ಐಪಿಎಲ್​ಗೂ ಮೊದಲೇ ನನ್ನನ್ನ ತಂಡದಿಂದ ಬಿಟ್ಟುಬಿಡಿ.. CSK ಆಲ್​ರೌಂಡರ್ ಹೀಗೆ ಹೇಳಿದ್ದು ಯಾಕೆ?

ಐಪಿಎಲ್​ ಮಿನಿ ಆಕ್ಷನ್​ಗೂ ಮುನ್ನ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಇದ್ರ ನಡುವೆ ತಂಡದ ಹಿರಿಯ ಆಟಗಾರರೊಬ್ಬರು​​ ಟೀಮ್​ ಮ್ಯಾನೇಜ್​ಮೆಂಟ್​ಗೆ ಶಾಕ್​ ಕೊಟ್ಟಿದ್ದಾರೆ. ಶಾಕಿಂಗ್​ ನಿರ್ಧಾರ ಮಾಡಿರುವ ಅವರು ಸಿಎಸ್​​ಕೆಗೆ ಗುಡ್​ ಬೈ ಹೇಳಲು ಮುಂದಾಗಿದ್ದಾರೆ.

author-image
Bhimappa
CSK_TEAM
Advertisment

ಸಂಜು ಸ್ಯಾಮ್ಸನ್ ರಾಜಸ್ಥಾನ್​ ರಾಯಲ್ಸ್​ ತೊರೆಯೋ ನಿರ್ಧಾರ ಮಾಡಿದ​ ಬೆನ್ನಲ್ಲೇ ಮತ್ತೊಂದು ಸ್ಪೋಟಕ ಸುದ್ದಿ ಹೊರಬಿದ್ದಿದೆ. ಚೆನ್ನೈ ಸೂಪರ್​​ ಕಿಂಗ್ಸ್​ ಫ್ರಾಂಚೈಸಿಗೆ ಗುಡ್​ ಬೈ ಹೇಳೋಕೆ ಆಫ್​ ಸ್ಪಿನ್ನರ್​ ಆರ್​.ಅಶ್ವಿನ್​ ರೆಡಿಯಾಗಿದ್ದಾರೆ. ಅಶ್ವಿನ್​​ ಈ ನಿರ್ಧಾರ ಮಾಡಿರೋದ್ಯಾಕೆ?. ಈ ನಿರ್ಧಾರದ ಹಿಂದಿರೋ ಕಾರಣಗಳೇನು?.

ಐಪಿಎಲ್​ ಮುಗಿದು 2 ತಿಂಗಳಾದ್ರೂ ಐಪಿಎಲ್​ ಸೌಂಡ್​ ಮಾತ್ರ ಕಡಿಮೆಯಾಗಿಲ್ಲ. ಫ್ರಾಂಚೈಸಿಗಳ ವಲಯದಲ್ಲಿ ಒಂದಿಲ್ಲೊಂದು ಬೆಳವಣಿಗೆಗಳು ನಡೀತಾನೆ ಇವೆ. ಡಿಸೆಂಬರ್​ನಲ್ಲಿ ನಡೆಯೋ ಮಿನಿ ಆಕ್ಷನ್​ಗೆ ಸಿದ್ಧತೆ ನಡೆಸ್ತಿರೋ ಫ್ರಾಂಚೈಸಿಗಳು ರಿಟೈನ್​-ರಿಲೀಸ್​ ಚರ್ಚೆ ನಡೆಸ್ತಿವೆ. ಇದ್ರ ನಡುವೆ ಕೆಲ ಆಟಗಾರರು ಫ್ರಾಂಚೈಸಿಗಳನ್ನ ತೊರೆಯೋಕೆ ಮುಂದಾಗಿ ಶಾಕ್​ ಕೊಟ್ಟಿದ್ದಾರೆ. ಸಂಜು ಸ್ಯಾಮ್ಸನ್​ ಬೆನ್ನಲ್ಲೇ ಇದೀಗ ಅರ್​​​.ಅಶ್ವಿನ್​ ಸಿಎಸ್​ಕೆಗೆ ಗುಡ್​​ ಬೈ ಹೇಳೋ ನಿರ್ಧಾರ ಮಾಡಿದ್ದಾರೆ.

CSK_DHONI

ನನ್ನನ್ನ ರಿಲೀಸ್ ಮಾಡಿ​ ಎಂದು ಕೇಳಿಕೊಂಡ ಆಫ್​ ಸ್ಪಿನ್ನರ್​.!

ಐಪಿಎಲ್​ ಮಿನಿ ಆಕ್ಷನ್​ಗೂ ಮುನ್ನ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಇದ್ರ ನಡುವೆ ತಂಡದ ಹಿರಿಯ ಆಟಗಾರ ಆರ್​.ಅಶ್ವಿನ್​​ ಟೀಮ್​ ಮ್ಯಾನೇಜ್​ಮೆಂಟ್​ಗೆ ಶಾಕ್​ ಕೊಟ್ಟಿದ್ದಾರೆ. ಶಾಕಿಂಗ್​ ನಿರ್ಧಾರ ಮಾಡಿರುವ ಅಶ್ವಿನ್​, ಸಿಎಸ್​​ಕೆಗೆ ಗುಡ್​ ಬೈ ಹೇಳಲು ಮುಂದಾಗಿದ್ದಾರೆ. ಈಗಾಗಲೇ ಫ್ರಾಂಚೈಸಿಗೆ ಆಫ್​ಸ್ಪಿನ್ನರ್​​ ನನ್ನನ್ನ ರಿಲೀಸ್​ ಮಾಡಿ ಅಥವಾ ಟ್ರೇಡ್​ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇಷ್ಟೆ ಅಲ್ಲ, ಸಿಎಸ್​​ಕೆ ಅಕಾಡೆಮಿಯ ಡೈರೆಕ್ಟರ್​ ಆಫ್​ ಆಪರೇಷನ್ಸ್​​ ಹುದ್ದೆಗೂ ಗುಡ್​ ಬೈ ಹೇಳಲಯ ಅಶ್ವಿನ್​ ಮುಂದಾಗಿದ್ದಾರೆ.  

ಧೋನಿ-ಋತುರಾಜ್​ ಭೇಟಿ ಬಳಿಕ ಅಂತಿಮ ನಿರ್ಧಾರ.!

ಮಿನಿ ಆಕ್ಷನ್​ಗೆ 4 ತಿಂಗಳು ಮೊದಲೇ ಫ್ರಾಂಚೈಸಿಗೆ ಅಶ್ವಿನ್​ ತಮ್ಮ ಅಂತಿಮ ನಿರ್ಧಾರವನ್ನ ತಿಳಿಸಿದ್ದಾರೆ. ಆದ್ರೆ, ರಿಲೀಸ್​ ಮಾಡೋದು, ಬಿಡೋದು ಅನ್ನೋದು ಫ್ರಾಂಚೈಸಿಗೆ ಬಿಟ್ಟಿದ್ದು. ಸದ್ಯ ಈ ವಿಚಾರದಲ್ಲಿ ಮೌನವಹಿಸಿರುವ ಸಿಎಸ್​ಕೆ ಫ್ರಾಂಚೈಸಿ, ಧೋನಿ ಹಾಗೂ ಕ್ಯಾಪ್ಟನ್​​ ಋತುರಾಜ್​ ಗಾಯಕ್ವಾಡ್​ ಜೊತೆಗೆ ಚರ್ಚೆ ನಡೆಸಲು ಮುಂದಾಗಿದೆ. ಧೋನಿ, ಋತುರಾಜ್​ ಸದ್ಯ ಚೆನ್ನೈನಲ್ಲೇ ಇದ್ದು ಕೆಲ ದಿನಗಳಲ್ಲಿ ಫ್ರಾಂಚೈಸಿ ಜೊತೆ ಮೀಟಿಂಗ್​ ನಡೆಲಿದ್ದಾರೆ. ಈ ಮೀಟಿಂಗ್​ನಲ್ಲಿ​ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಫ್ರಾಂಚೈಸಿ ನಿರ್ಧರಿಸಿದೆ. 

ಧೋನಿ ಮೇಲೆ ಮುನಿಸಾ.? ಫ್ರಾಂಚೈಸಿ ಮೇಲೆ ಅಸಮಾಧಾನಾನ.?

ಅಶ್ವಿನ್​ ಹೋಮ್​​ಟೀಮ್​ಗೆ ಗುಡ್​ ಬೈ ಹೇಳಲು ಮುಂದಾಗಿರೋದ್ಯಾಕೆ ಅನ್ನೋದು ಸದ್ಯದ ಹಾಟ್​ ಟಾಪಿಕ್​. ಇದಕ್ಕೆ ಧೋನಿ ಮೇಲೆ ಅಶ್ವಿನ್​​ಗೆ ಮುನಿಸಿದೆ ಎಂಬ ಉತ್ತರ ಕೇಳಿ ಬರ್ತಿದೆ. 2025ರ ಐಪಿಎಲ್ ಮಧ್ಯದಲ್ಲಿ ಧೋನಿ ಮತ್ತೆ ಸಿಎಸ್​ಕೆ ಕ್ಯಾಪ್ಟನ್​​ ಆದ ಮೇಲೆ ಅಶ್ವಿನ್​ನ ಪ್ಲೇಯಿಂಗ್​ ಇಲೆವೆನ್​ನಿಂದ ಡ್ರಾಪ್​ ಮಾಡಿದ್ರು. ಇದ್ರಿಂದ ಅಶ್ವಿನ್​ ಬೇಸರಗೊಂಡಿದ್ರು. ಮೊದಲಿದ್ದ ಆಪ್ತತೆ ಟೂರ್ನಿ ಅಂತ್ಯದ ವೇಳೆಗೆ ಇವರಿಬ್ಬರಲ್ಲಿ ಇರಲಿಲ್ಲ ಎಂಬ ಸುದ್ದಿ ಸದ್ದು ಮಾಡ್ತಿದೆ. 

ಕೆಲ ದಿನಗಳ ಹಿಂದಷ್ಟೇ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ಅಶ್ವಿನ್​ ಹಾಗೂ ದುಬೆಯನ್ನ ಸಂಜು ಸ್ಯಾಮ್ಸನ್​​ಗಾಗಿ ಟ್ರೇಡ್​ ಮಾಡಲು ಮುಂದಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಸಿಎಸ್​ಕೆ ಫ್ರಾಂಚೈಸಿ ಮೂಲಗಳು ಕೂಡ ಈ ಸುದ್ದಿಯನ್ನ ಖಚಿತಪಡಿಸಿದ್ವು. ತನಗೆ ಮಾಹಿತಿಯನ್ನೇ ನೀಡದೆ ತನ್ನನ್ನ ತಂಡದಿಂದ ಟ್ರೇಡ್​ ಮಾಡಲು ಮುಂದಾದ ನಿರ್ಧಾರ ಅಶ್ವಿನ್​​ಗೆ ಬೇಸರ ತರಿಸಿದೆ. ಹೀಗಾಗಿ ಫ್ರಾಂಚೈಸಿಯ ನಿರ್ಧಾರಕ್ಕೂ ಮುನ್ನವೇ ತಾನೇ ತಂಡ ತೊರೆಯಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. 

ಇದನ್ನೂ ಓದಿ:6, 6, 6, 6, 6, 6, 6, 6, 6; ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಪ್ರಿಯಾಂಶ್ ಆರ್ಯ.. DPLನಲ್ಲಿ ಮಹತ್ವದ ದಾಖಲೆ

CSK_DHONI_1

8 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದ ಧೋನಿ-ಅಶ್ವಿನ್​​.!

ಐಪಿಎಲ್​ ಆರಂಭಿಕ ಸೀಸನ್​​ನಿಂದ 2015ರವರೆಗೆ ಅಶ್ವಿನ್​ ಚೆನ್ನೈ ಸೂಪರ್​ ಕಿಂಗ್ಸ್​ ಪರವೇ ಅಡಿದರು. ಅಶ್ವಿನ್​-ಧೋನಿ ಜೀವದ ಗೆಳೆಯರಾಗಿಯೂ ಗುರುತಿಸಿಕೊಂಡಿದರು. CSK ಬ್ಯಾನ್ ಆದ ಬಳಿಕವೂ ರೈಸಿಂಗ್ ಪುಣ್ ಸೂಪರ್​ಜೈಂಟ್ಸ್​ ಪರ ಒಟ್ಟಾಗಿ ಆಡಿದರು. ಆದ್ರೆ, ಸಿಎಸ್​ಕೆ ನಿಷೇಧ ಶಿಕ್ಷೆ ಮುಗಿಸಿದ ಬಳಿಕ ಧೋನಿ ಚೆನ್ನೈಗೆ ವಾಪಾಸ್ಸಾದರೆ, ಅಶ್ಬಿನ್ ಕಿಂಗ್ಸ್ ಇಲೆವೆನ್ ಪಂಜಾಬ್ ಸೇರಿದ್ರು. ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​, ರಾಜಸ್ಥಾನ ರಾಯಲ್ಸ್ ತಂಡಗಳ ಪರ ಆಡಿದ ಅಶ್ವಿನ್​, ಈ ಸೀಸನ್​ಗೂ ಮುನ್ನ ಚೆನ್ನೈಗೆ ವಾಪಾಸ್ಸಾಗಿದ್ದರು. 8 ವರ್ಷಗಳ ಬಳಿಕ ಸಿಎಸ್​​ಕೆಗೆ ಬಂದ ಅಶ್ವಿನ್​ ಅದ್ಭುತ ಆಟವನ್ನೇನು ಆಡಿರಲಿಲ್ಲ. 9 ಪಂದ್ಯಗಳಿಂದ 7 ವಿಕೆಟ್​ ಕಬಳಿಸಿದ್ರಷ್ಟೇ.

ಸದ್ಯ ಮಿನಿ ಆಕ್ಷನ್​ ಕಡೆಗೆ ಮುಖ ಮಾಡಿರುವ ಅಶ್ವಿನ್​, ನನ್ನನ್ನ ರಿಲೀಸ್​ ಮಾಡಿ ಎಂದು ಕೇಳಿಕೊಂಡಿದ್ದಾರೆ. ಆದ್ರೆ, ಅಶ್ವಿನ್​ ರಿಲೀಸ್​ ಮಾಡುವ ಅಥವಾ ಟ್ರೇಡ್​ ಮಾಡುವ ಅಂತಿಮ ನಿರ್ಧಾರ ಫ್ರಾಂಚೈಸಿಗೆ ಬಿಟ್ಟಿದ್ದು. ನವೆಂಬರ್​​​ವರೆಗೂ ಫ್ರಾಂಚೈಸಿಗೆ ಸಮಯವಿದ್ದು, ಫ್ರಾಂಚೈಸಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡೋಣ. 

ಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಮಿ’ ವೀಕ್ಷಿಸಿ 

Ravichandran Ashwin
Advertisment