newsfirstkannada.com

ಹಾಯ್‌ ಚಿನ್ನ.. ದರ್ಶನ್ ವಿಡಿಯೋ ಕಾಲ್ ಕೇಸ್‌ಗೆ ಹೊಸ ಟ್ವಿಸ್ಟ್; ಧರ್ಮ ಬಾಯ್ಬಿಟ್ಟ ಸ್ಫೋಟಕ ಸತ್ಯ; ಏನದು?

Share :

Published September 3, 2024 at 11:31pm

    ಜೈಲಿನಲ್ಲಿ ವಿಡಿಯೋ ಕಾಲ್‌ನಲ್ಲಿ ಹಾಯ್‌ ಚಿನ್ನ ಎಂದಿದ್ದ ದರ್ಶನ್‌

    ರೌಡಿ ಧರ್ಮನ ವಿಚಾರಣೆ ವೇಳೆ ಬೇರೆಯದ್ದೇ ಸತ್ಯ ಬಯಲು

    ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಮೊಬೈಲ್ ಡೀಲಿಂಗ್ ಜಾಲ ಇದ್ಯಾ?

ಬೆಂಗಳೂರು: ಜೈಲಿನಲ್ಲಿ ವಿಡಿಯೋ ಕಾಲ್‌ನಲ್ಲಿ ಹಾಯ್‌ ಚಿನ್ನ ಎಂದಿದ್ದ ದರ್ಶನ್‌ ಈಗಾಗಲೇ ಅದಕ್ಕೆ ಪ್ರತಿಯಾಗಿ ಬಳ್ಳಾರಿಗೆ ಶಿಫ್ಟಾಗಿದ್ದಾರೆ. ವಿಡಿಯೋ ಕಾಲ್‌ ಮಾಡಿದ್ದು ನಾನಲ್ಲ, ನನ್ನದೇನೂ ತಪ್ಪಿಲ್ಲ ಅಂತ ದರ್ಶನ್‌ ಹೇಳ್ಕೊಂಡಿದ್ದರು. ಆದರೆ ವಿಡಿಯೋ ಕಾಲ್‌ ಮಾಡಿದ ಧರ್ಮನ ವಿಚಾರಣೆ ವೇಳೆ ಬೇರೆಯದ್ದೇ ಸತ್ಯ ಬಯಲಾಗಿದೆ. ದರ್ಶನ್ ಬರೋಬ್ಬರಿ 50ಕ್ಕೂ ಹೆಚ್ಚು ವಾಟ್ಸ್‌ಆ್ಯಪ್ ಕಾಲ್ ಮಾಡಿದ್ದಾರೆಂದು ಆರೋಪಿ ಧರ್ಮ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಒಂಟಿತನ, ಸೊಳ್ಳೆಕಾಟ, ನಿತ್ಯ ಕರ್ಮದ ಸಮಸ್ಯೆ.. ಬಳ್ಳಾರಿ ಜೈಲಲ್ಲಿ ದರ್ಶನ್‌ಗೆ 4 ನರಕ ದರ್ಶನ; ಏನಾಯ್ತು? 

ಇಷ್ಟು ದಿನ ರೌಡಿಶೀಟರ್ ಧರ್ಮ ಪುಡಿ ರೌಡಿ ಸತ್ಯಗೆ ವಿಡಿಯೋ ಕಾಲ್ ಮಾಡಿ ದರ್ಶನ್‌ನ ಮಾತಾಡಿಸಿದ್ದ ಅಂತ ಗೊತ್ತಿತ್ತು. ಆದ್ರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿರೋ ಅಸಲಿ ಕಥೆ ಬೇರೆಯೇ ಇದೆ. ವಿಡಿಯೋ ಕಾಲ್‌ ತನಿಖೆ ಕೈಗೆತ್ತಿಗೊಂಡಿರುವ ಪೊಲೀಸರಿಗೆ ಧರ್ಮನಿಂದ ಬೇರೆಯದ್ದೇ ಕಥೆ ಗೊತ್ತಾಗಿದೆ.

