newsfirstkannada.com

ಪ್ರೀತಿಯ ನಾಯಿ ಮರಿ ಜೊತೆ ಸೋನಿಯಾ ಗಾಂಧಿ ಸಖತ್ ಪೋಸ್‌.. ಫೋಟೋ ವೈರಲ್‌! ಏನಿದರ ಸ್ಪೆಷಲ್‌?

Share :

Published August 23, 2024 at 10:00pm

Update August 23, 2024 at 10:15pm

    ರಾಹುಲ್ ಗಿಫ್ಟಾಗಿ ಕೊಟ್ಟ ಶ್ವಾನದ ಮರಿಯನ್ನು ಬೆನ್ನಿಗೆ ಕಟ್ಟಿಕೊಂಡ ಸೋನಿಯಾ

    ಅಮ್ಮನ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ರಾಹುಲ್ ಗಾಂಧಿ

    ಒಂದು ವರ್ಷದ ಹಿಂದೆ ರಾಹುಲ್ ಮನೆ ಸೇರಿದ ಶ್ವಾನದ ಹಿಂದಿದೆ ಒಂದು ವಿವಾದ!

ನವದೆಹಲಿ: ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕಳೆದ ವರ್ಷ ನೂರಿ ಅನ್ನೋ ಹೆಸರಿನ ಒಂದು ಶ್ವಾನದ ಮರಿಯನ್ನು ತನ್ನ ತಾಯಿ ಸೋನಿಯಾ ಗಾಂಧಿಗೆ ಗಿಫ್ಟ್ ಆಗಿ ನೀಡಿದ್ದರು. ಇಂದು ರಾಹುಲ್ ಗಾಂಧಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ, ಸೋನಿಯಾ ಗಾಂಧಿ ತಮ್ಮ ಬ್ಯಾಗ್​ನಲ್ಲಿ ನೂರಿಯನ್ನು ಕೂರಿಸಿ ಹೊತ್ತುಕೊಂಡು ಹೋಗುತ್ತಿರುವ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಉಡುಗೊರೆಯಾಗಿ ನೀಡಿದ್ದ ನೂರಿ ಈಗ ಅಮ್ಮನ ಫೆವರೆಟ್ ಡಾಗ್ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುದ್ದು ನಾಯಿಗಳ ಜೊತೆ ಟೈಮ್ ಸ್ಪೆಂಡ್ ಮಾಡಿದ MS ಧೋನಿ, ಝೀವಾ.. ಬರ್ತ್​​ಡೇ ಯಾವಾಗ?

ತಾಯಿಗಾಗಿ ಗೋವಾದಿಂದ ನೂರಿಯನ್ನು ತಂದಿದ್ದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಕಳೆದ ವರ್ಷ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಗೋವಾ ಪ್ರವಾಸ ಕೈಗೊಂಡಿದ್ದರ ಬಗ್ಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಅಲ್ಲಿ ಅವರು ಒಂದು ಗೋವಾ ಪರಿವಾರದೊಂದಿಗೆ ಭೇಟಿಯಾಗಿದ್ದರು. ಅವರು ರಾಹುಲ್ ಗಾಂಧಿಗೆ ಪ್ರೀತಿಯಿಂದ ಈ ನೂರಿಯನ್ನು ನೀಡಿದ್ದರು. ಆ ನೂರಿಯನ್ನು ದೆಹಲಿಗೆ ತೆಗೆದುಕೊಂಡು ಹೋದ ರಾಹುಲ್ ಗಾಂಧಿ, ತಾಯಿಗೆ ಸರ್​ಪ್ರೈಸ್ ಗಿಫ್ಟ್​ ಆಗಿ ನೀಡಿದ್ದರು. ಇನ್ನು ಒಂದು ಅಚ್ಚರಿಯಂದ್ರೆ ರಾಹುಲ್ ಗಾಂಧಿ ನೂರಿಗೆ ಮೆಟ್ರೋ ಸವಾರಿಯನ್ನು ಕೂಡ ಮಾಡಿಸಿದ್ದರು.

ಇದನ್ನೂ ಓದಿ: ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಗ್ರಾಮ ಭಾರತದಲ್ಲಿದೆ; ಈ ಹಳ್ಳಿ ಜನ ಬ್ಯಾಂಕ್​ನಲ್ಲಿಟ್ಟ ಹಣ ಎಷ್ಟು ಸಾವಿರ ಕೋಟಿ ಗೊತ್ತಾ?

ನೂರಿ ಎಂದು ಹೆಸರಿಟ್ಟಿದ್ದಕ್ಕೆ ನೂರೆಂಟು ವಿವಾದ
ರಾಹುಲ್ ಗಾಂಧಿ ಒಂದು ಕಡೆ ತಮ್ಮ ತಾಯಿಗೆ ಶ್ವಾನದ ಮರಿಯನ್ನು ಗಿಫ್ಟ್ ಆಗಿ ನೀಡುತ್ತಿದ್ದಂತೆ ಅತ್ತ ಅಸಾದುದ್ಧೀನ್ ಓವೈಸ್ ಪಾರ್ಟಿಯ ಒಬ್ಬ ನಾಯಕ, ಈ ಶ್ವಾನದ ಹೆಸರಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಈ ಹೆಸರು (ನೂರಿ) ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿದೆ ಎಂದು ಎಐಎಎಂಐನ ನಾಯಕ ಮೊಹಮದ್ ಫರ್ಹಾತ್ ಕೋರ್ಟ್​ ಮೆಟ್ಟಿಲೇರಿದ್ದರು.

ಕೋರ್ಟ್ ಮೆಟ್ಟಿಲೇರಿದ್ದ ಫರ್ಹಾತ್ ರಾಹುಲ್ ಗಾಂಧಿಗೆ ಶ್ವಾನದ ಹೆಸರನ್ನು ಬದಲಿಸಬೇಕು ಹಾಗೂ ಆ ಹೆಸರು ಇಟ್ಟಿದ್ದಕ್ಕೆ ಕ್ಷಮೆ ಕೋರಬೇಕು ಎಂದು ಹೇಳಿದ್ರು. ಆದ್ರೆ ರಾಹುಲ್ ಗಾಂಧಿ ಹಾಗೆ ಮಾಡಲಿಲ್ಲ. ಫರ್ಹಾತ್ ಪರ ವಕೀಲರು ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿಯ ಈ ನಡೆ ನಮ್ಮ ಹೆಣ್ಣು ಮಕ್ಕಳ, ಹಿರಿಯರ ಹಾಗೂ ಮೊಹಮ್ಮದ್ ಪೈಗಂಬರರಿಗೆ ಅವಮಾನ ಮಾಡಿದಂತಿದೆ. ಇಸ್ಲಾಂ ಧರ್ಮ ಅಸ್ತಿತ್ವಕ್ಕೆ ಬಂದಾಗಿನಿಂದ ಯಾವ ಪ್ರಾಣಿಗೂ ಕೂಡ ನೂರಿ ಎಂದು ಹೆಸರಿಟ್ಟಿಲ್ಲ ಎಂದು ವಾದಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಯ ನಾಯಿ ಮರಿ ಜೊತೆ ಸೋನಿಯಾ ಗಾಂಧಿ ಸಖತ್ ಪೋಸ್‌.. ಫೋಟೋ ವೈರಲ್‌! ಏನಿದರ ಸ್ಪೆಷಲ್‌?

https://newsfirstlive.com/wp-content/uploads/2024/08/Sonia-Gandhi-With-Dog.jpg

Load More