newsfirstkannada.com

ದರ್ಶನ್ ಗ್ಯಾಂಗ್​​ ವಿರುದ್ಧ 4000 ಪುಟಗಳ ಚಾರ್ಜ್​​ಶೀಟ್​​​; ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಷ್ಟು ಸಾಕ್ಷಿಗಳು!

Share :

Published September 3, 2024 at 7:02am

    ದರ್ಶನ್​ ಗ್ಯಾಂಗ್​ ವಿರುದ್ಧ ಹೊಸೆಯಲಾಗಿದೆ ಚಾರ್ಜ್​ಶೀಟ್ ಎಂಬ ಕುಣಿಕೆ

    ರೇಣುಕಾಸ್ವಾಮಿ ಹತ್ಯೆಯಲ್ಲಿ ಒಂದಾದವರು ಜಾಮೀನಿನ ವೇಳೆ ದಿಕ್ಕಾಪಾಲು

    ಪವಿತ್ರಾಗೌಡ, ಕೇಶವಮೂರ್ತಿ ಅರ್ಜಿ ವಜಾ, ಉಳಿದವರಿಗೆ ಶುರು ಢವಢವ

ಬೆಂಗಳೂರು ಪೊಲೀಸ್ ದರ್ಶನ್ ಗ್ಯಾಂಗ್ ವಿರುದ್ಧ ದೋಷಾರೋಪ ಪಟ್ಟಿಯನ್ನೋ ಕುಣಿಕೆಯನ್ನು ಈಗಾಗಲೇ ಹೊಸೆದು ಕೂತಿದ್ದಾರೆ. ಈ ಕಡೆ ದರ್ಶನ್ ಗ್ಯಾಂಗ್ ಗಾಳಿ ಬಂದ ಕಡೆ ತೂರಿಕೊಳ್ಳುವ ಲೆಕ್ಕಾಚಾರದಲ್ಲೇ ಯೋಚನೆ ಮಾಡ್ತಿದ್ದಾರೆ. ಅದರ ಆರಂಭವೇ A2 ಆಗಿದ್ದ ದರ್ಶನ್​​ ಇದೀಗ A1 ಆಗುವ ಸಾಧ್ಯತೆ ಇರೋದು. ಯಾಕಂದ್ರೆ, ಡಿ ಗ್ಯಾಂಗ್​​ ಪಾಲಿಗೆ ಆತಂಕವನ್ನುಂಟು ಮಾಡ್ತಿರೋದು ಚಾರ್ಜ್​​ಶೀಟ್​​ ಒಳಗಿರೋ ಬೆಚ್ಚಿ ಬೀಳಿಸೋ ಸಂಗತಿಗಳು.

ಇದನ್ನೂ ಓದಿ: ದರ್ಶನ್ ಫ್ಯಾನ್ಸ್ ಅಂಧಾಭಿಮಾನದ​ ಬಗ್ಗೆ ಕಿಚ್ಚ ಸುದೀಪ್‌ ಯಾಕೆ ಹೀಗಂದ್ರು? ಅಸಲಿ ಕಾರಣ ಇಲ್ಲಿದೆ!

