/newsfirstlive-kannada/media/media_files/2025/08/12/venkatesh-iyer-and-phill-salt-2025-08-12-18-51-23.jpg)
ಸೀಸನ್-19ಕ್ಕೆ ಬರೋಬ್ಬರಿ 9 ತಿಂಗಳು ಬಾಕಿಯಿದೆ. 9 ತಿಂಗಳು ಮುನ್ನವೇ ಬಲಾಢ್ಯ ತಂಡಗಳ ಕಟ್ಟುವ ಕಸರತ್ತಿನಲ್ಲಿ ಎಲ್ಲಾ ಟೀಮ್ಸ್ ರೆಡಿಯಾಗಿವೆ. ಇದಕ್ಕಾಗಿ ವಿಂಡೋ ಟ್ರೇಡಿಂಗ್ ಮೂಲಕ ಸ್ಟಾರ್ ಆಟಗಾರರ ಮೇಲೆ ಕಣ್ಣಿಡ್ತಿದೆ. ಯಾರ ಕಣ್ಣು ಯಾರ ಮೇಲಿದೆ. ಐಪಿಎಲ್ ಅಂಗಳದಲ್ಲಿ ಏನೆಲ್ಲಾ ರೂಮರ್ಸ್ ಹರಿದಾಡ್ತಿದೆ.
ಕೆಕೆಆರ್ಗೆ ಫಿಲ್ ಸಾಲ್ಟ್?
ಫಿಲ್ ಸಾಲ್ಟ್.. ಆರ್ಸಿಬಿಯ ಸಿಕ್ಸ್ ಹಿಟ್ಟಿಂಗ್ ಮಷಿನ್. ಆರ್ಸಿಬಿ ಚಾಂಪಿಯನ್ ಆಗಿದಕ್ಕೆ ಪ್ರಧಾನ ಕಾರಣವೇ ಇಂಗ್ಲೆಂಡ್ನ ಈ ಹೊಡಿಬಡಿ ದಾಂಡಿಗ. ಆದ್ರೀಗ ಇದೇ ಫಿಲ್ ಸಾಲ್ಟ್, ಮತ್ತೆ ಕೊಲ್ಕತ್ತಾ ಸೇರ್ತಾರೆ ಎಂಬ ವಂದಂತಿ ಕೇಳಿ ಬರ್ತಿದೆ. ಇಂಟ್ರೆಸ್ಟಿಂಗ್ ಅಂದ್ರೆ ಮೆಗಾ ಹರಾಜಿನಲ್ಲಿ 23.50 ಕೋಟಿಗೆ ಬಿಡ್ ಮಾಡಿದ್ದ ವೆಂಕಟೇಶ್ ಅಯ್ಯರ್ನ ಸ್ವಾಪ್ ಮಾಡಿಕೊಳ್ಳುತ್ತೆ ಎನ್ನಲಾಗ್ತಿದೆ.
ಇದನ್ನೂ ಓದಿ:ರೋಹಿತ್ ಶರ್ಮಾರ ಮನೆಗೆ ಹೊಸ ಅತಿಥಿ ಎಂಟ್ರಿ.. ಕಣ್ಣುಕುಕ್ಕಿದ ನಂಬರ್ ಪ್ಲೇಟ್..!
ಮತ್ತೊಂದು ಕಡೆ ಆರ್ಸಿಬಿ ಮುಂಬೈ ಇಂಡಿಯನ್ಸ್ನಿಂದ ತಿಲಕ್ ವರ್ಮಾರನ್ನು ಕರೆದುಕೊಂಡು ಬರಲು ಪ್ಲಾನ್ ಮಾಡಿದೆ. ಇವರು ಮುಂಬೈ ಇಂಡಿಯನ್ಸ್ ಪಾಕೆಟ್ ಡೈನಾಮೆಟ್. ಈತ ಸಿಡಿದ್ರೆ, ಎದುರಾಳಿ ಖಲ್ಲಾಸ್ ಆಗ್ತಾನೆ. ಮುಂಬೈನ ನಂಬಿಕಸ್ಥ ಬ್ಯಾಟರ್ಗಳಲ್ಲಿ ಈತನೂ ಒಬ್ಬ.. ಆದ್ರೆ. ಮುಂಬೈ ಇಂಡಿಯನ್ಸ್ ತಂಡದ ಈ ಎರಡಗೈ ಬಂಟ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಸೇರ್ತಾರೆ ಎನ್ನಲಾಗ್ತಿದೆ.
ಇದಕ್ಕೆ ಕಾರಣ ನಂಬರ್.3 ಸ್ಲಾಟ್.. ಯಾಕಂದ್ರೆ ಕಳೆದ ಸೀಸನ್ನಲ್ಲಿ ಚಾಂಪಿಯನ್ ಆರ್ಸಿಬಿ ಕೊಂಚ ಹಿನ್ನಡೆ ಎದುರಾಗಿದ್ದು 3ನೇ ಕ್ರಮಾಂಕದ ಬ್ಯಾಟಿಂಗ್. ಹೀಗಾಗಿ ಈತನ ಟ್ರೇಡ್ ಮಾಡಿದ್ರೆ. ಆರ್ಸಿಬಿಯ ಟಾಪ್ ಆರ್ಡರ್ ಮತ್ತಷ್ಟು ಸಾಲಿಡ್ ಆಗುತ್ತೆ ಅನ್ನೋದು ಆರ್ಸಿಬಿ ಲೆಕ್ಕಾಚಾರವಂತೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಗಂಭೀರ್ ಕ್ರಾಂತಿಕಾರಿ ಹೆಜ್ಜೆ.. ಯಾರಿಗೂ ಮಾಡಲಾಗದ್ದನ್ನ ಸಾಧಿಸಿದ ಕೋಚ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