/newsfirstlive-kannada/media/media_files/2025/08/09/shikhar-dhawan-2025-08-09-17-25-18.jpg)
ಶಿಖರ್ ಧವನ್
ಟೀಮ್​ ಇಂಡಿಯಾದಲ್ಲಿ ಸಕ್ಸಸ್​​ ಅನ್ನೋದು ಸಿಕ್ರೆ ಎಲ್ಲವೂ ಹುಡುಕಿಕೊಂಡು ಬರುತ್ತೆ. ಹಣ, ನೇಮು, ಫೇಮು ಎಲ್ಲವೂ ನಿರೀಕ್ಷೆಗೂ ಮೀರಿ ಸಿಗುತ್ತೆ. ಟೀಮ್​ ಇಂಡಿಯಾದ ಈ ಕ್ರಿಕೆಟಿಗರ ಬಾಳಲ್ಲೂ ಇದೆಲ್ಲಾ ಆಗಿದೆ. ಏನ್​ ಮಾಡೋದು ನೆಮ್ಮದಿನೇ ಇಲ್ಲ. ಎಲ್ಲವೂ ಇದ್ದೂ ಕೊರಗ್ತಿದ್ದಾರೆ. ಯಾಕೀ ಶಿಕ್ಷೆ ಎಂದು ದೇವರಲ್ಲಿ ಕೇಳ್ತಿದ್ದಾರೆ. ಅಷ್ಟಕ್ಕೂ ಇವರಿಗಿರೋ ಕೊರಗು ಏನು ಗೊತ್ತಾ..?
ಶಿಖರ್​​ ಧವನ್​, ಮೊಹಮ್ಮದ್​ ಶಮಿ, ಹಾರ್ದಿಕ್​ ಪಾಂಡ್ಯ. ಟೀಮ್​ ಇಂಡಿಯಾ ಕಂಡ ಮೋಸ್ಟ್​ ಸಕ್ಸಸ್​​ಫುಲ್​ ಕ್ರಿಕೆಟರ್ಸ್​​. ಆಟಗಾರರಾಗಿಯೂ ಅಷ್ಟೇ, ವೈಯಕ್ತಿಕವಾಗಿಯೂ ಅಷ್ಟೇ. ಯಶಸ್ಸಿನ ಉತ್ತುಂಗ ನೋಡಿದವರು. ಆನ್​​ಫೀಲ್ಡ್​ನಲ್ಲಿ ಕಂಡು ಸಕ್ಸಸ್​​ ಕಂಡಂತೆ ಆಫ್​​ ಫೀಲ್ಡ್​ನಲ್ಲಿ ಇವ್ರ ಖಜಾನೆಯೂ ತುಂಬಿದೆ. ಹಣದ ಹೊಳೆಯೇ ಹರಿದಿದೆ. ಇನ್​ಫ್ಯಾಕ್ಟ್​​ ಈಗಲೂ ಹರಿದು ಬರ್ತಾನೆ ಇದೆ. ಇವ್ರ ಜೀವನದಲ್ಲಿ ನೆಮ್ಮದಿ ಅನ್ನೋದೆ ಇಲ್ಲ.
ನನ್ನ ಮಗನೂ ಇದ್ದಿದ್ರೆ.. ಧವನ್​ ಭಾವುಕ..!
ಇಂಟರ್​​ನ್ಯಾಷನಲ್​​ ಕ್ರಿಕೆಟ್​​ಗೆ ಗುಡ್​ ಬೈ ಹೇಳಿದ ಶಿಖರ್​​ ಧವನ್​ ಕೆಲ ದಿನಗಳ ಹಿಂದೆ ಮೈದಾನಕ್ಕೆ ಕಮ್​​ಬ್ಯಾಕ್​ ಮಾಡಿದ್ರು. ಲೆಜೆಂಡ್ಸ್​​​ ಲೀಗ್​ ಟೂರ್ನಿಯಲ್ಲಿ ಭಾರತದ ಪರ ಆಡಿದ್ರು. ಆ ಟೂರ್ನಿ ಅಂತ್ಯದ ಬಳಿಕ ಇನ್ಸ್​​ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್​ ಹಂಚಿಕೊಂಡಿದ್ದಾರೆ. ಮಗನ ನೆನೆದು ಟೂರ್ನಿಯೂದ್ದಕ್ಕೂ ಧವನ್​​ ಎಷ್ಟು ಕೊರಗಿರಬಹುದು, ಎಷ್ಟು ಅತ್ತಿರಬಹುದು ಅನ್ನೋದನ್ನ ಆ ಒಂದು ಪೋಸ್ಟ್​​ ಹೇಳ್ತಿದೆ.
