newsfirstkannada.com

×

ಗೋವಾದಲ್ಲಿ ಮಗನನ್ನು ಸಾಯಿಸಿದ ತಾಯಿ.. ಇದೊಂದು ಯಡವಟ್ಟು ಆಗದಿದ್ರೆ ಸುಚನಾ ಸೇಠ್ ಎಸ್ಕೇಪ್‌!

Share :

Published January 11, 2024 at 12:55pm

    ನಾಲ್ಕು ವರ್ಷದ ಮಗನನ್ನು ಕೊಂದ ಸುಚನಾ ಸೇಠ್ ಪ್ರಕರಣ

    ಅಂದು ಸುಚನಾ ಸೇಠ್ ಗಂಡ ವೆಂಕಟರಾಮನ್ ಮಾಡಿದ್ದೇನು?

    ಗೋವಾ-ಕರ್ನಾಟಕದ ಗಡಿಯಲ್ಲಿ ನಾಲ್ಕು ಗಂಟೆ ಕಾಲ ಟ್ರಾಫಿಕ್ ಜಾಮ್‌

ಗೋವಾದ ಹೋಟೆಲ್‌ನಲ್ಲಿ ನಾಲ್ಕು ವರ್ಷದ ಮಗನನ್ನು ಕೊಂದ ಸುಚನಾ ಸೇಠ್ ಪ್ರಕರಣದ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗಿದೆ. ತಾಯಿಯೇ ತನ್ನ ಕಂದಮ್ಮನನ್ನು ಕೊಂದಿದ್ದು ಯಾಕೆ? ಅಂದು ಸುಚನಾ ಸೇಠ್ ಗಂಡ ವೆಂಕಟರಾಮನ್ ಮಾಡಿದ್ದೇನು? ರಾತ್ರೋರಾತ್ರಿ ಹೋಟೆಲ್‌ನಿಂದ ಮಗುವಿನ ಶವವನ್ನು ಕಾರಿನಲ್ಲಿ ಸಾಗಿಸಿದ ಸುಚನಾ ಸೇಠ್ ಸಿಕ್ಕಿಬಿದ್ದಿದ್ದು ಹೇಗೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್ ಇದೀಗ ಬಯಲಾಗಿದೆ.

ಕಳೆದ ಶನಿವಾರ ಬೆಂಗಳೂರಲ್ಲಿದ್ದ ಸುಚನಾ ಸೇಠ್‌ ಅವರು ಕೋರ್ಟ್ ಆದೇಶದಂತೆ ತನ್ನ ಮಾಜಿ ಪತಿ ವೆಂಕಟರಾಮನ್‌ಗೆ ಬಂದು ಮಗನನ್ನು ಭೇಟಿಯಾಗಲು ಮೆಸೇಜ್ ಮಾಡಿದ್ದಾರೆ. ಮಗನನ್ನು ಗಂಡನಿಗೆ ತೋರಿಸಲು ಇಷ್ಟವಿಲ್ಲದೇ ಮಗನ ಜೊತೆ ಭಾನುವಾರ ಗೋವಾಗೆ ತೆರಳಿದ್ದಾರೆ. ಇಂಡೋನೇಷ್ಯಾದಿಂದ ಬೆಂಗಳೂರಿಗೆ ಬಂದಿದ್ದ ವೆಂಕಟರಾಮನ್‌ಗೆ ಸುಚನಾ ಸೇಠ್ ಸಿಕ್ಕೇ ಇರಲಿಲ್ಲ. ಹೀಗಾಗಿ ವೆಂಕಟರಾಮನ್ ವಾಪಸ್ ಇಂಡೋನೇಷ್ಯಾಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: ತಾಯಿಯಿಂದಲೇ ಮಗನ ಕೊಲೆ.. ಪೊಲೀಸ್ರ ಮುಂದೆ ಸ್ಫೋಟಕ ರಹಸ್ಯ ಬಿಚ್ಚಿಟ್ಟ ಹಂತಕಿ

