newsfirstkannada.com

ಹೃದಯವನ್ನ ಬ್ಯಾಗ್​ನಲ್ಲಿಟ್ಟುಕೊಂಡಿದ್ದಾರೆ ಬೆಂಗಳೂರಿನ ಈ ವ್ಯಕ್ತಿ! ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ 1 ಕೋಟಿ

Share :

Published March 31, 2024 at 2:11pm

Update March 31, 2024 at 2:20pm

  ಹೃದಯಘಾತದಿಂದ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಮರುಜನ್ಮ

  ಕೃತಕ ಹೃದಯವನ್ನ ಬ್ಯಾಗ್​ನಲ್ಲಿಟ್ಟುಕೊಂಡು ಓಡಾಡ್ತಾರೆ ಬೆಂಗಳೂರಿನ ವ್ಯಕ್ತಿ

  ದುರ್ಬಲವಾಗಿರುವ ಹೃದಯ ತಗೆದು ಕೃತಕ ಹೃದಯ ಜೋಡಿಸಿದ ಡಾಕ್ಟರ್​ ಅಶ್ವಿನಿ

ಬೆಂಗಳೂರು: ಹೃದಯಘಾತದಿಂದ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಕೃತಕ ಹೃದಯವನ್ನ ಅಳವಡಿಸಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಇದೇ ಮೊದಲ ಬಾರಿಗೆ ರಾಜಧಾನಿಯ ಖಾಸಗಿ ಆಸ್ಪತ್ರೆ ವೈದ್ಯರು ಕೃತಕ ಹೃದಯ ಅಳವಡಿಕೆ ಮೂಲಕ ಯಶಸ್ವಿಯಾಗಿದ್ದಾರೆ. ಆ ಮೂಲಕ ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಕೃತಕ ಹೃದಯ ಅಳವಡಿಸಿ ಮರು ಜನ್ಮ ನೀಡಿದ್ದಾರೆ.

ಅಂದಹಾಗೆಯೇ ಇದು ರಾಜ್ಯದ ಮೊದಲ 3rd ಜನೆರೇಶನ್ ಎಲ್ ಬಿ ಯಶಸ್ವಿ ಕೃತಕ ಹೃದಯ ಕಸಿ ಚಿಕಿತ್ಸೆ. ಖ್ಯಾತ ಹೃದಯ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಅಶ್ವಿನಿ ಕುಮಾರ್ ತಂಡ ವ್ಯಕ್ತಿಗೆ ಕೃತಕ ಹೃದಯ ಅಳವಡಿಸಿಗೆ ಯಶಸ್ವಿಯಾಗಿದ್ದಾರೆ. ವ್ಯಕ್ತಿಯ ದುರ್ಬಲವಾಗಿರುವ ಹೃದಯ ತಗೆದು ಕೃತಕ ಹೃದಯ ಅಳವಡಿಸಿದ್ದಾರೆ. ಇದಕ್ಕಾಗಿ 1 ಕೋಟಿ 10 ಲಕ್ಷ ಖರ್ಚು ಮಾಡಲಾಗಿದೆ.

ಇದನ್ನೂ ಓದಿ: ಪತಿಯನ್ನು ಕೊಂದರೆ 50 ಸಾವಿರ ರೂಪಾಯಿ ಬಹುಮಾನ! ಹೆಂಡತಿಯ ವಾಟ್ಸ್​ಆ್ಯಪ್ ಸ್ಟೇಟಸ್​ ನೋಡಿ ಗಂಡ ಶಾಕ್​

ಅಂದಹಾಗೆಯೇ, ಕೃತಕ ಮಷಿನ್ ಮೂಲಕ ಹೃದಯಕ್ಕೆ ಈ ಮಷಿನ್ ಬ್ಲೆಡ್ ಪಂಪ್ ಮಾಡುತ್ತೆ. ಬ್ಯಾಗ್‍ನಲ್ಲಿರುವ ಬ್ಯಾಟರಿಗಳು, ಎಲೆಕ್ಟ್ರಿಕ್ ಮೋಟರ್ ಮತ್ತು ಟ್ಯೂಬ್‍ಗಳ ಮೂಲಕ ಗಾಳಿಯನ್ನು ಪಂಪ್ ಮಾಡುತ್ತದೆ. ಅದು ಕೃತಕ ಹೃದಯ ಕೋಣೆಗಳಿಗೆ ಶಕ್ತಿ ನೀಡುತ್ತದೆ, ಈ ಮೂಲಕ ದೇಹದಲ್ಲೆಲ್ಲಾ ರಕ್ತ ಸಂಚಾರಗೊಳ್ಳುತ್ತದೆ. ಈ ಮೂಲಕ ಹೃದಯ ಇಲ್ಲದೆಯೂ ಕೃತಕ ಹೃದಯದ ಮೂಲಕ ಜೀವನ ಪೂರ್ತಿ ಬದುಕ ಸಾಗಿಸುವ ಶಕ್ತಿ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೃದಯವನ್ನ ಬ್ಯಾಗ್​ನಲ್ಲಿಟ್ಟುಕೊಂಡಿದ್ದಾರೆ ಬೆಂಗಳೂರಿನ ಈ ವ್ಯಕ್ತಿ! ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ 1 ಕೋಟಿ

https://newsfirstlive.com/wp-content/uploads/2024/03/Bengaluru-4.jpg

Load More