ಇದನ್ನೂ ಓದಿ: 6, 6, 6, 6, 6, 6, 6, 6, 6; ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಪ್ರಿಯಾಂಶ್ ಆರ್ಯ.. DPLನಲ್ಲಿ ಮಹತ್ವದ ದಾಖಲೆ
/filters:format(webp)/newsfirstlive-kannada/media/media_files/2025/08/01/pandya_wife_son-2025-08-01-16-46-02.jpg)
ನನ್ನ ಮಗನೂ ಇಲ್ಲಿ ಇದ್ದಿದ್ರೆ..
ವಿಶ್ವ ಚಾಂಪಿಯನ್​​ಶಿಪ್​ ಲೆಜೆಂಡ್ಸ್​​ ಟೂರ್ನಿಯಲ್ಲಿ ಗೆಳೆಯರು ತಮ್ಮ ಮಕ್ಕಳ ಜೊತೆ ಇರುವುದನ್ನ ನೋಡಿದಾಗ ನನಗೆ ಒಂದು ಯೋಚನೆ ಬಂತು. ನನ್ನ ಮಗನೂ ಇಲ್ಲಿ ಇದ್ದಿದ್ರೆ, ವಿಭಿನ್ನ ರೀತಿಯಲ್ಲಿ ಸಂತೋಷವಾಗ್ತಿತ್ತು. ಆ ಬಳಿಕ ನಾನು ಆತನ ಬಾಲ್ಯದ ಫೋಟೊಗಳನ್ನ ನೋಡಿದೆ. ಇದ್ದಕ್ಕಿದ್ದಂತೆ, ಹಳೆಯ ನೆನಪುಗಳೆಲ್ಲಾ ಬಂದವು. ಕೆಲವು ಕ್ಷಣಗಳು ನಿಜವಾಗಿಯೂ ನನ್ನ ಹೃದಯಕ್ಕೆ ಹತ್ತಿರವಾಗಿವೆ.
ಮಗ ಆಸ್ಟ್ರೇಲಿಯಾದಲ್ಲಿ.. ತಂದೆ ಭಾರತದಲ್ಲಿ..!
ಶಿಖರ್​​ ಧವನ್​-ಆಯೇಷಾ ಮುಖರ್ಜಿ ದೂರಾದ ಕತೆ ನಿಮಗೆ ಗೊತ್ತಿದೆ. ಆಯೇಷಾ ಜೊತೆಗೆ ಮುದ್ದಿನ ಮಗ ಝೊರಾವರ್​ ಧವನ್​ರಿಂದ ದೂರಾಗಿದ್ದಾನೆ. ಡಿವೋರ್ಸ್​ ಆಗೋಕೆ ಮುನ್ನವೇ ಝೊರಾವರ್​ನ ಆಯೇಷಾ ಆಸ್ಟ್ರೇಲಿಯಾಗೆ ಕೊಂಡೊಯ್ದಿದ್ರು. ಅಂದಿನಿಂದ ಇಂದಿನವರೆಗೆ ಎತ್ತಿ ಮುದ್ದಾಡಿದ ಮಗನನ್ನ ನೋಡೋಕ್ಕಾಗಿಲ್ಲ. ಮಗನ ಹುಟ್ಟುಹಬ್ಬಕ್ಕೂ ವಿಷ್​ ಮಾಡೋಕೆ ಧವನ್​ಗೆ ಆಗ್ತಿಲ್ಲ. ಕನಿಷ್ಠ ಫೋನ್​ನಲ್ಲಿ ಮಾತನಾಡಲು ಕೂಡ ಧವನ್​ ಅವಕಾಶ ಸಿಕ್ಕಿಲ್ಲ. ಎಲ್ಲೆಡೆ ಪತ್ನಿ ಧವನ್​ನ ಬ್ಲಾಕ್​​ ಮಾಡಿದ್ದಾರೆ. ಈ ದುಖಃ ಪ್ರತಿ ನಿತ್ಯ, ಪ್ರತಿ ಕ್ಷಣ, ಧವನ್​ನ ಕಾಡ್ತಿದೆ.
/filters:format(webp)/newsfirstlive-kannada/media/post_attachments/wp-content/uploads/2024/02/Shami_Indian-Cricketer.jpg)
ಮುದ್ದಿನ ಮಗಳು ದೂರಾದ ಕೊರಗಲ್ಲಿ ವೇಗಿ ಶಮಿ.!
ಧವನ್​ ಮಗ ದೂರಾದ ಕೊರಗಲ್ಲಿದ್ರೆ, ಟೀಮ್​ ಇಂಡಿಯಾ ವೇಗಿ ಮೊಹಮ್ಮದ್​ ಶಮಿ ಮಗಳು ದೂರಾದ ದುಖಃದಲ್ಲಿದ್ದಾರೆ. 2018ರಿಂದ ಶಮಿ ಮಗಳು ಐರಾ ಕೂಡ ಮಾಜಿ ಪತ್ನಿ ಹಸೀನ್​ ಜಹಾನ್ ಜೊತೆ ವಾಸವಿದ್ದಾಳೆ. ಒಂಟಿಯಾಗಿರೋ ಶಮಿ ಮುದ್ದು ಮಗಳನ್ನ ಮಾತನಾಡಿಸಲಾಗದೆ, ಜೊತೆಗಿರಲಾಗದೆ ಯಾತನೆ ಅನುಭವಿಸ್ತಿದ್ದಾರೆ. ಡಿವೋರ್ಸ್​ ಬಳಿಕ ಕೆಲವೇ ಕೆಲವು ಬಾರಿ ಶಮಿ ಮಗಳನ್ನ ಬೇಟಿಯಾಗಿರೋದು. 3 ವಾರದ ಹಿಂದೆ ಐರಾ ಹುಟ್ಟುಹಬ್ಬಕ್ಕೆ ಮಾಡಿದ್ದ ಬಾವುಕ ಪೋಸ್ಟ್​​ ಶಮಿ ಮಗಳನ್ನ ಎಷ್ಟು ಮಿಸ್​ ಮಾಡಿಕೊಳ್ತಿದ್ದಾರೆ ಅನ್ನೋದನ್ನ ಹೇಳುತ್ತೆ.
/filters:format(webp)/newsfirstlive-kannada/media/post_attachments/wp-content/uploads/2024/08/DHAWAN.jpg)
ಮಗ ಜೊತೆಗಿದ್ರೆ ಮಾತ್ರ ಹಾರ್ದಿಕ್​ಗೆ ಎನರ್ಜಿ
ಶಮಿ, ಧವನ್​ದು ಒಂದು ಕತೆಯಾದ್ರೆ, ಹಾರ್ದಿಕ್​​ ಪಾಂಡ್ಯ ಸ್ಟೋರಿ ಇನ್ನೊಂದು ತರದ್ದು. ಹಾರ್ದಿಕ್​-ನತಾಶ ಇಬ್ಬರೂ ದೂರಾದಾಗ ಮಗನನ್ನ ಇಬ್ಬರೂ ಒಟ್ಟಾಗಿ​​ ನೋಡಿಕೊಳ್ತೆವೆ ಎಂದಿದ್ರು. ಅದ್ರಂತೆ ಕೆಲ ಕಾಲ ನತಾಶ ಜೊತೆಗಿರುವ ಅಗಸ್ತ್ಯ, ಕೆಲ ಕಾಲ ಹಾರ್ದಿಕ್​ ಜೊತೆ ಇರ್ತಿದ್ದಾನೆ. ಸದ್ಯ ಅಗಸ್ತ್ಯ ಜೊತೆಗಿರೋದ್ರಿಂದ ಹಾರ್ದಿಕ್​​ ಫುಲ್​ ಜೋಷ್​ನಲ್ಲಿದ್ದಾರೆ. ಯಾವಾಗ ಮಗ ಮಾಜಿ ಪತ್ನಿ ಜೊತೆಗೆ ತೆರಳ್ತಾನೋ ಆಗ ಒಂಟಿಯಾಗೋ ಹಾರ್ದಿಕ್​ ಫುಲ್​ ಡಲ್​ ಆಗ್ತಾರೆ.
ಅತಿ ಹೆಚ್ಚು ಪ್ರೀತಿಸಿ, ಎತ್ತಾಡಿಸಿ, ಹಲವು ಕನಸುಗಳನ್ನ ಕಟ್ಟಿಕೊಂಡ ಮಕ್ಕಳಿಂದ ದೂರ ಇರೋದು ಎಷ್ಟು ನೋವು ಕೊಡ್ತಿದೆ ಅನ್ನೋದನ್ನ ಧವನ್​, ಶಮಿ, ಹಾರ್ದಿಕ್​ ನಡವಳಿಕೆಗಳೇ ಹೇಳ್ತಿವೆ. ತಂದೆಯರೆ ಇಷ್ಟು ದುಖಃದಲ್ಲಿರೋವಾಗ ಇನ್ನು ಪುಟ್ಟ ಮಕ್ಕಳು ಹೇಗಿರಬಹುದು. ಅವರಿಗೂ ತಂದೆಯ ಪ್ರೀತಿ ಬೇಕಲ್ವಾ? ಆ ಪುಟ್ಟ ಮನಸ್ಸುಗಳಿಗೂ ಭಾವನೆಗಳಿವೆ ಅಲ್ವಾ.? ಆ ವೇದನೆಯನ್ನ ಅವ್ರು ಹೇಗೆ ಸಹಿಸಿಕೊಂಡಿದ್ದಾವೋ. ದೇವರೆ ಬಲ್ಲ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us