ಸುಂಟರಗಾಳಿ ಸ್ಫೋಟ 1: ಪವಿತ್ರಾ, ದರ್ಶನ್, ಪವನ್ ಮಾಡಿದ್ದೇನು?
ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ3 ಪವನ್ ಪಾತ್ರ ಏನು? ಜಾರ್ಜ್​​ಶೀಟ್​​ನಲ್ಲಿ ದಾಖಲಾಗಿದೆ ಎನ್ನಲಾಗುತ್ತಿರುವ ಮಾಹಿತಿ ಪ್ರಕಾರ ರೇಣುಕಾಸ್ವಾಮಿ ಕೊಲೆ ಮಾಡಲು ಮೂಲ ಕಾರಣ ಪವಿತ್ರಾ ಗೌಡನೇ ಅಂತೆ. ಪವಿತ್ರಾ ಗೌಡ ಶೆಡ್​ನಲ್ಲಿ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಥಳಿಸಿದ್ದಾರೆ ಅನ್ನೋ ಆರೋಪವಿದೆ. ಇನ್ನು, ದರ್ಶನ್​​ ಸೂಚನೆಯಂತೆಯೇ ರೇಣುಕಾಸ್ವಾಮಿ ಕಿಡ್ನಾಪ್ ಮಾಡಲಾಗಿದೆ ಎಂಬ ಸಂಗತಿ ಚಾರ್ಜ್​​ಶೀಟ್​​ನಲ್ಲಿದೆಯಂತೆ. ಕಿಡ್ನಾಪ್ ಬಳಿಕ ಮಾರಣಾಂತಿಕ ಹಲ್ಲೆಯಲ್ಲೂ ದರ್ಶನ್​ ಪಾತ್ರವಿದ್ದು, ಕೊಲೆ ಮುಚ್ಚಿ ಹಾಕೋದಕ್ಕೆ ಹಣ ನೀಡಿದ್ದ ಎಂಬ ವಾದವಿದೆ. ಇನ್ನು ಆರೋಪಿ 3 ಪವನ್ ಪಾತ್ರದ ಬಗ್ಗೆಯೂ ಇಲ್ಲಿ ಚರ್ಚೆ ಆಗುತ್ತಿದೆ. ಪವಿತ್ರಾ ಮಾಹಿತಿ ಮೇರೆಗೆ ರೇಣುಕಾಸ್ವಾಮಿ ಕಿಡ್ನಾಪ್​ಗೆ ಪ್ಲಾನ್ ಆಗಿತ್ತು. ರಘು ಜೊತೆ ಸಂಪರ್ಕ ಮಾಡಿ ಕಿಡ್ನಾಪ್ ಮಾಡಿಸುವಲ್ಲಿ ಪಾತ್ರವಿದ್ದು, ಶೆಡ್​ನಲ್ಲಿ ರೇಣುಕಾಸ್ವಾಮಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸುಂಟರಗಾಳಿ ಸ್ಫೋಟ 2:ಕರೆಂಟ್​ ಶಾಕ್ ಕೊಟ್ಟು ಕೊಂದವರಾರು?

ರೇಣುಕಾಸ್ವಾಮಿ ಕೊಲೆ ಕೇಸ್​​ನ ಎ4 ರಾಘವೇಂದ್ರ ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷನೂ ಹೌದು. ರೇಣುಕಾಸ್ವಾಮಿ ಹುಡುಕಿ, ಹುಡುಗರನ್ನ ಸೇರಿಸಿ ಕಿಡ್ನಾಪ್ ಮಾಡಿಸಿದ್ದ ರಾಘು ಕೊನೆಗೆ ರೇಣುಕಾಸ್ವಾಮಿ ಧರಿಸಿದ ಚಿನ್ನಾಭರಣವನ್ನೂ ದೋಚಿದ್ದ ಎಂಬ ಸಂಗತಿ ಚಾರ್ಜ್​​ಶೀಟ್​​ನಲ್ಲಿದೆ ಎನ್ನಲಾಗುತ್ತಿದೆ. ಇನ್ನು, ಎ 5 ನಂದೀಶ್​ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ, ಮೆಗ್ಗರ್ ಮಷಿನ್ ಬಳಸಿ ಕರೆಂಟ್ ಶಾಕ್ ನೀಡಲು ಸಹಾಯ ಮಾಡಿದ್ದ, ಮೃತದೇಹ ವಿಲೇವಾರಿ ಮಾಡುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದ ಅಂತಾ ಪೊಲೀಸರು ನಿರ್ಧರಿಸಿದ್ದಾರೆ. ಆರೋಪಿ 6 ಜಗದೀಶ್​​ ರೇಣುಕಾಸ್ವಾಮಿ ಕಿಡ್ನಾಪ್ ಮಾಡಿಕೊಂಡು ಬಂದವರಲ್ಲೊಬ್ಬ. ಇದೇ ಜಗದೀಶ್​ ಹಣ ಪಡೆದು ಮೃತ ದೇಹ ಎಸೆಯೋದಕ್ಕೆ ಭಾಗಿಯಾಗಿದ್ದ ಎಂಬ ಲೆಕ್ಕಾಚಾರವನ್ನು ಚಾರ್ಜ್​​ಶೀಟ್​​ನಲ್ಲಿ ಪೊಲೀಸರು ದಾಖಲಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಮೂರು ದಿನದಿಂದ ಜೈಲಲ್ಲಿ ದರ್ಶನ್‌ಗೆ ಒಂದೇ ಟೀ ಶರ್ಟ್‌.. ಡಿಬಾಸ್​ ಅಭಿಮಾನಿಗಳಿಗೂ ಇದೇ ದೊಡ್ಡ ಕ್ರೇಜ್​!

ಸುಂಟರಗಾಳಿ ಸ್ಫೋಟ 3 : ಹಣ ಪಡೆದು ಶವ ಎಸೆದವರು ಯಾರು?
ರೇಣುಕಾಸ್ವಾಮಿ ಕೊಲೆ ಕೇಸ್​​ನ ಜಾರ್ಜ್​​ಶೀಟ್​ ಬೆಚ್ಚಿಬೀಳುವಂತೆ ಮಾಡೋದ್ರಲ್ಲಿ ಅನುಮಾನನೇ ಬೇಡ. ಕಾರಣ, ಪೊಲೀಸರು ತನಿಖೆ ಆರಂಭಿಸೋದಕ್ಕೆ ಕಾರಣವಾಗಿದ್ದೇ ರೇಣುಕಾಸ್ವಾಮಿ ಮೃತ ದೇಹ. ಪಟ್ಟಣಗೆರೆ ಶೆಡ್​​ನಿಂದ ರೇಣುಕಾಸ್ವಾಮಿ ಶವವನ್ನ ಹಣ ಪಡೆದು ಎಸೆದಿದ್ದು ಯಾರು ಅನ್ನೋ ಪ್ರಮುಖ ಪಾತ್ರಧಾರಿ ವಿಚಾರವನ್ನ ಜಾರ್ಜ್​​ಶೀಟ್​​ನಲ್ಲಿ ದಾಖಲಿಸಿದ್ದಾರೆ ಎನ್ನಲಾಗ್ತಿದೆ. ಈ ವಿಚಾರಕ್ಕೆ ಬಂದ್ರೆ, ಎ7 ಅನುಕುಮಾರ್ ರೇಣುಕಾಸ್ವಾಮಿ ಕಿಡ್ನಾಪ್ ನಲ್ಲಷ್ಟೇ ಭಾಗಿಯಾಗಿದ್ದ. ಹಲ್ಲೆಯಲ್ಲಾಗಲಿ, ಶವ ಎಸೆಯೋದ್ರಲ್ಲಿ ಆಗಲಿ ಈತನ ಪಾತ್ರವಿಲ್ಲವೆಂದೇ ಹೇಳಲಾಗುತ್ತಿದೆ. ಎ8 ರವಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತರುವಲ್ಲಿ ಸಹಕರಿಸಿದ್ದ. ಹಣ ಪಡೆದು ಮೃತ ದೇಹ ಎಸೆಯುವುದರಲ್ಲಿ ಭಾಗಿಯಾಗಿದ್ದ ಅನ್ನೋ ಸಂಗತಿ ಜಾರ್ಜ್​​ಶೀಟ್​​ನಲ್ಲಿದೆಯಂತೆ. ಇನ್ನು, ಎ8 ರವಿ ಕಾರು ಚಾಲಕನಾಗಿದ್ದಾನೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರುವಲ್ಲಿ ಸಹಕರಿಸಿದ್ದಾನೆ. ಹಣ ಪಡೆದುಕೊಂಡು ರೇಣುಕಾಸ್ವಾಮಿ ಮೃತ ದೇಹವನ್ನು ಎಸೆಯುವುದರಲ್ಲಿ ಪಾತ್ರ ವಹಿಸಿದ್ದ ಅನ್ನೋ ಸಂಗತಿ ಸುಂಟರಗಾಳಿಯಲ್ಲಿ ಸ್ಫೋಟವನ್ನುಂಟು ಮಾಡುತ್ತಿದೆ.