ಗಡಿಯಲ್ಲಿ 4 ಗಂಟೆ ಟ್ರಾಫಿಕ್ ಜಾಮ್‌!
ಗೋವಾ ಹೋಟೆಲ್‌ನಲ್ಲಿ ಮಗನ ಹತ್ಯೆಯಾದ ಬಳಿಕ ಸುಚನಾ ಸೇಠ್, ಟ್ಯಾಕ್ಸಿ ಬುಕ್‌ ಮಾಡಲು ಒತ್ತಾಯಿಸಿದ್ದಾರೆ. ಕಾರಿನಲ್ಲಿ ಬೆಂಗಳೂರಿಗೆ ಬರುವಾಗ ಗೋವಾದಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಇದೇ ಟ್ರಾಫಿಕ್ ಜಾಮ್ ಈ ಪ್ರಕರಣದಲ್ಲಿ ಗೋವಾ ಪೊಲೀಸರಿಗೆ ವರವಾಗಿದ್ದು. ಗೋವಾ-ಕರ್ನಾಟಕದ ಗಡಿಯಲ್ಲಿ ನಾಲ್ಕು ಗಂಟೆ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸುಚನಾ ಸೇಠ್ ಪ್ರಯಾಣಿಸುತ್ತಿದ್ದ ಕಾರು ಸಿಲುಕಿಕೊಂಡಿದೆ.
ಗೋವಾದಲ್ಲಿ ಬೇರೆ ವಾಹನಗಳ ಅಪಘಾತದಿಂದ ಬರೋಬ್ಬರಿ 4 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿದೆ. ಇದೇ ಜಾಮ್‌ನಲ್ಲಿ ಸುಚನಾ ಸೇಠ್ ಪ್ರಯಾಣಿಸುತ್ತಿದ್ದ ಕಾರು ಸಿಲುಕಿಕೊಂಡಿದೆ. ಈ ಟ್ರಾಫಿಕ್ ಜಾಮ್‌ನಿಂದ ಸುಚನಾ ಸೇಠ್‌ಗೆ ಬೇಗ ಬೆಂಗಳೂರಿಗೆ ತಲುಪಲು ಸಾಧ್ಯವಾಗಿಲ್ಲ. ಗೋವಾದಲ್ಲಿ ಟ್ರಾಫಿಕ್ ಜಾಮ್ ಆಗದೇ ಇದ್ದರೆ ಸುಚನಾ ಸೇಠ್ ಬೇಗನೇ ಬೆಂಗಳೂರು ತಲುಪಿ ಎಸ್ಕೇಪ್ ಆಗುತ್ತಿದ್ದರು.

ಅಂದು ರಾತ್ರಿ ನಾಲ್ಕು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗದಿದ್ದರೆ ಸುಚನಾ ಸೇಠ್ ಅವರು ಪೊಲೀಸರ ಕೈಗೆ ಸಿಗದೇ ಎಸ್ಕೇಪ್ ಆಗೋ ಅವಕಾಶ ಹೆಚ್ಚಾಗಿತ್ತು. ಕೊನೆಗೆ ಗೋವಾ ಪೊಲೀಸರು ಕಾರು ಹಿರಿಯೂರು ಬಳಿ ಬರುವಾಗ ಅಲರ್ಟ್ ಆಗಿದ್ದಾರೆ. ಕಾರ್ ಡ್ರೈವರ್ ಜೊತೆ ಕೊಂಕಣಿ ಭಾಷೆಯಲ್ಲಿ ಮಾತನಾಡಿ, ಹತ್ತಿರದ ಪೊಲೀಸ್ ಠಾಣೆಗೆ ಹೋಗಲು ಹೇಳಿದ್ದಾರೆ. ಇದರಿಂದಲೇ ಸುಚನಾ ಸೇಠ್ ಬಂಧನ ಆಪರೇಷನ್‌ ಗೋವಾ ಪೊಲೀಸರಿಗೆ ಸುಲಭವಾಗಿದೆ. ಒಂದು ವೇಳೆ ಟ್ರಾಫಿಕ್ ಜಾಮ್ ಆಗದಿದ್ರೆ ಸುಚನಾ ಸೇಠ್ ಬೆಂಗಳೂರಿಗೆ ಬಂದು ಮತ್ತೇನಾದ್ರೂ ಮಾಡುವ ಅವಕಾಶಗಳಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೋವಾದಲ್ಲಿ ಮಗನನ್ನು ಸಾಯಿಸಿದ ತಾಯಿ.. ಇದೊಂದು ಯಡವಟ್ಟು ಆಗದಿದ್ರೆ ಸುಚನಾ ಸೇಠ್ ಎಸ್ಕೇಪ್‌!

https://newsfirstlive.com/wp-content/uploads/2024/01/Suchita-Seth-1.jpg

Load More