಾ ಬ್ಯಾಟಿಂಗ್ ರೋಲ್​..?

ಸದ್ಯ ಸಂಜು ಅಸಮಾಧಾನಕ್ಕೆ ಕಾರಣ ಟೀಮ್ ಮ್ಯಾನೇಜ್​ಮೆಂಟ್​ ಎನ್ನಲಾಗ್ತಿದೆ. ನಾಯಕನಾಗಿ ತನ್ನಿಷ್ಟದ ಬ್ಯಾಟಿಂಗ್ ಆರ್ಡರ್​​ನಲ್ಲಿ ಕಣಕ್ಕಿಳಿಯುವ ಫ್ರೀಡಂ ಇಲ್ಲ. ಪ್ರಮುಖವಾಗಿ ಟಿ20 ಕ್ರಿಕೆಟ್​​ನಲ್ಲಿ ಆರಂಭಿಕನಾಗಿ ಬ್ಯಾಟಿಂಗ್ ಮಾಡ್ತಿರುವ ಸಂಜು, ಯುವ ಆಟಗಾರರಾದ ಜೈಸ್ವಾಲ್, ವೈಭವ್ ಸೂರ್ಯವಂಶಿ ಕಾರಣಕ್ಕೆ ಓಪನಿಂಗ್ ಸ್ಲಾಟ್​ ಬಿಟ್ಟು ಆಡಬೇಕಂತೆ. ಇದು ಸಂಜು ಸ್ಯಾಮ್ಸನ್​ ಮುನಿಸಿಗೆ ಕಾರಣ ಎನ್ನಲಾಗ್ತಿದೆ. ಇದೇ ವಿಚಾರವಾಗಿಯೇ ತಂಡ ತೊರೆಯುವ ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್​ಗೂ ಮೊದಲೇ ನನ್ನನ್ನ ತಂಡದಿಂದ ಬಿಟ್ಟುಬಿಡಿ.. CSK ಆಲ್​ರೌಂಡರ್ ಹೀಗೆ ಹೇಳಿದ್ದು ಯಾಕೆ?

SANJU_SAMSON_New

ಒನ್​ ಸೈಡ್ ಟ್ರೇಡ್​ನಿಂದ ರಾಜಸ್ಥಾನ್​​ಗೆ​ ಬಿಗ್ ಅಮೌಂಟ್..!

ರಾಜಸ್ಥಾನ್ ರಾಯಲ್ಸ್​ ಭವಿಷ್ಯದ ದೃಷ್ಟಿಯಿಂದ ಟ್ರೇಟ್ ಮಾಡುತ್ತಾ? ಇಲ್ಲ ರಿಲೀಸ್ ಮಾಡುತ್ತಾ ಅನ್ನೋದೆ ಪ್ರಶ್ನೆ. ಯಾಕಂದ್ರೆ, ಪ್ಲೇಯರ್ ಟು ಪ್ಲೇಯರ್ ಟ್ರೇಡ್ ಮಾಡಿದ್ರೆ. ಸಂಜು ಸ್ಯಾಮ್ಸನ್​ಗೆ ತಕ್ಕ ರಿಪ್ಲೇಸ್​ಮೆಂಟ್​ ಆಟಗಾರನ ಟ್ರೇಡ್ ಮಾಡಬೇಕಾಗುತ್ತೆ. ಆದ್ರೆ, ಸಂಜು ಸರಿಸಮಕ್ಕೆ ಬ್ಯಾಟಿಂಗ್, ಕ್ಯಾಪ್ಟನ್ಸಿ, ವಿಕೆಟ್ ಕೀಪಿಂಗ್ ಸ್ಕಿಲ್ಸ್ ಇರುವ ಆಟಗಾರ ಟ್ರೇಡ್​ನಲ್ಲಿ ಸಿಗುವುದು ನಿಜಕ್ಕೂ ಕಷ್ಟಕರ. ಹೀಗಾಗಿ 18 ಕೋಟಿಯ ಸಂಜು ಸ್ಯಾಮ್ಸನ್​​ನ ಒನ್ ಸೈಡ್ ಟ್ರೇಡಿಂಗ್​​ ಮಾಡುವ ಸಾಧ್ಯತೆ ಇದೆ. ಆ ಮೂಲಕ ಬಿಗ್ ಅಮೌಂಟ್ ಗಳಿಸುವ ಲೆಕ್ಕಚಾರ ಇದೆ. ಅಕಸ್ಮಾತ್ ಇದೇ ನಡೆದ್ರೆ. ಐಪಿಎಲ್ ಇತಿಹಾಸದಲ್ಲಿ 17.5 ಕೋಟಿಗೆ ಆರ್​ಸಿಬಿ ಟ್ರೇಡ್ ಮಾಡಿದ್ದ ಕ್ಯಾಮರೂನ್ ಗ್ರೀನ್ ದಾಖಲೆ ಬ್ರೇಕ್ ಆಗೋದು ಫಿಕ್ಸ್.

ಯೆಲ್ಲೋ ಆರ್ಮಿ​​ ಸೇರ್ತಾರಾ ಸಂಜು ಸ್ಯಾಮ್ಸನ್..?

ಸೀಸನ್​-18ರ ಅಂತ್ಯದಿಂದಲೂ ಸಂಜು ಸ್ಯಾಮ್ಸನ್, ಚೆನ್ನೈ ಸೂಪರ್ ಕಿಂಗ್ಸ್​ ಸೇರ್ತಾರೆ ಎನ್ನಲಾಗ್ತಿದೆ. ಸಂಜುರಂಥ ಸ್ಕಿಲ್​ ಫುಲ್ ಓಪನರ್, ವಿಕೆಟ್ ಕೀಪರ್ ಅವಶ್ಯಕತೆಯೂ ಚೆನ್ನೈಗೆ ಇದೆ. ಹೀಗಾಗಿ ಸಂಜು ಮಿನಿ ಹರಾಜಿನಲ್ಲಿ ಸಿಕ್ರೆ, ಟ್ರೇಡ್​ನಲ್ಲಿ ಸಿಕ್ಕರೆ ಖಂಡಿತ ಬಿಗ್ ಅಮೌಂಟ್​ಗೆ ಪರ್ಚೇಸ್ ಮಾಡೋದ್ರಲ್ಲಿ ಡೌಟೇ ಇಲ್ಲ. ಇವರಷ್ಟೇ ಅಲ್ಲ, ಮತ್ತೊಂದ್ಕಡೆ ಕೊಲ್ಕತ್ತಾ ನೈಟ್​ ರೈಡರ್ಸ್ ಸಹ ಸಂಜುರಂಥ ಸಮರ್ಥ ಆಟಗಾರನ ಹುಡುಕಾಟದಲ್ಲೇ ಇದೆ. ಹೀಗಾಗಿ ಸಂಜುಗೆ ಬಿಗ್ ಟ್ರೇಡ್​ ಆಗೋದ್ರಲ್ಲಿ ಎರಡು ಮಾತಿಲ್ಲ.

ಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಮಿ’ ವೀಕ್ಷಿಸಿ 

Sanju Samson
Advertisment