ಬಳ್ಳಾರಿ ಜೈಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ ದರ್ಶನ್ ಪರದಾಟ
ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿಯಾಗಿದ್ದ ದರ್ಶನ್ ಇಲ್ಲಿ ಏಕಾಂಗಿ
ಒಂಟಿತನದಿಂದ ಬಚಾವ್ ಆಗಲು ಜೈಲಾಧಿಕಾರಿ ಎದುರು ಇಟ್ಟ ಬೇಡಿಕೆ ಏನು?
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ಗೆ ಒಂದಾದ ಮೇಲೊಂದು ಸಂಕಷ್ಟಗಳ ಸರಮಾಲೆಗಳು ಮೊದಲನೇ ದಿನದಿಂದ ಆವರಿಸಿಕೊಳ್ಳುತ್ತಿವೆ. ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿಯಂತೆ ಬದುಕಿದ್ದ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ನರಕ ಅನುಭವಿಸುತ್ತಿದ್ದಾರೆ. ಅಕ್ಷರಶಃ ಏಕಾಂಗಿಯಾಗಿರುವ ದರ್ಶನ್ ಒಂಟಿತನದಿಂದ ಬೇಸತ್ತು ಹೋಗಿದ್ದಾರೆ. ಇದೀಗ ಜೈಲು ಅಧಿಕಾರಿಗಳ ಎದುರು ಆರೋಪಿ ದರ್ಶನ್ ಅವರು ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ಗೆ ಮತ್ತೊಂದು ಟ್ವಿಸ್ಟ್.. ದರ್ಶನ್ ಗ್ಯಾಂಗ್ನಲ್ಲಿ ಈ ಮೂವರ ಪಾತ್ರ ಇಲ್ಲವೇ ಇಲ್ಲ..?
ರೇಣುಕಾಸ್ವಾಮಿ ಕೊಲೆ ಪ್ರಕರಣ ಈಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಜಾರ್ಜಶೀಟ್ ಸಲ್ಲಿಸಲು ಬೆಂಗಳೂರು ಪೊಲೀಸರು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಇಷ್ಟು ದಿನ ಪರಪ್ಪನ ಅಗ್ರಹಾರದಲ್ಲಿ ದಿನ ಕಳೆದ ದರ್ಶನ್ಗೆ ಬಳ್ಳಾರಿ ಜೈಲಿನ ಕಟ್ಟುನಿಟ್ಟಿನ ನಿಯಮಗಳು ನರಕಕೂಪದಂತೆ ಕಾಣುತ್ತಿವೆ. ಜೈಲಿನ ವಾತಾವರಣದಿಂದ ದರ್ಶನ್ ಹೈರಾಣಾಗಿ ಹೋಗಿದ್ದಾರೆ. ಪಕ್ಕದ ಸೆಲ್ನಲ್ಲೂ ಕೂಡ ಯಾರು ಇಲ್ಲ, ಕನಿಷ್ಠ ಮಾತನಾಡೋಕಾದ್ರೂ ಯಾರೂ ಇಲ್ಲದೇ ಕೇವಲ ಜೈಲು ಸಿಬ್ಬಂದಿಯೊಂದಿಗಷ್ಟೇ ಮಾತನಾಡಿ ಹೊರ ಜಗತ್ತಿನ ಮಾಹಿತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ದರ್ಶನ್ ಗ್ಯಾಂಗ್ ವಿರುದ್ಧ 4000 ಪುಟಗಳ ಚಾರ್ಜ್ಶೀಟ್; ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಷ್ಟು ಸಾಕ್ಷಿಗಳು!
ಅಂದು ಬೇಡವಾಗಿದ್ದ ಟಿವಿ ದರ್ಶನ್ಗೆ ಈಗ ಬೇಕಾಗಿದ್ದು ಏಕೆ?
ಇಷ್ಟು ದಿನ ಪುಸ್ತಕ ಯೋಗ ಧ್ಯಾನ ಅಂತ ಕಾಲ ಕಳೆಯುತ್ತಿದ್ದ ದರ್ಶನ್ ಈಗ ಜೈಲು ಅಧಿಕಾರಿಗಳಿಗೆ ಟಿವಿ ಬೇಕು ಎಂದು ಬೇಡಿಕೆಯಿಟ್ಟಿದ್ದಾರಂತೆ. ಒಂಟಿತನ, ಹತಾಶೆ, ಕುಟುಂಬದಿಂದ, ಸ್ನೇಹಿತರಿಂದ ದೂರಾಗಿರುವ ದರ್ಶನ್ ಬಳ್ಳಾರಿ ಜೈಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲು ಆಗದೇ ಪರದಾಡುತ್ತಿದ್ದಾರಂತೆ. ಹೀಗಾಗಿ ಒಂದು ಟಿವಿ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಈ ಮೊದಲು ಟಿವಿ ಸಹವಾಸವೇ ಬೇಡ ಎಂದಿದ್ದ ದರ್ಶನ್ ಈಗ ಟಿವಿ ಬೇಕಾಗಿದೆ. ಮಗನನ್ನು ಭೇಟಿ ಮಾಡಬೇಕು ಎಂದು ಜೈಲು ಅಧಿಕಾರಗಳ ಎದುರು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್ ಈಗ ಬಳ್ಳಾರಿಯಲ್ಲಿ ನಿಜವಾದ ಜೈಲಿನ ಅನುಭವ, ನರಕ ದರ್ಶನವಾಗುತ್ತಿದೆಯಂತೆ. ಅಭಿಮಾನಿಗಳನ್ನು ಜೈಲಿನತ್ತ ಬರದಂತೆ ನೋಡಿಕೊಳ್ಳಿ ಎಂದು ಹೇಳಿರುವ ದರ್ಶನ್, ಮಗನನ್ನು ಕರೆದುಕೊಂಡು ಬನ್ನಿ ಎಂದು ಜೈಲಾಧಿಕಾರಿಗಳಲ್ಲಿ ಬೇಡಿಕೆ ಇಟ್ಟಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