ಸುಂಟರಗಾಳಿ ಸ್ಫೋಟ 4 : ಮಾರಣಾಂತಿಕ ಹಲ್ಲೆ ನಡೆಸಿದ್ದು ಯಾರು?
ಇಲ್ಲಿ ಕಿರಾತಕರು ಕಿಡ್ನ್ಯಾಪ್ ಮಾಡಿದ್ದು ಬಹುಮುಖ್ಯವಾಗಲ್ಲ. ಬದಲಿಗೆ ಆತನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ್ದು ಯಾರು? ಅನ್ನೋ ಸಂಗತಿಗಳನ್ನೂ ಜಾರ್ಜ್​​ಶೀಟ್​ ಅನ್ನೋ ಸುಂಟರಗಾಳಿ ಬಿಚ್ಚಿತೋರಿಸಲಿದೆ. ಎ10 ಆರೋಪಿ ವಿನಯ್, ದರ್ಶನ್​​ ಆಪ್ತನಾಗಿದ್ದು, ಆತ ಸ್ಟೋನಿ ಬ್ರೂಕ್ ಹೆಸರಿನ ಪಬ್​​ ಮಾಲೀಕ. ಆತ ರೇಣುಕಾಸ್ವಾಮಿಗೆ ಲಾಠಿ ಬೀಸಿ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಅನ್ನೋ ಸಂಗತಿಯನ್ನು ಜಾರ್ಜ್​​ಶೀಟ್​​ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಎ11 ನಾಗರಾಜು, ದರ್ಶನ್​​ರ ಅನಧಿಕೃತ ಮ್ಯಾನೇಜರ್​​. ಈತ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವ ವೇಳೆ ಕಾಲಿನಿಂದ ಒದ್ದಿದ್ದಾನೆ. ಈ ಪ್ರಕರಣದಲ್ಲಿ ಎ12 ಆಗಿರೋ ಲಕ್ಷ್ಮಣ್ ದರ್ಶನ್​​ ಕಾರು ಚಾಲಕನಾಗಿದ್ದ. ಕೊಲೆಯ ವೇಳೆ ಸ್ಥಳದಲ್ಲಿದ್ದ ಲಕ್ಷ್ಮಣ್, ಮೃತ ದೇಹವನ್ನು ಎಸೆಯಲು ಬೇಕಾದ ವ್ಯವಸ್ಥೆ ಮಾಡಿದ್ದರ ಬಗ್ಗೆಯೂ ಪೊಲೀಸರು ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ

ಸುಂಟರಗಾಳಿ ಸ್ಫೋಟ 5 : ಸಾಕ್ಷಿ ಮುಚ್ಚಿ ಹಾಕೋದಕ್ಕೆ ಯತ್ನಿಸಿದ್ಯಾರು?
ಕಿಡ್ನಾಪ್, ಕೊಲೆಗಿಂತಲೂ ಘೋರ ಪಾತ್ರ ವಹಿಸಿದ್ದು ಯಾರು? ರೇಣುಕಾಸ್ವಾಮಿಯ ಬರ್ಬರ ಹತ್ಯೆಯ ಸಾಕ್ಷಿಗಳನ್ನು ನಾಶ ಮಾಡೋದಕ್ಕೆ ಮುಂದಾಗಿದ್ದು ಯಾರು? 4000 ಪುಟಗಳ ಬೃಹತ್​ ಜಾರ್ಜ್​​ಶೀಟ್​ ಗ್ರಂಥದಲ್ಲಿ ಈ ಸಂಗತಿಯೂ ದಾಖಲಾಗಿದೆ ಎನ್ನಲಾಗುತ್ತಿದೆ. ಎ13 ಆಗಿರೋ ದೀಪಕ್, ದರ್ಶನ್ ಆಪ್ತ. ಈತನ ಮೇಲೆ ನಿಖಿಲ್, ಕೇಶವಮೂರ್ತಿ, ಕಾರ್ತೀಕ್​​ಗೆ ಹಣ ಕೊಟ್ಟ ಆರೋಪವಿದೆ. ಅಷ್ಟೇ ಅಲ್ಲ, ದರ್ಶನ್​​, ಪ್ರದೂಷ್ ಸೂಚನೆಯಂತೆ ತಲಾ 5 ಲಕ್ಷ ಹಣ ನೀಡಿದ ಪ್ರಮುಖ ಪಾತ್ರಧಾರಿ ಇದೇ ದೀಪಕ್ ಅನ್ನೋ ಸಂಗತಿಯೂ ಜಾರ್ಜ್​​ಶೀಟ್​​ನಲ್ಲಿದೆ ಎನ್ನಲಾಗುತ್ತಿದೆ. ದರ್ಶನ್​​ ಪಾಲಿಗೆ ಬಹುದೊಡ್ಡ ಸಂಕಷ್ಟವನ್ನುಂಟು ಮಾಡ್ತಿರೋ ಮತ್ತೊಂದು ಸಂಗತಿ ಎ14 ಪ್ರದೂಶ್. ಸಾಕ್ಷಿ ನಾಶದ ಖರ್ಚಿಗಾಗಿ ಸುಮಾರು 30 ಲಕ್ಷ ಹಣ ವ್ಯವಸ್ಥೆ ಮಾಡಿದ್ದ ಆರೋಪ ಪ್ರದೂಶ್​​ ಮೇಲಿದೆ. ಜಾರ್ಜ್​​ಶೀಟ್​​ ಪ್ರಕಾರ ಆರೋಪಿಗಳನ್ನು ದರ್ಶನ್​ಗೆ ಭೇಟಿ ಮಾಡಿಸಿ ಸರಂಡರ್ ಮಾಡಿಸಿದ್ದು ಇದೇ ಪ್ರದೂಶ್. ಇದೇ ಇಂಚಿಂಚೂ ಸ್ಫೋಟಕ ಮಾಹಿತಿಗಳು ದರ್ಶನ್​ ಅಂಡ್​​ ಗ್ಯಾಂಗ್​​ಗೆ ಬೇಲಾ? ಜೈಲಾ? ಅನ್ನೋ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಿವೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್ ವಿರುದ್ಧ ಸಲ್ಲಿಕೆಯಾಗಲಿದೆ 4 ಸಾವಿರ ಪುಟಗಳ ಚಾರ್ಜ್​ಶೀಟ್​: ಗಾಳಿ ಬಂದತ್ತ ತೂರಿಕೊಳ್ತಿದೆಯಾ ‘ಡಿ‘ ಗ್ಯಾಂಗ್?

ಸುಂಟರಗಾಳಿ ಸ್ಫೋಟ 6 : ಸರೆಂಡರ್​ ಆಗಲು ಬಂದು ಸಾಕ್ಷಿ ಆಗಿದ್ಯಾರು?
ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಪೊಲೀಸರ ಪಾಲಿಗೆ ಶಕ್ತಿ ಆಗಿದ್ದು ಇದೇ ಮೂವರು. ಅವರೇ ಎ15 ಕಾರ್ತಿಕ್, ಎ16, ಕೇಶವಮೂರ್ತಿ ಹಾಗೂ ಎ17 ನಿಖಿಲ್. ಈ ಮೂವರ ಪೈಕಿ ಕಾರ್ತಿಕ್ ಪಟ್ಟಣಗೆರೆ ಶೆಡ್​​ನಲ್ಲಿ ಕೆಲಸ ಮಾಡುತ್ತಿದ್ದ. ರೇಣುಕಾಸ್ವಾಮಿ ಮೃತ ದೇಹವನ್ನ ಸಾಗಿಸಿದ್ದ. ಇನ್ನು, ಎ16 ಕೇಶವಮೂರ್ತಿ 5 ಲಕ್ಷ ಪಡೆದು ಮೃತ ದೇಹ ಸಾಗಿಸುವಲ್ಲಿ ಭಾಗಿಯಾಗಿದ್ದ. ಬಳಿಕ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಚಾರ್ಜ್​​ಶೀಟ್​ ಹೇಳ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇನ್ನು, ಈ ಕೇಸ್​​ನ ಕೊನೆಯ ಆರೋಪಿ ಎ 17 ನಿಖಿಲ್ ಸಹ 5 ಲಕ್ಷ ಹಣ ಪಡೆದು ಮೃತ ದೇಹ ಸಾಗಿಸುವಲ್ಲಿ ಭಾಗಿಯಾಗಿದ್ದ. ಹಣ ಪಡೆದು ಪೊಲೀಸರ ಮುಂದೆ ಸರೆಂಡರ್​ ಆಗಿದ್ದ ಎಂಬುದು ಪೊಲೀಸರ ದಾಖಲೆಗಳ ಲೆಕ್ಕಾಚಾರ ಎನ್ನಲಾಗುತ್ತಿದೆ.

ಪವಿತ್ರಾ, ಕೇಶವಮೂರ್ತಿ, ವಿನಯ್ ಬೇಲ್ ಅರ್ಜಿಯೂ ವಜಾ!
ಸುಂಟರಗಾಳಿಯ ಸ್ಫೋಟ ಎಂಥದ್ದು ಅನ್ನೋದಕ್ಕೆ ಇದೂ ಸಾಕ್ಷಿ. ಈ ಕೇಸ್​​ನಲ್ಲಿ ಮೊದಲಿಗೆ ಪವಿತ್ರಾಗೌಡ ಜಾಮೀನು ಅರ್ಜಿ ಹಾಕಿಕೊಂಡಿದ್ದಳು. ಬಳಿಕ ಕೇಶವಮೂರ್ತಿ, ವಿನಯ್ ಕೂಡ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಮೂವರ ಅರ್ಜಿಗಳೂ ವಜಾಗೊಂಡಿವೆ. ಬೆಚ್ಚಿಬೀಳಿಸೋ ಸಂಗತಿ ಏನಂದ್ರೆ ಮೂವರ ಅರ್ಜಿ ವಜಾ ಆಗೋದಕ್ಕೆ ಅವರವರೇ ಕೊಟ್ಟಿರೋ ಸಾಕ್ಷಿಯ ಹೇಳಿಕೆಗಳು. 57 ನೇ ಸಿಸಿಹೆಚ್ ನ್ಯಾಯಾಲಯ ಕೇಶವಮೂರ್ತಿ ಹಾಗೂ ವಿಜಯ್ ಬೇಲ್ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಕೋರ್ಟ್​​ ಆದೇಶದ ಪ್ರಕಾರ ಕೇಶವಮೂರ್ತಿ ವಿರುದ್ದ ಇತರ ಆರೋಪಿಗಳ ಹೇಳಿಕೆ ಇದ್ದು, ಕೇಶವಮೂರ್ತಿ ಸಾಕ್ಷಿ ನಾಶದಲ್ಲಿ ನೇರವಾಗಿ ಭಾಗಿಯಾಗಿದ್ದಾನೆ. ಇನ್ನೂ ತನಿಖೆ ಸಂಪೂರ್ಣ ಮುಗಿದಿಲ್ಲದ ಕಾರಣ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಅನ್ನೋ ಕಾರಣಕ್ಕೆ ಜಾಮೀನು ಅರ್ಜಿ ವಜಾಗೊಳಿಸಿದೆ. ಇನ್ನು, ವಿನಯ್ ಅರ್ಜಿ ವಜಾಗೊಳ್ಳಲು ಕಾರಣ ಐ ವಿಟ್ನೆಸ್​​ ಕಾರಣ. ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಐ ವಿಟ್ನೆಸ್​​ ಕೊಟ್ಟು 164 ಹೇಳಿಕೆ ಇದ್ದು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವ ಕಾರಣ ಬೇಲ್​ ರಿಜೆಕ್ಟ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಗ್ಯಾಂಗ್​​ ವಿರುದ್ಧ 4000 ಪುಟಗಳ ಚಾರ್ಜ್​​ಶೀಟ್​​​; ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಷ್ಟು ಸಾಕ್ಷಿಗಳು!

https://newsfirstlive.com/wp-content/uploads/2024/06/DARSHAN_GANG-1.jpg

Load More