newsfirstkannada.com

ದುಡ್ಡು ಡಬಲ್​ ಮಾಡಿಕೊಡೋದಾಗಿ ಮೋಸ.. ಬರೋಬ್ಬರಿ 30 ಕೋಟಿ ವಂಚಿಸಿ ಎಸ್ಕೇಪ್​​!

Share :

Published May 26, 2024 at 4:03pm

    ದೂರು ಕೊಡುತ್ತಿದ್ದಂತೆ ಅಪಾರ್ಟ್‌ಮೆಂಟ್​ನಿಂದ ಕಾಲ್ಕಿತ್ತಿದ ಗಂಡ, ಹೆಂಡತಿ

    ಕ್ಯಾಪಿಟಲ್ ಗ್ರೌನ್ ಗ್ರೋತ್ ಪ್ಲಸ್ ಕಂಪನಿ ಹೆಸರಿನಲ್ಲಿ ವಂಚಿಸಿದ ದಂಪತಿ

    ಗಾಂಧಿನಗರದ ಬಳಿ ಬಿ.ಎಲ್. ಕಾಂಪ್ಲೆಕ್ಸ್​​ನಲ್ಲಿ ನಡೆಸುತ್ತಿದ್ದ ಟ್ರೇಡಿಂಗ್ ಕಂಪನಿ

ಕಲಬುರಗಿ: ಷೇರು ಮಾರ್ಕೆಟ್ ಹೆಸರಿನಲ್ಲಿ ಹಣವನ್ನು ಡಬಲ್​​ ಮಾಡುವುದಾಗಿ ಸುಮಾರು 30 ಕೋಟಿಗೂ ಹೆಚ್ಚು ರೂಪಾಯಿ ವಂಚನೆ ಮಾಡಿರೋ ಘಟನೆ ನಗರದ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉತ್ಕರ್ಷ ಹಾಗೂ ಸಾವಿತ್ರಿ ಎಂಬುವವರು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಬಸ್ ನಿಲ್ದಾಣ ಕಾಣೆಯಾಗಿದೆ, ಪ್ಲೀಸ್​ ಹುಡುಕಿಕೊಡಿ! ನ್ಯೂಸ್​ಫಸ್ಟ್​ಗೆ ಸಾರ್ವಜನಿಕರಿಂದ ಸ್ಪೆಷಲ್ ರಿಕ್ವೆಸ್ಟ್

ಈ ದಂಪತಿ ಕ್ಯಾಪಿಟಲ್ ಗ್ರೌನ್ ಗ್ರೋತ್ ಪ್ಲಸ್ ಕಂಪನಿ ಹೆಸರಿನಲ್ಲಿ ವಂಚಿಸಿದ್ದಾರೆ ಎನ್ನಲಾಗಿದೆ. ಗಾಂಧಿನಗರದ ಬಳಿ ಬಿ.ಎಲ್. ಕಾಂಪ್ಲೆಕ್ಸ್​ನಲ್ಲಿ ನಡೆಸುತ್ತಿದ್ದ ಟ್ರೇಡಿಂಗ್ ಕಂಪನಿ ಇದಾಗಿತ್ತು. ಯುವಕ, ಯುವತಿಯರನ್ನೇ ಮುಖ್ಯವಾಗಿ ಟಾರ್ಗೆಟ್​​ ಮಾಡಿ ಹಣ ವಂಚಿಸಿದ್ದಾರೆ ಎನ್ನಲಾಗಿದೆ. ಉತ್ಕರ್ಷಗೆ ಸಹಾಯ ಮಾಡುತ್ತಿದ್ದ ವಿಜಯಸಿಂಗ್ ಹಜಾರೆ ಹಾಗೂ ಸುಧಾ ಎಂಬುವರ ವಿರುದ್ಧವೂ ಕೂಡ ದೂರು ದಾಖಲಾಗಿದೆ.

ಉತ್ಕರ್ಷ ಹಾಗೂ ಸಾವಿತ್ರಿ ಇಬ್ಬರು ಬರೋಬ್ಬರಿ 500ಕ್ಕೂ ಅಧಿಕ ಜನರಿಗೆ ವಂಚಿಸಿದ್ದಾರಂತೆ. ಒಬ್ಬರಿಂದ 25 ಲಕ್ಷದಿಂದ, ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರಂತೆ. ಇನ್ನು ವಂಚನೆ ಬಗ್ಗೆ ದೂರು ಕೊಡುತ್ತಿದ್ದಂತೆ ಅಪಾರ್ಟ್ ಮೆಂಟ್​ನಿಂದ ದಂಪತಿ ಸುನೀಲ್ ಎಂಬುವರ ಕಾರಿನಲ್ಲಿ ಎಸ್ಕೇಪ್​ ಆಗಿದ್ದಾರೆ. ಸುನೀಲ್ ಎಂಬಾತ ವಂಚಕರು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈ ಸಂಬಂಧ ವಂಚನೆ ಬೆನ್ನಲ್ಲೇ ರೋಜಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ರೋಜಾ ಪೊಲೀಸರು ಸುಧಾ ಎನ್ನುವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಡ್ಡು ಡಬಲ್​ ಮಾಡಿಕೊಡೋದಾಗಿ ಮೋಸ.. ಬರೋಬ್ಬರಿ 30 ಕೋಟಿ ವಂಚಿಸಿ ಎಸ್ಕೇಪ್​​!

https://newsfirstlive.com/wp-content/uploads/2024/05/Sans-titre6.jpg

Load More