ಜೈಲಿನಿಂದ ಹೋಗಿದ್ದು ಒಂದಲ್ಲ.. 50ಕ್ಕೂ ಹೆಚ್ಚು ವಾಟ್ಸಾಪ್ ಕರೆ
ಕುಟುಂಬಸ್ಥರಿಗೆ, ನಿರ್ಮಾಪಕರಿಗೆ ಕರೆ ಮಾಡಿದ್ರಂತೆ ಎ2 ದರ್ಶನ್‌?
ವಿಡಿಯೋ ಕಾಲ್ ಪ್ರಕರಣದಲ್ಲಿ ದರ್ಶನ್ ಎ1. ತನಿಖೆಯ ವಿಚಾರಣೆಯಲ್ಲಿ ರೌಡಿಶೀಟರ್ ಧರ್ಮ ನಟ ದರ್ಶನ್‌ ವಿರುದ್ಧವೇ ಆರೋಪ ಮಾಡಿದ್ದಾನೆ. ಪರಪ್ಪರ ಅಗ್ರಹಾರ ಸೆಲ್‌ನಿಂದ ದರ್ಶನ್‌ ಕುಟುಂಬಸ್ಥರು ಹಾಗೂ ನಿರ್ಮಾಪಕರು ಅಂತ ಸುಮಾರು 50ಕ್ಕೂ ಹೆಚ್ಚು ವಾಟ್ಸಾಪ್ ಕರೆ ಮಾಡಿದ್ದಾರೆಂದು ಪೊಲೀಸರು ಮುಂದೆ ಕೈದಿ ಮಾರ್ಕೇಟ್ ಧರ್ಮ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಒಂದಲ್ಲ.. 50ಕ್ಕೂ ಹೆಚ್ಚು ಕರೆ!
ರೌಡಿ ಧರ್ಮನ ಬರ್ತ್‌ಡೇ ದಿನ ದರ್ಶನ್ ವಿಡಿಯೋ ಕಾಲ್‌ನಲ್ಲಿ ತಮ್ಮ ಮುಖ ದರ್ಶನ ಮಾಡಿದ್ದರು. ನಂತರ ವಿಚಾರಣೆ ವೇಳೆ ಆರೋಪಿ ದರ್ಶನ್ ನನ್ನದೇನೂ ತಪ್ಪಿಲ್ಲ ಎಂದಿದ್ರು. ವಿಡಿಯೋ ಕಾಲ್‌ ಬಗ್ಗೆ ಪೊಲೀಸರು ಧರ್ಮನ ವಿಚಾರಣೆ ನಡೆಸಿದಾಗ, ಈ ವೇಳೆ 50ಕ್ಕೂ ಹೆಚ್ಚು ಬಾರಿ ವಾಟ್ಸ್‌ಆ್ಯಪ್ ಕರೆ ಮಾಡಿರೋದು ಬೆಳಕಿಗೆ ಬಂದಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ನಿರ್ಮಾಪಕರಿಗೆ ದರ್ಶನ್ ಕರೆ ಮಾಡಿದ್ದು, ಯಾಱರಿಗೆ ಎಷ್ಟು ಬಾರಿ ಕರೆ ಮಾಡಿರಬಹುದು ಎಂಬುದರ ಬಗ್ಗೆ ತನಿಖೆ ತೀವ್ರಗೊಂಡಿದೆ.

ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿರುವ ದರ್ಶನ್‌ಗೆ ಟೆನ್ಷನ್; ಪೊಲೀಸರ ಚಾರ್ಜ್‌ಶೀಟ್ ಚಕ್ರವ್ಯೂಹ ಹೇಗಿದೆ? ಏನಿದರ ರಹಸ್ಯ?

ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಮೊಬೈಲ್ ಡೀಲಿಂಗ್ ಜಾಲ!
ಹಣ ಕೊಟ್ರೆ ಸಿಗುತ್ತೆ ಸಿಮ್, ಕೀ ಪ್ಯಾಡ್, ಌಂಡ್ರಾಯ್ಡ್ ಮೊಬೈಲ್
ದರ್ಶನ್‌ ರಾಜಾತಿಥ್ಯ ಫೋಟೋ.. ವಿಡಿಯೋ ಕಾಲ್‌. ಆರೋಪಿಗಳ ಕೈಯಲ್ಲಿ ಮೊಬೈಲ್‌ ಇವೆಲ್ಲಾ ನೋಡ್ತಿದ್ದಂತೆ ಜೈಲಿನಲ್ಲಿ ಕೈದಿಗಳ ಕೈಗೆ ಮೊಬೈಲ್ ಹೇಗೆ ಸಿಕ್ತು ಅನ್ನೋ ಪ್ರಶ್ನೆ ಉದ್ಭವವಾಗಿತ್ತು. ಆದ್ರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇವೆಲ್ಲಾ ಕಾಮನ್ ಅಂತೆ. ಜೈಲಿನೊಳಗೆ ಶಿಕ್ಷೆಗೆ ಗುರಿಯಾಗಿರೋ ಅಪರಾಧಿಗಳಿಂದಲೇ ಸಿಮ್-ಮೊಬೈಲ್ ಮಾರಾಟವಾಗ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಜೈಲಿನೊಳಗೆ ಮೊಬೈಲ್‌ ಶಾಪ್? 
ರಾಜ್ಯದ ಜೈಲುಗಳ ಜಾಮರ್ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಲಾಗುತ್ತೆ. ಪರಪ್ಪನ ಅಗ್ರಹಾರ ಜೈಲಿನ ಜಾಮರ್ ನಿರ್ವಹಣೆಗೆ 4.67 ಕೋಟಿ ಖರ್ಚಾಗುತ್ತೆ. ಜಾಮರ್ ಹಾಕಿದ್ರೂ ಜೈಲಿನೊಳಗೆ ಮೊಬೈಲ್ ಬಳಕೆ ಹಾಗೂ ಮಾರಾಟ ಜಾಲವಿದೆ. ಪಾತಕಿಗಳು, ದಂಧೆಕೋರರು, ಸಜಾ ಬಂಧಿಗಳ ಕೈಗೆ ಮೊಬೈಲ್ ಸಿಕ್ತಿವೆ. ಕೀ ಪ್ಯಾಡ್‌ ಮೊಬೈಲ್‌ಗಳು 25 ರಿಂದ 30 ಸಾವಿರಗಳವರೆಗೆ ಸೇಲ್ ಆಗುತ್ತಿವೆ. ಸಜಾ ಕೈದಿಗಳು 70 ಸಾವಿರಕ್ಕೆ ಆ್ಯಂಡ್ರಾಯ್ಡ್‌ ಮೊಬೈಲ್‌ನ ಮಾರಾಟ ಮಾಡ್ತಾರೆ. ಜೈಲಿನಲ್ಲಿ ಇದ್ದಷ್ಟು ದಿನ ಯೂಸ್‌ ಮಾಡೋಕೆ 3 ರಿಂದ 4 ಸಾವಿರಕ್ಕೆ ನಕಲಿ ಸಿಮ್‌ಗಳು ಸಿಗುತ್ತವೆ. ನಕಲಿ ದಾಖಲೆಗಳ ಮೂಲಕ ಅಪರಾಧಿಗಳು ಸಿಮ್ ಸೇಲ್ ಮಾಡ್ತಾರೆ.

ಜೈಲಿನಲ್ಲಿ ಮೊಬೈಲ್ ಡೀಲಿಂಗ್ ನಡೆಯುತ್ತಿದ್ರೂ ಕೇಂದ್ರ ಕಾರಾಗೃಹ ಅಧಿಕಾರಿಗಳಿಗೆ ಮಾಹಿತಿ ಇಲ್ವಾ ಎಂಬ ಪ್ರಶ್ನೆ ಮೂಡಿದೆ. ಅಥವಾ ಎಲ್ಲಾ ಗೊತ್ತಿದ್ರೂ ಕಣ್ಮುಚ್ಚಿ ಕುಳಿತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಯ್‌ ಚಿನ್ನ.. ದರ್ಶನ್ ವಿಡಿಯೋ ಕಾಲ್ ಕೇಸ್‌ಗೆ ಹೊಸ ಟ್ವಿಸ್ಟ್; ಧರ್ಮ ಬಾಯ್ಬಿಟ್ಟ ಸ್ಫೋಟಕ ಸತ್ಯ; ಏನದು?

https://newsfirstlive.com/wp-content/uploads/2024/08/Darshan-Video-Call.jpg

Load More