newsfirstkannada.com

ಅಬ್ಬಾ.. ಬಾಲ್ಟಿಮೋರ್‌ ಅತಿ ಉದ್ದದ ಸೇತುವೆಗೆ ಸಿಂಗಾಪುರದ ಹಡಗು ಡಿಕ್ಕಿ; ಭಯಾನಕ ದೃಶ್ಯ ಸೆರೆ!

Share :

Published March 26, 2024 at 2:27pm

  ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿರುವ ಅತಿ ಉದ್ದನೆಯ ಸೇತುವೆ

  ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಗುದ್ದಿರುವ ಸರಕು ಸಾಗಾಣೆಯ ಹಡಗು

  ಮುಂಜಾನೆ ಸೇತುವೆಗೆ ಅಪ್ಪಳಿಸಿದ ಸಿಂಗಾಪುರ ಧ್ವಜದ ಕಂಟೈನರ್ ಹಡಗು

ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಭಯಾನಕವಾದ ಹಡಗು ದುರಂತ ಸಂಭವಿಸಿದೆ. ಬಾಲ್ಟಿಮೋರ್‌ನ ಸೇತುವ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಹಡಗು ಗುದ್ದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿರುವ ಅತಿ ಉದ್ದನೆಯ ಸೇತುವೆ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್‌ ಆಗಿದೆ. ಇಂದು ಮುಂಜಾನೆ ಸಿಂಗಾಪುರ ಧ್ವಜದ ಕಂಟೈನರ್ ಹಡಗು ಬಂದು ಅಪ್ಪಳಿಸಿದ್ದು, ಕೆಲವೇ ಕ್ಷಣದಲ್ಲಿ ಸೇತುವೆ ಸಂಪೂರ್ಣ ಕುಸಿದು ಬಿದ್ದಿದೆ. ಬಾಲ್ಟಿಮೋರ್‌ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಸರಕು ಸಾಗಾಣೆಯ ಹಡಗು ಗುದ್ದಿರೋ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಗಿನ ಜಾವ 1.30ರ ಸಮಯದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಬರೀ 4 ರಿಂದ 5 ನಿಮಿಷಗಳ ಫೋಟೋಶೂಟ್​! ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದೆ ಈ ಮಗು!

ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯು ಬಾಲ್ಟಿಮೋರ್‌ ನಗರದ ಅವಿಭಾಜ್ಯ ಅಂಗವಾಗಿತ್ತು. ಈ ಸೇತುವೆ ಮುಖಾಂತರ ಸಾವಿರಾರು ವಾಹನಗಳು ಸಂಚರಿಸುತ್ತಾ ಇದ್ದವು. ಸೇತುವೆ ಕುಸಿದು ಬಿದ್ದಾಗ ಎಷ್ಟು ವಾಹನಗಳು ಇದ್ದವು ಅನ್ನೋ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಮೆರಿಕಾದ ಕಡಲ ರಕ್ಷಣಾ ಪಡೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 5 ಮಂದಿ ಸಾವನ್ನಪ್ಪಿದ್ದು, ಹಲವು ಕಾರುಗಳು ಸೇತುವೆ ಜೊತೆ ಮುಳುಗಡೆ ಆಗಿರುವ ಶಂಕೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಬಾಲ್ಟಿಮೋರ್‌ ಅತಿ ಉದ್ದದ ಸೇತುವೆಗೆ ಸಿಂಗಾಪುರದ ಹಡಗು ಡಿಕ್ಕಿ; ಭಯಾನಕ ದೃಶ್ಯ ಸೆರೆ!

https://newsfirstlive.com/wp-content/uploads/2024/03/Baltimore-Bridge.jpg

Load More