6, 6, 6, 6, 6, 6, 6, 6, 6; ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಪ್ರಿಯಾಂಶ್ ಆರ್ಯ.. DPLನಲ್ಲಿ ಮಹತ್ವದ ದಾಖಲೆ

ಡಿಪಿಎಲ್​​ನಲ್ಲಿ ಪಂಜಾಬ್ ಕಿಂಗ್ಸ್​ ತಂಡದ ಯಂಗ್ ಬ್ಯಾಟರ್​ ಪ್ರಿಯಾಂಶ್ ಆರ್ಯ ಸಿಡಿಲಬ್ಬರದ ಶತಕ ಬಾರಿಸಿದ್ದಾರೆ. ಪ್ರಿಯಾಂಶ್ ಆರ್ಯ ಬರೋಬ್ಬರಿ 9 ಸಿಕ್ಸರ್​ಗಳನ್ನು ಸಿಡಿಸಿ ಸೆಂಚುರಿ ಗಳಿಸಿ ಸಂಭ್ರಮಿಸಿದರು.

author-image
Bhimappa
PRIYANSH_ARYA_1
Advertisment

ಡೆಲ್ಲಿ ಪ್ರೀಮಿಯರ್ ಲೀಗ್​ (ಡಿಪಿಎಲ್) ನಲ್ಲಿ ಪಂಜಾಬ್ ಕಿಂಗ್ಸ್​ ತಂಡದ ಯಂಗ್ ಬ್ಯಾಟರ್​ ಪ್ರಿಯಾಂಶ್ ಆರ್ಯ ಸಿಡಿಲಬ್ಬರದ ಶತಕ ಬಾರಿಸಿದ್ದಾರೆ. ಪ್ರಿಯಾಂಶ್ ಆರ್ಯ ಬರೋಬ್ಬರಿ 9 ಸಿಕ್ಸರ್​ಗಳನ್ನು ಸಿಡಿಸಿ ಸೆಂಚುರಿ ಗಳಿಸಿ ಸಂಭ್ರಮಿಸಿದರು.  

ಡಿಪಿಎಲ್​ನ ಈಸ್ಟ್ ಡೆಲ್ಲಿ ವಾರಿಯರ್ಸ್​ ತಂಡದ ವಿರುದ್ಧ ಔಟರ್​ ಡೆಲ್ಲಿ ವಾರಿಯರ್ಸ್ ಮೊದಲ ಬ್ಯಾಟಿಂಗ್ ಮಾಡಿತು. ಈ ಪಂದ್ಯದಲ್ಲಿ ಔಟರ್​ ಡೆಲ್ಲಿ ವಾರಿಯರ್ಸ್ ಪರ ಓಪನರ್ ಆಗಿ ಅಖಾಡಕ್ಕೆ ಇಳಿದಿದ್ದ ಪ್ರಿಯಾಂಶ್ ಆರ್ಯ ತಮ್ಮ ಪ್ರಬಲ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಬೌಲರ್​ಗಳನ್ನು ಮನಬಂದಂತೆ ಚಚ್ಚಿದ ಯುವ ಆಟಗಾರ ಎದುರಾಳಿ ಎದೆ ನಡುಗಿಸಿದರು. 

ಇದನ್ನೂ ಓದಿ:ಡಾ.ವಿಷ್ಣು ಸಮಾಧಿ ತೆರವು; ಮಣ್ಣು ಎತ್ಕೊಂಡು ಬರುವುದಕ್ಕೂ ಬಿಡಲಿಲ್ಲ- ನಿರ್ದೇಶಕ ರವಿ ಶ್ರೀವತ್ಸ ಕಣ್ಣೀರು

PRIYANSH_ARYA

ಪಂದ್ಯದಲ್ಲಿ ​ಪ್ರಿಯಾಂಶ್ ಆರ್ಯ ಕೇವಲ 56 ಎಸೆತಗಳಲ್ಲಿ 7 ಮನಮೋಹಕವಾದ ಬೌಂಡರಿಗಳು ಹಾಗೂ 9 ಆಕಾಶದೆತ್ತರದ ಸಿಕ್ಸರ್​ಗಳಿಂದ ಸೆಂಚುರಿ ಬಾರಿಸಿ ಸಂಭ್ರಮಿಸಿದರು. ಈ ಪಂದ್ಯದಲ್ಲಿ ಒಟ್ಟು 111 ರನ್​ ಗಳಿಸಿದ್ದ ಆರ್ಯ 18 ಓವರ್​ನಲ್ಲಿ ಹಾರ್ದಿಕ್ ಶರ್ಮಾಗೆ ಕ್ಯಾಚ್ ಕೊಟ್ಟು ಪೆವಿಲಿಯನ್​​ನಿಂದ ಹೊರ ನಡೆದರು. ಐಪಿಎಲ್​​ನಂತೆ ಬ್ಯಾಟಿಂಗ್ ಮಾಡಿದ ಯಂಗ್ ಪ್ಲೇಯರ್​ ಡಿಪಿಎಲ್​ನಲ್ಲಿ 100ಕ್ಕೂ ಹೆಚ್ಚು ರನ್​ ಬಾರಿಸಿದ ಮೊದಲ ಬ್ಯಾಟ್ಸ್​ಮನ್ ಎನ್ನುವ ಹೆಗ್ಗಳಿಕೆ ಪಡೆದುಕೊಂಡರು.  

ಈ ಡಿಪಿಎಲ್​ನ ಟಿ20 ಪಂದ್ಯದಲ್ಲಿ ಔಟರ್​ ಡೆಲ್ಲಿ ವಾರಿಯರ್ಸ್ ಪರ ಓಪನರ್ ಆಗಿ ಪ್ರಿಯಾಂಶ್ ಆರ್ಯ ಸೆಂಚುರಿ ಬಾರಿಸಿದರೂ ಸೋಲಬೇಕಾಯಿತು. ಕಾರಣ ಅರ್ಪಿತ್ ರಾಣಾ, ಅನುಜ್ ರಾವತ್ ಅವರ ಬಲಿಷ್ಠ ಬ್ಯಾಟಿಂಗ್ ಆಗಿದೆ. ಔಟರ್ ಡೆಲ್ಲಿ ನೀಡಿದ್ದ 232 ರನ್​ಗಳ ಟಾರ್ಗೆಟ್ ಅನ್ನು ಚೇಸ್ ಮಾಡಿದ ಎದುರಾಳಿ ಈಸ್ಟ್ ಡೆಲ್ಲಿ 235 ರನ್​ಗಳನ್ನು ಬಾರಿಸುವ ಮೂಲಕ ಅತಿ ದೊಡ್ಡ ಗೆಲುವು ದಾಖಲಿಸಿತು. ಈಸ್ಟ್ ಡೆಲ್ಲಿ ಪರವಾಗಿ ಅರ್ಪಿತ್ ರಾಣಾ 79, ಅನುಜ್ ರಾವತ್ 84 ರನ್​ಗಳಿಂದ ಈ ಗೆಲುವು ಸಾಧ್ಯವಾಯಿತು.      

ಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಮಿ’ ವೀಕ್ಷಿಸಿ 

Priyansh Arya
Advertisment