newsfirstkannada.com

ಆಂಬ್ಯುಲೆನ್ಸ್ ಹಾಗೂ ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ.. ನರ್ಸ್​ಗೆ ಗಂಭೀರ ಗಾಯ, ಚಾಲಕನ ಪರಿಸ್ಥಿತಿ?

Share :

Published March 30, 2024 at 10:21pm

  ಟ್ರಾಕ್ಟರ್​ಗೆ ಡಿಕ್ಕಿ ಹೊಡೆದ ಪರಿಣಾಮ ನಜ್ಜುಗುಜ್ಜಾದ ಆ್ಯಂಬುಲೆನ್ಸ್

  ಆಂಬ್ಯುಲೆನ್ಸ್​ನಲ್ಲಿದ್ದ ನರ್ಸ್ ಗೆ ಗಂಭೀರ ಗಾಯವಾಗಿದೆ

  ತುಮಕೂರು ಕಡೆಗೆ ಹೋಗುತ್ತಿದ್ದಾಗ ಟ್ರ್ಯಾಕ್ಟರ್​ಗೆ ಡಿಕ್ಕಿ

ತುಮಕೂರು: ಆಂಬ್ಯುಲೆನ್ಸ್ ಹಾಗೂ ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ತುಮಕೂರು ತಾಲೂಕಿನ ಬಳಗೆರೆ ಬಳಿಯ ಶ್ರೀಕಂಠಯ್ಯನ ಪಾಳ್ಯದ ಬಳಿ ಅಪಘಾತ ನಡೆದಿದೆ.

ದುರ್ಘಟನೆಯಲ್ಲಿ ಆಂಬ್ಯುಲೆನ್ಸ್ ಸಂಪೂರ್ಣ ಜಖಂಗೊಂಡಿದೆ. ಆಂಬ್ಯುಲೆನ್ಸ್​ನಲ್ಲಿದ್ದ ನರ್ಸ್ ಗೆ ಗಂಭೀರ ಗಾಯವಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ.

ಇದನ್ನೂ ಓದಿ: ನ್ಯೂಟ್ರಲಲ್ಲಿ ಇಟ್ಟು ಚಹಾ ಕುಡಿಯಲು ಹೋದ ಚಾಲಕ.. ತನ್ನಷ್ಟಕ್ಕೇ ಚಲಿಸಿ ಪಲ್ಟಿ ಹೊಡೆದ ಗ್ಯಾಸ್​​ ಟ್ಯಾಂಕರ್

ಆ್ಯಂಬುಲೆನ್ಸ್​ ಹೆಬ್ಬೂರು ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಆ್ಯಂಬುಲೆನ್ಸ್ ನಜ್ಜುಗುಜ್ಜಾಗಿದೆ. ಗಾಯಾಳುವನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹೆಬ್ಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಬ್ಯುಲೆನ್ಸ್ ಹಾಗೂ ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ.. ನರ್ಸ್​ಗೆ ಗಂಭೀರ ಗಾಯ, ಚಾಲಕನ ಪರಿಸ್ಥಿತಿ?

https://newsfirstlive.com/wp-content/uploads/2024/03/Accident-2.jpg

Load More