ಬರ್ತ್​​ಡೇ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದಾಗ ಭೀಕರ ಅಪಘಾತ; ತಾಯಿ ಮಗು ಸಾವು

author-image
Ganesh
Updated On
ಬರ್ತ್​​ಡೇ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದಾಗ ಭೀಕರ ಅಪಘಾತ; ತಾಯಿ ಮಗು ಸಾವು
Advertisment
  • ಅಪಘಾತದಿಂದ ಐದು ಗಂಟೆಗಳ ಕಾಲ ಟ್ರಾಫಿಕ್ ಜಾಮ್
  • ಪತಿ ಮತ್ತು ಪುತ್ರನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
  • ದುರ್ಘಟನೆ ಬಗ್ಗೆ ಪೊಲೀಸರು ನೀಡಿದ ಮಾಹಿತಿ ಏನು?

ಅಮೆರಿಕಾದ ಒರೆಗಾನ್​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತ ಮೂಲದ ಆರು ವರ್ಷದ ಮಗು ಹಾಗೂ ತಾಯಿ ಸಾವನ್ನಪ್ಪಿದ್ದಾರೆ. ಸಿಗ್ನಲ್​​ ಕಾರು ನಿಲ್ಲಿಸುವಂತೆ ಸೂಚಿಸಿದ್ದರೂ ಡ್ರೈವ್ ಮಾಡಿಕೊಂಡು ಹೋದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದುರ್ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾರ್ಚ್​ 30 ರಂದು Clackamas Countyಯಲ್ಲಿ ಈ ಘಟನೆ ನಡೆದಿದೆ. 32 ವರ್ಷದ ಕಕ್ಕೇರಾ ಗೀತಾಂಜಲಿ ಹಾಗೂ ಇವರ ಮಗು ಸಾವನ್ನಪ್ಪಿದೆ. ಪತಿ ನರೇಶ್​ ಬಾಬು ಮತ್ತು ಪುತ್ರ ಗಾಯಗೊಂಡಿದ್ದಾರೆ.

ಇದನ್ನೂ ಓದಿ:RCB ಫ್ಯಾನ್ಸ್​ಗೆ ಸಲಾಂ ಹೊಡೆದ ಎಲ್​ಎಸ್​ಜಿ; ಟ್ವೀಟ್ ಮಾಡಿ ಹೇಳಿದ್ದೇನು ಗೊತ್ತಾ..!

ಗೀತಾಂಜಲಿ ಮತ್ತು ನರೇಶ್​ಬಾಬು ಮೂಲತಃ ಆಂಧ್ರಪ್ರದೇಶದವರು. ಕೊನಕಂಚಿ ಗ್ರಾಮದವರಾಗಿದ್ದು, ಇಬ್ಬರು ಸಾಫ್ಟ್​ವೇರ್ ಇಂಜಿನಿಯರ್ಸ್​ ಆಗಿದ್ದರು. ಅಪಘಾತದಿಂದ ಸುಮಾರು ಐದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗೀತಾಂಜಲಿ ಅವರ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗೀತಾಂಜಲಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೀತಾಂಜಲಿ ಹುಟ್ಟುಹಬ್ಬ ಆಗಿತ್ತು. ಹೀಗಾಗಿ ದೇವಸ್ಥಾನಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಮೃತದೇಹವನ್ನು ತವರಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment