newsfirstkannada.com

ಭೀಕರ ರಸ್ತೆ ಅಪಘಾತ.. ದುಬೈನಲ್ಲಿ ಮಂಗಳೂರು ಮೂಲದ ಯುವತಿ ದಾರುಣ ಸಾವು

Share :

Published February 23, 2024 at 4:25pm

Update February 23, 2024 at 4:19pm

  ದುಬೈ ಏರ್‌ಪೋರ್ಟ್‌ನ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವಿದಿಶಾ

  ಉಳ್ಳಾಲ ತಾಲೂಕಿನ ಕೋಟೆಕಾರ್‌ನ ಬೀರಿ ಕೆಂಪುಮಣ್ಣು ನಿವಾಸಿ

  ರಾಜೀವಿ ಹಾಗೂ ವಿಠಲ್ ಕುಲಾಲ್ ಅವರ ಏಕೈಕ ಪುತ್ರಿ ನಿಧನ

ಮಂಗಳೂರು: ದುಬೈನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಯುವತಿ‌ ಸಾವನ್ನಪ್ಪಿದ್ದಾರೆ. ಉಳ್ಳಾಲ ತಾಲೂಕಿನ ಕೋಟೆಕಾರ್‌ನ ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ ಮೃತ ದುರ್ದೈವಿ.

ಮಂಗಳೂರು ತಾಲೂಕು ಪಂಚಾಯತ್‌ನ ಮಾಜಿ ಉಪಾಧ್ಯಕ್ಷೆ ರಾಜೀವಿ ಹಾಗೂ ವಿಠಲ್ ಕುಲಾಲ್ ಅವರ ಏಕೈಕ ಪುತ್ರಿ ವಿದಿಶಾ. ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ 28 ವರ್ಷದ ವಿದಿಶಾ, 2019 ರಿಂದ ದುಬೈ ಏರ್‌ಪೋರ್ಟ್‌ನ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ದುರಂತ ನಾಯಕಿ.. 10 ದಿನದ ಹಿಂದೆ ಪಾರಾಗಿದ್ದ ಶಾಸಕಿ ಲಾಸ್ಯ ನಂದಿತಾ 2ನೇ ಅಪಘಾತದಲ್ಲಿ ಸಾವು

ಪ್ರತಿದಿನ ಕಂಪನಿ ಕಾರಿನಲ್ಲೇ ಮನೆಯತ್ತ ತೆರಳುತ್ತಿದ್ದ ವಿದಿಶಾಗೆ ಕಾರ್ ಮಿಸ್ ಆಗಿರೋದ್ರಿಂದ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಆಗ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕಾರು ಅಪಘಾತದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ವಿದಿಶಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ರಸ್ತೆ ಅಪಘಾತ.. ದುಬೈನಲ್ಲಿ ಮಂಗಳೂರು ಮೂಲದ ಯುವತಿ ದಾರುಣ ಸಾವು

https://newsfirstlive.com/wp-content/uploads/2024/02/Mangalore-Woman-Accident.jpg

Load More