Advertisment

ಲೆಬನಾನ್​​ನಲ್ಲಿ ಪೇಜರ್​​ಗಳ ಸರಣಿ​ ಅನಾಹುತ; 9 ಸಾವು 2800 ಮಂದಿಗೆ ಗಾಯ.. ಪೇಜರ್ ಅಂದ್ರೆ ಏನು..?

author-image
Ganesh
Updated On
ಲೆಬನಾನ್​​ನಲ್ಲಿ ಪೇಜರ್​​ಗಳ ಸರಣಿ​ ಅನಾಹುತ; 9 ಸಾವು 2800 ಮಂದಿಗೆ ಗಾಯ.. ಪೇಜರ್ ಅಂದ್ರೆ ಏನು..?
Advertisment
  • ಗಾಯಗೊಂಡ 2750 ಮಂದಿಯಲ್ಲಿ 200 ಜನರು ಗಂಭೀರ
  • ಪೇಜರ್ ದಾಳಿಗೆ ಇಸ್ರೇಲ್ ಸಂಪೂರ್ಣ ಹೊಣೆ ಎಂದ ಹಿಜ್ಬುಲ್ಲಾ
  • ಯುದ್ಧಪೀಡಿತ ಜಾಗದಲ್ಲಿ ಮತ್ತಷ್ಟು ದ್ವೇಷಾಗ್ನಿ ಭುಗಿಲೇಳೋ ಸಾಧ್ಯತೆ

ಲೆಬನಾನ್, ಸಿರಿಯಾಗಳಲ್ಲಿ ಪೇಜರ್​ಗಳು ಸ್ಫೋಟಗೊಂಡು ಈ ದುರ್ಘಟನೆ ನಡೆದಿದೆ. ಸ್ಫೋಟ ಸುಮಾರು 9 ಮಂದಿಯನ್ನ ಬಲಿ ಪಡೆದಿದೆ. 2,800ಕ್ಕೂ ಹೆಚ್ಚು ಹಿಜ್ಬುಲ್ಲಾ ಸದಸ್ಯರನ್ನ ತೀವ್ರವಾಗಿ ಗಾಯಗೊಳಿಸಿದೆ. ಸಶಸ್ತ್ರ ಪಡೆಯು ತಮ್ಮ ಸದಸ್ಯರ ನಡುವಿನ ಸಂವಹನಕ್ಕಾಗಿ ಬಳಸುವ ಪೇಜರ್ ಸ್ಫೋಟದಿಂದಾಗಿ ವೈದ್ಯರು ಸೇರಿದಂತೆ ಸಾವಿರಾರು ಮಂದಿ ಗಂಭೀರ ಗಾಯಗೊಂಡಿದ್ದಾರೆ.

Advertisment

ಗಾಯಗೊಂಡಿರೋ 2,750 ಮಂದಿಯ ಪೈಕಿ 200 ಮಂದಿಗೆ ತೀವ್ರವಾಗಿ ಗಾಯಗಳಾಗಿದೆ. ಕೆಲವರು ಕೈ.. ಕೈನ ಬೆರಳುಗಳನ್ನ ಕಳೆದುಕೊಂಡಿದ್ರೆ. ಕೆಲವರು ಕಾಲು ಕಳೆದುಕೊಂಡಿದ್ದಾರೆ.. ಹಲವರ ಮುಖ, ಹೊಟ್ಟೆಗಳಿಗೆ ಹಾನಿಯುಂಟಾಗಿದೆ. ಪ್ರತೀ ಒಬ್ಬರ ಮೈ ಮೇಲು ರಕ್ತದ ಗಾಯ, ನರಳಾಟದ ಕೂಗು ಮುಗಿಲು ಮುಟ್ಟಿತ್ತು.. ಗಾಯಾಳುಗಳಲ್ಲಿ ಇರಾನ್ ರಾಯಭಾರಿ ಕೂಡ ಸೇರಿದ್ದಾರೆ.

ಇದನ್ನೂ ಓದಿ:ಪೇಜರ್​ ಎಂದರೇನು? ​ಹಿಜ್ಬುಲ್ಲಾಗಳು 1980 ಹಳೆಯ ಸಾಧನವನ್ನು ಈಗಲೂ ಬಳಸುತ್ತಿರೋದೇಕೆ?

ಹಮಾಸ್‌ನ ಮಿತ್ರ ಪಕ್ಷವಾದ ಹಿಜ್ಬುಲ್ಲಾ, ಪೇಜರ್ ದಾಳಿಗೆ ಇಸ್ರೇಲ್ ಸಂಪೂರ್ಣ ಹೊಣೆಯಾಗಿದೆ ಎಂದು ಆರೋಪಿಸಿದೆ. ನೂರಾರು ಹ್ಯಾಂಡ್‌ಹೆಲ್ಡ್ ಪೇಜರ್‌ಗಳು ಲೆಬನಾನ್‌ನಾದ್ಯಂತ ಮತ್ತು ಸಿರಿಯಾದ ಕೆಲವು ಭಾಗಗಳಲ್ಲಿ ಏಕಕಾಲದಲ್ಲಿ ಸ್ಫೋಟಗೊಂಡಿವೆ. ಜಾಗತಿಕ ಮಾಧ್ಯಮ ಅಸೋಸಿಯೇಟೆಡ್ ಪ್ರೆಸ್‌ನ ಮೂಲಗಳ ಪ್ರಕಾರ, ಪೇಜರ್‌ಗಳ ಲಿಥಿಯಂ ಬ್ಯಾಟರಿಯಿಂದ ಸ್ಫೋಟ ಸಂಭವಿಸಿರಬಹುದು, ಇದು ಅತಿಯಾದ ಶಾಖದಿಂದಾಗಿ ಸಿಡಿಯಿರಬಹುದು ಎನ್ನಲಾಗ್ತಿದೆ.

Advertisment

ಪೇಜರ್ ಸ್ಫೋಟದ ಹಿಂದಿದ್ಯಾ ಇಸ್ರೇಲ್ ಕೈವಾಡ?
ಈ ಸ್ಫೋಟದ ಬಗ್ಗೆ ಹಿಜ್ಬುಲ್ಲಾದಿಂದ ಹೇಳಿಕೆ ರಿಲೀಸ್ ಮಾಡಿದ್ದು, ಇದರಲ್ಲಿ ಇಸ್ರೇಲ್ ಭಾಗಿಯಾಗಿರುವ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ನೇರವಾಗಿ ಇಸ್ರೇಲ್ ಕೈವಾಡವಿದೆ ಎಂದು ಶಂಕಿಸಿರುವ ಹಿಜ್ಬುಲ್ಲಾ, ಪ್ರತೀಕಾರದ ಸೂಚನೆ ನೀಡಿದೆ. ಒಟ್ನಲ್ಲಿ ತಕ್ಕ ಉತ್ತರ ಕೊಡೋದಾಗಿ ಹೇಳಿರೋ ಹಿಜ್ಬುಲ್ಲಾ ಸಂಘಟನೆ ಪ್ರತೀಕಾರದ ಕಿಡಿಕಾರ್ತಿದೆ. ಹೀಗಾಗಿ ಯುದ್ಧಪೀಡಿತ ಜಾಗದಲ್ಲಿ ಮತ್ತಷ್ಟು ರೋಷಾಗ್ನಿ, ದ್ವೇಷಾಗ್ನಿ ಭುಗಿಲೇಳೋ ಸಾಧ್ಯತೆ ಇದೆ.

ಇದನ್ನೂ ಓದಿ:ಗವರ್ನರ್‌ಗೆ ಸಿಎಂ ಠಕ್ಕರ್‌; ಕುಲಪತಿಗಳ ನೇಮಕ ಮಾಡುವ ಅಧಿಕಾರವನ್ನೇ ಕಸಿದುಕೊಂಡ ಸಿದ್ದರಾಮಯ್ಯ..!

ಪೇಜರ್ ಅಂದರೆ ಏನು..?
ಪೇಜರ್​​ (Pager) ಅನ್ನೋದು ಸಣ್ಣದಾದ ಪೋರ್ಟಬಲ್ ಎಲೆಕ್ಟ್ರಿಕ್ ಡಿವೈಸ್ ಆಗಿದೆ. ಇದನ್ನು ಬೀಪರ್ (beeper) ಎಂದು ಕೂಡ ಕರೆಯಲಾಗುತ್ತದೆ. ಕೆಲವು ಎಚ್ಚರಿಕೆ ಹಾಗೂ ಸಣ್ಣ ಮೆಸೇಜ್​ಗಳನ್ನು ಕಳುಹಿಸಲು ಅನುಕೂಲ ಆಗುವ ರೀತಿಯಲ್ಲಿ ಅದನ್ನು ಡಿಸೈನ್ ಮಾಡಲಾಗಿದೆ. ಇದರ ಮೂಲ ಉದ್ದೇಶ ಮೆಸೇಜ್ ಸ್ವೀಕರಿಸುವುದು ಹಾಗೂ ಕಳುಹಿಸುವುದೇ ಇದರ ಉದ್ದೇಶ. ಬಹುತೇಕ ಪೇಜರ್​​ಗಳು ತಮ್ಮ ಮೂಲ ಬೇಸ್​​ ಸ್ಟೇಷನ್​ನಿಂದ ರೇಡಿಯೋ ಪ್ರಿಕ್ವೆನ್ಸಿ ಮೂಲಕ ಕರೆಯನ್ನು ಸ್ವೀಕಾರ ಆಗುತ್ತದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment