newsfirstkannada.com

ಬರೀ 4 ರಿಂದ 5 ನಿಮಿಷಗಳ ಫೋಟೋಶೂಟ್​! ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದೆ ಈ ಮಗು!

Share :

Published March 23, 2024 at 6:10pm

Update March 24, 2024 at 11:37am

  ಫೋಟೋಶೂಟ್​ ಮೂಲಕ ಹಣ ಸಂಪಾದಿಸುತ್ತಿರುವ ಕಂದಮ್ಮ

  ಮಾಡೆಲಿಂಗ್​​ನಲ್ಲಿ ಗುರುತಿಸಿಕೊಂಡಿರುವ ಮುದ್ದಾದ ಹೆಣ್ಣು ಮಗು

  ಮಗುವಿನ ಫೋಟೋಶೂಟ್​ನಿಂದ ಹ್ಯಾಪಿಯಾಗಿರುವ ತಾಯಿ

ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಸಾಮಾಜಿಕ ಜಾಲತಾಣ ಬಂದ ಮೇಲಂತೂ ಹಣ ಸಂಪಾದಿಸುವ ದಾರಿ ಬಾರಿ ಸುಲಭವಾಗಿದೆ. ಅದರಲ್ಲೂ ಸೆಲೆಬ್ರಿಟಿಗಳಂತೂ ಎಣಿಕೆ ಇಲ್ಲದಷ್ಟು ಸಂಪಾದಿಸುತ್ತಿದ್ದಾರೆ. ಅತ್ತ ಸಾಮಾನ್ಯನು ಕೂಡ ಕಡಿಮೆ ಏನಿಲ್ಲ. ಇದರ ಜೊತೆಗೆ ಮಕ್ಕಳೂ ಕೂಡ ಸಂಪಾದಿಸುತ್ತಿದ್ದಾರೆ. ಆದರೆ ಇಲ್ಲೊಂದು ಮಗು ಫೋಟೋಶೂಟ್​ನಿಂದ ತಿಂಗಳಿಗೆ ಎಷ್ಟು ಸಂಪಾದಿಸುತ್ತಿದೆ ಗೊತ್ತಾ? ಈ ಸ್ಟೋರಿ ಓದಿ.

MJ ಎಂಬ 8 ತಿಂಗಳ ಕಂದಮ್ಮ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದೆ ಕಣ್ರಿ. ಬರೀ 4 ರಿಂದ 5 ನಿಮಿಷ ಫೋಟೋಶೂಟ್​ ಮೂಲಕ ಅಷ್ಟೊಂದು ದೊಡ್ಡ ಮೊತ್ತದಲ್ಲಿ ದುಡಿತಾ ಇದೆ ಅಂದ್ರೆ ಇಂದು ನಂಬಲು ಅಸಾಧ್ಯವಾದ ವಿಚಾರ.

ಅಮೆರಿಕ ಮೂಲಕ ಎಂಜೆ ಮಾಡೆಲಿಂಗ್​ನಿಂದ ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದೆ. ವಿವಿಧ ಬ್ರಾಂಡ್​ಗಳಿಗೆ ಮಾಡೆಲ್​ ಆಗಿ ಈ ಮಗು ಗುರುತಿಸಿಕೊಂಡಿದೆ. ಎಂಜೆ 5 ತಿಂಗಳ ಮಗುವಿದ್ದಾಗಿನಿಂದ ಸಂಪಾದಿಸುತ್ತಾ ಬಂದಿದ್ದಲ್ಲದೆ, ಪೋಷಕರಿಗೆ ಆರ್ಥಿಕವಾಗಿ ಬೆಂಬಲವಾಗಿ ನಿಂತಿದೆ.

ಇದನ್ನೂ ಓದಿ: Sonu Gowda: ಹುಟ್ಟುಹಬ್ಬದ ಸಂಭ್ರಮದಲ್ಲಿ ಸೋನು ಗೌಡ.. ಅಕ್ಕನ ಫೋಟೋ ಹಂಚಿಕೊಂಡ ತಂಗಿ

ಕಳೆದ ವರ್ಷ ಜುಲೈ 5ರಂದು ಸಾರಾ ಈ ಪುಟ್ಟ ಮಗುವಿಗೆ ಜನ್ಮ ನೀಡಿದರು. ಸದ್ಯ ವಿವಿಧ ಬ್ರಾಂಡ್​ಗಳ ಮಾಡೆಲ್​ ಆಗಿ ಎಂಜಿ ಗುರುತಿಸಿಕೊಂಡಿದೆ. ಅಚ್ಚರಿ ಸಂಗತಿ ಎಂದರೆ ಮಗು ಇಲ್ಲಿಯವರೆಗೆ ಸುಮಾರು ಮೂರುವರೆ ಲಕ್ಷಕ್ಕೂ ಅಧಿಕ ಹಣ ಸಂಪಾದಿಸಿದೆಯಂತೆ.

ತಾಯಿ ಸಾರಾಗೆ ತನ್ನ ಮಗು ಮಾಡೆಲಿಂಗ್​ ಮಾಡುತ್ತಿರೋದು ತುಂಬಾನೆ ಸಂತೋಷವಾಗಿದೆ. ದೊಡ್ಡವಳಾದ ಮೇಲೆ ಆಸಕ್ತಿ ಇದ್ದರೆ ಮಾಡೆಲಿಂಗ್​ ಕ್ಷೇತ್ರಕ್ಕೆ ಸೇರಿಸುತ್ತೇನೆ ಎಂದು ತಾಯಿ ಸಾರಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೀ 4 ರಿಂದ 5 ನಿಮಿಷಗಳ ಫೋಟೋಶೂಟ್​! ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದೆ ಈ ಮಗು!

https://newsfirstlive.com/wp-content/uploads/2024/03/MJ.jpg

Load More