ಲವ್ ಬ್ರೇಕ್ ಅಪ್ ಸ್ಟೋರಿ.. ಪ್ರಿಯಕರನ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನ; ಮುಂದೇನಾಯ್ತು?

author-image
admin
Updated On
ಲವ್ ಬ್ರೇಕ್ ಅಪ್ ಸ್ಟೋರಿ.. ಪ್ರಿಯಕರನ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನ; ಮುಂದೇನಾಯ್ತು?
Advertisment
  • 2 ವರ್ಷಗಳಿಂದ ಮುದ್ದೇಬಿಹಾಳದ ಹುಡುಗಿಯನ್ನು ಪ್ರೀತಿಸುತ್ತಿದ್ದ ರಾಹುಲ್
  • ಪ್ರಿಯಕರನ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ ಆರೋಪ
  • ಹುಡುಗಿ ತಂದೆ ಅಪ್ಪು ಉರ್ಫ್ ಪರಶುರಾಮ ಅವರನ್ನೇ ಬಂಧಿಸಿದ ಪೊಲೀಸರು

ವಿಜಯಪುರ: ಮುದ್ದೇಬಿಹಾಳದಲ್ಲಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ರಾಹುಲ್ ಮತ್ತು ಐಶ್ವರ್ಯಾ ಪ್ರೇಮ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಪ್ರಿಯಕರನ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿರೋ ಆರೋಪ ಕೇಳಿ ಬಂದಿದ್ದು, ಪ್ರಿಯತಮೆಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

publive-image

ಢವಳಗಿ ಗ್ರಾಮದ ರಾಹುಲ್ ಮುದ್ದೇಬಿಹಾಳದ ಐಶ್ವರ್ಯಾ ಪ್ರೀತಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಇವರಿಬ್ಬರ ಮಧ್ಯೆ ಲವ್ ಬ್ರೇಕ್ ಅಪ್ ಆಗಿದೆ. ಕಳೆದ ಮೇ 26ರಂದು ಪ್ರಿಯಕರ ರಾಹುಲ್ ಯುವತಿ ಮನೆಗೆ ಹೋಗಿದ್ದಾನೆ. ಆಗ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ:ನಿದ್ದೆಯಲ್ಲಿದ್ದವರಿಗೆ ಆಘಾತ.. ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟಕ್ಕೆ ಒಂದೇ ಕುಟುಂಬದ ಐವರ ಸ್ಥಿತಿ ಗಂಭೀರ 

ರಾಹುಲ್ ತಂದೆ ರಾಮನಗೌಡ ಅವರು ಯುವತಿ ತಂದೆ ವಿರುದ್ಧ ಮುದ್ದೇಬಿಹಾಳ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಐಶ್ವರ್ಯಾ ತಂದೆ ಅಪ್ಪು ಉರ್ಫ್ ಪರಶುರಾಮ ಮದರಿ ಅವರನ್ನು ಬಂಧಿಸಲಾಗಿದೆ.
ಪ್ರಿಯಕರ ರಾಹುಲ್ ನಡತೆ ಸರಿಯಿಲ್ಲವೆಂದು ಐಶ್ವರ್ಯಾ ಮದುವೆಗೆ ನಿರಾಕರಿಸಿದ್ದಳು. ಇಷ್ಟಾದರೂ ರಾಹುಲ್‌ ಐಶ್ವರ್ಯಾ ಬೆನ್ನು ಬಿದ್ದಿದ್ದಾನೆ. ಈ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರೋ ಆರೋಪ ಕೇಳಿ ಬಂದಿದೆ.

ಗಾಯಗೊಂಡಿರುವ ರಾಹುಲ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಡುಗಿ ತಂದೆ ಪರಶುರಾಮ ಅವರು ಹುಡುಗ ರಾಹುಲ್ ನಮ್ಮ ಮನೆಗೆ ಪೆಟ್ರೋಲ್ ತಂದಿದ್ದಾಗಿ ಆರೋಪಿಸಿದ್ದರು. ಎರಡು ಕುಟುಂಬಗಳಿಂದ ಪರಸ್ಪರ ದೂರು ದಾಖಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment