newsfirstkannada.com

ದರ್ಶನ್ ಫ್ಯಾನ್ಸ್ ಅಂಧಾಭಿಮಾನದ​ ಬಗ್ಗೆ ಕಿಚ್ಚ ಸುದೀಪ್‌ ಯಾಕೆ ಹೀಗಂದ್ರು? ಅಸಲಿ ಕಾರಣ ಇಲ್ಲಿದೆ!

Share :

Published September 1, 2024 at 8:12pm

    ಹೋಮ ಮಾಡಿದ ತಕ್ಷಣ ಫಲ ಸಿಗಲ್ಲ ಕಿಚ್ಚ ಸುದೀಪ್​ ಹೀಗಂದಿದ್ದು ಯಾಕೆ?

    ಅಭಿಮಾನಿಗಳಿಂದ ದರ್ಶನ್​ಗೆ ಕಂಟಕ ಫಿಕ್ಸ್, ಯಾಕೆ..? ಇಲ್ಲಿದೆ ಮಾಹಿತಿ

    ದಚ್ಚು ಫ್ರೆಂಡ್‌ಶಿಪ್ ಬಗ್ಗೆ ಡೈರೆಕ್ಟ್ ಡೈರೆಕ್ಟ್ ಆಗಿಯೇ ಸೀಕ್ರೆಟ್ ತೆರೆದಿಟ್ಟ ಕಿಚ್ಚ!

ದರ್ಶನ್‌ ಫ್ಯಾನ್ಸ್ ಅಂಧಾಭಿಮಾನ ದಿನ ದಿನಕ್ಕೂ ಮಿತಿ ಮೀರುತ್ತಿರೋ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮತ್ತೊಂದು ಕಡೆ ಕಿಚ್ಚ ಸುದೀಪ್ ದರ್ಶನ್ ಬಗ್ಗೆ ಮತ್ತು ದರ್ಶನ್ ಅಭಿಮಾನಿಗಳತ್ತ ನೇರವಾದ ಮಾತಿನ ಬಾಣ ಪ್ರಯೋಗಿಸಿದ್ದಾರೆ. ಸೂರ್ಯ, ಚಂದ್ರ, ಹೋಮ. ಹೀಗೆ, ಅನೇಕ ಶಾಕಿಂಗ್ ವಿಚಾರಗಳನ್ನ ಹೊರಗೆಡವಿದ್ದಾರೆ. ಹಾಗಾದ್ರೆ, ಸುದೀಪ್ ಪರೋಕ್ಷವಾಗಿ ಹೇಳಿದಂತೆ ಸೋ ಕಾಲ್ಡ್ ಸೆಲೆಬ್ರಿಟಿಗಳೇ ದರ್ಶನ್ ಪಾಲಿಗೆ ಮುಳುವಾಗ್ತಾರಾ?

ಸೆಲೆಬ್ರಿಟಿಸ್.. ಸೋ ಕಾಲ್ಡ್ ಡಿ ಬಾಸ್ ಸೆಲೆಬ್ರಿಟಿಸ್.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದಿನಿಂದ ತಮ್ಮ ಅಭಿಮಾನಿಗಳನ್ನ ಸೆಲೆಬ್ರಿಟಿಸ್ ಅಂತ ಕರೆದ್ರೋ ಅಂದಿನಿಂದ್ಲೇ ದರ್ಶನ್ ಕ್ರೇಜ್ ಹತ್ತು, ನೂರು ಪಟ್ಟು ಹೆಚ್ಚಾಗಿತ್ತು. ಬಟ್, ದರ್ಶನ್‌ರನ್ನು ಎತ್ತಿ, ಮೆರೆಸಿ, ಈ ಎತ್ತರಕ್ಕೆ ತಂದು ನಿಲ್ಲಿಸಿದ್ದ ಅಭಿಮಾನಿಗಳೇ ಇಂದು ದರ್ಶನ್‌ರ ಈ ಸ್ಥಿತಿ, ವರ್ತನೆಗೆ ಕಾರಣರಾದ್ರಾ? ದಾಸ ಮರ್ಡರ್ ಕೇಸ್‌ನಲ್ಲಿ ಜೈಲು ಸೇರಿದ ಮೊತ್ತ ಮೊದಲ ದಿನದಿಂದಲೇ ಇಂಥಾದ್ದೊಂದು ಚರ್ಚೆ ಶುರುವಾಗಿದೆ. ಈ ನಡುವೆ ದರ್ಶನ್‌ರ ಒಂದು ಕಾಲದ ದೋಸ್ತ ಕಿಚ್ಚ ಸುದೀಪ್ ಶಾಕಿಂಗ್ ಸ್ಟೇಟ್‌ಮೆಂಟ್‌ ನೀಡಿದ್ದಾರೆ. ನೇರವಾಗಿ ಮತ್ತು ಪರೋಕ್ಷವಾಗಿ ಮಾಜಿ ಸ್ನೇಹಿತನ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೂರು ದಿನದಿಂದ ಜೈಲಲ್ಲಿ ದರ್ಶನ್‌ಗೆ ಒಂದೇ ಟೀ ಶರ್ಟ್‌.. ಡಿಬಾಸ್​ ಅಭಿಮಾನಿಗಳಿಗೂ ಇದೇ ದೊಡ್ಡ ಕ್ರೇಜ್​!

ದರ್ಶನ್‌ ಬಗ್ಗೆ ಕೇಳಿದಾಗ ಸುದೀಪ್ ಹೇಳಿರೋ ಒಂದೊಂದು ಹೇಳಿಕೆಗಳಲ್ಲೂ ನೂರಾರು ಅರ್ಥಗಳಿವೆ. ಹತ್ತಾರು ಸಂದೇಶಗಳಿವೆ. ನಾಲ್ಕಾರು ರಹಸ್ಯಗಳಿವೆ. ಹಾಗಾದ್ರೆ, ಕಿಚ್ಚ ಜೈಲಲ್ಲಿರೋ ದಚ್ಚು ಬಗ್ಗೆ, ದಚ್ಚು ಫ್ಯಾನ್ಸ್ ಬಗ್ಗೆ ಹೇಳಿದ್ದೇನು?. ಏನದು ಹೋಮ, ಫ್ಯಾನ್ಸ್ ಸಿವಿಲ್ ವಾರ್, ಸೂರ್ಯಚಂದ್ರ ರಾತ್ರಿ-ಹಗಲು ರಹಸ್ಯ? ಇಬ್ಬರ ನಡುವೆ ಒಡಕು ಮೂಡಿದ್ದೇಕೆ ಎಂಬ ಬಗ್ಗೆ ಕಿಚ್ಚ ಬಿಚ್ಚಿಟ್ಟ ಸೀಕ್ರೆಟ್ ಏನು?. ಮತ್ತು, ಸುದೀಪ್ ಪರೋಕ್ಷವಾಗಿ ದರ್ಶನ್ ಫ್ಯಾನ್ಸ್‌ಗೆ ಕೊಟ್ಟ ಸಂದೇಶವೇನು? ಈ ಪ್ರತಿಯೊಂದು ರೋಚಕ.. ರಣರೋಚಕ!

ಸೂರ್ಯ, ಚಂದ್ರ ದೂರಾನೇ ಇರಲಿ.. ದಚ್ಚು ಬಗ್ಗೆ ಕಿಚ್ಚ ಸ್ಫೋಟ!​​
ಡಿಬಾಸ್, ಬಾಕ್ಸಾಫಿಸ್ ಸುಲ್ತಾನ, ದರ್ಶನ್ ತೂಗುದೀಪ.. ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡೋ ನಟ ದರ್ಶನ್ ಇಂದು ಬಳ್ಳಾರಿ ಜೈಲಲ್ಲಿ ಲಾಕ್ ಆಗಿರೋದು ಗೊತ್ತಿದೆ. ದರ್ಶನ್‌ ಬಳ್ಳಾರಿ ಜೈಲು ಸೇರಿದ್ರೆ ಇತ್ತ ದರ್ಶನ್ ಅಭಿಮಾನಿಗಳ ಸುತ್ತ ಹತ್ತಾರು ವಿವಾದ. ಚರ್ಚೆ, ಆಕ್ರೋಶಗಳು ಕೇಳಿ ಬರ್ತಿವೆ. ಖುದ್ದು ಪೊಲೀಸ್ ಅಧಿಕಾರಿ ದರ್ಶನ್ ಅಭಿಮಾನಿಗಳ ಕೋಟೆಯ ನಡುವೆ ನಿಂತು ಮೈಕ್ ಹಿಡಿದು ನಿಮ್ಮಂತ ಕೆಲವು ಅಭಿಮಾನಿಗಳಿಂದ ದರ್ಶನ್‌ಗೆ ಕೆಟ್ಟ ಹೆಸರು ಅಂತ ಹೇಳಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಹೀಗೆಲ್ಲಾ ಇರುವಾಗ ಸುದೀಪ್ ನೀಡಿರೋ ಇದೊಂದು ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ.

ದರ್ಶನ್‌ ಅವ್ರಿಗೂ ಕುಟುಂಬ ಇದೆ, ಊರು ತುಂಬಾ ಫ್ಯಾನ್ಸ್ ಇದಾರೆ. ನಾನೇನೋ ಹೇಳಿ ಅವರಿಗೆಲ್ಲಾ ಬೇಜಾರ್ ಮಾಡೋಕೆ ಇಷ್ಟವಿಲ್ಲ ಎಂಬ ಮಾತು ಸುದೀಪ್ ಬಾಯಲ್ಲಿ ಬಂದಿರೋದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಈ ಹಿಂದೆ ಸುದೀಪ್ ದರ್ಶನ್‌ ಕೇಸ್‌ ಬಗ್ಗೆ ಮಾತಾಡ್ತಾ ಹಿಂದಿನದೊಂದು ಘಟನೆಯ ಉದಾಹರಣೆ ಕೊಟ್ಟು ಮಾತಾಡಿದ್ದು ಫ್ಯಾನ್ ವಾರ್‌ಗೆ ಕಿಚ್ಚು ಹಚ್ಚಿತ್ತು. ಇದೀಗ, ಸುದೀಪ್ ನಾನೇನೂ ಮಾತಾಡೋಕೆ ಇಷ್ಟ ಪಡೋಲ್ಲ. ಕಾನೂನು ಏನು ಹೇಳುತ್ತೋ ಅಲ್ಲಿವರೆಗೂ ಏನನ್ನೂ ಹೇಳೋಕೆ ಇಷ್ಟಪಡಲ್ಲ ಅಂತ ಹೇಳಿದ್ದಾರೆ. ಬಟ್, ಕೇಸ್ ಬಗ್ಗೆ ಮಾತಾಡೋಕೆ ಹಿಂದೇಟು ಹಾಕಿರೋ ಕಿಚ್ಚ, ದಚ್ಚು ಅಭಿಮಾನಿಗಳಿಗೆ ಒಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ. ಅದೇನಂತಾ ನೀವೇ ಕೇಳಿ.

ಇದನ್ನೂ ಓದಿ: ದರ್ಶನ್‌ ಕೈಗೆ ಸಿಗರೇಟ್ ಕೊಟ್ಟವರು ಯಾರು? ಜೈಲಿನ ಫೋಟೋ & ರಾಜಾತಿಥ್ಯದ ಸ್ಫೋಟಕ ಸತ್ಯ ಬಹಿರಂಗ 

ತಮ್ಮ ಫ್ಯಾನ್ಸ್ ಗುಂಪುಗಳಲ್ಲಿ ಪ್ರತಿ ವರ್ಷ ಬರ್ತ್‌ಡೇ ಟೈಮಲ್ಲಿ ಸಿವಿಲ್ ವಾರ್ ನಡೆಯುತ್ತೆ. ಹಾಗಾಗಿ, ಇದೆಲ್ಲಾ ಯಾಕ್ ಬೇಕು ಅಂತಾ ನಾನೇ ಸೈಲೆಂಟಾಗ್ಬಿಟ್ಟಿದ್ದೀನಿ ಅನ್ನೋದು ಸುದೀಪ್ ಮಾತು. ಇದರರ್ಥ ದರ್ಶನ್ ಈ ಕೆಲಸ ಮೊದಲೇ ಮಾಡ್ಬೇಕಿತ್ತು. ತಮ್ಮ ಫ್ಯಾನ್ಸ್‌ಗಳ ಆಟಾಟೋಪಕ್ಕೆ ಬ್ರೇಕ್ ಹಾಕ್ಬೇಕಿತ್ತು ಅನ್ನೋದಾ? ಖಂಡಿತ ಗೊತ್ತಿಲ್ಲ. ಬಟ್, ಹಿಂದೊಮ್ಮೆಯೂ ಸುದೀಪ್ ಇಂಥಹದ್ದೇ ಹೇಳಿಕೆ ಮಾರ್ಮಿಕ ಹೇಳಿಕೆ ನೀಡಿದ್ರು. ಆಗಲೂ ಸುದೀಪ್ ಪರೋಕ್ಷವಾಗಿ ದರ್ಶನ್ ಅಭಿಮಾನಿಗಳಿಗೆ ಇನ್‌ಡೈರೆಕ್ಟ್ ಸಿಗ್ನಲ್ ಕೊಟ್ಟಿದ್ದಾರೆಂಬ ಚರ್ಚೆ ಸ್ಫೋಟಗೊಂಡಿತ್ತು.

ನೀವೆಲ್ಲಾ ಒಬ್ಬ ಸ್ಟಾರ್‌ನ ಫ್ಯಾನ್ಸ್ ಮತ್ತೊಬ್ಬ ಸ್ಟಾರ್‌ನ ಫ್ಯಾನ್ಸ್ ನಡುವೆ ಟಾಕ್ ಫೈಟ್ ನಡೆಯೋದನ್ನು ಕಂಡಿದ್ದೀರಿ, ಕೇಳಿದ್ದೀರಿ. ಆದ್ರೆ, ಒಬ್ಬ ಸ್ಟಾರ್‌ನ ಫ್ಯಾನ್ಸ್ ಗುಂಪುಗಳ ಒಳಗೆ ಕಾದಾಟ ನಡೆಯುತ್ತೆ ಅನ್ನೋದನ್ನ ಕೇಳಿದ್ದೀರಾ? ಖಂಡಿತವಾಗಿ ನಡೆಯುತ್ತೆ ಅನ್ನೋ ವಿಚಾರವನ್ನ ಕಿಚ್ಚ ಸುದೀಪ್ ಹಿಂದೆಯೇ ಕೇಳಿದ್ರು. ಅಷ್ಟೇ ಅಲ್ಲ, ಪರೋಕ್ಷವಾಗಿ ಬೇರೆ ಸ್ಟಾರ್‌ಗಳಿಗೂ.. ಫ್ಯಾನ್ಸ್‌ಗೂ ಮುತ್ತಿನಂತಾ ಸಂದೇಶ ರವಾನಿಸಿದ್ರು.

ಸುದೀಪ್‌ ಆವತ್ತು ದರ್ಶನ್‌ಗೆ ಸಲಹೆ ಕೊಟ್ಟಿದ್ರಾ?

ಸುದೀಪ್‌ ವಿಚಾರದಲ್ಲಿ ಅವ್ರ ಹುಡುಗರು, ಅರ್ಥಾತ್ ಫ್ಯಾನ್ಸ್​ ಗಲಾಟೆಗೆ ರೆಡಿಯಾಗ್ತಿದ್ರಂತೆ.. ಆಗ ಸುದೀಪ್ ಕರೆದು ಬುದ್ಧಿ ಹೇಳಿದ್ರಂತೆ. ಹಾಗೆ, ಸುದೀಪ್‌ ಬುದ್ಧಿವಾದ ಕೇಳಿದ್ದ 29 ಅಭಿಮಾನಿಗಳು ದೊಡ್ಡ ದೊಡ್ಡ ಹೋಟೆಲ್​ಗಳ ಓನರ್‌ಗಳಾಗಿದ್ದಾರಂತೆ. ಹಾಗಾದ್ರೆ, ದರ್ಶನ್ ಅಂದು ಈ ಮಾತು ಹೇಳಿದ್ದು ದರ್ಶನ್‌ಗೆ ಕೊಟ್ಟ ಸಲಹೆಯಾಗಿತ್ತಾ? ನಿನ್ನ ಫ್ಯಾನ್ಸ್ ಹಾದಿ ತಪ್ಪುತ್ತಿದ್ದಾರೆ. ಮುಂದೊಂದು ದಿನ ನಿನ್ನ ಕುತ್ತಿಗೆಗೆ ತರ್ತಾರೆ ಎಂಬುದನ್ನು ತಮ್ಮ ಲೈಫ್‌ ಎಕ್ಸಾಂಪಲ್ ಕೊಟ್ಟು ಹೇಳಿದ್ರಾ? ಖಂಡಿತ ಗೊತ್ತಿಲ್ಲ. ಆದ್ರೆ, ಅಂದು ಮತ್ತು ಇಂದು ಸುದೀಪ್ ಹೇಳಿರೋ ಹೇಳಿಕೆಗಳು ದರ್ಶನ್‌ ಬದುಕಿಗೆ, ದರ್ಶನ್ ಫ್ಯಾನ್ಸ್‌ಗಳಿಗೆ ಪಕ್ಕಾ ಹೋಲಿಕೆಯಾಗ್ತಿದೆ ಎಂಬುದೇ ವಿಪರ್ಯಾಸ!

ಇದನ್ನೂ ಓದಿ: ನಟಿ ಪವಿತ್ರಾ ಗೌಡ ಅರ್ಜಿ ವಜಾ ಆಗಿದ್ದೇಕೆ? ಇಲ್ಲಿದೆ 6 ಪ್ರಮುಖ ಕಾರಣಗಳು!

‘ಸೂರ್ಯ ಚಂದ್ರ ಒಟ್ಟಿಗೆ ಸೇರಬಾರದು.. ಪ್ರಾಬ್ಲಂ ಆಗುತ್ತೆ’

ಅಚ್ಚರಿ ಅಂದ್ರೆ, ಹಿಂದೆಲ್ಲಾ ದರ್ಶನ್ ಬಗ್ಗೆ ಸುದೀಪ್ ಬಳಿ ಕೇಳಿದಾಗ ಸರಿಯಾಗಿ ಪ್ರತಿಕ್ರಿಯೆ ನೀಡ್ತಾ ಇರ್ತಿಲ್ಲ. ಸಂಬಂಧವೇ ಇಲ್ಲ ಎಂಬಂತೆ ಪ್ರಶ್ನೆಯನ್ನು ಸಾಗು ಹಾಕ್ತಿದ್ರು. ಆದ್ರೆ, ಎಷ್ಟಾದ್ರೂ ಮಾಜಿ ಗೆಳಯ ಅಲ್ವಾ? ಇಂಥಾ ಸಂದರ್ಭದಲ್ಲೂ ರಿಯಾಕ್ಟ್ ಮಾಡ್ದೇ ಹೋದ್ರೆ ಹೇಗೆ? ಹಾಗಾಗಿ, ಎಂದೂ ಹೇಳಿರದಂತಾ ಕೆಲವೊಂದು ಶಾಕಿಂಗ್ ವಿಚಾರಗಳನ್ನ ಸುದೀಪ್ ಬಿಚ್ಚಿಟ್ಟಿದ್ದಾರೆ. ದರ್ಶನ್‌ಗೂ ತನಗೂ ಆಗಿಬರೋಲ್ಲ. ಇಬ್ಬರೂ ಒಟ್ಟಿಗೆ ಸರಿಯಿಲ್ಲ. ತಾವಿಬ್ಬರೂ ಸೂರ್ಯ ಚಂದ್ರರಂತೆ. ಒಟ್ಟಿಗೆ ಸೇರಬಾರ್ದು, ಸೇರಿದ್ರೆ ಪ್ರಾಬ್ಲಂ ಆಗುತ್ತೆ ಅಂತಾ ನೇರವಾಗಿ ಹೇಳಿದ್ದಾರೆ.

ಹೀಗೆ, ಸುದೀಪ್ ದರ್ಶನ್‌ ಬಗ್ಗೆ, ಮತ್ತು ಪರೋಕ್ಷವಾಗಿ ದರ್ಶನ್ ಅಭಿಮಾನಿಗಳ ಬಗ್ಗೆ ಮುಕ್ತವಾಗಿ ಮಾತಾಡೋಕೆ ಕಾರಣವಾಗಿದ್ದೇನು ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತೆ. ಹಾಗಾದ್ರೆ, ದಚ್ಚು ಬಗ್ಗೆ ಕಿಚ್ಚನ ಈ ಹೇಳಿಕೆಗಳ ಹಿಂದೆ ದರ್ಶನ್ ಅಭಿಮಾನಿಗಳ ಆಟಾಟೋಪವೆ ಕಾರಣವಾಯ್ತಾ? ಅದ್ರಲ್ಲೂ, ದರ್ಶನ್ ಜೈಲು ಸೇರಿದ್ಮೇಲೆ ಕಾಟೇರನ ಅಭಿಮಾನಿಗಳ ಮಾಡ್ತಿರೋ ಸಾಲು ಸಾಲು ಅವಾಂತರಗಳು, ವಿವಾದಗಳಿಂದೇಲ್ಲಾ ಕಿಚ್ಚ ತುಟಿ ಬಿಚ್ಚುವಂತಾಯ್ತಾ?.

ಅಂಧಾಭಿಮಾನ ನಂ.01- ದೇವಿ ಮೂರ್ತಿ ಮೇಲೆ ಕಾಲಿಟ್ಟು ಹಾರ ಹಾಕಿದ ಫ್ಯಾನ್ಸ್!

ದರ್ಶನ್‌ರನ್ನು ಬಳ್ಳಾರಿ ಸೆಂಟ್ರಲ್ ಡೈಲಿಗೆೆ ಕರೆದೊಯ್ದು ಕೂಡಿದ್ದ ದಿನವದು. ಬಳ್ಳಾರಿಯ ದರ್ಶನ್ ಫ್ಯಾನ್ಸ್ ಮಾಡಿದ್ದ ಅದೊಂದು ಕೆಲಸ ಎಲ್ಲರ ಕಣ್ಣು ಕೆಂಪಾಗಿಸಿತ್ತು. ಕೊಲೆ ಕೇಸ್ ಆರೋಪಿ ದರ್ಶನ್ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿ ಅಲ್ಲಿನ ಕನಕ ದುರ್ಗಮ್ಮ ಮೂರ್ತಿ ತಲೆ ಮೇಲೆ ಕಾಲಿಟ್ಟು ಹೂವಿನ ಹಾರ ಹಾಕಿದ್ರು.

ದರ್ಶನ್ ಅಭಿಮಾನಿಗಳ ಈ ಕೆಲಸದಿಂದ ಆಕ್ರೋಶಗೊಂಡಿದ್ದ ಭಕ್ತರು ಹೀಗೆ ಮಾಡಿದ್ರೆ ದರ್ಶನ್‌ಗೆ ಒಳ್ಳೆಯದಾಗುತ್ತಾ? ದರ್ಶನ್ ಫ್ಯಾನ್ಸ್ ಎಂತಹ ಅನಾಗರಿಕರು, ಸೂಕ್ಷ್ಮ ಸಂವೇದನೆ ಕಳೆದುಕೊಂಡವರು ಇಂತಹರ ಪೂಜೆಯಿಂದ ದರ್ಶನ್‌ಗೆ ನಿಜಕ್ಕೂ ಒಳಿತಾಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇದು ಸಾಲದು ಎಂಬಂತೆ ಆಗಸ್ಟ್​ 30 ರಂದು ಕರಿಯ ಸಿನಿಮಾ ರೀ ರಿಲೀಸ್‌ ಆದಾಗ್ಲೂ ಪೊಲೀಸ್ ಅಧಿಕಾರಿ ತಾಳ್ಮೆ ಕಳೆದುಕೊಂಡು ಶಾಕಿಂಗ್ ಸ್ಟೇಟ್‌ಮೆಂಟ್ ಕೊಡುವಂತೆ ಮಾಡಿದ್ರು.

ಅಂಧಾಭಿಮಾನ ನಂ.02ತಾಳ್ಮೆ ಕಳ್ಕೊಂಡು ಫ್ಯಾನ್ಸ್‌ಗೆ ಶೇಪ್‌ಔಟ್ ಮಾಡಿದ್ದ ಪೊಲೀಸ್!

ದರ್ಶನ್ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋದ್ಮೇಲೆ.. ಅವ್ರ ಹಿಂದಿನ ಹಿಟ್ ಸಿನಿಮಾಗಳನ್ನು ರೀರಿಲೀಸ್ ಮಾಡ್ಲಾಗ್ತಿದೆ. ಕರಿಯಾ ಸಿನಿಮಾ ಆ ಸಾಲಿಗೆ ಹೊಸ ಸೇರ್ಪಡೆ. ಬಟ್, ಶುಕ್ರವಾರ ಪ್ರಸನ್ನ ಚಿತ್ರಮಂದಿರದಲ್ಲಿ ಕರಿಯಾ ನೋಡೋಕೆ ಬಂದಿದ್ದ ಫ್ಯಾನ್ಸ್‌ ಆಟಾಟೋಪ ಮೆರೆದಿದ್ರು. ದರ್ಶನ್ ಫ್ಯಾನ್ಸ್ ಪುಂಡಾಟ ಮಿತಿಮೀರಿತ್ತು..

ಪ್ರಸನ್ನ ಚಿತ್ರಮಂದಿರದ ಬಳಿ ಲಾಠಿ ಚಾರ್ಜ್​ ಕೂಡ ಆಯ್ತು.. ಇದರ ಹಿನ್ನೆಲೆ ಕರಿಯ ಚಿತ್ರದ ರಾತ್ರಿ ಪ್ರದರ್ಶನಕ್ಕೆ ಪೊಲೀಸರು ಬ್ರೇಕ್ ಹಾಕಿದ್ರು. ಫ್ಯಾನ್ಸ್ ಮೇಲೆ ಲಾಠಿ ಚಾರ್ಜ್‌ ಮಾಡಿದ್ದಷ್ಟೇ ಅಲ್ಲದೆ ನಿಮ್ಮಂತಾ ಕೆೆಲ ಕೆಟ್ಟ ಫ್ಯಾನ್ಸ್‌ಗಳಿಂದ ದರ್ಶನ್‌ಗೆ ಕೆಟ್ಟ ಹೆಸ್ರು ಅಂತಾ ಸಾರ್ವಜನಿಕವಾಗಿ ಶೇಪ್‌ಔಟ್ ಮಾಡಿದ್ರು.

ಇದನ್ನೂ ಓದಿ: ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು?

ಅಂಧಾಭಿಮಾನ ನಂ.03- ದರ್ಶನ್ ಜೈಲೊಳಗೆ ಧಮ್ ಹೊಡೆಯುತ್ತಿರೋ ಬ್ಯಾನರ್!

‘ಕಿಂಗ್ ಈಸ್ ಆಲ್ವೇಸ್ ಕಿಂಗ್’… ಅಲ್ಲಾ..! ಇಷ್ಟು ದಿನ ಬಾಸ್ ಆಗಿದ್ದ ದರ್ಶನ್. ಅದ್ಯಾವಾಗ ಕಿಂಗ್ ಆದ್ರೋ ಗೊತ್ತಿಲ್ಲ. ಬಟ್, ಇಂದು ದರ್ಶನ್ ಬಳ್ಳಾರಿ ಜೈಲಿನ ಸೆಲ್‌ ನಂಬರ್ 15ರಲ್ಲಿ ತಲೆ ತಲೆ ಚಚ್ಕೊಂಡು ಕೂರುವಂತೆ ಮಾಡಿರೋ ಸಿಗರೇಟ್ ಫೋಟೋವನ್ನೇ ಇವ್ರು ಬ್ಯಾನರ್ ಮಾಡ್ಕೊಂಡು ಅಂಧಾಭಿಮಾನ ತೋರ್ಪಡಿಸ್ತಿದ್ದಾರಲ್ಲಾ? ಛೇ.. ಇಂದು ತನ್ನ ಫ್ಯಾನ್ಸ್ ವರ್ತನೆ ಕಂಡು ದರ್ಶನ್‌ಗೇ ಜಿಗುಪ್ಸೆ ಹುಟ್ಟಿದ್ರೂ ಅಚ್ಚರಿಯಿಲ್ಲ.

ಈ ಪೋಸ್ಟ್ ಹಾಕಿದ್ದು ಕರಿಯಾ ಸಿನ್ಮಾ ರಿಲೀಸ್ ಆದ ಪ್ರಸನ್ನ ಥಿಯೇಟರ್​​ನ ಬ್ಯಾನರ್‌ ಹಾಕೋ ಜಾಗದಲ್ಲಿ ಅನ್ನೋದು ವಿಚಿತ್ರ. ಇದಕ್ಕೆಲ್ಲಾ ಅವಕಾಶ ಕೊಟ್ಟವಱರು? ಬಿಡಿ, ಜೈಲಲ್ಲಿ ಧಮ್ ಹೊಡೆದು, ರೌಡಿ ಜೊತೆ ಮೀಟಿಂಗ್ ಮಾಡೋದಕ್ಕೇ ಅವಕಾಶ ಕೊಟ್ಟಿದ್ರು ಅಂದ್ರೆ, ಇದೆಲ್ಲಾ ಯಾವ್ ಲೆಕ್ಕ! ಇದು ಅಂಧಾಭಿಮಾನವಾ? ಅಲ್ವಾ?. ದರ್ಶನ್ ಅಭಿಮಾನಿಗಳ ಅಂಧಾಭಿಮಾನ ಇಷ್ಟಕ್ಕೇ ಮುಗಿಯೋಲ್ಲ. ಅತ್ತ, ದರ್ಶನ್ ಫ್ಯಾನ್ಸ್‌ಗೆ ಬುದ್ಧಿವಾದ ಹೇಳ್ತೀರಾ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ನೀಡಿರೋ ಉತ್ತರ ನಿಜಕ್ಕೂ ಶಾಕಿಂಗ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಫ್ಯಾನ್ಸ್ ಅಂಧಾಭಿಮಾನದ​ ಬಗ್ಗೆ ಕಿಚ್ಚ ಸುದೀಪ್‌ ಯಾಕೆ ಹೀಗಂದ್ರು? ಅಸಲಿ ಕಾರಣ ಇಲ್ಲಿದೆ!

https://newsfirstlive.com/wp-content/uploads/2024/09/DARSHAN_SUDEEP_2.jpg

Load More