newsfirstkannada.com

ಒಂಟಿತನ, ಸೊಳ್ಳೆಕಾಟ, ನಿತ್ಯ ಕರ್ಮದ ಸಮಸ್ಯೆ.. ಬಳ್ಳಾರಿ ಜೈಲಲ್ಲಿ ದರ್ಶನ್‌ಗೆ 4 ನರಕ ದರ್ಶನ; ಏನಾಯ್ತು?

Share :

Published September 3, 2024 at 8:12pm

Update September 3, 2024 at 8:14pm

    ಬಳ್ಳಾರಿಯ ಸೆಂಟ್ರಲ್​ ಜೈಲಲ್ಲಿ ದರ್ಶನ್​ಗೆ ಅಸಲಿ ಜೈಲು ದರ್ಶನ ಆರಂಭವಾಯ್ತಾ?

    ನಾಲ್ಕು ಘನಘೋರ ಸಂಕಷ್ಟಗಳಲ್ಲಿ ಬಳಲುತ್ತಿರುವ ಆರೋಪಿ ದರ್ಶನ್​

    ಒಂಟಿತನ, ಸೊಳ್ಳೆಕಾಟ ರಾಜನಂತೆ ಮರೆದ ದರ್ಶನ್ ಸದ್ಯ ಅನುಭವಿಸ್ತಿರೋದೇನು?

ಕಾಲಚಕ್ರ, ಅದು ತಿರುಗುವ ರೀತಿಯೇ ಬೇರೆ. ಅದಕ್ಕೂ ತನ್ನದೇ ಆದ ನಿಯಮವಿದೆ. ಯಾವಾಗ ಯಾರನ್ನ ಮೇಲೆತ್ತಬೇಕು, ಯಾರನ್ನ ಹೇಗೆ ಪಾತಾಳಕ್ಕೆ ತಳ್ಳಬೇಕು ಅನ್ನೊದು. ದರ್ಶನ್​ನಂತಹ ದರ್ಶನ್ ಬಾಳಲ್ಲಿಯೂ ಕೂಡ ಕಾಲಚಕ್ರ ನಿಯಮ ತಪ್ಪಿಲ್ಲ, ಹೇಗೆಲ್ಲಾ ಬದುಕಿದ್ದರು ದರ್ಶನ್, ಎಂತಹ ಜನಪ್ರಿಯತೆ, ಅದೆಂತಹ ಶ್ರೀಮಂತಿಕೆ, ತೆರೆಯ ಮೇಲೆ ಕೇವಲ ಐದು ನಿಮಿಷ ಬಂದು ಹೋದರೂ ಅಭಿಮಾನಿಗಳ ಅಬ್ಬರ ಥಿಯೇಟರ್ ಕಿತ್ತು ಹೋಗುವಂತೆ ಇರುತ್ತಿತ್ತು. ದರ್ಶನ್ ಬರ್ತ್​ಡೇ ಬಂದ್ರೆ ಅಭಿಮಾನಿಗಳ ಕೈ ಕುಲಕಲು ದರ್ಶನ್ ಬೆಳಗ್ಗೆ ನಿಂತ್ರೆ ಅದು ನಡುರಾತ್ರಿ ಮುಗಿಯುತ್ತಿತ್ತು.

ಇದನ್ನೂ ಓದಿ:ರಿಯಲ್‌ ಜೈಲುವಾಸಕ್ಕೆ ಕುಗ್ಗಿ ಹೋದ ದರ್ಶನ್.. ಒಂಟಿತನದಿಂದ ಬಿಡಿಸಿಕೊಳ್ಳಲು 2 ವಿಶೇಷ ಬೇಡಿಕೆ; ಏನದು?

