newsfirstkannada.com

×

ಪೇಜರ್​ ಎಂದರೇನು? ​ಹಿಜ್ಬುಲ್ಲಾಗಳು 1980ರ ಹಳೆಯ ಸಾಧನವನ್ನು ಈಗಲೂ ಬಳಸುತ್ತಿರೋದೇಕೆ?

Share :

Published September 18, 2024 at 7:51am

Update September 18, 2024 at 8:11am

    ಅಚ್ಚರಿ ಮೂಡಿಸಿದ ಹಿಜ್ಬುಲ್ಲಾಗಳ ಪೇಜರ್​ ಬಳಕೆ

    ಹಳೆಯ ಸಾಧನವನ್ನು ಈಗಲೂ ಬಳಸುತ್ತಿರೊದೇಕೆ?

    ಲೆಬನಾನ್​ನಲ್ಲಿ ಪೇಜರ್​​ಗಳ ಸ್ಫೋಟ? ಯಾರ ಕೈವಾಡ

ಲೆಬನಾನ್​​ನಲ್ಲಿ ಹಿಜ್ಬುಲ್ಲಾಗಳ ಮೇಲೆ ರಹಸ್ಯ ದಾಳಿ ನಡೆದಿದೆ. ಉಗ್ರರು ಸಂವಹನಕ್ಕಾಗಿ ಬಳಸುತ್ತಿದ್ದ ಪೇಜರ್‌ ಸಾಧನವೇ ಸ್ಫೋಟಗೊಂಡು ಸಾವು ನೋವು ಸಂಭವಿಸಿದೆ. ಘಟನೆಯಲ್ಲಿ ಹತ್ತಾರು ಮಂದಿ ಸಾವನ್ನಪ್ಪಿದ್ರೆ, 2 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೀಗ ಹಳೆಯ ಸಾಧನ ಪೇಜರ್​ ಬಗ್ಗೆ ಗೊತ್ತಿಲ್ಲದ ಕೆಲವು ಸಂಗತಿಯನ್ನು ನಾವಿಲ್ಲಿ ಬಿಚ್ಚಿಟ್ಟಿದ್ದೇವೆ. ಹಿಜ್ಬುಲ್ಲಾಗಳು ಈಗಲೂ ಈ ಸಾಧನವನ್ನು ಬಳಸುತ್ತಿರುವುದೇಕೆ? ಎಂಬ ಕುತೂಹಲಕಾರ ಮಾಹಿತಿ ಇಲ್ಲಿದೆ.

ಪೇಜರ್​ ಅಥವಾ ಬೀಪರ್​. ಇದೊಂದು ಸಣ್ಣ ಬ್ಯಾಟರಿ ಚಾಲಿತ ಸಾಧನ. ಇದು ಧ್ವನಿ ಅಥವಾ ಕಂಪನದ ಮೂಲಕ ಬಳಕೆದಾರರನ್ನು ಎಚ್ಚರಿಸುವ ಸಾಧನವಾಗಿದೆ. ಪೇಜರ್​ ಸಂಖ್ಯಾ ಸಂದೇಶ ಮಾತ್ರವಲ್ಲದೆ, ಅಲ್ಫಾನ್ಯೂಮರಿಕ್​​ ಪಠ್ಯ ಸಂದೇಶವನ್ನು ಪ್ರದರ್ಶಿಸುತ್ತದೆ.

1980ರಿಂದ 1990ರವರೆಗೆ ಪೇಜರ್​ ಬಳಕೆದಾರರ ಸಂಖ್ಯೆ ಹೆಚ್ಚಾಗಿತ್ತು. 2000ರ ವೇಳೆ ಫೋನ್​ಗಳು ಬಂದ ಬಳಿಕ ಪೇಜರ್​ ಬಳಕೆ ಕಡಿಮೆಯಾಯಿತು. ಆದರೀಗ ಲೆಬನಾನ್​ನಲ್ಲಿ ಹಿಜ್ಬುಲ್ಲಾಗಳು ಈಗಲೂ ಪೇಜರ್​ಗಳನ್ನು ಬಳಸುತ್ತಿದ್ದಾರೆ ಎಂದು ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ: JIO: ಸಖತ್ತಾಗಿದೆ ಈ ಪ್ರಿಪೇಯ್ಡ್​​ ಪ್ಲಾನ್​.. 252GB ಡೇಟಾ, ಮತ್ತು 84 ದಿನಗಳ ಉಚಿತ ನೆಟ್​ಫ್ಲಿಕ್ಸ್​​ ನೋಡುವ ಅವಕಾಶ

ಅಂದು ಪೇಜರ್​​​ಗಳನ್ನು ಆರೋಗ್ಯ, ತುರ್ತು ಸೇವೆ, ಪರ್ತಕರ್ತರು ವ್ಯಾಪಕವಾಗಿ ಬಳಸುತ್ತಿದ್ದರು. ಸೆಲ್​​ ನೆಟ್​​ವರ್ಕ್​ಗಳು ವಿಫಲವಾದ ಸಮಯದಲ್ಲಿ ಈ ಪೇಜರ್​ಗಳು ವಿಶ್ವಾಸಾರ್ಹವಾಗಿದ್ದವು. ಇದನ್ನು ಸಂವಹನ ನಡೆಸಲು ವಿನ್ಯಾಸಗೊಳಿಸಲಾಗಿದೆ. ಪ್ರಮುಖ ಸಂದೇಶವನ್ನು ನೀಡುವುದರ ಜೊತೆಗೆ ಎಚ್ಚರಿಕೆ ಸಂದೇಶವನ್ನು ರವಾನಿಸಲು ಯೋಗ್ಯವಾಗಿತ್ತು.

ಪೇಜರ್​​ಗಳ ಗೌಪ್ಯ ವೈಶಿಷ್ಟ್ಯಗಳು

ಇದರಲ್ಲಿ ಜಿಪಿಎಸ್​ ಅಥವಾ ಬ್ಲೂಟೂತ್ ಆಯ್ಕೆ ಇಲ್ಲ. ಗ್ರಿಡ್​ ಮೂಲಕ ಸಂದೇಶ ಕಳುಹಿಸಲು ಯೋಗ್ಯವಾಗಿದೆ. ಫೋನ್​ ಮೂಲಕ ಅನಿಯಮಿತ ಕರೆಯನ್ನು ಸ್ವೀಕರಿಸಬಹುದು. ಆದರೆ ಪೇಜರ್​ನಲ್ಲಿ ಹಾಗಗಲ್ಲ.

ಇದನ್ನೂ ಓದಿ: ಹೆಣ್ಣು ಮಕ್ಕಳಿಂದ ಹೆಚ್ಚು ಖರ್ಚು, ಅವಿವಾಹಿತರಿಗೆ ಶುಭಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

ಸೆಲ್​ಫೋನ್​​ಗಳು ನೆಟ್​ವರ್ಕ್​ ಮೂಲಕ ಕಾರ್ಯನಿರ್ವಹಿಸುತ್ತದೆ. ನಿರ್ದಿಷ್ಟ ಸ್ಥಳಗಳಲ್ಲಿ ಬಳಸಬಹುದು. ಆದರೆ ಪೇಜರ್​ ಯಾವ ಸ್ಥಳದಲ್ಲಾದರೂ ಬಳಸಲು ಯೋಗ್ಯವಾದ ಸಾಧನವಾಗಿದೆ.

ಹಿಜ್ಬುಲ್ಲಾಗಳು ಯಾಕೆ ಪೇಜರ್​ ಬಳಸುತ್ತಾರೆ?

ಹಿಜ್ಬುಲ್ಲಾಗಳು ಇಸ್ರೇಲಿ ಟ್ರ್ಯಾಕಿಂಗ್​​ ಪರಿಶೀಲಿಸಲು ಮತ್ತು ತಪ್ಪಿಸಿಕೊಳ್ಳಲು ಹಳೆಯ ಪೇಜರ್​ ಬಳಸುತ್ತಿದ್ದಾರೆ. ಇದರಲ್ಲಿ ಅಧುನಿಕ ವೈಶಿಷ್ಟ್ಯಗಳಿಲ್ಲದಿರುವುದೇ ಅವರಿಗೆ ದೊಡ್ಡ ಲಾಭ.

ಪೇಜರ್​ ಸ್ಫೋಟವಾಗುತ್ತಾ?

ಪೇಜರ್​ ಚಿಕ್ಕ ಬ್ಯಾಟರಿಯಿಂದ ಕೆಲಸ ಮಾಡುತ್ತಿದೆ. ಇದರಲ್ಲಿ ಲಿಥಿಯಂ ಬ್ಯಾಟರಿ ಅಳವಡಿಸಬಹುದಾಗಿದೆ. ಅತಿಯಾಗಿ ಬಿಸಿಯಾದಾಗ ಧೂಮಪಾನ ಕೂಡ ಇದರಿಂದ ಮಾಡಬಹುದು ಎಂದು ಹೇಳುತ್ತಾರೆ.

ಇನ್ನು ಲಿಥಿಯಂ ಬ್ಯಾಟರಿಯನ್ನು ಸೆಲ್​ಫೋನ್​, ಲ್ಯಾಪ್​ಟಾಪ್​ನಿಂದ ಹಿಡಿದು ಎಲೆಕ್ಟ್ರಿಕ್​ ಕಾರುಗಳವರೆಗೂ ಬಳಸಲಾಗುತ್ತದೆ. ಲಿಥಿಯಂ ಬ್ಯಾಟರಿಯು 590ಸಿವರೆಗೆ ಸುಡುತ್ತದೆ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೇಜರ್​ ಎಂದರೇನು? ​ಹಿಜ್ಬುಲ್ಲಾಗಳು 1980ರ ಹಳೆಯ ಸಾಧನವನ್ನು ಈಗಲೂ ಬಳಸುತ್ತಿರೋದೇಕೆ?

https://newsfirstlive.com/wp-content/uploads/2024/09/Pagers.jpg

Load More