newsfirstkannada.com

ರಾಮ ಲಲ್ಲಾ ಪ್ರತಿಷ್ಠಾಪನೆಗೂ ಮುನ್ನ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಮಹತ್ವದ ಬದಲಾವಣೆ; ಏನದು?

Share :

Published January 17, 2024 at 8:42pm

  ಜನವರಿ 22ರಂದು ಆಗಮಿಸುವ ಕಾರ್ಯಕ್ರಮದಲ್ಲಿ ಮಹತ್ವದ ಬದಲಾವಣೆ

  ಅಯೋಧ್ಯೆಗೆ ಯಜಮಾನರಾಗಿ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ

  ಜನವರಿ 22ರ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಸರಯೂ ನದಿಯಲ್ಲಿ ಸ್ನಾನ

ರಾಮಜನ್ಮಭೂಮಿ ಅಯೋಧ್ಯೆ ಶ್ರೀರಾಮ ನಾಮದಲ್ಲಿ ಮುಳುಗಿ ಹೋಗ್ತಿದೆ. ಭವ್ಯ ರಾಮಮಂದಿರದ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದ್ದು, ರಾಮ ಲಲ್ಲಾ ವಿಗ್ರಹ ಈಗಾಗಲೇ ರಾಮನೂರು ಪ್ರವೇಶ ಮಾಡಿದೆ. ಜನವರಿ 22ರ ಶುಭ ಮುಹೂರ್ತಕ್ಕೆ ಕೋಟ್ಯಾನುಕೋಟಿ ರಾಮನ ಭಕ್ತರು ಕಾಯುತ್ತಿದ್ದಾರೆ.

ರಾಮಮಂದಿರದ ಲೋಕಾರ್ಪಣೆಗೆ ದೈವಿಕ ನಗರಿ ಅಯೋಧ್ಯೆ ಸಂಪೂರ್ಣವಾಗಿ ಸಜ್ಜಾಗುತ್ತಿದೆ. ರಾಮ ಲಲ್ಲಾ ಮೂರ್ತಿಯನ್ನು ಯಾವುದೇ ಅಡೆತಡೆ ಎದುರಾಗದಂತೆ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ರಾಮಮಂದಿರದ ಲೋಕಾರ್ಪಣೆಯ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ 11 ದಿನದ ಅನುಷ್ಠಾನ ಕೈಗೊಂಡಿದ್ದಾರೆ. ವಿವಿಧ ಐತಿಹಾಸಿಕ ದೇವಾಲಯಗಳಿಗೆ ಭೇಟಿ ಕೊಟ್ಟು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ.

ಒಂದು ದಿನ ಮುಂಚೆಯೇ ಅಯೋಧ್ಯೆಗೆ ‘ನಮೋ’
ಅಯೋಧ್ಯೆ ರಾಮಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22ರ ಬೆಳಗ್ಗೆ 11 ಗಂಟೆಗೆ ಆಗಮಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಈಗ ಜನವರಿ 21 ರಂದೇ ಅಯೋಧ್ಯೆಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಎನ್ನಲಾಗಿದೆ. ಉತ್ತರ ಪ್ರದೇಶ, ದೆಹಲಿ, ಅಯೋಧ್ಯೆಯಲ್ಲಿ ದಟ್ಟ ಮಂಜು ಆವರಿಸುತ್ತಿರುವ ಹಿನ್ನೆಲೆಯಲ್ಲಿ ವಿಮಾನಯಾನಕ್ಕೆ ಅಡಚಣೆ ಎದುರಾಗಬಹುದು. ಹೀಗಾಗಿ ಒಂದು ದಿನ ಮುಂಚಿತವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಬಂದು ವಾಸ್ತವ್ಯಕ್ಕೆ ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ; ಅಯೋಧ್ಯೆ ತಲುಪಿದ ಪ್ರಭು ಶ್ರೀರಾಮ ಲಲ್ಲಾ ವಿಗ್ರಹ!

ಜನವರಿ 21ರಂದು ಅಯೋಧ್ಯೆಗೆ ಆಗಮಿಸುವ ಪ್ರಧಾನಿ ಮೋದಿ, ಜನವರಿ 22ರ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಸರಯೂ ನದಿಯಲ್ಲಿ ಸ್ನಾನ ಮಾಡಲಿದ್ದಾರೆ. ಬಳಿಕ ಕಳಸದಲ್ಲಿ ಸರಯೂ ನದಿ ನೀರು ತೆಗೆದುಕೊಂಡು ಮಂದಿರದ ಗರ್ಭಗುಡಿಯನ್ನು ಪ್ರವೇಶಿಸಲಿದ್ದಾರೆ. ಬಳಿಕ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆಯ ಮುಖ್ಯ ಯಜಮಾನರಾಗಿ ಮೋದಿ ಭಾಗಿಯಾಗಲಿದ್ದಾರೆ.

ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಹೆಚ್ಚಿನ ಗಣ್ಯರ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಹೆಚ್ಚಿನ ಕಮ್ಯಾಂಡೋಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಯುಪಿ ಪೊಲೀಸ್ ಇಲಾಖೆಯ ಪೊಲೀಸರಿಗೆ SPG ಮಾದರಿಯ ತರಬೇತಿ ನೀಡಿ ಅಯೋಧ್ಯೆಯಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ ಲಲ್ಲಾ ಪ್ರತಿಷ್ಠಾಪನೆಗೂ ಮುನ್ನ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಮಹತ್ವದ ಬದಲಾವಣೆ; ಏನದು?

https://newsfirstlive.com/wp-content/uploads/2024/01/Ayodhya-Pm-Modi-8.jpg

Load More