ಆ ಫಾರ್ಮ್​ಹೌಸ್​, ಆ ಕುದುರೆ, ಆ ಐಷಾರಾಮಿ ಬದುಕು, ವೃತ್ತಿ ಜೀವನ ಆರಂಭವಾದಾಗಿನಿಂದ ಹಿಂದಿರುಗಿಯೇ ನೋಡದ ದರ್ಶನ್ ಅಕ್ಷರಶಃ ಚಕ್ರವರ್ತಿಯಂತೆ, ಸ್ಯಾಂಡಲ್​ವುಡ್​ನ ಅನಭಿಷಕ್ತ ದೊರೆಯಂತೆ ಮರೆದು ಬಿಟ್ಟವರು. ಆದ್ರೆ ಈಗ ಕಾಲಚಕ್ರ ಬದಲಾಗಿದೆ. ಹಾಗೆಲ್ಲ ಬದುಕಿದ ದರ್ಶನ್ ಈಗ ಹೇಗೇಗೋ ಬದುಕುತ್ತಿದ್ದಾರೆ. ದರ್ಶನ್​ರ ಈಗಿನ ಬದುಕಿಗೆ ಮೂಕ ಸಾಕ್ಷಿಯಾಗಿ ನಿಂತಿದೆ ಬಳ್ಳಾರಿ ಕೇಂದ್ರ ಕಾರಾಗೃಹ ಜೈಲು. ಬಳ್ಳಾರಿ ಜೈಲಲ್ಲಿರೋ ದರ್ಶನ್‌, ಒಂಟಿತನ, ಸೊಳ್ಳೆಕಾಟ, ಹೊಟ್ಟೆ ಸಮಸ್ಯೆ, ನಿತ್ಯ ಕರ್ಮದ ಸಮಸ್ಯೆ ಸೇರಿದಂತೆ ಅಷ್ಟದಿಗ್ಬಂಧನದಲ್ಲಿ ಸಿಲುಕಿ ವಿಲವಿಲ ಒದ್ದಾಡ್ತಿದ್ದಾರೆ. ಹಾಗಾದ್ರೆ, ಬಳ್ಳಾರಿ ಜೈಲಲ್ಲಿ ದರ್ಶನ್‌ಗೆ ಯಾವ್‌ ಯಾವ ರೀತಿನ ನರಕ ದರ್ಶನವಾಗ್ತಿದೆ ಗೊತ್ತಾ?

ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿರುವ ದರ್ಶನ್‌ಗೆ ಟೆನ್ಷನ್; ಪೊಲೀಸರ ಚಾರ್ಜ್‌ಶೀಟ್ ಚಕ್ರವ್ಯೂಹ ಹೇಗಿದೆ? ಏನಿದರ ರಹಸ್ಯ?

ಅದ್ಯಾವಾಗ ದರ್ಶನ್​ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಎತ್ತಂಗಡಿ ಆದ್ರೋ ಆಗಿಂದ ಅಕ್ಷರಶಃ ಕುಗ್ಗಿ ಹೋಗ್ತಿದ್ದಾರೆ. ಜೈಲು ಅಂದ್ರೆ ಏನು ಅನ್ನೋದು ಈಗ ಅನುಭವಕ್ಕೆ ಬರುತ್ತಿದೆ. ನರಕ ಕೂಪಕ್ಕೆ ಸಾಕ್ಷಾತ್​ ಉದಾಹರಣೆಯಂತಿರೋ ಆ ಜೈಲಿಗೆ ಶಿಫ್ಟಾಗಿ ನಾಲ್ಕೈದು ದಿನಗಳಾಗಿರಬಹುದಷ್ಟೇ ಆದ್ರೆ ಈ ನಾಲ್ಕೈದು ದಿನಗಳನ್ನ ಅಕ್ಷರಶಃ ನಾಲ್ಕೈದು ವರ್ಷಗಳಂತೆ ಕಳೀತಿದ್ದಾರೆ ದರ್ಶನ್​. ಇಲ್ಲಿದ್ದಾಗ ಕುಡಿಯೋಕೆ, ತಿನ್ನೋಕೆ, ಧಮ್​ ಹೊಡೆಯೋಕೆ ಅಡೆತಡೆಗಳಿರಲಿಲ್ಲ ಅನ್ನೋದು ಒಂದು ಫೋಟೋ, ಒಂದು ವಿಡಿಯೋದಿಂದ ಬಯಲಾಗಿರೋ ವಿಚಾರ. ಆದ್ರೆ, ಬಳ್ಳಾರಿ ಜೈಲಿಗೆ ಹೋದ್ಮೇಲೆ ದರ್ಶನ್​ ಪಾಲಿಗೆ ಎಲ್ಲವೂ ಬಂದ್ ಆಗಿಬಿಟ್ಟಿದೆ. ಮಾತಾಡೋಕೂ ಯಾರೂ ಇಲ್ಲ, ಕಮಿಕ್​ ಗಿಮಿಕ್​ ಅನ್ನಂಗಿಲ್ಲ. ದಿನನಿತ್ಯ ಒಂದಿಲ್ಲೊಂದು ಸಮಸ್ಯೆಗಳು ದರ್ಶನ್​ನ ಕಾಡ್ತಿದ್ದು, ಈ ಮಧ್ಯೆ ನಟನಿಗೆ ಚಾರ್ಜ್​ಶೀಟ್​ ಅನ್ನೋ ಬುಲೆಟ್​ಗಳನ್ನ ಫೈರ್ ಮಾಡೋದಕ್ಕೆ ಪೊಲೀಸರು ಸರ್ವಸನ್ನದ್ಧರಾಗಿದ್ದಾರೆ.

