ಧೋನಿಯ 100 ಕೋಟಿ ಕೇಸ್​​ಗೆ 12 ವರ್ಷಗಳ ಬಳಿಕ ಬಿಗ್ ಟ್ವಿಸ್ಟ್​.. ಏನಿದು ಪ್ರಕರಣ..?

ಎಮ್​.ಎಸ್.ಧೋನಿ ಮುಂದಿನ ಸೀಸನ್​ ಐಪಿಎಲ್​ ಆಡ್ತಾರಾ? ಇಲ್ವಾ? ಅನ್ನೋ ಪ್ರಶ್ನೆ ಕ್ರಿಕೆಟ್​​ ಲೋಕದಲ್ಲಿ ಗಿರಕಿ ಹೊಡೀತಿದೆ. ಇದ್ರ ನಡುವೆ ಧೋನಿ 12 ವರ್ಷಗಳ ಹಿಂದೆ ಹೈಕೋರ್ಟ್​​ ಮೆಟ್ಟಿಲೇರಿದ್ದ ಪ್ರಕರಣ ಮತ್ತೆ​ ಸೌಂಡ್​ ಮಾಡ್ತಿದೆ. ಬರೋಬ್ಬರಿ 100 ಕೋಟಿಯ ಕೇಸ್​​​​ ಇದೀಗ ಅಂತಿಮ ಘಟ್ಟ ತಲುಪಿದೆ.

author-image
Ganesh Kerekuli
MS Dhoni

ಎಂ.ಎಸ್​.ಧೋನಿ

Advertisment

ಮಿಸ್ಟರ್​​ ಕೂಲ್​ ಎಮ್​.ಎಸ್.ಧೋನಿ ಮುಂದಿನ ಸೀಸನ್​ ಐಪಿಎಲ್​ ಆಡ್ತಾರಾ? ಇಲ್ವಾ? ಅನ್ನೋ ಪ್ರಶ್ನೆ ಕ್ರಿಕೆಟ್​​ ಲೋಕದಲ್ಲಿ ಗಿರಕಿ ಹೊಡೀತಿದೆ. ಇದ್ರ ನಡುವೆ ಧೋನಿ 12 ವರ್ಷಗಳ ಹಿಂದೆ ಹೈಕೋರ್ಟ್​​ ಮೆಟ್ಟಿಲೇರಿದ್ದ ಪ್ರಕರಣ ಮತ್ತೆ​ ಸೌಂಡ್​ ಮಾಡ್ತಿದೆ. ಬರೋಬ್ಬರಿ 100 ಕೋಟಿಯ ಕೇಸ್​​​​ ಇದೀಗ ಅಂತಿಮ ಘಟ್ಟ ತಲುಪಿದೆ. ಅಷ್ಟಕ್ಕೂ ಏನಿದು ಪ್ರಕರಣ? 100 ಕೋಟಿಯ ಕಥೆ ಏನು?

100 ಕೋಟಿ ಕೇಸ್​​ಗೆ ಮರುಜೀವ

12 ವರ್ಷದ ಹಿಂದೆ ಅಂದ್ರೆ 2014ರಲ್ಲಿ ಧೋನಿ ಹೈಕೋರ್ಟ್​ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಮಹತ್ವದ ಆದೇಶ ಪ್ರಕಟಿಸಿದೆ. 2013ರಲ್ಲಿ ಮ್ಯಾಚ್​ ಫಿಕ್ಸಿಂಗ್​ ನಡೆದಿತ್ತಲ್ವಾ ಆ ಸಂದರ್ಭದಲ್ಲಿ ಕೆಲವರು ಧೋನಿ ಹೆಸರನ್ನ ಎಳೆದು ತಂದಿದ್ರು. ಇದನ್ನ ಸಹಿಸಿಕೊಳ್ಳದ ಧೋನಿ ಹೈಕೋರ್ಟ್​ ಮೆಟ್ಟಿಲೇರಿದ್ರು. ಬರೋಬ್ಬರಿ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ರು. ಸುದೀರ್ಘ 12 ವರ್ಷಗಳ ಬಳಿಕ ಈ ಕೇಸ್​​ ಇದೀಗ ಮಹತ್ವದ ಘಟ್ಟ ತಲುಪಿದ್ದು ಟ್ರಯಲ್ಸ್​ಗೆ ಹೈಕೋರ್ಟ್​ ಆದೇಶಿಸಿದೆ. 

ಇದನ್ನೂ ಓದಿ: ರೋಹಿತ್​ ಶರ್ಮಾರ ಮನೆಗೆ ಹೊಸ ಅತಿಥಿ ಎಂಟ್ರಿ.. ಕಣ್ಣುಕುಕ್ಕಿದ ನಂಬರ್​​ ಪ್ಲೇಟ್..!

ms dhoni retirement plan
MS ಧೋನಿ Photograph: (ಸಿಎಸ್​ಕೆ ಟ್ವಿಟರ್)

ಟ್ರಯಲ್ಸ್​ನಿಂದ MS​​ ಧೋನಿಗೆ ವಿನಾಯಿತಿ

ಮಾನನಷ್ಟ ಮೊಕದ್ದಮೆಯ ಮುಖಾಮುಖಿ ವಿಚಾರಣೆ ಆರಂಭಿಸಲು ಆದೇಶಿಸಿರುವ ಹೈಕೋರ್ಟ್​ ಇದ್ರಿಂದ ಧೋನಿಗೆ ವಿನಾಯಿತಿ ನೀಡಿದೆ. ಧೋನಿಯಿಂದ ಸಾಕ್ಷ್ಯ ದಾಖಲಿಸಲು ಅಡ್ವೋಕೇಟ್​​ ಕಮಿಷನರ್​​ರನ್ನ ಹೈಕೋರ್ಟ್​ ನೇಮಿಸಿದೆ. ಧೋನಿ ದೈಹಿಕವಾಗಿ ನ್ಯಾಯಾಲಯಕ್ಕೆ ಹಾಜಾರಾದ್ರೆ ಸಾರ್ವಜನಿಕರಿಗೆ ತೊಂದರೆಯಾಗಬಹುದು. ಇದನ್ನ ಗಮನದಲ್ಲಿರಿಸಿಕೊಂಡಿರುವ ಕೋರ್ಟ್​​ ಆದೇಶ ನೀಡಿದೆ. 

ಇದನ್ನೂ ಓದಿ: ಫಿಲ್ ಸಾಲ್ಟ್​​​ರನ್ನ ಬಿಟ್ಟುಕೊಡುತ್ತಾ RCB? ಕೆಕೆಆರ್​ ಜೊತೆ ಆರ್​ಸಿಬಿ ಬಿಗ್ ಡೀಲ್..?

ms dhoni house of biriyani

ಏನಿದು ಪ್ರಕರಣ? ಧೋನಿ ಎದುರಾಳಿಗಳು ಯಾರು?

2013ರಲ್ಲಿ ಐಪಿಎಲ್​ ಸ್ಟಾಟ್​​ ಫಿಕ್ಸಿಂಗ್​ ಹಗರಣ ನಡೆದಿತ್ತು. ಈ ಪ್ರಕರಣದಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಮಾಲೀಕ ಶ್ರೀನಿವಾಸನ್​ರ​ ಅಳಿಯ, ಚೆನ್ನೈ ತಂಡದ ಉನ್ನತ ಅಧಿಕಾರಿಯಾಗಿದ್ದ ಗುರುನಾಥ್​ ಮೇಯಪ್ಪನ್​ನ ಬಂಧಿಸಲಾಗಿತ್ತು. ಈ ಪ್ರಕರಣವನ್ನ ವರದಿ ಮಾಡುವ ವೇಳೆ ನ್ಯೂಸ್​​ ನೇಷನ್​ ನೆಟ್​​ವರ್ಕ್​, ಪತ್ರಕರ್ತ ಸುಧೀರ್​ ಚೌಧರಿ, ಜೀ ಮೀಡಿಯಾ​ ನೆಟ್ವರ್ಕ್​​ ಧೋನಿ ಹೆಸರನ್ನ ಎಳೆದುತಂದಿದ್ರು. ನಿವೃತ್ತ ಐಪಿಎಸ್​​​ ಅಧಿಕಾರಿ ಜಿ. ಸಂಪತ್​ ಕುಮಾರ್​ ಕೂಡ ಧೋನಿ ಮೇಲೆ ಆರೋಪ ಮಾಡಿದ್ರು. ಇವ್ರ ಮೇಲೆ ಧೋನಿ 100 ಕೋಟಿಯ ಮಾನನಷ್ಟ ಮೊಕದ್ದಮೆ ಹೂಡಿದ್ರು. 

ತ್ವರಿತಗತಿಯಲ್ಲಿ ವಿಚಾರಣೆಗೆ ಮನವಿ ಮಾಡಿದ್ದ ಧೋನಿ

ಧೋನಿ ಸಲ್ಲಿಸಿದ್ದ ಈ ಪ್ರಕರಣದ ವಿಚಾರಣೆ ಹಲವಾರು ಅರ್ಜಿಗಳು ಮತ್ತು ಕಾರ್ಯವಿಧಾನದ ವಿಳಂಬದಿಂದಾಗಿ ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಹೀಗಾಗಿ ಶೀಘ್ರ ವಿಚಾರಣೆಗೆ ಧೋನಿ ಇತ್ತೀಚೆಗೆ ಮನವಿ ಮಾಡಿದ್ರು. ಅಡ್ವೋಕೇಟ್​​ ಕಮಿಷನರ್ ನೇಮಕದ ಬಳಿಕ ಅಫಿಡೆವಿಟ್​ ಸಲ್ಲಿಸಿರೋ ಧೋನಿ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದಿದ್ದಾರೆ. ವಿಚಾರಣೆ, ಸಾಕ್ಷ ದಾಖಲಾತಿಗೆ ಸಹಕಾರ ನೀಡೋದಾಗಿ ತಿಳಿಸಿದ್ದು, ಅಕ್ಟೋಬರ್​​ 20ರಿಂದ  ಡಿಸೆಂಬರ್​ 10ರವರೆಗೆ ಎಕ್ಸಾಮಿನೇಷನ್​​ ಮತ್ತು ಕ್ರಾಸ್​ ಎಕ್ಸಾಮಿನೇಷನ್​​ಗೆ ಲಭ್ಯವಿರೋದಾಗಿ ಹೇಳಿದ್ದಾರೆ. 

ಒಟ್ಟಿನಲ್ಲಿ ಧೋನಿ 12 ವರ್ಷಗಳ ಹಿಂದೆ ಧೋನಿ ಹೈಕೋರ್ಟ್​ ಮೆಟ್ಟಿಲೇರಿದ್ದ ಪ್ರಕರಣ ಇದೀಗ ಮಹತ್ವದ ಘಟ್ಟ ತಲುಪಿದೆ. ಕೆಲವೇ ದಿನಗಳಲ್ಲಿ ಟ್ರಯಲ್ಸ್​ ಆರಂಭವಾಗಲಿದ್ದು, ಶೀಘ್ರದಲ್ಲೇ ತೀರ್ಪು ಬರೋ ನಿರೀಕ್ಷೆಯಿದೆ. 

ಇದನ್ನೂ ಓದಿ: ಯಾರೋ ಮಾಡಿದ ತಪ್ಪಿಗೆ, ಇನ್ಯಾರಿಗೋ ಶಿಕ್ಷೆ.. ಬೆಂಗಳೂರಿಗೆ ಆಗ್ತಿರುವ ನಷ್ಟಗಳು ಏನೇನು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MS Dhoni MS Dhoni investment MS Dhoni defamation case
Advertisment