newsfirstkannada.com

ಬಸ್ ನಿಲ್ದಾಣ ಕಾಣೆಯಾಗಿದೆ, ಪ್ಲೀಸ್​ ಹುಡುಕಿಕೊಡಿ! ನ್ಯೂಸ್​ಫಸ್ಟ್​ಗೆ ಸಾರ್ವಜನಿಕರಿಂದ ಸ್ಪೆಷಲ್ ರಿಕ್ವೆಸ್ಟ್

Share :

Published May 26, 2024 at 2:52pm

Update May 26, 2024 at 2:53pm

    ಅಮರಜ್ಯೋತಿ ಬಿಎಂಟಿಸಿ ಬಸ್ ನಿಲ್ದಾಣ ಕಾಣೆ

    ಕಳೆದ 15 ವರ್ಷಗಳಿಂದ ಇದ್ದ ಬಸ್​ಸ್ಟ್ಯಾಂಡ್​ ಕಳೆದೊಂದು ವಾರದಿಂದ ಕಾಣೆ

    ಬಸ್​ ಸ್ಟ್ಯಾಂಡ್​ ಜಾಗದಲ್ಲಿ ಖಾಸಗಿ ಹೋಟೆಲ್​ ನಿರ್ಮಾಣ.. ಕಿಡಿ ಕಾರಿದ ಸಾರ್ವಜನಿಕರು

ಬೆಂಗಳೂರು: ಅಮರಜ್ಯೋತಿ ಬಿಎಂಟಿಸಿ ಬಸ್ ನಿಲ್ದಾಣ ಕಾಣೆಯಾಗಿದೆ. ಪ್ಲೀಸ್​ ಹುಡುಕಿಕೊಡಿ ಎಂದು ಸಾರ್ವಜನಿಕರು ನ್ಯೂಸ್​ಫಸ್ಟ್ ಕನ್ನಡಗೆ ಸಾರ್ವಜನಿಕರು ಸ್ಪೆಷಲ್ ರಿಕ್ವೆಸ್ಟ್ ಮಾಡಿದ್ದಾರೆ.

ಮೂಡಲಪಾಳ್ಯದಿಂದ ವಿಜಯನಗರಕ್ಕೆ ಬರುವ ರಸ್ತೆಯಲ್ಲಿ ಕಳೆದ 15 ವರ್ಷಗಳಿಂದ ಬಸ್​ ಸ್ಟ್ಯಾಂಡ್​ ಇತ್ತು. ಆದ್ರೆ, ಕಳೆದ ಒಂದು ವಾರದಿಂದ ಬಸ್​ಸ್ಟ್ಯಾಂಡ್​ ತೆರವುಗೊಳಿಸಿ ಖಾಸಗಿ ಹೋಟೆಲ್​ ನಿರ್ಮಿಸಲಾಗಿದೆ. ಇದರಿಂದಾಗಿ ಜನ ರಸ್ತೆಯಲ್ಲೇ ಬಸ್​ಗಾಗಿ ಕಾದು ನಿಲ್ಲುವಂತಾಗಿದೆ.

ಇಷ್ಟೆಲ್ಲಾ ಆದ್ರೂ ಕೂಡ ಬಿಬಿಎಂಪಿ ಮಾತ್ರ ಹೋಟೆಲ್​ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲಾ ಅಂತಾ ಜನ ಆಕ್ರೋಶ ಹೊರಹಾಕುತ್ತಿದ್ದಾರೆ.

ಅತ್ತ ಹೋಟೆಲ್ ಮಾಲೀಕರು ಖಾಸಗಿ ಜಾಗದಲ್ಲಿ ಬಸ್ ನಿಲ್ದಾಣ ಮಾಡಲಾಗಿತ್ತು ಎನ್ನುತ್ತಿದ್ದಾರೆ.ಆದರೆ ಸಾರ್ವಜನಿಕರು ಕಳೆದ 15 ವರ್ಷಗಳಿಂದ ಇದೇ ಜಾಗದಲ್ಲಿ ಬಸ್ ನಿಲ್ದಾಣವಿತ್ತು ಎನ್ನುತ್ತಿದ್ದಾರೆ.

ಇದನ್ನೂ ಓದಿ: ವಾಯ್ಸ್​ ಬದಲಿಸೋ ಆ್ಯಪ್ ಬಳಸಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ.. ಅನಕ್ಷರಸ್ಥನ ಕೃತ್ಯಕ್ಕೆ ಪೊಲೀಸರೇ ಶಾಕ್!

ಇಷ್ಟು ಬಿಸಿಲಿನಲ್ಲಿ ರಸ್ತೆಯಲ್ಲಿ ನಿಂತು ಕಾಯೋಕೆ ಆಗುತ್ತಾ. ಕಳೆದ ಸಾಕಷ್ಟು ವರ್ಷಗಳಿಂದ ಬಸ್ ನಿಲ್ದಾಣ ಇಲ್ಲಿಯೇ ಇತ್ತು. ಈಗ ಕಳೆದ ಒಂದು ವಾರದ ಹಿಂದೆ ನಿಲ್ದಾಣ ತೆರವುಗೊಳಿಸಲಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್ ನಿಲ್ದಾಣ ಕಾಣೆಯಾಗಿದೆ, ಪ್ಲೀಸ್​ ಹುಡುಕಿಕೊಡಿ! ನ್ಯೂಸ್​ಫಸ್ಟ್​ಗೆ ಸಾರ್ವಜನಿಕರಿಂದ ಸ್ಪೆಷಲ್ ರಿಕ್ವೆಸ್ಟ್

https://newsfirstlive.com/wp-content/uploads/2024/05/Vijayanagar-1.jpg

Load More