ಚಾರ್ಜ್​ಶೀಟ್​ಗೆ ಕೌಂಟ್​ಡೌನ್​, ಎರಡೇ ದಿನದಲ್ಲಿ ಹಣೆಬರಹ!
ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಪಟ್ಟಣಗೆರೆಯ ಮರ್ಡರ್ ಕೇಸ್​ನ ಇನ್ವೆಸ್ಟಿಗೇಷನ್​ ಹೆಚ್ಚು ಕಡಿಮೆ ಫೈನಲ್​ ಹಂತಕ್ಕೆ ಬಂದಿದೆ..ಆರೋಪಿಗಳನ್ನ ಬಂಧಿಸಿದ 90 ದಿನಗಳಲ್ಲಿ ಚಾರ್ಜ್​ಶೀಟ್​ ಕೋರ್ಟ್​ಗೆ ಸಲ್ಲಿಕೆಯಾಗಬೇಕು. ದರ್ಶನ್​ ಮತ್ತವರ ಗ್ಯಾಂಗ್​ ವಿಚಾರದಲ್ಲಿ ಆ 90 ದಿನಗಳು ಹತ್ತಿರವಾಗುತ್ತಿದೆ. ಪೊಲೀಸರು ಕೊಲೆ ಆಗಿದೆ ಅನ್ನೋದಕ್ಕೆ ಪ್ರಬಲ ಸಾಕ್ಷ್ಯಗಳ ರಾಶಿಯನ್ನೇ ಸಂಗ್ರಹಿಸಿದ್ದು, ಯಾವುದೇ ಸಮಯದಲ್ಲೂ ​ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲು ರೆಡಿಯಾಗ್ತಿದ್ದಾರೆ. ಬರೋಬ್ಬರಿ 4000ಕ್ಕೂ ಅಧಿಕ ಪುಟಗಳ ಚಾರ್ಜ್​ಶೀಟ್​ ಇದಾಗಿದ್ದು, ಸಂಪೂರ್ಣ ಡಿ ಗ್ಯಾಂಗ್​​​ಗೆ ಖೆಡ್ಡಾ ತೋಡೋದು ಪಕ್ಕಾ ಎನ್ನುವ ಮಾಹಿತಿ ಸಿಕ್ತಿದೆ.

ಇನ್ನೆರಡು ದಿನದಲ್ಲಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡ್ತೀವಿ ಅಂತ ಹೇಳಿದ್ದಾರೆ ಬೆಂಗಳೂರು ಪೊಲೀಸ್​ ಕಮಿಷನರ್ ಬಿ ದಯಾನಂದ. ದರ್ಶನ್​ ಅಭಿಮಾನಿಗಳಿಂದ ಹಿಡಿದು, ಅವರ ಪರ ವಕೀಲರು, ಸಿನಿಮಾ ನಿರ್ಮಾಪಕರು, ದರ್ಶನ್​ ಕುಟುಂಬಸ್ಥರು ಎಲ್ಲರ ಕಣ್ಣೂ ಪೊಲೀಸರ ಈ ಚಾರ್ಜ್​ಶೀಟ್​ ಮೇಲೆ ನೆಟ್ಟಿದೆ. ಈ ಹಂತದಲ್ಲಿ ಕಮಿಷನ್‌ರ ಕೊಟ್ಟಿರೋ ಅದೊಂದು ಸ್ಟೇಟ್‌ಮೆಂಟ್‌ ದರ್ಶನ್‌ಗೆ ಶಿಕ್ಷೆಯಿಂದ ಪಾರಾಗುವುದು ಸುಲಭವಿಲ್ಲ ಅನ್ನೋದನ್ನು ಸಾರಿ ಸಾರಿ ಹೇಳ್ತಿದೆ. ಹತ್ಯೆಗೆ ಸಂಬಂಧ ಪಟ್ಟಂತೆ ಬೇಕಾದಷ್ಟು ಸಾಕ್ಷ್ಯಗಳು ಸಿಕ್ಕಿವೆ ಅನ್ನೋದನ್ನ ಕಮಿಷನರೇ ಹೇಳ್ತಿದ್ದಾರೆ. ಬಟ್, ವಿಚಾರ ಏನಂದ್ರೆ ಕೊಲೆ ಪ್ರೂವ್​ ಆಗಿ ದರ್ಶನ್​ ಶಿಕ್ಷೆ ಅನುಭವಿಸ್ತಾರೋ ಇಲ್ವೋ. ಅತ್ತಕಡೆ ಬಳ್ಳಾರಿ ಜೈಲಲ್ಲಂತೂ ದರ್ಶನ್​ ಸ್ಥಿತಿ ಅಕ್ಷರಶಃ ಘನಘೋರವಾಗಿದೆ.

ಘೋರ ಶಿಕ್ಷೆ-01 ಏಕಾಂಗಿ ಜೈಲುವಾಸದ ದಂಡನೆ!
ದರ್ಶನ್ ಸದಾ ಹಿಂಡಿಂಡು ಹಿಂಬಾಲಕರನ್ನು ಜೊತೆಗಿಟ್ಟುಕೊಂಡು ಅಡ್ಡಾಡಿದ ನಟ. ನಿಮಿಷಕ್ಕೆ ಹತ್ತಾರು ಕರೆಗಳು, ಹತ್ತಾರು ಮೆಸೇಜ್​ಗಳು, ಆಚೆ ಬಂದ್ರೆ ಅವರ ಕಾರ್​ ಚೇಸ್ ಮಾಡಿಕೊಂಡು ಹಾಯ್ ಬಾಸ್ ಅನ್ನೋ ಅಭಿಮಾನಿಗಳು. ಬೇಕೆಂದರೂ ಕೂಡ ಏಕಾಂಗಿತನವೊಂದು ಸಿಗದಂತೆ ಬದುಕಿದವರು ದರ್ಶನ್ ಆದ್ರೆ ಈಗ, ಬಳ್ಳಾರಿಯ ಜೈಲಲ್ಲಿ ಕಿತ್ತುತಿನ್ನೊ ಒಂಟಿತನದಿಂದ ಬಳಲುತ್ತಿದ್ದಾರೆ ಬಳ್ಳಾರಿ ಜೈಲಲ್ಲಿ ಈ ಒಂಟಿತನವೇ ದರ್ಶನ್​ ಅನುಭವಿಸ್ತಿರೋ ಮೊದಲನೇ ಘನಘೋರ ಶಿಕ್ಷೆ ಅಂತಾನೇ ಹೇಳಬಹುದು. ಅಂದಹಾಗೇ, ದರ್ಶನ್‌ ಇರೋದು 15ನೇ ನಂಬರ್​​ನ ಸೆಲ್‌ನಲ್ಲಿ. ಈ ಬ್ಯಾರಕ್‌ನಲ್ಲಿ 30 ಸೆಲ್‌ಗಳಿವೆ, ದರ್ಶನ್‌ ಇರೋ ಸೆಲ್‌ ಅಕ್ಕ ಪಕ್ಕವೇ 15 ಸೆಲ್​ಗಳಿದ್ವು. ಆದ್ರೆ, ಅದ್ಯಾವಾಗ ದರ್ಶನ್​ನ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲ್‌ನಿಂದ ಬಳ್ಳಾರಿ ಜೈಲ್‌ಗೆ ಕಮಾನ್​​ ಮಾಡಲಾಯ್ತೋ? ಅವಾಗ್ಲೇ ಅಲ್ಲಿ ಉಳಿದ ಸೆಲ್‌ನಲ್ಲಿರೋ ಕೈದಿಗಳನ್ನೂ ಬೇರೆಡೆ ಶಿಫ್ಟ್‌ ಮಾಡಲಾಗಿದೆ.

ದರ್ಶನ್‌ಗೆ ಈಗ ಅಕ್ಕ ಪಕ್ಕ ಜೊತೆಯಾಗೋದಕ್ಕೆ ಯಾವೊಬ್ಬ ಕೈದಿಯೂ ಇಲ್ಲ. ಮಾತಾಡ್ಬೇಕು ಅಂದ್ರೆ ಒಂದು ನರಪಿಳ್ಳೆಯೂ ಕಾಣಿಸಿಗಲ್ಲ. ನಾಲ್ಕು ಕೋಣೆಯ ಮಧ್ಯದಲ್ಲಿ ನಿಂತ್ಕೊಂಡ್‌ ಗೋಡೆ ನೋಡ್ಬೇಕು, ಕಂಬಿ ಎಣಿಸ್ಬೇಕು ಬಿಟ್ರೆ, ಸಹವಾಸಗಳು ಚಾನ್ಸೇ ಇಲ್ಲ. ಇದರಿಂದಲೇ ದರ್ಶನ್‌ ಮಾನಸಿಕವಾಗಿ ತೀವ್ರವಾಗಿ ಕುಗ್ಗಿಹೋಗ್ತಿದ್ದಾರೆ ಅಂತಾನೇ ಹೇಳಲಾಗ್ತಿದೆ.

ಘೋರ ಶಿಕ್ಷೆ-02: ಸೊಳ್ಳೆ ಕಾಟ ಸಾಕು ಗುರು!
ದರ್ಶನ್​ ಪರಪ್ಪನ ಅಗ್ರಹಾರದಲ್ಲಿದಾಗ ಚೂರು ಕೆಮ್ಮಿದ್ರೂ ಬಾಸ್‌ ಏನಾಯ್ತು ಅಂತಾ ಕೇಳೋದಕ್ಕೆ ಹುಡುಗರಿದ್ರು. ವಿಲ್ಸನ್​ ಗಾರ್ಡನ್​ ನಾಗ, ಬೇಕರಿ ರಘು ಅನ್ನೋ ಪುಡಾರಿಗಳು ಕ್ಯೂ ನಿಲ್ತಿದ್ರು. ಆದ್ರೆ, ಬಳ್ಳಾರಿ ಜೈಲಲ್ಲಿ ಬೇಡ ಬೇಡ ಅಂದ್ರು ಅದೊಂದು ಹಿಂಡು ಮಾತ್ರ ದರ್ಶನ್​ ​ ಹಿಂದೇನೇ ಬರ್ತಿದೆ.ಬಿಡದೇ ಮೈಕೈಯೆಲ್ಲಾ ಮುತ್ತಿಕೊಂಡು ರಕ್ತ ಹೀರುತ್ತಿವೆ. ಬಳ್ಳಾರಿ ಜೈಲಲ್ಲಿ ಸೊಳ್ಳೆಗಳು ಕಾಟ ದರ್ಶನ್​ಗೆ ಅಕ್ಷರಶಃ ನರಕದರ್ಶನ ಮಾಡಿಸ್ತಿವೆಯಂತೆ. ಇಲ್ಲಿದ್ದಾಗ ಒಂದು ರೇಂಜಿಗೆ ನಿದ್ರೆ ಮಾಡ್ತಿದ್ದ ದರ್ಶನ್​ ಸುಖನಿದ್ರೆ ಅನ್ನೋದನ್ನೇ ಮರೆತು ಹೋಗಿದ್ದಾರಂತೆ. ಹೀಗಾಗಿಯೇ, ತಮ್ಗೆ ಸೊಳ್ಳೆ ಕಂಟಕದ ಬಗ್ಗೆ ಅರಿವಾಗಿ ಮನೆಯಿಂದ ಬೆಡ್‌ ತರಿಸಿಕೊಳ್ಳಲು ಅನುಕೂಲ ಮಾಡಿಕೊಡ್ಬೇಕು ಅಂತಾ ಮನವಿ ಸಲ್ಲಿಸಿದ್ರು. ಪತ್ನಿ ವಿಜಯಲಕ್ಷ್ಮಿ ಕೂಡ ಮನೆಯಿಂದ ಹೊರಟವ್ರು ಬೆಡ್ಡನ್ನೇ​ ತಗೊಂಡು ಹೋಗಿದ್ರು. ಆದ್ರೆ, ಅಧಿಕಾರಿಗಳಿಂದ ಪರ್ಮಿಷನ್‌ ಸಿಗದೇ ಅವ್ರು ಬೆಡ್‌ ಜೊತೆ ಬೆಂಗಳೂರಿಗೆ ರಿಟರ್ನ್‌ ಆಗಿದ್ದಾರೆ.

ಘೋರ ಶಿಕ್ಷೆ-03: ಜೈಲೂಟದ ಶಿಕ್ಷೆ!
ದರ್ಶನ್‌ಗೆ ಜೈಲು ಸೇರ್ತಾ ಇದಂತೆ ಅಲ್ಲಿಯ ಊಟ ಅಡ್ಜಸ್ಟ್‌ ಆಗಿಲ್ಲ. ಊಟ ಕೊಡಿ ಸ್ವಾಮಿ ಅಂತಾ ಹೈಕೋರ್ಟ್‌ವರೆಗೂ ಹೋಗಿ ಬಂದಿದ್ದಾರೆ. ಆದ್ರೆ, ಕೋರ್ಟ್‌ ಅದಕ್ಕೆ ಇನ್ನೂ ಅಸ್ತು ಅಂತಾ ಹೇಳಿಲ್ಲ. ಆದ್ರೆ ಇಷ್ಟಾದ್ರೂ ಬೆಂಗಳೂರು ಜೈಲಲ್ಲಿ ಇದ್ದಾಗ ರೌಡಿ ನಾಗನಿಂದ ರಾಜ್ಯಾತಿಥ್ಯವಿತ್ತು. ಹೀಗಾಗಿ ಅದೆಲ್ಲಿಂದಲೋ ದರ್ಶನ್‌ಗೆ ಊಟ ಜೈಲಿನ ಒಳಗೆ ನುಗ್ಗಿ ಬರ್ತಿತ್ತು. ಈಗ, ಬಳ್ಳಾರಿ ಜೈಲಲ್ಲಿ ಅಂತಾ ಸೌಲಭ್ಯವಿಲ್ಲ. ಜೈಲಲ್ಲಿ ಏನ್‌ ಮಾಡ್ತಾರೋ ಅದುವೇ ಪಂಚಾಮೃತ ಅಂತಾ ಸೇವನೆ ಮಾಡ್ಬೇಕಾಗಿದೆ. ಬಳ್ಳಾರಿ ಕಾರಗೃಹದಲ್ಲಿ ಸ್ಟಾರ್‌ ನಟ ದರ್ಶನ್‌ಗೆ ಕಾಲಕಾಲಕ್ಕೆ ಹಸಿವಾಗ್ತಿದೆ, ಆದ್ರೆ ಊಟ ಸೇರ್ತಿಲ್ಲ. ತುತ್ತು ಅನ್ನ ಬಾಯಿಗೆ ಇಡೋದಕ್ಕೂ ಕಷ್ಟವಾಗ್ತಿದೆ. ಮೂಲಗಳ ಪ್ರಕಾರ ದರ್ಶನ್‌ ಬಳ್ಳಾರಿಗೆ ಶಿಫ್ಟ್‌ ಆಗಿ ಆರೇಳು ದಿನವಾಯ್ತು. ಅಲ್ಲಿಂದ ಇಲ್ಲಿಯವರೆಗೂ ಒಂದೇ ಒಂದು ಟೈಮ್‌ನಲ್ಲಿಯೂ ಪೂರ್ಣ ಪ್ರಮಾಣದ ಊಟ ಮಾಡಿಲ್ಲ ಅಂತಾ ಹೇಳಲಾಗ್ತಿದೆ. ಇದು ರೇಣುಕಾಸ್ವಾಮಿ ಭೀಭತ್ಸ ಹತ್ಯೆ ಕೇಸ್‌ನಲ್ಲಿ ಜೈಲು ಸೇರಿರೋ ದರ್ಶನ್‌ ಪಾಲಿಗೆ ಘೋರ, ಘನಘೋರ ಶಿಕ್ಷೆ.

ಘೋರ ಶಿಕ್ಷೆ-04 :ನಿತ್ಯ ಕರ್ಮದ್ದೇ ಹಿಂಸೆ!
ಬೆಂಗಳೂರು ಜೈಲಲ್ಲಿದ್ದಾಗ ಊಟದ ಸಮಸ್ಯೆ, ಬಳ್ಳಾರಿ ಜೈಲಿಗೆ ಹೋದ್ಮೇಲೆ ವಿಸರ್ಜನೆಯ ಸಮಸ್ಯೆ. ಪ್ರತಿಯೊಬ್ಬ ಮನುಷ್ಯನಿಗೂ ದಿನಾ ಬೆಳಗ್ಗೆ ಆದ್ರೆ, ಅವನ ನಿತ್ಯ ಕರ್ಮಗಳನ್ನ ಮುಗಿಸಿದೇ ದಿನಶುರುವಾಗೋದಿಲ್ವಾ, ಆದ್ರೆ, ದರ್ಶನ್​ ವಿಚಾರದಲ್ಲಿ ವಿಸರ್ಜನೆ ವಿಚಾರ ಕೂಡ ಕಡು ಕಷ್ಟವಾಗಿದೆ. ಬಳ್ಳಾರಿ ಜೈಲಿಗೆ ಹೋದಾಗಿನಿಂದ ಸರಿಯಾಗಿ ನಿತ್ಯ ಕರ್ಮ ಮುಗಿಸಲಾಗದೇ, ಹೊಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು, ದರ್ಶನ್​ರ ಆ ಸಮಸ್ಯೆ ನಿವಾರಿಸೋದಕ್ಕೆ ಅಂತಲೇ ಜೈಲಧಿಕಾರಿಗಳು ಸರ್ಜಿಕಲ್ ಕಮೋಡ್‌​ ಚೇರ್​​ನ ಅನುಮತಿ ಮೇರೆಗೆ ಪ್ರಾಪ್ತಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂಟಿತನ, ಸೊಳ್ಳೆಕಾಟ, ನಿತ್ಯ ಕರ್ಮದ ಸಮಸ್ಯೆ.. ಬಳ್ಳಾರಿ ಜೈಲಲ್ಲಿ ದರ್ಶನ್‌ಗೆ 4 ನರಕ ದರ್ಶನ; ಏನಾಯ್ತು?

https://newsfirstlive.com/wp-content/uploads/2024/08/darshan-6-2.jpg

Load More